IB anigif

Ayugya Gif

adweb

udgharsha

ಟೀಸರ್‌ಗಳು, ಹಾಡುಗಳಿಂದ ಅದ್ಧೂರಿ ನಿರೀಕ್ಷೆ ಹುಟ್ಟು ಹಾಕಿರುವ 'ದಿ ವಿಲನ್‌' ಸಿನಿಮಾದಲ್ಲಿ ಕಿಚ್ಚ ಸುದೀಪ್‌ ವಿಭಿನ್ನ ಗೆಟಪ್ಗಳು ಮತ್ತು 3-4 ವಿಭಿನ್ನ ಹೇರ್‌ಸ್ಟೈಲ್ ಗಳಲ್ಲಿ ಮಿಂಚಲಿದ್ದರಂತೆ.

.

ಹೌದು, ಈಗ ಬಿಡುಗೆಯಾಗಿರುವ ಟೀಸರ್‌ಗಳಲ್ಲಿ ಸುದೀಪ್‌ ಉದ್ದ ಕೂದಲು ಬಿಟ್ಟು ಮತ್ತು ಶಾರ್ಟ್‌ ಕಟಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ರೀತಿಯ ಪ್ರಯೋಗ ಕಿಚ್ಚ ಸುದೀಪ್‌ ಅವರ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಆಗುತ್ತಿದೆ.

.

ಈ ಎರಡು ಹೇರ್‌ ಸ್ಟೈಲ್‌ಗಳನ್ನು ಸುದೀಪ್‌ ಪತ್ನಿ ಪ್ರಿಯಾ ಓಕೆ ಮಾಡಿದ್ದಂತೆ. ಪ್ರೇಮ್‌ ಹೆರ್‌ಸ್ಟೈಲ್‌ ಡಿಸೈನ್‌ ಮಾಡಿಕೊಂಡು ಮನೆಗೆ ತಂದು ಸುದೀಪ್‌ ಪತ್ನಿ, ಅಪ್ಪ ಅಮ್ಮ ಎಲ್ಲರಿಗೂ ತೋರಿಸಿ ಒಪ್ಪಿಗೆ ಪಡೆದುಕೊಂಡಿದ್ದರಂತೆ.

.

ಈ ಸಿನಿಮಾ ಇದೇ 18ಕ್ಕೆ ರಾಜ್ಯಾದ್ಯಂತ ದಾಖಲೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತದೆ.

ಶಿವಣ್ಣ ಮತ್ತು ಕಿಚ್ಚ ಸುದೀಪ್ ನಟನೆಯ,ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹು ನಿರೀಕ್ಷಿತ ಚಿತ್ರ 'ದಿ ವಿಲನ್‌' ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆಯಾಗಬಹುದು ಎಂಬ ಮುನ್ಸೂಚನೆ ಸಿಕ್ಕಿದೆ.
.
ಇತ್ತೀಚೆಗೆ ಮೇ 1 ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಸಿಕ್ಕಿದ್ದ ಸುದೀಪ್‌, "ದಿ ವಿಲನ್‌ ಚಿತ್ರದ ಡಬ್ಬಿಂಗ್‌ ಈಗಾಗಲೇ ನಡೆಯುತ್ತಿದೆ. ಒಂದು ದಿನದ ಡಬ್ಬಿಂಗ್‌ ಬಾಕಿ ಇದೆ, ಅದರ ಜತೆಗೆ ಮೂರು ದಿನ ಹಾಡಿನ ಚಿತ್ರೀಕರಣ ಬಾಕಿ ಇದೆ. ಇಷ್ಟು ಮುಗಿದರೆ ವಿಲನ್‌ ಚಿತ್ರದಲ್ಲಿ ನನ್ನ ಭಾಗದ ಕೆಲಸ ಮುಗಿಯುತ್ತದೆ" ಎಂದು ಹೇಳಿದ್ದಾರೆ.
.
'ದಿ ವಿಲನ್‌' ಒಂದು ಪಕ್ಕಾ ಕಮರ್ಷಿಯಲ್‌ ಎಂಟರ್‌ಟೈನರ್‌ ಆಗಿದ್ದು, ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆ ಆಗಬಹುದು ಎಂದು ಹೇಳುತ್ತಾರೆ ಸುದೀಪ್‌.
.
ಒಟ್ಟಿನಲ್ಲಿ ಶಿವಣ್ಣ ಮತ್ತು ಸುದೀಪ್‌ ಅಭಿಮಾನಿಗಳ ಕುತೂಹಲಕ್ಕೆ ಆಗಸ್ಟ್‌ನಲ್ಲಿ ಉತ್ತರ ಸಿಗಬಹುದು.
.
#TheVillian #DrShivanna #KicchaSudeep #Cineloka
 ಚಿರು ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಕೃತಿ, ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ದಳಪತಿ ಚಿತ್ರದ ಪ್ರಮೋಷನ್‌ಗಾಗಿ ಬೆಂಗಳೂರಿಗೆ ಬಂದಿದ್ದ ಕೃತಿ ಸಿನಿಲೋಕದೊಂದಿಗೆ ಮಾತನಾಡಿದ್ದಾರೆ.
.
ದಳಪತಿ ಒಪ್ಪಿಕೊಳ್ಳೋಕೆ ಏನು ಕಾರಣ?
------
ನಾನು ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರ ಸಿಕ್ಕಿತು. ಕಥೇಲಿ ಫ್ರೆಶ್‌ನೆಸ್ ಇದೆ. ಪ್ರೇಮ್ ಸರ್ ಜೊತೆನೂ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಒಳ್ಳೆ ತಂಡ,ಒಪ್ಪಿಕೊಂಡೆ.
.
ಬಾಲಿವುಡ್‌ನಲ್ಲಿ ಸಖತ್‌ ಬೋಲ್ಡ್‌ ಆಗಿ ನಟಿಸಿದ್ದೀರಾ?
------
ಹೌದು ನಾನು ಒಬ್ಬ ನಟಿಯಾಗಿ ಬರೀ ಗೌರಮ್ಮನ ಥರದ ರೋಲ್‌ಗಳಲ್ಲಿ ಮಾತ್ರ ನಟಿಸಿದ್ದೆ. ನನಗೆ ಒಂದು ಡಿಫ್ರೆಂಟ್‌ ಆಗಿರುವ ಪಾತ್ರ ಬೇಕಿತ್ತು ಹಾಗಾಗಿ ಬೋಲ್ಡ್‌ ಆಗಿ ನಟಿಸಿದೆ. ಇದರಿಂದ ನನಗೇನು ತೊಂದರೆಯಿಲ್ಲ. ನನ್ನ ಫ್ಯಾಮಿಲಿ ಕೂಡಾ ನನ್ನನ್ನು ಈ ಬಗ್ಗೆ ಪ್ರಶ್ನೆ ಮಾಡಿಲ್ಲ.
.
ಆ ಸಿನಿಮಾ ಆದ ಮೇಲೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೂ ಕೆಲವರು ನಿಮ್ಮನ್ನು ಆ ರೀತಿಯ ಪಾತ್ರಗಳಲ್ಲಿ ನಟಿಸಲು ಕೇಳಿದ್ರಾ?
------
ಇಲ್ಲ. ಯಾರು ನನಗೆ ಆ ರೀತಿ ಪಾತ್ರ ಮಾಡಿ ಎಂದು ಕೇಳಿಲ್ಲ . ರಾಝ್‌ ಸಿನಿಮಾಗೆ ಆ ಬೋಲ್ಡ್‌ನೆಸ್‌ ಅವಶ್ಯಕತೆ ಇತ್ತು. ಹಾಗಾಗಿ ಅಲ್ಲಿ ನಟಿಸಿದೆ. ಇಲ್ಲಿಯೂ ಸ್ಕ್ರಿಪ್ಟ್‌ನಲ್ಲಿ ಹಾಟ್‌ ಸೀನ್‌ನ ಅವಶ್ಯಕತೆ ಇದ್ದರೆ ನಾನು ನಟಿಸುತ್ತೇನೆ.
.
ನಿಮ್ಮ ಸಿನಿ ಜರ್ನಿಯಲ್ಲಿ ಸಿಗುತ್ತಿರುವ ಪಾತ್ರಗಳ ಬಗ್ಗೆ ತೃಪ್ತಿ ಇದೆಯೇ?
-----
ಐ ಆಮ್ ಹ್ಯಾಪೀ..ನಾನು ಈಗಾಗಲೇ ರೊಮ್ಯಾಂಟಿಕ್‌ , ಕಾಮಿಡಿ, ಹಾರರ್‌, ಡ್ರಾಮಾ, ಗ್ಲಾಮರ್ ಹೀಗೆ ಸಾಕಷ್ಟು ವಿವಿಧ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಈಗ ನಟಿಸುತ್ತಿರುವ ಯಮ್ಲಾ ಪಾಗ್ಲಾ ದಿವಾನ ಚಿತ್ರ ನನ್ನ ಸಿನಿ ಕರಿಯರ್‌ನಲ್ಲಿ ಬಹು ದೊಡ್ಡ ಸಿನಿಮಾವಾಗಲಿದೆ.
.
ಬೇರೆ ಯಾವುದೇ ಕನ್ನಡ ಚಿತ್ರದಿಂದ ಅವಕಾಶ ಬರಲಿಲ್ವಾ?
-----
ಸಾಕಷ್ಟು ಕಥೆಗಳನ್ನು ಕೇಳಿದ್ದೇನೆ. ದರ್ಶನ್ ಅವರ ಯಜಮಾನ ಚಿತ್ರದಲ್ಲಿ ನಾನು ನಟಿಸಬೇಕಿತ್ತು ಆದರೆ ಡೇಟ್ಸ್‌ನ ಸಮಸ್ಯೆಯಿಂದಾಗಿ ಕೈ ಬಿಡಬೇಕಾಯಿತು.  ದರ್ಶನ್ ಅವರ ಜತೆ ನಟಿಸಲು ಮುಂದಿನ ದಿನಗಳಲ್ಲಿ ಮತ್ತೆ ಅವಕಾಶ ಸಿಕ್ಕರೆ ನಟಿಸುತ್ತೇನೆ.
.
ಕನ್ನಡದಲ್ಲಿ ಯಾವ ಸ್ಟಾರ್ ನಟನ ಜೊತೆ ನಟಿಸಬೇಕು ಎಂಬ ಆಸೆ ಇದೆ?
------
 ನನಗೆ ಎಲ್ಲರ ಜೊತೆ ನಟಿಸಲು ಇಷ್ಟ. ಅದರಲ್ಲಿ ಒಬ್ಬ ನಟ ಅಂದರೆ ಕಿಚ್ಚ ಸುದೀಪ್. ಏಕೆಂದರೆ ನಾನು ಒಂದ್ಸಲ ಬಿಗ್ ಬಾಸ್ ಶೋಗೆ ಹೋಗಿದ್ದಾಗ ಅವರಲ್ಲಿ ಪಾಸಿಟಿವ್ ವೈಬ್ಸ್ ಕಾಣಿಸಿತು. ಅವರಿಗೆ ಸಿನಿಮಾ ಎಂದರೆ ಸಕ್ಕತ್ ಪ್ಯಾಶನ್, ಅಂತವರ ಜೊತೆ ಕೆಲಸ ಮಾಡಲು ನನಗೆ ಖುಷಿ ಕೊಡುತ್ತೆ .
.
ಬಾಲಿವುಡ್‌ನಲ್ಲಿ ಸ್ಯಾಂಡಲ್‌ವುಡ್‌, ಟಾಲಿವುಡ್‌ ಎಲ್ಲ ಕಡೆಯೂ ನಟಿಸಿದ್ದೀರಾ, ಇದರಲ್ಲಿ ಬೆಸ್ಟ್‌ ಯಾವುದು?
-----
ನನಗೆ ಎಲ್ಲವೂ ಬೆಸ್ಟ್‌ ಬೇರೆ ಬೇರೆ ಇಂಡಸ್ಟ್ರಿಗಳನ್ನು ಕಂಪೇರ್‌ ಮಾಡಬಾರದು. ಇದುವರೆಗೂ ನಾನು ಕೆಲಸ ಮಾಡಿರುವ ಎಲ್ಲ ಕಡೆಯಲ್ಲೂ ನನಗೆ ಯಾವುದೇ ರೀತಿಯ ಕೆಟ್ಟ ಅನುಭವಗಳಾಗಿಲ್ಲ. ಹಾಗಾಗಿ ನನಗೆ ಎಲ್ಲವೂ ಬೆಸ್ಟ್‌ ಆಗಿದೆ.
.
ಕಾಸ್ಟಿಂಗ್‌ ಕೌಚ್‌ ಬಗ್ಗೆ ನಿಮ್ಮ ಅಭಿಪ್ರಾಯ??
-------
ಕಾಸ್ಟಿಂಗ್‌ ಕೌಚ್‌ ವಿಚಾರದಲ್ಲಿ ನಾನು ಬಹಳ ಸ್ಟ್ರಿಕ್ಟ್‌. ನನ್ನನ್ನು ಯಾರಾದ್ರು ಆ ದೃಷ್ಟಿಯಲ್ಲಿ ನೋಡಿದ್ರೆ ಅವರನ್ನು ಕೊಲೆ ಮಾಡುತ್ತೇನೆ. ನಾವು ಸ್ಟ್ರಿಕ್ಟ್‌ ಆಗಿದ್ದರೆ ಯಾರು ನಮ್ಮ ಬಳಿ ಬರುವುದಿಲ್ಲ.
#Dalapathi #Cineloka

ಸೀನಿ ನಿರ್ದೇಶನದ '6ನೇ ಮೈಲಿ' ಚಿತ್ರದಲ್ಲಿ ಒಂದೇ ಒಂದು ಹಾಡಿದ್ದು, ಆ ಹಾಡನ್ನು ಕಿಚ್ಚ ಸುದೀಪ್‍ ಮೆಚ್ಚಿಕೊಂಡು ಟ್ವೀಟ್‍ ಮಾಡಿದ್ದಾರೆ.

 

ಡೆತ್‍ ಮೆಟಲ್‍ ಮ್ಯೂಸಿಕ್‍ ಬಳಸಿದ್ದ ಹಾಡು ಬಿಡುಗಡೆಗೂ ಮುನ್ನವೇ ಸುದ್ದಿ ಮಾಡಿತ್ತು. "6ನೇ ಮೈಲಿ" ಚಿತ್ರದ ಈ ಹಾಡಿಗೆ ಲಂಡನ್‍ನಲ್ಲಿ ಗ್ರ್ಯಾಮಿ ಅವಾರ್ಡ್‍ ವಿನ್ನರ್ಸ್‍ ಬಳಿ ಡೆತ್‍ ಮೆಟಲ್‍ ಮ್ಯೂಸಿಕ್‍ ಕಂಪೋಸ್‍ ಮಾಡಿಸಲಾಗಿತ್ತು. ಈ ಹಾಡನ್ನು ಇತ್ತೀಚೆಗೆ ಸುದೀಪ್‍ ಕೇಳಿದ್ದಾರೆ, ಕೇಳಿ ಇದರಲ್ಲಿ ಬಳಸಿರುವ ಮ್ಯೂಸಿಕ್‍ ಬಗ್ಗೆ ಮತ್ತು ಹಾಡಿದ ವಸಿಷ್ಠ ಸಿಂಹ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

 

ಈ ಚಿತ್ರದಲ್ಲಿ ನಟ ಸಂಚಾರಿ ವಿಜಯ್‌ ವಿಭಿನ್ನ ಪಾತ್ರದಲ್ಲಿ ನಟಿಸಿದ್ದು, ಟ್ರಕ್ಕಿಂಗ್‌ ಲೀಡರ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಿಯಲ್‌ ಆರ್‌ಜೆಗಳ ತಂಡವೊಂದು ನಟಿಸಿರುವುದು ವಿಶೇಷ.

 

ಟ್ರಕ್ಕಿಂಗ್‌ಗೆ ಹೋದ ಎರಡು ತಂಡಗಳು 6ನೇ ಮೈಲಿಯ ಸಮೀಪ ದಾರಿ ತಪ್ಪುತ್ತಾರೆ. ಇದು ಹೇಗಾಗುತ್ತದೆ. ಮುಂದೆ ಏನಾಗುತ್ತದೆ ಎನ್ನುವುದು ಚಿತ್ರದ ಕತೆ. ಇದರ ಜತೆ ನಕ್ಸಲರ ಸ್ಟೋರಿಯೂ ಇದೆ ಎನ್ನುವ ಸುದ್ದಿಯಿದೆ.

 

ಸ್ಯಾಂಡಲ್‌ವುಡ್‌ನಲ್ಲಿ ನೈಜ ಘಟನೆಗಳನ್ನು ಆಧರಿಸಿ ಹೆಚ್ಚೆಚ್ಚು ಚಿತ್ರಗಳನ್ನು ಮಾಡುತ್ತಿದ್ದಾರೆ. ಈಗ ಬಿಡುಗಡೆಗೆ ಸಿದ್ಧವಾಗಿರುವ ಎಟಿಎಂ (ಅಟೆಂ ಟು ಮರ್ಡರ್‌) ಸಹ ನೈಜ ಘಟನೆಗಳನ್ನು ಇಟ್ಟುಕೊಂಡು ಮಾಡಿರುವ ಸಿನಿಮಾವಾಗಿದೆ.

 

ಈ ಚಿತ್ರದ ಟ್ರೇಲರ್‌ನ್ನು ಇತ್ತೀಚೆಗೆ ಕಿಚ್ಚ ಸುದೀಪ್‌ ಬಿಡುಗಡೆ ಮಾಡಿದರು. ‘ನಮ್ಮ ಅಕ್ಕ-ಪಕ್ಕದಲ್ಲಿ ನಡೆದ ಘಟನೆಯನ್ನು ತೆಗೆದುಕೊಂಡು ಕಥೆ ಮಾಡಿದ್ದಾರೆಂದು ಗೊತ್ತಾಯಿತು, ಟ್ರೇಲರ್ ಚೆನ್ನಾಗಿದೆ. ಹಿನ್ನಲೆ ಸಂಗೀತ, ವಿನಯ ಗೌಡ ಕಂಠ ಚೆನ್ನಾಗಿ ಮೂಡಿ ಬಂದಿದೆ. ಮಲೆಯಾಳಂ ಚಿತ್ರರಂಗದಲ್ಲಿ ಯುವ ಪ್ರತಿಭೆಗಳು ಉತ್ತಮ ಸಿನಿಮಾಗಳನ್ನು ನೀಡುತ್ತಿದ್ದಾರೆ. ಅಂತಹ ಪ್ರಯತ್ನಗಳು ಸ್ಯಾಂಡಲ್‌ವುಡ್‌ನಲ್ಲಿಯೂ ನಡೆಯುತ್ತಿರುವುದು ನಿಜಕ್ಕೂ ಸಂತೋಷದ ವಿಷಯ . ಇನ್ನು ಒಳ್ಳೆಯ ಕಂಟೆಂಟ್‌ ಕೊಟ್ಟರೆ ಪ್ರೆಕ್ಷಕರು ಒಪ್ಪಿಕೊಳ್ತಾರೆ, ಮತ್ತು ಮೆಚ್ಚಿಕೊಳ್ತಾರೆ, ಸಿನಿಮಾವನ್ನು ಸರಿಯಾದ ಸಮಯದಲ್ಲಿ ಬಿಡುಗಡೆ ಮಾಡಿ ಎಂದು ಚಿತ್ರತಂಡಕ್ಕೆ ಸಲಹೆ ನೀಡಿ, ಟ್ರೇಲರ್‌ ಬಿಡುಗಡೆ ಮಾಡಿದರು.

 

ಮುಗ್ಧ ಕ್ಯಾಬ್‌ ಚಾಲಕನೊಬ್ಬ ತನಗೆ ಗೊತ್ತಿಲ್ಲದೆ ತೊಂದರೆಯಲ್ಲಿ ಸಿಲುಕಿ ಹಾಕಿಕೊಂಡು, ಅನುಭವಿಸುವ ಕಷ್ಟವನ್ನು ಇಲ್ಲಿ ತೋರಿಸಲಾಗಿದೆಯಂತೆ. ಈ ಪಾತ್ರದಲ್ಲಿ ಸೀರಿಯಲ್‌ ನಟ ಚಂದು ನಟಿಸಿದ್ದಾರೆ. 2013 ಎಟಿಎಂನಲ್ಲಿ ನಡೆದ ನೈಜ ಘಟನೆಯನ್ನು ಈ ಚಿತ್ರಕ್ಕಾಗಿ ಬಳಸಿಕೊಳ್ಳಲಾಗಿದೆ.

 

ಈ ಚಿತ್ರವನ್ನು ನಾರಾಯಣ್‌ ಎಂಬುವವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಅಮರ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಖಾಸಗಿ ವಾಹಿನಿಯಲ್ಲಿ ಆ್ಯಂಕರ್‌ ಆಗಿರುವ ಹೇಮಾ, ಶೋಬಿತಾ ನಟಿಸಿದ್ದಾರೆ.

ಸ್ಯಾಂಡಲ್‌ವುಡ್‌ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್‌ ಮತ್ತು ನಿಶ್ವಿಕಾ ನಾಯ್ಡು ನಟನೆಯ ಪಡ್ಡೆ ಹುಲಿ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ಆಚರಿಸಿಕೊಂಡಿದೆ.

ಕೆ. ಮಂಜು ಪುತ್ರ ಶ್ರೇಯಸ್‌ಗೆ ಇದು ಡೆಬ್ಯೂ ಮೂವಿ ಆಗಿದ್ದು, ನಟ ಸುದೀಪ್‌,ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ಸಾಕಷ್ಟು ಮಂದಿ ಚಿತ್ರರಂಗದ ಗಣ್ಯರು ಬಂದು ಶ್ರೇಯಸ್‌ಗೆ ವಿಷ್‌ ಮಾಡಿದರು.

 

ಈ ಚಿತ್ರದ ನಾಯಕಿ ನಿಶ್ವಿಕಾ ನಾಯ್ಡು ‘ವಾಸು - ಪಕ್ಕಾ ಕಮರ್ಷಿಯಲ್‌’ ಮತ್ತು ‘ಅಮ್ಮ ಐ ಲವ್‌ ಯು’ ಎಂಬ ಎರಡು ಚಿತ್ರಗಳಲ್ಲಿ ನಿಶ್ವಿಕಾ ನಾಯಕಿಯಾಗಿ ನಟಿಸಿದ್ದರು. ಆ ಎರಡು ಚಿತ್ರಗಳು ಬಿಡುಗಡೆಯಾಗುವ ಮುನ್ನವೇ ‘ಪಡ್ಡೆ ಹುಲಿ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

 

ಚಿತ್ರವನ್ನು ಗುರು ದೇಶಪಾಂಡೆ ನಿರ್ದೇಶಿಸುತ್ತಿದ್ದು, ಉಳಿದ ತಾರಾಗಣದ ಆಯ್ಕೆ ನಡೆಯುತ್ತಿದೆ. ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ ಮತ್ತು ಕೆ.ಎಸ್‌. ಚಂದ್ರಶೇಖರ್‌ ಛಾಯಾಗ್ರಹಣ ಇದೆ. ರಮೇಶ್‌ರೆಡ್ಡಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

 

ಪಡ್ಡೆ ಹುಲಿ’ ಚಿತ್ರವು ಇವತ್ತಿನ ಟ್ರೆಂಡ್‌ಗೆ ಇರುವ ಒಂದು ಕಾಲೇಜ್‌ ಲವ್‌ ಸ್ಟೋರಿ ಚಿತ್ರವಾಗಿರುತ್ತದೆ ಎನ್ನುತ್ತಾರೆ ನಿರ್ದೇಶಕ ಗುರು ದೇಶಪಾಂಡೆ. ಇಲ್ಲೊಂದು ಯೂಥ್‌ ಸ್ಟೋರಿ ಇರಲಿದ್ದು, ಈಗಿನ ಕಾಲದ ಪ್ರೇಮ ಲೋಕ’ ಎನ್ನುತ್ತಾರೆ ಗುರು ದೇಶಪಾಂಡೆ.

ಈ ಚಿತ್ರಕ್ಕಾಗಿ ಈಗಾಗಲೇ ಅದ್ಧೂರಿಯಾಗಿ ಫೋಟೋ ಶೂಟ್‌, ಪ್ರೋಮೋ ಶೂಟ್‌ನ್ನು ನಿರ್ದೇಶಕರು ಮಾಡಿಸಿದ್ದಾರೆ.

 
'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಟಿಸುತ್ತಾರೆ, ಆದರೆ ಯಾವ ಲುಕ್‌ನಲ್ಲಿ ಇರುತ್ತಾರೆ ಎಂಬುದು ಯಾರಿಗೂ ಗೊತ್ತಿರಲಿಲ್ಲ, ಸೋಮವಾರ ರಾತ್ರಿ ನೆಲಮಂಗಲದ ಮೋಹನ್‌ ಬಿ ಕೆರೆ ಸ್ಟುಡಿಯೋದಲ್ಲಿ ಸುದೀಪ್‌ ಎಂಟ್ರೀ ಸೀನ್‌ ಚಿತ್ರೀಕರಣ ಮಾಡಲಾಗಿದ್ದು, ಸುದೀಪ್‌ ಬಿಳಿ ಶರ್ಟ್‌ ಮತ್ತು ಬಿಳಿ ಕಚ್ಚೆ ಪಂಚೆ ತೊಟ್ಟು ಎಂಟ್ರಿ ಕೊಟ್ಟಿದ್ದಾರೆ.

ಮೊದಲ ದೃಶ್ಯದಲ್ಲೇ ಕಬ್ಬಡಿ ಮೂಲಕ ಸುದೀಪ್‌ ಅವರನ್ನು ಇಂಟ್ರಡ್ಯೂಸ್‌ ಮಾಡಲಾಗುತ್ತಿದೆ.

ಈ ಸಿನಿಮಾದಲ್ಲಿ ಸುದೀಪ್‌ ಯಂಗ್‌ ಅಂಬರೀಷ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಅಂಬರೀಷ್‌ ಅವರ ಹೈಟ್‌ ಒಂದು ಮ್ಯಾಚ್‌ ಆಗುವುದಿಲ್ಲ, ಅದಕ್ಕಾಗಿ ಸಿಜಿ ವರ್ಕ್‌ ಸಹ ಮಾಡಲಾಗುತ್ತದೆ.

ಅಂಬರೀಷ್‌ಗೆ ಸುಹಾಸಿನಿ ಜೋಡಿಯಾದರೆ, ಸುದೀಪ್‌ಗೆ ಶ್ರುತಿ ಹರಿಹರನ್‌ ಜೋಡಿಯಾಗಿದ್ದಾರೆ. ಶ್ರುತಿ ಹರಿಹರನ್‌ ಇಲ್ಲಿ ಯಂಗ್‌ ಸುಹಾಸಿನಿಯಾಗಲಿದ್ದಾರೆ. ಕಿಚ್ಚ ಕ್ರಿಯೇಶನ್ಸ್‌ ನಡಿ ಜಾಕ್‌ ಮಂಜು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಗುರುದತ್‌ ಗಾಣಿಗ ಇದರ ನಿರ್ದೇಶಕರು. ಒಟ್ಟಿನಲ್ಲಿ 'ಅಂಬಿ..' ಅಖಾಡದಲ್ಲಿ ಕಿಚ್ಚ ಸೋಮವಾರದಿಂದ ಕಬ್ಬಡಿ ಆಡುತ್ತಿದ್ದಾರೆ.

#AmbiNingVayassaitho #Cineloka #AbhinayaChakravarthy #KicchaSudeep

 

 

ಆರ್ಯ ಅವರ ಮೊದಲ ಕನ್ನಡ ಸಿನಿಮಾ 'ರಾಜರಥ'. ಇದರಲ್ಲಿ ಅವರು 'ವಿಶ್ವ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪಾತ್ರದ ಫಸ್ಟ್ ಲುಕ್ ಸಂಚಲನವನ್ನೇ ಸೃಷ್ಠಿಸಿತು. ಚಿತ್ರದಲ್ಲಿನ ಅವರ ಲುಕ್ ಕಿಚ್ಚ ಸುದೀಪ್ ರವರಿಂದ ಸ್ಫೂರ್ತಿಎಂದು ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ತಿಳಿಸಿದ್ದಾರೆ.

 

ಕಿಚ್ಚ ಸುದೀಪ್ ಅವರು ಅನೂಪ್ ಮತ್ತು ನಿರೂಪ್ ತಂದೆ ಸುಧಾಕರ್ ಭಂಡಾರಿ ಅವರ ಟಿವಿ ಧಾರಾವಾಹಿ ಪ್ರೇಮದ ಕಾದಂಬರಿಯಲ್ಲಿ 90ರ ದಶಕದಲ್ಲಿ ಕೆಲಸ ಮಾಡಿದ್ದರು. ಅಂದಿನಿಂದ ಸುದೀಪ್ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ಹಲವಾರು ಕಥೆಗಳನ್ನು ಅನೂಪ್ ಹಾಗು ನಿರೂಪ್ ಚರ್ಚಿಸುತ್ತಿದ್ದರು. ತಮ್ಮ ಎಂಜಿನಿಯರಿಂಗ್ ದಿನಗಳಲ್ಲಿ ಅನೂಪ್ ಅವರು "ಯೋಧಾ" ಎಂಬ ಶೀರ್ಷಿಕೆಯಡಿ ಒಂದು ಸ್ಕ್ರಿಪ್ಟ್ ತಯಾರಿಸಿ , ಸುದೀಪ್ ಅವರು ಪೋಲೀಸ್ ಪಾತ್ರ ನಿಭಾಯಿಸಿದರೆ ಚೆನ್ನಾಗಿ ಮೂಡಿ ಬರುತ್ತದೆ ಎಂಬ ಆಲೋಚನೆ ಅನೂಪ್ ಅವರಿಗೆ ತಮ್ಮೆ ಎಂಜಿನಿಯರಿಂಗ್ ದಿನಗಳಲ್ಲಿಯೇ ಬಂದಿತ್ತು.

 

2010 ರಲ್ಲಿ ಅನೂಪ್, 'ವರ್ಡ್ಸ್' ಎಂಬ ಪ್ರಶಸ್ತಿ ಗೆದ್ದ ಕಿರುಚಿತ್ರ ನಿರ್ದೇಶಿಸಿದಾಗ, ಪತ್ರಿಕಾಗೋಷ್ಠಿಗೆ ಅತಿಥಿಯಾಗಿ ಬಂದ ಸುದೀಪ್ ರಿಂದ ಪ್ರಶಂಸೆ ಗಳಿಸಿದ್ದರು. ಆ ಸಮಯದಲ್ಲಿ ಅನೂಪ್ 'ರಾಜರಥ'ದ ಡ್ರಾಫ್ಟ್ ಮಾಡುತ್ತಿದ್ದರು. ಸುದೀಪ್ ಅವರ ವೇಷಭೂಷಣ, ನೀಲಿ ಕುರ್ತಾ, ಜೀನ್ಸ್ ಮತ್ತು ಸ್ಯಾಂಡಲ್ಸ್ ಗಳು ಕೂಡಲೇ ಅನೂಪ್ ಗೆ ಇಷ್ಟವಾಗಿ, "ಕಥೆಯಲ್ಲಿ ಬರುವ ವಿಶ್ವ ಪತ್ರದಂತೆಯೇ ಇದೆಯಲ್ಲ ಎಂದನಿಸಿತಂತೆ!". 'ರಾಜರಥ'ದ ಕೆಲಸ ಶುರುವಾದಂತೆ ವಸ್ತ್ರ ವಿನ್ಯಾಸಕರಾದ ಪತ್ನಿ ನೀತಾ ಶೆಟ್ಟಿಗೆ ಇದೇ ಸಲಹೆ ನೀಡಿದರು, ಅದನ್ನೇ ಕಾರ್ಯರೂಪಕ್ಕೂ ತರಲಾಯಿತು.

 

ಆರ್ಯರ ಸಹಾಯಕರು ತಮ್ಮ ಯಜಮಾನರ ವೇಷಭೂಷಣವನ್ನು ತುಂಬಾ ಇಷ್ಟಪಟ್ಟರು, ಅವರು 'ರಾಜರಥ'ದಲ್ಲಿ ಅತ್ಯುತ್ತಮವಾಗಿ ಕಾಣುತ್ತಾರೆ ಎಂದು ಅವರೆಲ್ಲರೂ ಭಾವಿಸಿದರು. ಆರ್ಯ ಪರದೆಯಮೇಲೆ ನಟಿಯರ ಜೊತೆ ಪ್ರಾಣಯರಾಜನ ಪಾತ್ರ ಮಾಡದೆ, ಈ ಚಿತ್ರದಲ್ಲಿ ಆರ್ಯ ವಿಭಿನ್ನ ಪಾತ್ರ ಮಾಡುವುದನ್ನು ನೋಡಿ ತುಂಬಾ ಖುಷಿಪಟ್ಟರು. ಆರ್ಯ, ಅವರು ಸಂಭಾಷಣೆಗಳನ್ನು ಜಿಮ್ನಲ್ಲಿ, ತಿನ್ನುವಾಗ, ಮಲಗಿದ್ದಾಗ, ಅಕ್ಷರಶಃ ಎಲ್ಲೆಡೆ ಅಭ್ಯಾಸ ಮಾಡುತಿದ್ದರು, ಇದನ್ನು ಕಂಡ ಆರ್ಯ ಅವರ ಸಹಾಯಕರು "ನಿರ್ದೇಶಕ ಅನುಪ್ ಭಂಡಾರಿ ಆರ್ಯರನ್ನು ಚಿತ್ರಹಿಂಸಿಸುತ್ತಿದ್ದಾರೆಂದು" ಹಾಸ್ಯದಿಂದ ಹೇಳುತ್ತಿದ್ದರು. ಕನ್ನಡ ಭಾಷೆ ಆರ್ಯರಿಗೆ ಹೊಸದಾಗಿದ್ದರಿಂದ ತಮ್ಮ ಸಾಲುಗಳನ್ನು ಹಾಗು ಅಭಿವ್ಯಕ್ತಿಗಳನ್ನು ಸರಿಯಾದ ರೀತಿಯಲ್ಲಿ ಪಡೆದುಕೊಳ್ಳುವುದಕ್ಕಾಗಿ ಆರ್ಯ ಸಂಪೂರ್ಣವಾಗಿ ಗಮನವಹಿಸುತ್ತಿದ್ದರು. ತೆಲುಗು ಅವರ ಮೊದಲ ಭಾಷೆ ಅಲ್ಲ ಹಾಗಾಗಿ ಅವರು ತೆಲುಗಿನ ಸಾಲುಗಳನ್ನು ಪೂರ್ವಾಭ್ಯಾಸ ಮಾಡಿಕೊಳ್ಳುತ್ತಿದ್ದರು.
ಆರ್ಯ ರಂಗಿತರಂಗದ ದೊಡ್ಡ ಅಭಿಮಾನಿಯಾದ ಕಾರಣ, ತಾನು ಪ್ರೀತಿಯಿಂದ ಒಪ್ಪಿಕೊಂಡಿರುವ ಪಾತ್ರಕ್ಕೆ ಅತ್ಯುತ್ತಮವಾದ ಅಭಿನಯ ನೀಡಬೇಕೆಂಬ ಉದ್ದೇಶ ಅವರದಾಗಿತ್ತು.

 

'ರಾಜರಥ' ತಂಡದ ಪ್ರಕಾರ ಕೆಲಸ ಮಾಡುವ ಅತ್ಯಂತ ವಿನಮ್ರ ವ್ಯಕ್ತಿಯಲ್ಲಿ ಆರ್ಯ ಸಹ ಒಬ್ಬರು. "ಅವರು ಸಮಯಕ್ಕೆ ಸೆಟ್ಟಿನಲ್ಲಿರುತ್ತಾರೆ ಮತ್ತು ಪ್ರಶ್ನಿಸದೆಯೇ ಪಾತ್ರಕ್ಕೆ ಅಗತ್ಯವಿರುವ ನಟನೆಯನ್ನು ಮಾಡುತ್ತಿದ್ದರು" ಎಂದು ನಿರ್ದೇಶಕ ಅನುಪ್ ಭಂಡಾರಿ ತಿಳಿಸಿದ್ದಾರೆ.

 

ರಾಜರಥ ರೋಮ್ಯಾನ್ಸ್, ಕಾಮಿಡಿ, ಸಂಗೀತದ ಅಂಶವಿರುವ ಚಿತ್ರ. ಅಜಯ್ ರೆಡ್ಡಿ, ಅಂಜು ವಲ್ಲಭನೆನಿ, ವಿಷು ದಕ್ಕಪ್ಪಗಾರಿ ಮತ್ತು ಸತೀಶ್ ಶಾಸ್ತ್ರಿ ಅವರನ್ನು ಒಳಗೊಂಡಂತೆ ಜಾಲಿಹಿಟ್ಸ್ ಅವರು ಪ್ರಪಂಚದಾದ್ಯಂತ ಬಿಡುಗಡೆ ಮಾಡುತಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ವಾರ್ ಇದೆ ಎನ್ನುವ ಹೊತ್ತಿನಲ್ಲಿ ಕಿಚ್ಚ ಸುದೀಪ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಭಾವನಾ,ಧನಂಜಯ ನಟನೆಯ ಟಗರು ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

 

ಬಿಡುಗಡೆಯಾದ ದಿನದಿಂದ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಟಗರು ಚಿತ್ರವನ್ನು ನೋಡಿ ಮೆಚ್ಚಿಕೊಂಡು ತಮ್ಮ ಟ್ವೀಟರ್ ಅಕೌಂಟ್‌ನಲ್ಲಿ ಅದರ ವಿಮರ್ಷೆ ಬರೆದಿದ್ದಾರೆ.

 

ಸೂರಿಯವರ ಡಿಫ್ರೆಂಟ್ ಸ್ಕ್ರೀನ್ ಪ್ಲೇ ಮೆಚ್ಚಿಕೊಂಡಿರುವ ಸುದೀಪ್, ಸೂರಿ ಇಟ್ಟಿರುವ ಹೆಸರುಗಳಿಗೂ ಅವರು ಖುಷಿ ಪಟ್ಟಿದ್ದಾರೆ. ಇಂತಹ ಚಿತ್ರ ಸೂರಿಯಿಂದ ಮಾತ್ರ ಸಾಧ್ಯ, ಈ ಚಿತ್ರಕ್ಕೆ ನಿರ್ದೇಶಕರು ಆರಿಸಿಕೊಂಡಿರುವ ಲೊಕೇಶನ್ ಸಹ ಬಹಳ ವಿಶೇಷವಾಗಿದೆ ಎಂದಿರುವ ಅವರು ಶಿವರಾಜ್‌ಕುಮಾರ್ ಅವರ ಎನರ್ಜಿ ಮತ್ತು ಅಭಿನಯಕ್ಕೆ ಫಿದಾ ಆಗಿದ್ದೇನೆ ಎಂದು ಬರೆದುಕೊಂಡಿದ್ದಾರೆೆ. ಧನಂಜಯ ಅವರ ಸ್ಕ್ರೀನ್ ಅಪಿಯರೆನ್ಸ್ ಹಾಗೂ ಪಾತ್ರ ಎರಡು ತುಂಬಾ ಇಷ್ಟ ಪಟಿರುವ ಕಿಚ್ಚ, ವಸಿಷ್ಠ ಸಿಂಹ ಅವರ ಧ್ವನಿಯ ಬಗ್ಗೆ ಮಾತನಾಡಿದ್ದಾರೆ.

 

ಸಂಗೀತದ ಮೂಲಕ ಫೇಮಸ್ ಆಗಿರುವ ಚರಣ್‌ರಾಜ್ ಅವರಿಗೂ ಸುದೀಪ್ ಶುಭಾಶಯ ತಿಳಿಸಿದ್ದಾರೆ. ಒಟ್ಟಾಗಿ ಟಗರು ಚಿತ್ರವನ್ನು ಸುದೀಪ್ ಇಷ್ಟಪಟ್ಟಿದ್ದಾರೆ.

ಸುದೀಪ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ  ಕೃಷ್ಣ ಪೈಲ್ವಾನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ’ಪೈಲ್ವಾನ್’ ಚಿತ್ರದ ಮೂಲಕ ಇದೇ ಮೊಟ್ಟ ಮೊದಲ ಬಾರಿಗೆ ಸುದೀಪ್ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಅದರ ಜೊತೆಗೆ ಇನ್ನೊಂದು ಸರ್ ಪ್ರೈಸ್ ಕೂಡ ಇದೆ.

  •  Start 
  •  Prev 
  •  1  2  3 
  •  Next 
  •  End 
Page 1 of 3

na anigif

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top