IB anigif

Ayugya Gif

adweb

udgharsha

 

ಅಶೋಕ್‌ ಕಶ್ಯಪ್‌ ನಿರ್ದೇಶನದ ಧ್ವಜ ಚಿತ್ರದಲ್ಲಿ ರಾಜಕಾರಣಿ ರಮ್ಯಾ ಆಗಿ ನಟಿಸಿದ್ದಾರೆ ಪ್ರಿಯಾಮಣಿ.  ಹೌದು ರವಿ ಮತ್ತು ಪ್ರಿಯಾ ಮಣಿ ನಟಿಸುತ್ತಿರುವ 'ಧ್ವಜ' ಚಿತ್ರದಲ್ಲಿ ಪ್ರಿಯಾ ಮಣಿ ಮಹಿಳಾ ರಾಜಕಾರಣಿಯಾಗಿದ್ದಾರೆ.

.

ಇದು ಪೊಲಿಟಿಕಲ್‌ ಕಥೆಯಾದಾರಿತ ಸಿನಿಮಾ. ಪ್ರಿಯಾಮಣಿ ಪಾತ್ರಕ್ಕೆ ಚಿಕ್ಕಂದಿನಿಂದಲೂ ಅಧಿಕಾರ, ಕುರ್ಚಿಯ ವ್ಯಾಮೋಹವಿರುತ್ತದೆ.ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧಳಿರುತ್ತಾಳೆ. ಪಾತ್ರದಲ್ಲಿ ರಾಜಕೀಯ ವ್ಯಕ್ತಿಯ ಗಾಂಭೀರ್ಯತೆಗಾಗಿ ಪ್ರಿಯಾಮಣಿ ಸೀರೆ, ಸೆಲ್ವಾರ್‌ ಮಾತ್ರ ಧರಿಸಿದ್ದಾರೆ.

.

ಈ ವಾರ ಈ ಚಿತ್ರ ಬಿಡುಗೆಯಾಗುತ್ತಿದೆ. ವಿಶೇಷ ಎಂದರೆ ಟ್ರೇಲರ್‌ ಬಿಡುಗಡೆಯಾದ ಇದು ರಮ್ಯ ಅವರ ನಿಜ ಜೀವನದ ಕಥೆ ಎನ್ನಲಾಗಿತ್ತು. ಆದರೆ ರಮ್ಯ ಅವರ ಜೀವನಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿತ್ತು.

.

ತಮಿಳಿನ ಕೊಡಿ ಚಿತ್ರದ ರಿಮೇಕ್‌ ಆಗಿರುವ ಈ ಚಿತ್ರವನ್ನು ಇಲ್ಲಿನ ನೆಟಿವಿಟಿಗೆ ತಕ್ಕಂತೆ ಬದಲಾಯಿಸಲಾಗಿದೆ. ಅಲ್ಲದೆ ಅಲ್ಲಿ ತ್ರಿಷಾ ಮಾಡಿದ್ದ ಚಿತ್ರವನ್ನು ಇಲ್ಲಿ ಪ್ರಿಯಾಮಣಿ ನಟಿಸಿದ್ದಾರೆ.

.

 

ಸಿನಿಮಾಟೋಗ್ರಫರ್‌ ಆಗಿ ಯಶಸ್ಸು ಕಂಡಿರುವ ಅಶೋಕ್‌ ಕಶ್ಯಪ್‌ 'ಧ್ವಜ' ಎಂಬ ಚಿತ್ರದ ಮೂಲಕ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ.
ರಾಜ್ಯದಲ್ಲಿ ಚುನಾವಣ ಕಾವು ಜೋರಾಗಿರುವ ಸಂದರ್ಭದಲ್ಲಿ ಅಶೋಕ್‌ ಕಶ್ಯಪ್‌ ಪೊಲಿಟಿಕಲ್‌ ಥ್ರಿಲ್ಲರ್‌ ಸಿನಿಮಾ ಮಾಡಿದ್ದಾರೆ.

.

ಈ ಚಿತ್ರದ ಮೂಲಕ ರವಿ ಎನ್ನುವ ನಟರನ್ನು ಸ್ಯಾಂಡಲ್‌ವುಡ್‌ಗೆ ನಾಯಕರಾಗಿ ಪರಿಚಯಿಸುತ್ತಿದ್ದಾರೆ. ಇವರ ಜತೆ ಪ್ರಿಯಾಮಣಿ, ದಿವ್ಯಾ ಉರುಡುಗ ಸಹ ನಟಿಸಿದ್ದಾರೆ. ನಾಯಕ ನಟ ರವಿಗೆ ಈ ಚಿತ್ರದಲ್ಲಿ ದ್ವಿಪಾತ್ರ ಅಂತೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ನ್ನು ಲಕ್ಷಾಂತರ ಮಂದಿ ನೋಡಿದ್ದಾರೆ.

.

ಈ ಸಿನಿಮಾದಲ್ಲಿ ರಾಜಕೀಯ ಪಕ್ಷದ ಕಾರ್ಯಕರ್ತನೊಬ್ಬ ಕೊಲೆಯಾಗುವ ಕಥೆಯಿದೆ.ಈ ಸಿನಿಮಾದಲ್ಲಿ ಪ್ರಿಯಾಮಣಿ ಪಾತ್ರದ ಹೆಸರು ರಮ್ಯಾ. ಕಿರುತೆರೆಯ ಖ್ಯಾತ ನಿರ್ದೇಶಕ ಟಿ.ಎನ್‌. ಸೀತಾರಾಮ ಅವರು ಈ ಸಿನಿಮಾದ ದೊಡ್ಡ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.

.

ಈ ಸಿನಿಮಾದ ಬಿಡುಗಡೆ ಚುನಾವಣೆ ಸಂದರ್ಭದಲ್ಲೇ ಆಗುತ್ತದೆ. ತಮಿಳಿನಲ್ಲಿ ಧನುಷ್‌ ಮತ್ತು ತ್ರಿಶಾ ನಟಿಸಿದ್ದ ಕೊಡಿ ಚಿತ್ರದ ರಿಮೇಕ್‌ ಇದಾಗಿದ್ದು, ಧನುಷ್‌ ಪಾತ್ರದಲ್ಲಿ ರವಿ ಕಾಣಿಸಿಕೊಂಡರೆ ತ್ರಿಷಾ ಪಾತ್ರದಲ್ಲಿ ಪ್ರಿಯಾಮಣಿ ನಟಿಸಿದ್ದಾರೆ.

.

#Dhwaja #Cineloka 

ಜೀವನದ ಅತ್ಯಂತ ಮಧುರ ಕ್ಷಣ ಮದುವೆ. ಹೀಗಾಗಿ, ಮದುವೆಯನ್ನ ತುಂಬಾ ಗ್ರ್ಯಾಂಡ್ ಆಗಿ ಆಗಬೇಕು ಎನ್ನುವುದು ಬಹುತೇಕರ ಬಯಕೆ. ಆದರೆ, ಅದ್ಧೂರಿ ಮದುವೆಗೆ ಗುಡ್ ಬೈ ಹೇಳಿರುವ ಪ್ರಿಯಾಮಣಿ ರಿಜಿಸ್ಟರ್  ಮದುವೆ ಆಗುತ್ತಿದ್ದಾರೆ.

LJOS nigif

May 1st

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top