nata

ttm

adweb

udgharsha

ರಾಜ ಲವ್ಸ್‌ ರಾಧೆಯಲ್ಲಿ ಸುಳ್ಳಿನ ಪ್ರೀತಿ - ಚಿತ್ರ ವಿಮರ್ಶೆ

ರಾಜ ಲವ್ಸ್‌ ರಾಧೆಯಲ್ಲಿ ಸುಳ್ಳಿನ ಪ್ರೀತಿ :
-----
ಸುಳ್ಳು ನಮ್ಮ ಬದುಕನ್ನು ಹೇಗೆ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ಳುವಂತೆ ಮಾಡುತ್ತದೆ ಎಂಬುದನ್ನು ಲವ್‌, ಕಾಮಿಡಿಯನ್ನು ಮಿಕ್ಸ್‌ ಮಾಡಿದಾಗ ರಾಜ ಲವ್ಸ್‌ ರಾಧೆಯ ಥರದ ಸಿನಿಮಾವಾಗುತ್ತದೆ.
.
ಮ್ಯಾಕನಿಕ್‌[ವಿಜಯ್‌ ರಾಘವೇಂದ್ರ] ರಾಧೆ ಎಂಬ ಹುಡುಗಿಯನ್ನುಪ್ರೀತಿ ಮಾಡಲು ಆರಂಭಿಸುತ್ತಾನೆ. ವೃತ್ತಿಯಲ್ಲಿ ಮ್ಯಾಕನಿಕ್‌ ಆದರೂ ಸಾಫ್ಟ್‌ ವೇರ್‌ ಎಂಜಿನಿಯರ್ ಎಂದು ಹೇಳಿರುತ್ತಾನೆ. ಇದೇ ಸುಳ್ಳನ್ನು ತನ್ನ ತಾಯಿಗೂ ಹೇಳಿರುತ್ತಾನೆ. ಇದರಿಂದ ಒಂದೊಂದೆ ಸಮಸ್ಯೆಗೆ ಸಿಕ್ಕಿ ಹಾಕಿಕೊಳ್ಳುತ್ತಾ ಹೋಗುತ್ತಾನೆ. ಇದರಿಂದ ಹೇಗೆ ಬಿಡಿಸಿಕೊಂಡು ಹೊರಬರುತ್ತಾನೆ ಎಂಬುದೇ ಚಿತ್ರಕಥೆಯಾಗಿದೆ.
.
ಸಿನಿಮಾದ ಹೆಸರು ಕೇಳಿದ ತಕ್ಷಣ ಇದೊಂದು ಲವ್‌ಸ್ಟೋರಿ ಎಂದು ತಿಳಿಯುತ್ತದೆ ಆದರೆ ಸಿನಿಮಾದಲ್ಲಿ ಲವ್‌ಸ್ಟೋರಿ ಜತೆ ಕಾಮಿಡಿ ಸಹ ಇದೆ. ಈ ಸಿನಿಮಾದಲ್ಲಿ ಕಾಮಿಡಿ ಮತ್ತು ಲವ್‌ಸ್ಟೋರಿ ಎರಡು ಮಿಕ್ಸ್ ಆಗಿರುವುದು ಸಿನಿಮಾಗೆ ಮೈನಸ್‌ ಸಹ ಆಗುತ್ತದೆ. ಏಕೆಂದರೆ ಆ ಕಡೆ ಪ್ರೇಮದ ತೀವ್ರತೆಯೂ ಇಲ್ಲ, ಈ ಕಡೆ ಕಾಮಿಡಿಯು ಎಫೆಕ್ಟೀವ್‌ ಆಗಿ ಮೂಡಿ ಬಂದಿಲ್ಲ. ಹಾಸ್ಯ ನಟರು ಇದ್ದಾಕ್ಷಣಕ್ಕೆ ಜನ ನಗುತ್ತಾರೆ ಎಂದು ನಿರ್ದೇಶಕರು ಅಂದಾಜಿಸಿರುವುದು ಈ ಸಿನಿಮಾದಲ್ಲಿ ಎದ್ದು ಕಾಣುತ್ತದೆ.
.
ಈ ಚಿತ್ರದಲ್ಲಿ ಸಾಧು ಕೋಕಿಲ, ರಂಗಾಯಣ ರಘು, ಟೆನ್ನಿಸ್ ಕೃಷ್ಣ ಮಿಕ್ಕಂತೆ ಕುರಿ ಪ್ರತಾಪ್, ಪವನ್, ಮಿತ್ರ, ತಬಲಾ ನಾಣಿ, ಕುರಿ ರಂಗ,ಇವರೆಲ್ಲರ ಜತೆ ರವಿಶಂಕರ್‌ ಸಹ ಕಾಮಿಡಿ ಮಾಡುತ್ತಾರೆ. ಆದರೆ ಕೆಲ ದೃಶ್ಯಗಳಲ್ಲಿ ಹಾಸ್ಯ ಸಹ್ಯವಾಗುವುದಿಲ್ಲ. ಸಿನಿಮಾಗಳಿಗೆ ಪ್ರಸೆಂಟೇಶನ್‌ ಬಹಳ ಮುಖ್ಯವಾಗುತ್ತದೆ ಆದರೆ ನಿರ್ದೇಶಕರು ಚಿತ್ರವನ್ನು ಪ್ರೇಕ್ಷಕರಿಗೆ ಪ್ರಸೆಂಟ್‌ ಮಾಡುವಲ್ಲಿ ಎಡವಿದ್ದಾರೆ. ಉಳಿದಂತೆ ಒಂದಷ್ಟು ಕ್ಯಾಚಿಯಾದ ಸಂಭಾಷಣೆಗಳು ಚಿತ್ರದಲ್ಲಿವೆ.
.
ವಿಜಯ್ ರಾಘವೇಂದ್ರ, ರವಿಶಂಕರ್, ಶೋಭರಾಜ್ ಎಂದಿನಂತೆ ತಮ್ಮ ಫಾರ್ಮ್‌ ಮುಂದುವರೆಸಿದ್ದಾರೆ. ನಾಯಕಿ ರಾಧಿಕಾ ಪ್ರೀತಿ ಮತ್ತು ಶುಭಾ ಪೂಂಜಾ ಇಷ್ಟವಾಗುತ್ತಾರೆ. ಸಂಗೀತ ಮತ್ತು ಛಾಯಾಗ್ರಹಣದಲ್ಲಿ ಮತ್ತು ಸಂಗೀತದಲ್ಲಿ ವೀರ್‌ಸಮರ್ಥ್‌ ಗಮನ ಸೆಳೆಯುತ್ತಾರೆ. ಒಂದಷ್ಟು ಮೈನಸ್‌ಗಳಿದ್ದರೂ, ಸಿನಿಮಾವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.
.
ರೇಟಿಂಗ್: 3/5
#RajaLovesRadhe #Cineloka
Rate this item
(0 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top