Dhwaja Release anigif

Running succ

adweb

anigif seizer

ಚಿತ್ರ ವಿಮರ್ಶೆ: 'ಆಪರೇಷನ್' ಸಕ್ಸಸ್, ಪ್ರೇಕ್ಷಕ ದಿಲ್‌ಖುಷ್

'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ'ಯಂತಹ ಕ್ಲಾಸಿಕ್ ಸಿನಿಮಾ ಕೊಟ್ಟಂತಹ ಸುನಿ ಈ ಬಾರಿ 'ಆಪರೇಶನ್ ಅಲಮೇಲಮ್ಮ' ಎನ್ನುವ ಸಸ್ಪೆನ್ಸ್ ಥ್ರಿಲ್ಲರ್‍ ಚಿತ್ರದೊಂದಿಗೆ ನಿಮ್ಮ ಮುಂದೆ ಬಂದಿದ್ದಾರೆ.

ಖ್ಯಾತ ಉದ್ಯಮಿ ಕೆನಡಿ ಎನ್ನುವವನ ಮಗ 'ಜಾನ್' ಅಪಹರಣ ದೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ. ಬ್ರಾಂಡೆಡ್ ವಸ್ತುಗಳ ಅತಿ ಮೋಹಿಯಗಿರುವ ಪರ್ಮಿ(ರಿಷಿ) ಈ ಕೇಸ್ ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ನಂತರ ತನ್ನ ಅಸಲಿ ಕಥೆಯನ್ನು ಪೋಲೀಸರಿಗೆ ಬಿಚ್ಚಿಡುವ ನಾಯಕ ನಿಮ್ಮನ್ನು ನಗೆಗಡಲಲ್ಲಿ ತೇಲಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಮಧ್ಯೆ ಬರುವ ಅನನ್ಯ ಟೀಚರ್, ಟೀಚರ್ ಅನ್ನು ಬಲೆಗೆ ಬೀಳಿಸಲು ನಾಯಕ ಮಾಡುವ ಚೇಷ್ಟೆಗಳು ಜನರಿಗೆ ಇಷ್ಟವಾಗುತ್ತದೆ. ಕ್ಷಣ-ಕ್ಷಣಕ್ಕೂ ನಿಮ್ಮ ಊಹೆಯನ್ನು ತಪ್ಪಾಗಿಸುವ ಚಿತ್ರಕಥೆ ಕ್ಲೈಮ್ಯಾಕ್ಸ್ ನಲ್ಲಿ ಊಹೆಗೂ ನಿಲುಕದ ಅಂತ್ಯವನ್ನು ಕಾಣುತ್ತದೆ.

ತರಕಾರಿ ಹರಾಜು ಹಾಕುವ ಸಾಮನ್ಯ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ರಿಷಿ' ತಮ್ಮ ಹಾವ ಭಾವ ಡೈಲಾಗ್ ಗಳಿಂದಲೇ ನಗು ತರಿಸುತ್ತಾರೆ. ಈ ಮಧ್ಯೆ ನಾಯಕನಾಡುವ ಇಂಗ್ಲೀಷ್ ಪದಗಳು ಚಿತ್ರಮಂದಿರದಿಂದ ಹೊರಬಂದ ಮೇಲೂ ನೆನಪಿನಲ್ಲಿ ಉಳಿಯುವುದು ಸುಳ್ಳಲ್ಲ. ತಮ್ಮ ಪ್ರಥಮ ಚಿತ್ರದಲ್ಲೇ ಸಿಕ್ಸರ್ ಬಾರಿಸಿರುವ ರಿಷಿ ಸ್ಯಾಂಡಲ್ ವುಡ್ ನ ಸ್ಟಾರ್ ನಟರ ಸಾಲಿಗೆ ಸೇರುವ ದಿನ ದೂರವಿಲ್ಲ ಎಂದೇ ಹೇಳಬಹುದು.

ಅನನ್ಯ ಟೀಚರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರದ್ಧಾ ಶ್ರೀನಾಥ್ ಇಷ್ಟವಾಗುತ್ತಾರೆ. ಉಳಿದಂತೆ ರಾಜೇಶ್ ನಟರಂಗ ಸದಾ ಟೆನ್ಶನ್ ನಲ್ಲಿರುವ ಪೋಲೀಸ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನು ನಾಯಕಿಯ ತಾಯಿಯ ಪಾತ್ರದಲ್ಲಿ ಅಭಿನಯಿಸಿರುವ ಅರುಣಾ ಬಾಲರಾಜ್ ಜನರ ಮನಸ್ಸು ಗೆಲ್ಲುತ್ತಾರೆ.

ಒಟ್ಟಿನಲ್ಲಿ ಸುನಿ ಮತ್ತೊಮ್ಮೆ ಒಂದೊಳ್ಳೆ ಚಿತ್ರವನ್ನು ಕೊಟ್ಟಿದ್ದಾರೆ. ಕುಟುಂಬ ಸಮೇತರಾಗಿ ವೀಕ್ಷಿಸಿ, ಮನರಂಜನೆ ಕಟ್ಟಿಟ್ಟ ಬುತ್ತಿ.

 

Rating 3.5/5

Rate this item
(1 Vote)
Login to post comments

hucch runnin

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top