nata

ttm

adweb

udgharsha

ರಿಷಬ್‌ ಶೆಟ್ಟಿ ನಟನೆಯ ಬೆಲ್‌ಬಾಟಮ್‌ ಚಿತ್ರಕ್ಕೆ ಹತ್ತು ವರ್ಷಗಳ ಹಿಂದೆ ಕೋಲಾರದಲ್ಲಿ ನಡೆದಿದ್ದ ದರೋಡೆಯೇ ಪ್ರೇರಣೆಯಂತೆ.

.

ಇದೇ ವಾರ ಅಂದರೆ 15ರಂದು ಬಿಡುಗಡೆಯಾಗುತ್ತಿರುವ ಈ ಸಿನಿಮಾದಲ್ಲಿ ರಿಷಬ್‌ ಶೆಟ್ಟಿ ಡಿಟೆಕ್ಟಿವ್‌ ದಿವಾಕರ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜಯತೀರ್ಥ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಹರಿಪ್ರಿಯಾ ರಿಷಬ್‌ ಶೆಟ್ಟಿಗೆ ಜೋಡಿಯಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ ಮತ್ತು ಹಾಡುಗಳು ಸಿನಿಮಾದ ಬಗ್ಗೆ ಕುತೂಹಲ ಸೃಷ್ಟಿ ಮಾಡಿದೆ.

.

ಈಗ ಸಿನಿಮಾ ನೈಜ ಕಥೆಯನ್ನು ಆಧರಿಸಿದೆ ಎಂಬ ವಿಷಯ ಕೂಡಾ ಸೇರಿಕೊಂಡು ಸಿನಿಮಾದ ಮೇಲಿನ ನಿರೀಕ್ಷೆ ದೊಡ್ಡದಾಗಿದೆ.

 

ಅಯೋಗ್ಯ ಸಿನಿಮಾದ ಯಶಸ್ಸಿನ ನಂತರ ನಟ ಸತೀಶ್‌ ಅವರ ಚಂಬಲ್‌ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಅದನ್ನು ನೋಡಿದರೆ ಇದು ಐಎಎಸ್‌ ಅಧಿಕಾರಿ ಡಿ ಕೆ ರವಿ ಕಥೆ ಇದ್ದ ಹಾಗಿದೆ.

.

ಹೌದು ಚಂಬಲ್‌ ಸಿನಿಮಾದ ಟ್ರೇಲರ್ ನೋಡಿದ ತಕ್ಷಣ ಸಾಮಾನ್ಯರಿಗೆ ಬರುವ ಅಭಿಪ್ರಾಯ ಇದಾಗಿದೆ. ಈ ಸಿನಿಮಾವನ್ನು ಜೇಕಬ್‌ ವರ್ಗೀಸ್‌ ನಿರ್ದೇಶನ ಮಾಡಿದ್ದಾರೆ.

.

ಈ ಹಿಂದೆ ಜೇಕಬ್‌ ಪೃಥ್ವಿ, ಸವಾರಿ ಸಿನಿಮಾಗಳಿಗೆ ಆ್ಯಕ್ಷನ್‌ ಕಟ್ ಹೇಳಿದ್ದರು. ಚಂಬಲ್‌ನಲ್ಲಿ ಸತೀಶ್‌ ಜಿಲ್ಲಾಧಿಕಾರಿಯಾಗಿ, ಕಮರ್ಷಿಯಲ್‌ ಟ್ಯಾಕ್ಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರಂತೆ. ಇದು ಡಿ ಕೆ ರವಿ ಕಥೆಯಾ ಎಂಬ ಪ್ರಶ್ನೆಗೆ ನಮ್ಮ ಸಿನಿಮಾ ಅಚಾನಕ್ಕಾಗಿ ಅವರ ಬದುಕಿಗೆ ಹೋಲಿಕೆಯಾಗುತ್ತಿದೆ ಎನ್ನುತ್ತದೆ ಚಿತ್ರತಂಡ. ಒಟ್ಟಿನಲ್ಲಿ ಈ ಸಿನಿಮಾ ಟ್ರೇಲರ್‌ನಿಂದ ಗಮನ ಸೆಳೆಯುತ್ತಿದೆ.

.

ಚಿತ್ರವನ್ನು ಇದೇ ಫೆಬ್ರವರಿ 22 ರಂದು ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ.

ಕನ್ನಡ ಸಿನಿ ಪ್ರೇಕ್ಷಕರಿಗೆ ಸಸ್ಪೆನ್ಸ್ ಥ್ರಿಲರ್ ಚಿತ್ರಗಳ ಹುಚ್ಚು ಹಿಡಿಸಿದ ಮಾಸ್ಟರ್ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ, ಉದ್ಘರ್ಷದ ಮೂಲಕ ಈಗ ಮತ್ತೆ ದೊಡ್ಡ ನಿರೀಕ್ಷೆ ಹುಟ್ಟುಹಾಕಿದ್ದಾರೆ.

.

ಈ ಬಾರಿ ಮತ್ತೊಂದು ಸರ್ಪ್ರೈಸ್ ನೀಡಿರೋ ದೇಸಾಯಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಂದ 'ಉದ್ಘರ್ಷ' ಚಿತ್ರದ ಟ್ರೇಲರ್ಗೆ ಸೈಲಂಟ್ ಆಗಿಯೇ ಡಬ್ಬಿಂಗ್ ಮಾಡಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಮೂಡಿ ಬಂದಿರೋ ಈ ಚಿತ್ರದ ಟ್ರೇಲರ್ ಕಂಡು ಫುಲ್ ಇಂಪ್ರೆಸ್ ಆಗಿರೋ ಕಿಚ್ಚ ಸುದೀಪ್, ಅತ್ಯಂತ ಖುಷಿಯಿಂದಲೇ ಕಂಠದಾನ ಮಾಡಿದ್ದಾರೆ.

.

ಸೋಮವಾರ ಹೈದರಾಬಾದ್ಗೆ ತೆರಳಿದ್ದ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ, ನಿರ್ಮಾಪಕರಾದ ಆರ್. ದೇವರಾಜ್ ಸುದೀಪ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಜೊತೆಗೆ ಹೈದರಾಬಾದ್ನಲ್ಲಿಯೇ ಸುದೀಪರಿಂದ ಟ್ರೇಲರ್ಗೆ ಡಬ್ಬಿಂಗ್ ಮಾಡಿಸಿದ್ದಾರೆ.

.

ವಿಶೇಷ ಅಂದರೆ ನಾಲ್ಕೂ ಭಾಷೆಯಲ್ಲೂ ಸುದೀಪ್ರದ್ದೇ ಧ್ವನಿ ಕೇಳಲಿದ್ದು, ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಲು ಕಾರಣವಾಗಿದೆ.

.

ಇನ್ನು ಬಹುಭಾಷೆಯಲ್ಲಿ ಮೂಡಿ ಬಂದಿರೋ ಉದ್ಘರ್ಷದಲ್ಲಿ ಮಿಸ್ಟರ್ ವರ್ಲ್ಡ್ ಠಾಕೂರ್ ಅನೂಪ್ ಸಿಂಗ್ ನಾಯಕನಾಗಿ ಅಭಿನಯಿಸಿದ್ದಾರೆ ತಾನ್ಯಾ ಹೋಪ್, ಧನ್ಸಿಕಾ ನಾಯಕಿಯರಾಗಿ ಅಭಿನಯಿಸಿದ್ದಾರೆ. ಇನ್ನು ಮೋಸ್ಟ್ ವಾಂಟೆಡ್ ವಿಲನ್ ಕಬೀರ್ ಸಿಂಗ್ ದುಹಾನ್, ಶ್ರವಣ್ ರಾಘವೇಂದ್ರ, ಬಾಹುಬಲಿ ಪ್ರಭಾಕರ್ ಇನ್ನೂ ಮುಂತಾದವರು ವಿಲನ್ ಆಗಿ ಅಭಿನಯಿಸಿದ್ದಾರೆ. ಜೊತೆಗೆ ವಂಶಿ ಕೃಷ್ಣ, ಕನ್ನಡಿಗ ಕಿಶೋರ್, ನಟಿ ಹರ್ಷಿಕಾ ಪೂಣಚ್ಚ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

ಸಿನಿಮಾ ಪ್ರಿಯರಿಗೆ ಡ್ಯಾನ್ಸ್, ನಟನೆ, ನಿರ್ದೇಶನ ಮತ್ತು ಮಾಡಲಿಂಗ್ ಕಲಿಯಲು ‘ಫ್ಲೆಮಿಂಗೋ ಸೆಲಬ್ರಿಟಿಸ್ ವರ್ಡ್ ಪ್ರೈ. ಲಿಮಿಟೆಡ್’ ತರಭೇತಿ ಸಂಸ್ಥೆಯು ಧವನ್‌ ಸೋಹ ಸಾರಥ್ಯದಲ್ಲಿ 2013ರಲ್ಲಿ ಪ್ರಾರಂಭ ಮಾಡಿದ್ದಾರೆ. ಉತ್ತಮ ವಿದ್ಯಾರ್ಥಿಗಳನ್ನು ಅಡಿಷನ್ ಮಾಡಿ ಕಿರುತೆರೆ, ಹಿರಿತೆರೆಗೆ ಶಿಪಾರಸ್ಸು ಮಾಡಲಾಗುತ್ತಿದೆ. ಈಗಾಗಲೇ ಹಲವು ಪ್ರತಿಭೆಗಳು ಚಿತ್ರರಂಗ ಹಾಗೂ ಮಾಡಲಿಂಗ್ ಕ್ಷೇತ್ರದಲ್ಲಿ ಬ್ಯುಸಿ ಇದ್ದಾರೆ. ಪ್ರತಿ ವರ್ಷ ಸೆಲಬ್ರಿಟಿಸ್ ಕ್ಯಾಲೆಂಡರ್ ಹೊರತರಲಾಗುತ್ತಿದೆ. ಅಲ್ಲದೆ ಕಳೆದ ನಾಲ್ಕು ವರ್ಷಗಳಿಂದ ಫ್ಯಾಷನ್ ವೀಕ್, ಮಾಡಲಿಂಗ್, ಫಿಲಿಂ ಅವಾರ್ಡ್‌ಗಳನ್ನು ನೀಡುತ್ತಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ.

.

ಈ ವರ್ಷದಿಂದ ಕನ್ನಡ ಚಿತ್ರರಂಗದ ಸಾಧಕರಿಗೆ ಗೌರವಿಸುವ ಸಲುವಾಗಿ ಫ್ಲಾಮಿಗೊ ವಾರ್ಷಿಕ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದ್ದಾರೆ.

.

2018 ರ ಫಿಲಿಂ ಪ್ರಶಸ್ತಿ ಪ್ರಧಾನವನ್ನು ಹಿರಿಯ ಹಾಗೂ ಕಿರಿಯ ಕಲಾವಿದರು, ತಂತ್ರಜ್ಘರನ್ನು ಗುರುತಿಸಿ ಗೌರವಿಸಲಾಯಿತು. ಇದರ ಸಾಲಿಗೆ ಜೀವಮಾನದ ಚಿತ್ರರಂಗದ ಸಾಧನೆಗಾಗಿ ಅನುಭವಿ ನಟ ಶ್ರೀನಾಥ್, ನಿರ್ದೆಶಕ ಭಾರ್ಗವ, ಗಿರಿಜಾಲೋಕೇಶ್, ವನಿತಾವಾಸು, ಪದ್ಮವಾಸಂತಿ, ಸುಜಾತ, ಚಂದ್ರಕಲಾಮೋಹನ್, ಬ್ಯಾಂಕ್‌ಜನಾರ್ಧನ್, ಧರ್ಮಕೀರ್ತಿರಾಜ್, ಸೇರಿದಂತೆ ಮೂವತ್ತು ಸಾಧಕರುಗಳಿಗೆ ಪ್ರಶಸ್ತಿಗಳನ್ನು ವಿತರಣೆ ಮಾಡಿ ಗೌರವಿಸಲಾಯಿತು.

ಚಿತ್ರ : ಬಜಾರ್
ನಿರ್ಮಾಣ : ತಿಮ್ಮೇಗೌಡ
ನಿರ್ದೇಶಕ : ಸುನಿ
ಸಂಗೀತ : ರವಿ ಬಸ್ರೂರು
ಕ್ಯಾಮೆರಾ : ಸಂತೋಷ್ ರೈ ಪಾತಾಜೆ
ತಾರಾಗಣ : ಧನ್‌ವೀರ್, ಅದಿತಿ ಪ್ರಭುದೇವ, ಸಾಧುಕೋಕಿಲ, ಶರತ್ ಲೋಹಿತಾಶ್ವ, ಅರುಣಾ ಬಾಲರಾಜ್, ಚೇತನ್ ಚಂದ್ರ, ಧರ್ಮೇಂದ್ರ ಅರಸ್

.

ಪಾರಿವಾಳ ರೇಸ್‌ ಜಗತ್ತಿನ ಪರಿಚಯ ಮಾಡಿಸುವ ಬಜಾರ್‌ :

 

ಸ್ಯಾಂಡಲ್‌ವುಡ್‌ನಲ್ಲಿ ಎಲ್ಲ ತರಹದ ರೌಡಿಸಂ ಸಿನಿಮಾಗಳು ಬಂದಿವೆ. ಆದರೆ ಪಾರಿವಾಳ ರೇಸ್‌ಗೆ ಸಂಬಂಧಿಸಿದ್ದು ಇರಲಿಲ್ಲ. ಅದರ ಕೊರತೆಯನ್ನು ಬಜಾರ್‌ ನೀಗಿಸಿದೆ.

ಇಲ್ಲಿಯವರೆಗೂ ತರಾವರಿ ಲವ್‌ ಸ್ಟೋರಿಗಳ ಮೂಲಕ ಗಮನ ಸೆಳೆದಿದ್ದ ಸಿಂಪಲ್‌ ಸುನಿ ಮೊದಲ ಬಾರಿಗೆ ಇಂತಹದ್ದೊಂದು ವಿಶೇಷ ಕಥೆಯ ಮೂಲಕ ಮಾಸ್‌ ಸಿನಿಮಾ ಮಾಡಿದ್ದಾರೆ.

.

ನಿರ್ದೇಶಕ ಸುನಿ ತಮ್ಮ ಪಾರಿವಾಳ ಹಾರಾಟ ಸ್ಪರ್ಧೆ ಮತ್ತು ಅದರ ಹಿಂದಿನ ಬೆಟ್ಟಿಂಗ್ ದಂಧೆಯನ್ನು ತೆರೆ ಮೇಲೆ ತಂದು ಎಲ್ಲ ವರ್ಗದವರಿಗೂ ತಲುಪಿಸವ ಪ್ರಯತ್ನ ಮಾಡಿದ್ದಾರೆ. ಈ ಪ್ರಯತ್ನಕ್ಕೆ ಅವರ ಚಿತ್ರಕಥೆ ಸಾಥ್‌ ನೀಡಿದೆ.

.

ಈ ಸಿನಿಮಾದಲ್ಲಿ ಕ್ಯೂಟ್‌ ಲವ್‌ಸ್ಟೋರಿಯಿದೆ, ಕ್ಲಾಸ್‌ ಜನಗಳ ಬದುಕಿದೆ. ಬಿ ಮತ್ತು ಸಿ ಆಡಿಯನ್ಸ್ ಇಷ್ಟಪಡುವ ಖಡಕ್‌ ಡೈಲಾಗ್‌, ಮಾಸ್‌ ಫೈಟ್ಸ್‌, ಕಿವಿಗೆ ಕಿಕ್‌ ಕೊಡುವ ಹಿನ್ನೆಲೆ ಸಂಗೀತ ಎಲ್ಲವೂ ಇದೆ. ಇವೆಲ್ಲವೂ ಇರುವ ಕಾರಣಕ್ಕೆ ಬಹುಶಃ ಸುನಿ ಇದಕ್ಕೆ ಬಜಾರ್‌ ಎಂದು ಹೆಸರಿಟ್ಟಿರಬಹುದು.

.

ಸುನಿ ಮೊದಲ ಬಾರಿಗೆ ರೌಡಿಸಂ ಎಲಿಮೆಂಟ್‌ ಇರುವ ಮಾಸ್‌ ಸಿನಿಮಾ ಮಾಡಿದ್ದಾರೆ, ಆದರೆ ತಮ್ಮ ಸ್ಟೈಲ್‌ನ್ನು ಇಲ್ಲಿಯೂ ಸೂಕ್ಷ್ಮವಾಗಿ ಮುಂದುವರೆಸಿದ್ದಾರೆ.ಚಿತ್ರದ ವೇಗ ಸ್ವಲ್ಪ ಚುರುಕಾಗಿರಬೇಕಿತ್ತು, ಚಿತ್ರದ ಸಬ್ಜೆಕ್ಟ್ ಹೆವಿ ಆಗಿರೋದ್ರಿಂದ ಪಾತ್ರವರ್ಗಕ್ಕೆ ನುರಿತ ಕಲಾವಿದರ ಅವಶ್ಯಕತೆ ಇತ್ತು. ಉದಾಹರಣೆಗೆ ಪೋಲೀಸ್ ಅಧಿಕಾರಿ ಪಾತ್ರಕ್ಕೆ ಮತ್ತಷ್ಟು ಖಡಕ್ ನಟನ ಅವಶ್ಯಕತೆಯಿತ್ತು. ಸಾಧು ಕೋಕಿಲ ಅವರದು ಕಾಮಿಡಿ ಪಾತ್ರವೋ, ಸೀರಿಯಸ್ ಪಾತ್ರವೋ ತಿಳಿಯುವುದಿಲ್ಲ. ಯಾಕಂದ್ರೆ ಚಿತ್ರ ಮುಗಿದ ಮೇಲೆ ಸಾಧು ಅವರ ನೆನಪಿರೋದೇ ಇಲ್ಲ.

.

ಈ ಸಿನಿಮಾ ಮೂಲಕ ಸ್ಯಾಂಡಲ್ವುಡ್‌ಗೆ ಎಂಟ್ರಿ ಕೊಟ್ಟಿರುವ ಧನ್ವೀರ್‌ ಚೊಚ್ಚಲ ಪ್ರಯತ್ನದಲ್ಲೇ ಗಮನ ಸೆಳೆಯುತ್ತಾರೆ.ತಮ್ಮ ಹೈಟು ವೈಟು, ಧ್ವನಿ, ನಟನೆ ಎಲ್ಲದರಲ್ಲಿಯೂ ಅವರು ಇಷ್ಟವಾಗುತ್ತಾರೆ. ಶರತ್‌ ಲೋಹಿತಾಶ್ವ ಎಂದಿನಂತೆ ತಮ್ಮ ಪಾತ್ರದಲ್ಲಿ ಸಿಕ್ಸರ್‌ ಬಾರಿಸಿದ್ದಾರೆ. ನಾಯಕಿ ಅದಿತಿ ಸಹ ಕ್ಯೂಟ್‌ ಆಗಿ ನಟಿಸಿದ್ದಾರೆ. ಕುಡುಕ ತಂದೆಯಾಗಿ ಧರ್ಮೇಂದ್ರ ಅರಸ್ ಇಷ್ಟವಾಗುತ್ತಾರೆ. ಚೇತನ್ ಚಂದ್ರ, ಸಾಧು ಕೋಕಿಲಾ ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

.

ಸಂಗೀತ ಮತ್ತು ಸಿನಿಮಾಟೋಗ್ರಫಿ ಸಿನಿಮಾದ ಪ್ಲಸ್‌ಪಾಯಿಂಟ್‌ನಲ್ಲಿ ತನ್ನ ಅಗ್ರಗಣ್ಯ ಸ್ಥಾನ ಗಳಿಸುತ್ತದೆ. ಇದಕ್ಕೆ ಕಾರಣರಾದ ರವಿ ಬಸ್ರೂರು, ಸಂತೋಷ್‌ ರೈ ಪಾತಾಜೆ ಅಭಿನಂದಾರ್ಹರು.

ಒಟ್ಟಿನಲ್ಲಿ ಸಿನಿಮಾ ಮಾಸ್‌ ಮತ್ತು ಕ್ಲಾಸ್‌ ಪ್ರೇಕ್ಷಕರಿಬ್ಬರನ್ನು ಸೆಳೆಯುವದರಲ್ಲಿ ಅನುಮಾನವಿಲ್ಲ.

.

ರೇಟಿಂಗ್ : 3.5/5

ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ ನಟನೆಯ ಬಹು ನಿರೀಕ್ಷಿತ "ನಟಸಾರ್ವಭೌಮ" ಸಿನಿಮಾ ಇದೇ ಫೆ.7ಕ್ಕೆ ಬಿಡುಗಡೆಯಾಗುತ್ತಿದೆ.

ಚಿತ್ರದ ಬುಕಿಂಗ್ಸ್ ತೆರೆದಿದ್ದು, ಅಪ್ಪು ಅಭಿಮಾನಿಯೊಬ್ಬರು ಉರ್ವಶಿ ಚಿತ್ರದ ಬೆಳಗಿನ ಜಾವದ 4 ಗಂಟೆ ಶೋ ಸಂಪೂರ್ಣ ಟಿಕೇಟ್ಸ್ ಖರೀದಿಸಿದ್ದಾರೆ.

.

ಈ ಸಿನಿಮಾದಲ್ಲಿ ಪುನೀತ್‌ರಾಜ್‌ಕುಮಾರ್‌ ಪತ್ರಿಕೆಯೊಂದರ ಫೋಟೋಗ್ರಫರ್‌ ಆಗಿ ನಟಿಸುತ್ತಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಟ್ರೇಲರ್‌ ಮತ್ತು ಪೋಸ್ಟರ್‌ಗಳಿಂದ ಇದು ಹಾರರ್‌ ಸಿನಿಮಾ ಎಂಬುದು ಗೊತ್ತಾಗಿದೆ.

.

ಆದರೆ ಇದರಲ್ಲಿ ಪುನೀತ್‌ ರಾಜ್‌ಕುಮಾರ್‌ ದೆವ್ವವಾಗಿ ಕಾಣಿಸಿಕೊಳ್ಳುತ್ತಿದ್ದಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಪುನೀತ್‌ಗೆ ಜೋಡಿಯಾಗಿ ರಚಿತಾ ರಾಮ್‌, ಅನುಪಮಾ ಪರಮೇಶ್ವರನ್‌ ನಟಿಸಿದ್ದಾರೆ. ಇನ್ನು ಬಿ ಸರೋಜಾ ದೇವಿ ಪುನೀತ್‌ ತಾಯಿಯಾಗಿದ್ದಾರೆ. ರಣವಿಕ್ರಮ ಸಿನಿಮಾದ ನಂತರ ಪುನೀತ್‌ ಮತ್ತು ಪವನ್‌ ಒಡೆಯರ್‌ ಕಾಂಬಿನೇಶನ್‌ನ ಸಿನಿಮಾ ಇದಾಗಿದೆ.

ರಾಕ್ ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

 

ತಮ್ಮ ಮನೋಜ್ಞ ಅಭಿನಯದ ಮೂಲಕ ಕನ್ನಡ, ಹಿಂದಿ, ತೆಲುಗು,ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಇಂದಿಗೆ(ಜ.31) ಚಿತ್ರರಂಗಕ್ಕೆ ಬಂದು 23 ವರ್ಷ.

.

ಸೋಷಿಯಲ್‌ ಮಿಡಿಯಾದಲ್ಲಿ ತಮ್ಮ 23 ವರ್ಷಗಳ ತಮ್ಮ ಸಿನಿ ಜರ್ನಿಯನ್ನು ಕಿಚ್ಚ ನೆನಪಿಸಿಕೊಂಡಿದ್ದಾರೆ. ಜನವರಿ 31ರಂದು ಕಂಠೀರವ ಸ್ಟುಡಿಯೋದಲ್ಲಿ ಸೆಟ್ಟೇರಿದ ತಮ್ಮ ಮೊದಲ ಚಿತ್ರದ ನೆನಪಲ್ಲಿ ಸುದೀಪ್ ಟ್ವೀಟ್ ಮಾಡಿದ್ದು, ಈ ಬಗ್ಗೆ ಅವರಿಗೆ ಸ್ಯಾಂಡಲ್‌ವುಡ್‌ನ ಅನೇಕ ನಿರ್ದೇಶಕರು,ನಟರು ಟ್ವೀಟರ್‌ ಮೂಲಕ ಶುಭಾಶಯ ಕೋರಿದ್ದಾರೆ.

.

ತಮ್ಮ ಸಿನಿಮಾದ ನೆನೆಪಿನಲ್ಲಿ ಸುದೀಪ್‌ ತಮ್ಮ ಪತ್ನಿಯ ಬಗ್ಗೆಯೂ ಪ್ರಸ್ತಾಪ ಮಾಡಿದ್ದು, ತಾವು ಅವಕಾಶಕ್ಕಾಗಿ ಓಡಾಡುತ್ತಿದ್ದಾಗೆ ಪತ್ನಿಯ ಸ್ಕೂಟಿ ಬಳಸಿದ್ದನ್ನು ಸ್ಮರಿಸಿದ್ದಾರೆ. ಆ ಸಮಯದಲ್ಲಿ ನನಗೆ ಸ್ಕೂಟಿ ನೀಡಿದ್ದಕ್ಕೆ ಥ್ಯಾಂಕ್ಸ್‌ ಎಂದು ಪತ್ನಿಗೆ ಹೇಳಿದ್ದಾರೆ. ಸುದೀಪ್‌ ಅವರ ಈ ಭಾವಾನತ್ಮಕ ಟ್ವೀಟ್‌ ಈಗ ವೈರಲ್‌ ಆಗಿದೆ.

.

ಸುದೀಪ್ ಅವರ 23 ವರ್ಷದ ಜರ್ನಿಯನ್ನು ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಹಬ್ಬದಂತೆ ಆಚರಿಸಿದ್ದಾರೆ. ಸಾಕಷ್ಟು ಪೋಸ್ಟರ್ ಗಳನ್ನು ಮಾಡುವ ಮುಖೇನ ತಮ್ಮ ನೆಚ್ಚಿನ ನಟನಿಗೆ ಶುಭಾಶಯ ಕೋರಿದ್ದಾರೆ.

.

ಸುದೀಪ್‌ ಸದ್ಯ ಪೈಲ್ವಾನ್‌, ಸೈರಾ ನರಸಿಂಹ ರೆಡ್ಡಿ, ಕೋಟಿಗೋಬ್ಬ-3 ಚಿತ್ರಗಳಲ್ಲಿ ಬಿಝಿಯಾಗಿದ್ದಾರೆ.

ಗಣೇಶ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಚಮಕ್‌ ಸಿನಿಮಾದ ಯಶಸ್ಸಿನ ನಂತರ ನಿರ್ದೇಶಕ ಸುನಿ ಕೈಗೆತ್ತಿಕೊಂಡ ಚಿತ್ರ 'ಬಜಾರ್‌'. ಈ ಸಿನಿಮಾದ ಮೂಲಕ ಅವರು ಮಾಸ್‌ ಡೈರೆಕ್ಟರ್‌ ಆಗುವುದು ಪಕ್ಕಾ ಎನ್ನುತ್ತಿದೆ ಸ್ಯಾಂಡಲ್‌ವುಡ್‌.

 

ಸದ್ಯ ಬಿಡುಗಡೆಯಾಗಿರುವ ಪೋಸ್ಟರ್, ಹಾಡುಗಳು ಹಾಗೂ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ .

ಹೌದು, "ಪಾರಿವಾಳ ಪ್ರೀತಿಯ ಸಂಕೇತ, ಪಾರಿವಾಳ ಶಾಂತಿಯ ಪ್ರತೀಕ. ಆದರೆ ನಿಮಗೆ ಗೊತ್ತಿಲ್ಲದ ಬೇರೆ ಪಾರಿವಾಳದ ಲೋಕವೊಂದಿದೆ' ಎನ್ನುವ ಡೈಲಾಗ್ ಮೂಲಕ ಟ್ರೈಲರ್ ಆರಂಭವಾಗುತ್ತದೆ. ನೋಡಲು ಪಕ್ಕಾ ಕಮರ್ಷಿಯಲ್ ಸಿನಿಮಾದಂತೆ ಕಾಣಿಸುತ್ತಿರುವ ಬಜಾರ್ ಸಿನಿಮಾದಲ್ಲಿ ಸಖತ್‌ ಮಾಸ್‌ ಸನ್ನಿವೇಶಗಳು, ಇವೆಯಂತೆ. ಜತೆಗೆ ಲವ್‌ಸ್ಟೋರಿ ಸಹ ಇಲ್ಲಿದೆಯಂತೆ. ಪಾರಿವಾಳಗಳ ಬೆಟ್ಟಿಂಗ್‍ನಲ್ಲಿ ನಡೆಯುವ ಪ್ರೇಮಕಥೆ ಜತೆಗೆ ರೌಡಿಸಂ ಸಹ ಈ ಬಜಾರ್‌ನಲ್ಲಿದೆ.

.

ಈ ಚಿತ್ರದ ಮೂಲಕ ಸುನಿ ಧನ್ವೀರ್‌ ಎಂಬ 6 ಅಡಿ ಎತ್ತರದ ಮತ್ತೊಬ್ಬ ನಾಯಕನನ್ನು ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ. ಈ ಚಿತ್ರವನ್ನು ಭಾರತಿ ಫಿಲಂ ಪ್ರೊಡಕ್ಷನ್ಸ್‌ನಡಿ ತಿಮ್ಮೇಗೌಡ ನಿರ್ಮಾಣ ಮಾಡಿದ್ದಾರೆ.

.

ಇದೇ ಫೆ.1ಕ್ಕೆ ಚಿತ್ರ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

 

`ರಾಜಣ್ಣನ ಮಗ` ಚಿತ್ರದ ನಾಯಕರಾಗಿ ನಟಿಸುತ್ತಿರುವ ಹರೀಶ್ ಜಲಗೆರೆ ಹಾಗೂ ಪ್ರಕಾಶ್ ಜಲಗೆರೆ ಅವರು ಜೆ.ಪಿ ನಗರದಲ್ಲಿ ನಿರ್ಮಿಸಿರುವ ಗೋಲ್ಡ್ ಕ್ರಾಫ್ಟ್ ಫಿಟ್ನೆಸ್ ಜಿಮ್ ಅನ್ನು ಇತ್ತೀಚೆಗೆ ನಟ ಕಿಚ್ಚ ಸುದೀಪ್ ಉದ್ಘಾಟಿಸಿದರು.

.

ಉದ್ಘಾಟನೆಯ ನಂತರ ಸುಸಜ್ಜಿತ ಈ ಜಿಮ್ ವೀಕ್ಷಿಸಿದ ಕಿಚ್ಚ ಸುದೀಪ್ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಜೆ.ಪಿ.ನಗರದಲ್ಲಿ ಆರಂಭವಾಗಿರುವ ಗೋಲ್ಡ್ ಕ್ರಾಫ್ಟ್ ಫಿಟ್ನೆಸ್ ಜಿಮ್ನಲ್ಲಿ ಪರ್ಸನಲ್ ಟ್ರೈನಿಂಗ್, ಕ್ರಾಸ್ ಫಿಟ್ ಟ್ರೈನಿಂಗ್, ಬಾಕ್ಸಿಂಗ್ ಟ್ರೈನಿಂಗ್, ಕಿಡ್ಸ್ ಟ್ರೈನಿಂಗ್ ಮುಂತಾದ ಸೌಲಭ್ಯಗಳು ಮತ್ತು ಅಧುನಿಕ ಉಪಕರಣಗಳು ಈ ಜಿಮ್‍ನಲ್ಲಿದೆ.

url

.

ಗೋಲ್ಡ್ ಕ್ರಾಫ್ಟ್ ಫಿಟ್ನೆಸ್ ಜಿಮ್‍ ದಕ್ಷಿಣ ಬೆಂಗಳೂರಿನಲ್ಲೇ ಎಲ್ಲಾ ಸೌಲಬ್ಯ ಹೊಂದಿರುವ ಅತೀ ದೊಡ್ಡ ಜಿಮ್ ಎಂದರೆ ತಪ್ಪಾಗಲಾರದು ಎಂದು ಜಿಮ್ ಮಾಲೀಕರು ತಿಳಿಸಿದ್ದಾರೆ.

ಚಿತ್ರ: ಸೀತಾರಾಮ ಕಲ್ಯಾಣ
ನಿರ್ದೇಶನ : ಎ ಹರ್ಷ
ನಿರ್ಮಾಣ : ಅನಿತಾ ಕುಮಾರಸ್ವಾಮಿ
ಸಂಗೀತ : ಅನೂಪ್ ರೂಬೆನ್ಸ್
ಸಿನಿಮಾಟೋಗ್ರಾರ್ : ಸ್ವಾಮಿ
ತಾರಾಗಣ : ನಿಖಿಲ್‌ಕುಮಾರ್, ರಚಿತಾರಾಮ್, ಶರತ್‌ಕುಮಾರ್, ಮಧುಬಾಲ, ಆದಿತ್ಯ ಮೆನನ್, ಚಿಕ್ಕಣ್ಣ,ನಯನ ಮತ್ತಿತರರು.

.


ನಿಖಿಲ್‌ಕುಮಾರ್‌ ಮತ್ತು ರಚಿತಾ ರಾಮ್‌ ನಟನೆಯ ಸೀತಾರಾಮ ಕಲ್ಯಾಣ ಸಿನಿಮಾ ಮೇಕಿಂಗ್‌, ಸಂಗೀತ, ಆ್ಯಕ್ಷನ್‌, ಕಾಮಿಡಿ, ಹೀಗೆ ಎಲ್ಲದರಿಂದಲೂ ಒಟ್ಟಾಗಿ ಕೌಟುಂಬಿಕ ಕಲ್ಯಾಣವಾಗಿದೆ.

ಸೀತಾ ರಾಮ ಕಲ್ಯಾಣದಲ್ಲಿ ಎಲ್ಲವೂ ಇದೆ. ಲವ್‌ಸ್ಟೋರಿ, ಕಾಮಿಡಿ, ಎಮೋಷನ್ಸ್‌, ಆ್ಯಕ್ಷನ್ ಹೀಗೆ ಎಲ್ಲ ಅಂಶಗಳನ್ನು ಒಳಗೊಂಡಿರುವ ಒಂದು ಕಂಪ್ಲೀಟ್‌ ಪ್ಯಾಕೇಜ್‌ ಈ ಸಿನಿಮಾ.

.

ಮದುವೆಯೊಂದರಲ್ಲಿ ನಾಯಕ ಆರ್ಯ [ನಿಖಿಲ್‌]ಗೆ ಗೀತಾ [ರಚಿತಾ ರಾಮ್‌]ಳನ್ನು ನೋಡುತ್ತಾನೆ. ನೋಡಿದ ತಕ್ಷಣ ಲವ್‌ಲ್ಲಿ ಬೀಳೋ ಆರ್ಯ ಅದನ್ನು ಹೇಳುವುದು ಮಾತ್ರ ಸಿನಿಮಾದ ಇಂಟರ್‌ವೆಲ್‌ ಅಷ್ಟೊತ್ತಿಗೆ. ಅಷ್ಟೊರಳಗೆ ಒಂದು ಫೈಟ್‌, ಒಂದಷ್ಟು ಕಥೆಯ ವಿಸ್ತರಣೆ ಆಗಿರುತ್ತದೆ. ಅದೇನು ಎಂಬುದನ್ನು ಸಿನಿಮಾದಲ್ಲಿಯೇ ನೋಡಿದರೆ ಚಂದ.

.

ನಿರ್ದೇಶಕ ಹರ್ಷ ಮೇಕಿಂಗ್‌, ಲೊಕೇಶನ್‌ ಸೆಲೆಕ್ಷನ್‌, ಹಾಡುಗಳ ಆಯ್ಕೆ, ಚಿತ್ರಕಥೆ ಎಲ್ಲದರಲ್ಲಿಯೂ ಅಚ್ಚುಕಟ್ಟಾಗಿ ಕೆಲಸ ಮಾಡಿ ಗಮನ ಸೆಳೆದಿದ್ದಾರೆ. ಚಿತ್ರದ ಕೆಲವು ದೃಶ್ಯಗಳಲ್ಲಿ ಒಂದೆರಡು ತೆಲುಗು ಸಿನಿಮಾಗಳ ಛಾಯೆಯಿದೆ.

.

ಹರ್ಷ ಅವರ ಕನಸಿಗೆ ಸಿನಿಮಾಟೋಗ್ರಫರ್‌ ಸ್ವಾಮಿ ಮತ್ತು ಸಂಗೀತ ನಿರ್ದೇಶಕ ಅನುಪ್‌ ರೂಬೆನ್ಸ್‌ ನೀರೆರೆದಿದ್ದಾರೆ. ಅತಿ ಹೆಚ್ಚು ಗಮನ ಸೆಳೆಯುವುದು ಇವರಿಬ್ಬರ ಕೆಲಸ. ಇನ್ನು ನಿಖಿಲ್‌ಕುಮಾರ್‌ ಮೊದಲ ಸಿನಿಮಾಗೂ ಈ ಸಿನಿಮಾಗೂ ಸಾಕಷ್ಟು ಪಳಗಿದ್ದಾರೆ. ಡೈಲಾಗ್‌ ಡಿಲವರಿ, ಆ್ಯಕ್ಷನ್‌, ನಟನೆ, ರೊಮ್ಯಾನ್ಸ್‌, ಕಾಮಿಡಿ ಹೀಗೆ ಎಲ್ಲವನ್ನು ಲೀಲಾಜಾಲವಾಗಿ ಮಾಡಿ ನಟನಾಗಿ ಮಾಗಿದ್ದಾರೆ.

.

ರಚಿತಾ ರಾಮ್‌ ಇಲ್ಲಿ ಪಕ್ಕಾ ಫ್ಯಾಮಿಲಿ ಗರ್ಲ್‌. ಇಡೀ ಸಿನಿಮಾದ ಲಂಗ ದಾವಣಿ ಹಾಕಿಕೊಂಡು ಇಷ್ಟವಾಗುತ್ತಾರೆ. ಅಲ್ಲದೆ ತಮ್ಮ ಎಂದಿನಂತೆ ಲವಲವಿಕೆಯ ನಟನೆಯನ್ನು ಅವರು ಮುಂದುವರೆಸಿದ್ದಾರೆ. ಉಳಿದಂತೆ ಚಿಕ್ಕಣ್ಣ, ಮತ್ತು ಕಾಮಿಡಿ ಕಿಲಾಡಿಗಳು ಗ್ಯಾಂಗ್‌ ನಗಿಸುವಲ್ಲಿ ಯಶಸ್ವಿಯಾಗಿದೆ. ಚಿತ್ರದಲ್ಲಿರುವ ಸೆಂಟಿಮೆಂಟ್ ಸೀನ್‌ಗಳಲ್ಲಿ ರವಿಶಂಕರ್ ಮತ್ತು ಶರತ್ ಕುಮಾರ್ ಪೈಪೋಟಿಗೆ ಬಿದ್ದು ನಟಿಸಿದ್ದಾರೆ.

.

ಒಟ್ಟಿನಲ್ಲಿ ಸೀತಾ ರಾಮ ಕಲ್ಯಾಣವನ್ನು ನೋಡಲು ಇಡೀ ಫ್ಯಾಮಿಲಿ ಜತೆ ಯಾವುದೇ ಇರಿಸುವ ಮುರಿಸಿಲ್ಲದೇ ಹೋಗಬಹುದು.

ರೇಟಿಂಗ್‌: 3.75/5

Page 1 of 19

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top