IB anigif

Ayugya Gif

adweb

udgharsha

Johnny Johnny Yes Papa - Movie Review

ಈ ವಾರ ಬಿಡುಗಡೆಯಾಗಿರುವ ಜಾನಿ ಜಾನಿ ಎಸ್‌ ಪಾಪಾ ಸಿನಿಮಾ ಫುಲ್‌ಟೈಮ್‌ ಕಾಮಿಡಿ ಸಿನಿಮಾವಾಗಿ ಹೊರ ಹೊಮ್ಮಿದೆ. ಇಷ್ಟು ದಿನ ಆ್ಯಕ್ಷನ್‌ ಮತ್ತು ಮಾಸ್‌ ಸಿನಿಮಾಗಳನ್ನು ಮಾಡಿಕೊಂಡು ಬಂದಿದ್ದ ದುನಿಯಾ ವಿಜಯ್‌ 'ಜಾನಿ ಜಾನಿ...'ಯ ಪ್ರತಿ ಫ್ರೇಮ್‌ನಲ್ಲಿಯೂ ನಗಿಸುತ್ತಾರೆ.

 

 

ರೈನ್‌ಬೋ ಎಂಬ ಕಾಲೋನಿಯಲ್ಲಿ ಪ್ರತಿ ಕೆಲಸಕ್ಕೂ ಜಾನಿ [ದುನಿಯಾ ವಿಜಯ್‌] ಮತ್ತು ಪಾಪಾ [ರಂಗಾಯಣ ರಘು] ಬೇಕಾಗಿರುತ್ತಾರೆ. ಪ್ರತಿ ಕೆಲಸವನ್ನು ಇವರು ಡೀಲ್‌ ಎಂದು ತಿಳಿದುಕೊಂಡು ಮಾಡುತ್ತಿರುತ್ತಾರೆ. ಯಾರ ಬಳಿಯ ಸಾಲ್ವ್‌ ಆಗದ ವಿಷಯಗಳನ್ನು ಈ ಜಾನಿ ಮತ್ತು ಪಾಪಾ ಇಬ್ಬರೂ ಕ್ಷಣ ಮಾತ್ರದಲ್ಲಿ ಬಗೆಹರಿಸಲಿ ಕಾಲೋನಿಯ ಪ್ರೀತಿ ಗಳಿಸಿರುತ್ತಾರೆ. ಈ ಸಮಯದಲ್ಲಿ ನಾಯಕಿ ಪ್ರಿಯಾ[ರಚಿತಾ ರಾಮ್‌] ಅಚಾನಕ್‌ ಭೇಟಿ, ನಂತರ ಅವಳ ಮೇಲೆ ಲವ್‌. ಇದೆಲ್ಲವು ನಡೆಯುತ್ತಿರುವಾಗ ನಾಯಕಿ ಪ್ರಿಯಾ ರೈನ್ ಬೋ ಕಾಲೋನಿಗೆ ಬಂದು ನೆಲೆಗೊಳ್ಳುತ್ತಾಳೆ. ಅಲ್ಲಿಂದ ಜಾನಿ ಮತ್ತು ಪ್ರಿಯಾಳ ಲವ್ ಸ್ಟೋರಿ ಆರಂಭ.

 

 

ಪ್ರಿಯಾಗೆ ಯು.ಎಸ್ ಗೆ ಹೋಗ್ಬೇಕು ಎಂಬ ಕನಸಿರುತ್ತದೆ. ಆದರೆ ಯುಎಸ್‌ಗೆ ಹೋದರೆ ಜಾನಿಯ ಲವ್‌ಗೆ ಕತ್ತರಿ ಬೀಳುತ್ತದೆ. ಹಾಗಾಗಿ ಜಾನಿ ಇವಳನ್ನು ಯುಎಸ್‌ಗೆ ಹೋಗದಂತೆ ಮತ್ತು ತನ್ನ ಬುಟ್ಟಿಯಲ್ಲಿ ಬೀಳಿಸಿಕೊಳ್ಳಲು ಸಿಕ್ಕಾಪಟ್ಟೆ ಸರ್ಕಸ್‌ ಮಾಡುತ್ತಾನೆ. ಪ್ರಿಯಾ ಯು.ಎಸ್ ಗೆ ಹೋಗ್ತಾಳ ಅಥವಾ ಜಾನಿಯನ್ನು ಲವ್‌ ಮಾಡುತ್ತಾಳಾ ಎಂಬುದೇ ಚಿತ್ರಕಥೆ.

 

 

2011ರಲ್ಲಿ ಬಿಡುಗಡೆಯಾಗಿದ್ದ ಜಾನಿ ಮೇರಾ ನಾಮ್‌ ಚಿತ್ರದಲ್ಲಿಯೂ ಇಂತಹದ್ದೇ ಕಥೆ ಇತ್ತು. ಇದು ಅದರ ಮುಂದುವರೆದ ಭಾಗ. ಈ ಜಾನಿ ಸಿಕ್ಕಾಪಟ್ಟೆ ಅಪ್‌ಡೇಟ್‌ ಆಗಿದ್ದಾನೆ. ಇಡೀ ಸಿನಿಮಾದಲ್ಲಿ ದೃಶ್ಯದಿಂದ ದೃಶ್ಯಕ್ಕೆ ವಿಜಯ್‌ ನಗಿಸುತ್ತಾ ಪ್ರೇಕ್ಷಕನಿಗೆ ಕಿಕ್‌ ಕೊಡುತ್ತಾರೆ. ಇವರಿಗೆ ರಂಗಾಯಣ ರಘು ಮತ್ತು ಪುಟ್ಟ ಬಾಲಕ ಹೇಮಂತ್ ಸಹ ಸಾಥ್‌ ನೀಡುತ್ತಾರೆ. ಇರುವ ಮೂರು ಫೈಟ್‌ನಲ್ಲಿ ವಿಜಯ್‌ ಎಂದಿನಂತೆ ಮಿಂಚಿದ್ದಾರೆ.

 

 

ನಿರ್ದೇಶಕ ಪ್ರೀತಂ ಗುಬ್ಬಿ ಒಳ್ಳೊಳ್ಳೆ ಸೆಟ್‌ ಹಾಕಿಸಿ ಸಿನಿಮಾವನ್ನು ಶ್ರೀಮಂತಗೊಳಿಸಿದ್ದಾರೆ. ಚಿತ್ರದ ಮೊದಲರ್ಧ ಹೋಗೋದೇ ಗೊತ್ತಾಗಲ್ಲ ಆದರೆ ಸೆಕಂಡ್ ಹಾಫ್ ಸ್ವಲ್ಪ ನಿಧಾನವೆನಿಸುತ್ತದೆ. ಮೋಹನ್‌ ಬಿ ಕೆರೆಯವರ ಕಲಾ ಕೆಲಸ ಅದ್ಭತವಾಗಿ ಮೂಡಿಬಂದಿದೆ. ಇನ್ನು ಸಿನಿಮಾಟೋಗ್ರಫರ್‌ ಕರುಣಾಕರ್‌ ಪ್ರತಿ ದೃಶ್ಯವನ್ನು ಸೊಗಸಾಗಿ ಸೆರೆ ಹಿಡಿದಿದ್ದಾರೆ. ಅಜನೀಶ್ ಸಂಗೀತ ನೀಡಿರುವ ಅರ್ಮಾನ್‌ ಮಲ್ಲಿಕ್‌ ಹಾಡಿರುವ 'ನೀನೇ ನಂಗೆಲ್ಲ' ಹಾಡು ಮತ್ತು 'ಹೊಸ ಪದ್ಮಾವತಿ' ಸಾಂಗ್‌ ಗುನುಗುವಂತೆ ಮಾಡುತ್ತವೆ.

 

 

ನಾಯಕಿ ರಚಿತಾ ರಾಮ್‌ ಸುಂದರವಾಗಿ ಕಾಣುವುದಲ್ಲದೆ ತಮ್ಮ ಮುಗ್ಧ ನಟನೆಯಿಂದ ಗಮನ ಸೆಳೆಯುತ್ತಾರೆ. ಈ ಚಿತ್ರಕ್ಕೆ ಅವರೇ ಡಬ್ಬಿಂಗ್‌ ಮಾಡಿರುವುದು ಬಹಳ ವಿಶೇಷವಾಗಿದೆ. ಉಳಿದಂತೆ ಅಚ್ಯುತ್‌ಕುಮಾರ್‌, ಸಾಧುಕೋಕಿಲಾ, ಗಡ್ಡಪ್ಪ, ನಾಗಭೂಷಣ್, ಸೇರಿದಂತೆ ಪ್ರತಿಯೊಬ್ಬ ನಟರು ಸಿನಿಮಾದ ಓಟಕ್ಕೆ ತಕ್ಕಂತೆ ನಟಿಸಿದ್ದಾರೆ.

 

 

ಈ ಸಿನಿಮಾದಲ್ಲಿ ಲಾಜಿಕ್‌ ಹುಡುಕುವ ಹಾಗಿಲ್ಲ, ಕಾಮಿಡಿ ಚಿತ್ರವಾದ್ದರಿಂದ ನಿರ್ದೇಶಕರು ಪ್ರತಿ ಸೀನ್‌ನಲ್ಲಿಯೂ ನಗಿಸುವ ಪ್ರಯತ್ನ ಮಾಡಿದ್ದಾರೆ ಎಂಬುದು ಫೈನಲ್‌ ಸ್ಟೇಟ್‌ ಮೆಂಟ್‌.

 

 

ರೇಟಿಂಗ್ : 3.25/5

Rate this item
(0 votes)
Login to post comments

LJOS nigif

May 1st

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top