johny running

Running succ

adweb

anigif seizer

Nanjundi Kalyana - Movie Review - Cineloka

ಇದು ಕಾಮಿಡಿಯ ಕಲ್ಯಾಣ

ಚಿತ್ರ: ನಂಜುಂಡಿ ಕಲ್ಯಾಣ

ನಿರ್ಮಾಣ: ಶಿವಣ್ಣ ದಾಸನಪುರ

ನಿರ್ದೇಶನ: ರಾಜೇಂದ್ರ ಕಾರಂತ್‌

ತಾರಾಬಳಗ: ತನುಷ್‌, ಶ್ರವ್ಯ, ಪದ್ಮಜಾ ರಾವ್‌, ರಾಜೇಂದ್ರ ಕಾರಂತ್‌, ಕುರಿ ಪ್ರತಾಪ್‌.

--------------------------------------------

ನಂಜುಂಡಿ ಕಲ್ಯಾಣ ಅಂದ್ರೆ ಮಾಲಾಶ್ರೀ ಮತ್ತು ರಾಘವೇಂದ್ರ ರಾಜ್‌ಕುಮಾರ್‌ ಜ್ಞಾಪಕ ಬರುತ್ತಾರೆ. ಅದೇ ಹೆಸರನ್ನಿಟ್ಟುಕೊಂಡು ತೆರೆಗೆ ಬಂದಿರುವ ಹೊಸ 'ನಂಜುಂಡಿ ಕಲ್ಯಾಣ'ದಲ್ಲಿ ಅಂತಹ ನೆನಪಿನಲ್ಲಿಟ್ಟುಕೊಳ್ಳುವಂತಹದ್ದು ಏನು ಇಲ್ಲ. ಆದರೆ ಭರ್ಜರಿ ಕಾಮಿಡಿ ಇದೆ.
.

ಶ್ರೀಮಂತ ತಾಯಿಗೆ ತನ್ನ ಮಗನಿಗೆ ದೊಡ್ಡ ಶ್ರೀಮಂತರ ಮನೆಯಿಂದ ಹೆಣ್ಣು ತರಬೇಕು ಎಂಬ ಆಸೆ. ಅದಕ್ಕಾಗಿ ಊರಲ್ಲಿರುವ ಎಲ್ಲ ಹೆಣ್ಣುಮಕ್ಕಳ ಮನೆಗೂ ಹೋಗಿ ಇಷ್ಟವಿಲ್ಲದಿದ್ದರೆ ಅವರನ್ನು ಅವಮಾನಿಸುತ್ತಿರುತ್ತಾಳೆ. ಇದನ್ನು ಕಂಡ ತಂದೆಗೆ ತನ್ನ ಪತ್ನಿಯ ದುರಾಹಂಕಾರವನ್ನು ಇಳಿಸಬೇಕು ಎಂದು ಮಗನಿಗೆ ಹೇಳುತ್ತಾರೆ.

ಇದಕ್ಕಾಗಿ ಮಗ ಒಂದು ಪ್ಲಾನ್‌ ಮಾಡುತ್ತಾನೆ. ತಾಯಿಯನ್ನು ಸರಿದಾರಿಗೆ ತರಲು ಆತ 'ಗೇ' ಒಬ್ಬನನ್ನು ಮದುವೆಯಾಗಿದ್ದೇನೆ ಎಂದು ನಾಟಕವಾಡುತ್ತಾನೆ. ಇದನ್ನು ಆ ತಾಯಿ ಹೇಗೆ ಸ್ವೀಕರಿಸುತ್ತಾಳೆ ಆಮೇಲೆ ಏನಾಗುತ್ತದೆ ಎಂಬುದನ್ನು ಅರಿಯಲು ಸಿನಿಮಾ ನೋಡಬೇಕು.
.

ರಂಗಭೂಮಿಯಲ್ಲಿ ಒಳ್ಳೆ ಹೆಸರು ಮಾಡಿರುವ ನಟ ಕಮ್‌ ನಿರ್ದೇಶಕ ರಾಜೇಂದ್ರ ಕಾರಂತ್‌ ಒಂದು ಸಿಂಪಲ್‌ ಕಥೆಯನ್ನು ಹಾಸ್ಯದ ಮೂಲಕ ಹೇಳಿದ್ದಾರೆ.

ಪ್ರತಿಯೊಂದು ಸನ್ನಿವೇಶದಲ್ಲೂ ಕಾಮಿಡಿ ತುಂಬಿರಬೇಕು ಎಂಬುದು ಅವರ ಉದ್ದೇಶವಾಗಿದೆ, ಅದು ಇಡೀ ಸಿನಿಮಾದಲ್ಲಿ ಕಾಣುತ್ತದೆ. ಇಡೀ ಸಿನಿಮಾವನ್ನು ಕಾಮಿಡಿಗೆ ಮೀಸಲಿಟ್ಟಿರೋ ಕಾರಣ ಇಲ್ಲಿ ಸೆಂಟಿಮೆಂಟ್‌, ಆ್ಯಕ್ಷನ್‌ಗೆ ಅಷ್ಟೊಂದು ಜಾಗವಿಲ್ಲ.
.

ನಂಜುಂಡಿ ಕಲ್ಯಾಣದ ಮೂಲಕ ನಿರ್ದೇಶಕರು ಮನುಷ್ಯನಿಗೆ ಪ್ರೀತಿ ವಿಶ್ವಾವೇ ಮುಖ್ಯ ಎಂಬುದನ್ನು ಹೇಳಿದ್ದಾರೆ. ಇಡೀ ಸಿನಿಮಾದಲ್ಲಿ ಒಂದೊಳ್ಳೆ ಲವ್‌ಸ್ಟೋರಿ ಇದೆ.

ಯುವ ಪ್ರೇಕ್ಷಕರನ್ನು ಉದ್ದೇಶವಾಗಿಟ್ಟುಕೊಂಡೆ ಸಾಕಷ್ಟು ಡಬ್ಬಲ್‌ ಮೀನಿಂಗ್‌ ಡೈಲಾಗ್‌ಗಳನ್ನು ರಚಿಸಿರುವ ಕಾರಣ , ಕೆಲವು ಕಡೆ ಅತಿರೇಕ ಎನಿಸುತ್ತದೆ. ಫ್ಯಾಮಿಲಿ ಒಟ್ಟಿಗೆ ಸಿನಿಮಾ ನೋಡಲು ಸ್ವಲ್ಪ ಮುಜುಗರ ಅನಿಸೋದು ಖಂಡಿತ.
.

ಇಡೀ ಸಿನಿಮಾದಲ್ಲಿ ನಕ್ಕು ನಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಿನಿಮಾಗೆ ತನುಷ್‌ ಹೀರೋ ಆದರೂ, ಕುರಿ ಪ್ರತಾಪ್‌ ಪಾತ್ರಕ್ಕೆ ಹೆಚ್ಚು ಸ್ಕೋಪ್‌ ಇದೆ ಮತ್ತು ಕುರಿ ಅದನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇನ್ನು ತನುಷ್‌ ಸಹ ತಮ್ಮ ಪಾತ್ರಕ್ಕೆ ಉತ್ತಮವಾಗಿ ನಟಿಸಿದ್ದಾರೆ. ನಾಯಕ ತನುಶ್‌ ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ನಟನೆಯಲ್ಲಿ ಪಳಗಿದ್ದಾರೆ.

ನಾಯಕಿ ಶ್ರವ್ಯ ಇಲ್ಲಿ ಮುದ್ದಾಗಿ ಕಾಣಿಸುತ್ತಾರೆ. ಕೆಲ ಹಾಡುಗಳಲ್ಲಿ ಸಖತ್‌ ಗ್ಲಾಮರಸ್‌ ಆಗಿ ನಟಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಉಳಿದಂತೆ ಪದ್ಮಜಾ ರಾವ್‌, ಮಂಜುನಾಥ ಹೆಗಡೆ, ರಾಜೇಂದ್ರ ಕಾರಂತ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
.

#NanjundiKalyana #Cineloka

Rate this item
(1 Vote)
Login to post comments

hucch runnin

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top