IB anigif

Ayugya Gif

adweb

udgharsha

ರಾಜ ಲವ್ಸ್‌ ರಾಧೆಯಲ್ಲಿ ಸುಳ್ಳಿನ ಪ್ರೀತಿ :
-----
ಸುಳ್ಳು ನಮ್ಮ ಬದುಕನ್ನು ಹೇಗೆ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ಳುವಂತೆ ಮಾಡುತ್ತದೆ ಎಂಬುದನ್ನು ಲವ್‌, ಕಾಮಿಡಿಯನ್ನು ಮಿಕ್ಸ್‌ ಮಾಡಿದಾಗ ರಾಜ ಲವ್ಸ್‌ ರಾಧೆಯ ಥರದ ಸಿನಿಮಾವಾಗುತ್ತದೆ.
.
ಮ್ಯಾಕನಿಕ್‌[ವಿಜಯ್‌ ರಾಘವೇಂದ್ರ] ರಾಧೆ ಎಂಬ ಹುಡುಗಿಯನ್ನುಪ್ರೀತಿ ಮಾಡಲು ಆರಂಭಿಸುತ್ತಾನೆ. ವೃತ್ತಿಯಲ್ಲಿ ಮ್ಯಾಕನಿಕ್‌ ಆದರೂ ಸಾಫ್ಟ್‌ ವೇರ್‌ ಎಂಜಿನಿಯರ್ ಎಂದು ಹೇಳಿರುತ್ತಾನೆ. ಇದೇ ಸುಳ್ಳನ್ನು ತನ್ನ ತಾಯಿಗೂ ಹೇಳಿರುತ್ತಾನೆ. ಇದರಿಂದ ಒಂದೊಂದೆ ಸಮಸ್ಯೆಗೆ ಸಿಕ್ಕಿ ಹಾಕಿಕೊಳ್ಳುತ್ತಾ ಹೋಗುತ್ತಾನೆ. ಇದರಿಂದ ಹೇಗೆ ಬಿಡಿಸಿಕೊಂಡು ಹೊರಬರುತ್ತಾನೆ ಎಂಬುದೇ ಚಿತ್ರಕಥೆಯಾಗಿದೆ.
.
ಸಿನಿಮಾದ ಹೆಸರು ಕೇಳಿದ ತಕ್ಷಣ ಇದೊಂದು ಲವ್‌ಸ್ಟೋರಿ ಎಂದು ತಿಳಿಯುತ್ತದೆ ಆದರೆ ಸಿನಿಮಾದಲ್ಲಿ ಲವ್‌ಸ್ಟೋರಿ ಜತೆ ಕಾಮಿಡಿ ಸಹ ಇದೆ. ಈ ಸಿನಿಮಾದಲ್ಲಿ ಕಾಮಿಡಿ ಮತ್ತು ಲವ್‌ಸ್ಟೋರಿ ಎರಡು ಮಿಕ್ಸ್ ಆಗಿರುವುದು ಸಿನಿಮಾಗೆ ಮೈನಸ್‌ ಸಹ ಆಗುತ್ತದೆ. ಏಕೆಂದರೆ ಆ ಕಡೆ ಪ್ರೇಮದ ತೀವ್ರತೆಯೂ ಇಲ್ಲ, ಈ ಕಡೆ ಕಾಮಿಡಿಯು ಎಫೆಕ್ಟೀವ್‌ ಆಗಿ ಮೂಡಿ ಬಂದಿಲ್ಲ. ಹಾಸ್ಯ ನಟರು ಇದ್ದಾಕ್ಷಣಕ್ಕೆ ಜನ ನಗುತ್ತಾರೆ ಎಂದು ನಿರ್ದೇಶಕರು ಅಂದಾಜಿಸಿರುವುದು ಈ ಸಿನಿಮಾದಲ್ಲಿ ಎದ್ದು ಕಾಣುತ್ತದೆ.
.
ಈ ಚಿತ್ರದಲ್ಲಿ ಸಾಧು ಕೋಕಿಲ, ರಂಗಾಯಣ ರಘು, ಟೆನ್ನಿಸ್ ಕೃಷ್ಣ ಮಿಕ್ಕಂತೆ ಕುರಿ ಪ್ರತಾಪ್, ಪವನ್, ಮಿತ್ರ, ತಬಲಾ ನಾಣಿ, ಕುರಿ ರಂಗ,ಇವರೆಲ್ಲರ ಜತೆ ರವಿಶಂಕರ್‌ ಸಹ ಕಾಮಿಡಿ ಮಾಡುತ್ತಾರೆ. ಆದರೆ ಕೆಲ ದೃಶ್ಯಗಳಲ್ಲಿ ಹಾಸ್ಯ ಸಹ್ಯವಾಗುವುದಿಲ್ಲ. ಸಿನಿಮಾಗಳಿಗೆ ಪ್ರಸೆಂಟೇಶನ್‌ ಬಹಳ ಮುಖ್ಯವಾಗುತ್ತದೆ ಆದರೆ ನಿರ್ದೇಶಕರು ಚಿತ್ರವನ್ನು ಪ್ರೇಕ್ಷಕರಿಗೆ ಪ್ರಸೆಂಟ್‌ ಮಾಡುವಲ್ಲಿ ಎಡವಿದ್ದಾರೆ. ಉಳಿದಂತೆ ಒಂದಷ್ಟು ಕ್ಯಾಚಿಯಾದ ಸಂಭಾಷಣೆಗಳು ಚಿತ್ರದಲ್ಲಿವೆ.
.
ವಿಜಯ್ ರಾಘವೇಂದ್ರ, ರವಿಶಂಕರ್, ಶೋಭರಾಜ್ ಎಂದಿನಂತೆ ತಮ್ಮ ಫಾರ್ಮ್‌ ಮುಂದುವರೆಸಿದ್ದಾರೆ. ನಾಯಕಿ ರಾಧಿಕಾ ಪ್ರೀತಿ ಮತ್ತು ಶುಭಾ ಪೂಂಜಾ ಇಷ್ಟವಾಗುತ್ತಾರೆ. ಸಂಗೀತ ಮತ್ತು ಛಾಯಾಗ್ರಹಣದಲ್ಲಿ ಮತ್ತು ಸಂಗೀತದಲ್ಲಿ ವೀರ್‌ಸಮರ್ಥ್‌ ಗಮನ ಸೆಳೆಯುತ್ತಾರೆ. ಒಂದಷ್ಟು ಮೈನಸ್‌ಗಳಿದ್ದರೂ, ಸಿನಿಮಾವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.
.
ರೇಟಿಂಗ್: 3/5
#RajaLovesRadhe #Cineloka
ವಿಜಯ್‌ ರಾಘವೇಂದ್ರ ನಾಯಕನಾಗಿ ಕಾಣಿಸಿಕೊಂಡಿರುವ ರಾಜ ಲವ್ಸ್‌ ರಾಧೆ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ.
ಈ ಸಂಭಾಷಣೆ ಚಿತ್ರವನ್ನು ನಿರ್ದೇಶಿಸಿದ್ದ ರಾಜಶೇಖರ್‌ ಈ ಚಿತ್ರಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ರಾಧಿಕಾಪ್ರೀತಿ ಈ ಚಿತ್ರದಲ್ಲಿ ವಿಜಯ್‌ ರಾಘವೇಂದ್ರಗೆ ಜೋಡಿಯಾಗಿದ್ದಾರೆ.
ಈ ಸಿನಿಮಾದಲ್ಲಿ ಕಮರ್ಷಿಯಲ್‌ ಕಾಮಿಡಿ ಇದ್ದು, ಜನಕ್ಕೆ ಬಹಳ ಇಷ್ಟವಾಗುತ್ತದೆ ಎಂಬುದು ಚಿತ್ರತಂಡದ ನಂಬಿಕೆಯಾಗಿದೆ. ವೀರ್‌ ಸಮರ್ಥ್‌ ನೀಡಿರುವ ಸಂಗೀತ ಈಗಾಗಲೇ ಹಿಟ್‌ ಲೀಸ್ಟ್‌ಗೆ ಸೇರಿರುವುದು ಚಿತ್ರತಂಡ ಗೆದ್ದಷ್ಟೇ ಖುಷಿಯಾಗಿದೆ.
ರಾಜ್ಯಾದ್ಯಂತ ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಾಜ ರಾಧೆಯ ಲವ್‌ ಸ್ಟೋರಿಯನ್ನು ನೋಡಬಹುದು.
ಎಚ್ ಎಲ್ ಎನ್ ರಾಜ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿಜಯ್ ಸಿನಿಮಾಸ್ ಡಿಸ್ಟ್ರಿಬ್ಯುಶನ್ಸ್ ಮೂಲಕ ಚಿತ್ರ ಬಿಡುಗಡೆಯಾಗುತ್ತಿದೆ
#RajaLovesRadhe #Cineloka
 
-----------
ಅಂದು ಕೊಂಡಂತೆಯೇ ಆಗಿದ್ದರೆ ರಾಜ ಲವ್ಸ್ ರಾಧೆ ಚಿತ್ರ 2 ತಿಂಗಳ ಹಿಂದೆಯೇ ರಿಲೀಸ್ ಆಗಬೇಕಾಗಿತ್ತು. ವಿಧಾನಸಭಾ ಚುನಾವಣೆಗಳು ಬಂದ ಹಿನ್ನೆಲೆಯಲ್ಲಿ ಮುಂದಕ್ಕೆ ಹೋಗಿ ಇದೀಗ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಇದೇ ತಿಂಗಳ 18 ರಂದು ರಾಜ ಲವ್ಸ್ ರಾಧೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಸಂಭಾಷಣೆ ನಂತರ ರಾಜಶೇಖರ್‍ರವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 2ನೇ ಚಿತ್ರವಿದು.
ಕೋಟಿಗೊಂದು ಲವ್ ಸ್ಟೋರಿ ಚಿತ್ರಕ್ಕೆ ಬಂಡವಾಳ ಹಾಕಿದ್ದ ನಿರ್ಮಾಪಕ ಹೆಚ್.ಎಲ್.ರಾಜ್ ತಮ್ಮ 2ನೇ ಪ್ರಯತ್ನವಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
.
ಬಹಳ ದಿನಗಳ ನಂತರ ವಿಜಯರಾಘವೇಂದ್ರ ಈ ಚಿತ್ರದ ಮೂಲಕ ತೆರೆಯ ಮೇಲೆ ಬರುತ್ತಿದ್ದಾರೆ. ಪಂಟ ಚಿತ್ರದ ನಾಯಕಿ ರಿತೀಕ್ಷಾ ಈ ಚಿತ್ರದಲ್ಲಿ ರಾಧಿಕಾ ಪ್ರೀತಿ ಆಗಿ ತನ್ನ ಹೆಸರನ್ನು ಬದಲಾಯಿಸಿಕೊಂಡು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಚಿತ್ರದ ಬಿಡುಗಡೆ ಪೂರ್ವ ಪತ್ತಿಕಾಗೋಷ್ಠಿ ಮೊನ್ನೆ ನಡೆಯಿತು. ಚಿತ್ರತಂಡದ ಎಲ್ಲಾ ಸದಸ್ಯರು ಹಾಜರಿದ್ದು ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡಿದರು.
.
ನಿರ್ದೇಶಕ ರಾಜಶೇಖರ್ ಮಾತನಾಡಿ ನಾವೆಲ್ಲ ಬಹಳ ದಿನಗಳಿಂದ ಕಾಯುತ್ತಿದ್ದ ದಿನ ಬಂದಿದೆ. 18ರಂದು ನಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ. ಇಲ್ಲಿ ನಾವೆಲ್ಲ ಸೇರಲು ಕಾರಣ ನಿರ್ಮಾಪಕರು. ಒಂದು ಹಂತದಲ್ಲಿ ನಾನು ವಾಪಸ್ ಹೋಗಬೇಕೆಂದುಕೊಂಡಾಗ ವಿಜಯ್ ಭರಮಸಾಗರ ಅವರೇ ಧೈರ್ಯ ತುಂಬಿದರು. ನಿರ್ಮಾಪಕರನ್ನು ಅವರೇ ಪರಿಚಯಿಸಿದರು. ಒಂದು ಸಿನಿಮಾನ ನಿರ್ಮಿಸುವುದಕ್ಕಿಂತ ಅದನ್ನು ಚಿತ್ರಮಂದಿರಗಳಲ್ಲಿ ನಿಲ್ಲಿಸುವುದು ಮುಖ್ಯ. ಆ ಸಾಮಥ್ರ್ಯ ಅವರಿಗಿತ್ತು.ಇನ್ನು ಚಿತ್ರದಲ್ಲಿ ವಿಜಯರಾಘವೇಂದ್ರ ಕಾಮಿಡಿ ವಿತ್ ಲವರ್ ಬಾಯ್ ಎರಡೂ ಥರದ ಪಾತ್ರಗಳನ್ನು ಮಾಡಿದ್ದಾರೆ. ರಾಧಿಕಾ ಪ್ರೀತಿ ಕೂಡ ಅದ್ಭುತವಾಗಿ ನಟಿಸಿದ್ದಾರೆ. ವಿಜಯಭರಮಸಾಗರ ಅವರು ಹ್ಯೂಮರಸ್ ಶೈಲಿಯ ಡೈಲಾಗ್‍ಗಳನ್ನು ಚೆನ್ನಾಗಿ ರಚಿಸಿದ್ದಾರೆ. ಚಿತ್ರದಲ್ಲಿರುವ 4 ಹಾಡುಗಳೂ 4 ಶೈಲಿಯಲ್ಲಿ ಮೂಡಿ ಬಂದಿದೆ. ಪವನ್, ತಬಲಾ ನಾಣಿ, ಡ್ಯಾನಿಯಲ್ ಕುಟ್ಟಪ್ಪ, ಕುರಿ ಪ್ರತಾಪ್, ಶೋಭ್‍ರಾಜ್ ಸೇರಿದಂತೆ ಬಹುತೇಕ ಕಲಾವಿದರು ಉತ್ತಮವಾದ ಕಾಮಿಡಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರವಿಶಂಕರ್ ಈ ಹಿಂದೆ ಕಾಣಿಸಿರುವಂಥ ಹೊಸ ಕ್ಯಾರೆಕ್ಟರ್ ನಿಭಾಯಿಸಿದ್ದಾರೆ. ಬೆಂಗಳೂರು, ಮೈಸೂರು ಸುತ್ತಮುತ್ತ ಸುಮಾರು 65 ದಿನಗಳ ಕಾಲ ಈ ಚಿತ್ರಕ್ಕೆ ಚಿತ್ರೀಕರಣ ನಡೆಸಿದ್ದೇವೆ ಎಂದು ಹೇಳಿದರು.
.
ನಾಯಕ ವಿಜಯರಾಘವೇಂದ್ರ ಮಾತನಾಡಿ ನಿರ್ಮಾಪಕರು ದೊಡ್ಡಮಟ್ಟದಲ್ಲಿ ಪ್ರಚಾರ ಮಾಡಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಾನು ಗ್ಯಾರೇಜ್‍ನಲ್ಲಿ ಕೆಲಸ ಮಾಡುವ ಮೆಕಾನಿಕ್ ಪಾತ್ರವನ್ನು ನಿರ್ವಹಿಸಿದ್ದೇನೆ. ಮಾಸ್ ಹ್ಯೂಮರಸ್ ರೋಲ್ ನಿರ್ದೇಶಕರು ಎಲ್ಲಾ ಪಾತ್ರಗಳನ್ನು ತುಂಬಾ ಚೆನ್ನಾಗಿ ಪ್ಲಾನ್ ಮಾಡಿದರು. ಸೊಬಗು ಸೊಬಗು ಹಾಗೂ ಊರು ಕೇರಿ ಹಾಡುಗಳು ತುಂಬಾ ಜನಪ್ರಿಯತೆಯಾಗಿದೆ. ವೀರ್ ಸಮರ್ ಅವರು ತುಂಬಾ ಸೊಗಸಾಗಿ ಹಾಡುಗಳನ್ನು ಮಾಡಿದ್ದಾರೆ. ಚುನಾವಣೆ ಟೆನ್‍ಷನ್ ಮುಗಿಸಿಕೊಂಡು ರಾಜ ಲವ್ಸ್ ರಾಧೆ ಒಂದು ಉತ್ತಮ ಚಿತ್ರವಾಗಿ ಆಯ್ಕೆಯಾಗುವುದು ಎಂದು ಹೇಳಿದರು.
.
ನಾಯಕಿ ರಾಧಿಕಾ ಪ್ರೀತಿ ಮಾತನಾಡಿ ಇದು ನನ್ನ ಎರಡನೇ ಚಿತ್ರ, ರಾಧಾ ಎಂಬ ರೇಡಿಯೋ ಜಾಕಿ ಪಾತ್ರವನ್ನು ಈ ಚಿತ್ರದಲ್ಲಿ ಉತ್ತಮವಾಗಿ ನಿರ್ವಹಿಸಿದ್ದೇನೆ ಇಡೀ ಸಿನಿಮಾ ಹಾಸ್ಯಮಯವಾಗಿ ಮೂಡಿಬಂದಿದೆ. ಚಿತ್ರದಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ ಎಂದು ಹೇಳಿದರು. ನಿರ್ಮಾಪಕ ಎಚ್.ಎಲ್.ಎನ್.ರಾಜ್ ಮಾತನಾಡಿ ಹಿಂದಿನ ಸಿನಿಮಾದ ಅನುಭವಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಒಂದು ಒಳ್ಳೆಯ ಸಿನಿಮಾ ಮಾಡಿದ್ದೇನೆ.
.
ಇದೇ 18 ರಂದು ರಾಜ್ಯಾದ್ಯಂತ 150ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಹೇಳಿದರು.
.
#RajaLovesRadhe #Cineloka

LJOS nigif

May 1st

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top