DKD Gif

Shatayu

adweb

Raambo 2 gIF

ರಾಮಧಾನ್ಯ ಚರಿತೆಯ ಅನಾವರಣ - ಚಿತ್ರ ವಿಮರ್ಶೆ

ರಾಮಧಾನ್ಯ ಚರಿತೆಯ ಅನಾವರಣ
ಚಿತ್ರ: ರಾಮಧಾನ್ಯ
ನಿರ್ಮಾಣ: ದಶಮುಖ ವೆಂಚರ್ಸ್
ನಿರ್ದೇಶನ: ಟಿ.ಎನ್‌. ನಾಗೇಶ್‌
ತಾರಾಗಣ: ಯಶಸ್‌ ಸೂರ್ಯ, ನಿಮಿಕಾ ರತ್ನಾಕರ, ಮಂಡ್ಯ ರಮೇಶ್‌
ಭಕ್ತಿ ಪರಂಪರೆಯಲ್ಲಿ ಅಗ್ರ ಗಣ್ಯರಾದ ಕನಕದಾಸರು ರಚಿಸಿದ ರಾಮಧಾನ್ಯ ಚರಿತೆ ಸಿನಿಮಾವಾಗಿ ಈಗ ಬಿಡುಗಡೆಯಾಗಿದೆ.
‘ರಾಮಧಾನ್ಯ ಚರಿತೆ ಇದಕ್ಕೆ ಮೊದಲು ನಾಟಕರೂಪದಲ್ಲಿ ಪ್ರದರ್ಶನ ಕಂಡಿತ್ತು.ಅದನ್ನೇ ಆಧರಿಸಿ ನಿರ್ದೇಶಕ ನಾಗೇಶ್‌ ಸಿನಿಮಾ ಮಾಡಿದ್ದಾರೆ.
.
ಕನಕದಾಸರು ರಾಮಧಾನ್ಯ ಚರಿತೆಯಲ್ಲಿ ಭತ್ತ ಮತ್ತು ರಾಗಿಯನ್ನು ರೂಪಕಗಳಾಗಿ ಬಳಸಿಕೊಂಡು ಸಮಾಜದಲ್ಲಿರುವ ಮೇಲು ಕೀಳು ಎಂಬ ತಾರತಮ್ಯವನ್ನು ಹೇಳಿದ್ದರು.ಈ ಚಿತ್ರದಲ್ಲಿ ನಾಗೇಶ್‌ ಈ ಕಥೆಯನ್ನು ಬಹಳ ಚೆಂದವಾಗಿ ನಿರೂಪಿಸಿದ್ದಾರೆ.
ಜಾತಿ ಪದ್ಧತಿಯೊಳಗೆ ನಾವು ಹೇಗೆ ಸಿಲುಕಿ ಹೇಗೆ ಒದ್ದಾಡುತ್ತಿದ್ದೇವೆ ಎಂಬುದನ್ನು ಚಿತ್ರಿಸಿದ್ದಾರೆ. ಜಾತಿ ಪದ್ಧತಿಗೆ ಕನಕದಾಸರ ಕೀರ್ತನೆಗಳೇ ದಾರಿ ದೀಪ ಎಂದು ಅವರು ಸಿನಿಮಾದಲ್ಲಿ ಸೂಕ್ಷ್ಮವಾಗಿ ಹೇಳಿದ್ದಾರೆ.
.
.
ಕನಕದಾಸರನ್ನು ತೆರೆ ಮೇಲೆ ತಂದು ಅದನ್ನು ನೋಡುಗರ ಮನಸ್ಸಿಗೆ ಹಿಡಿಸುವಂತೆ ಮಾಡಲು ನಾಗೇಶ್‌ ಬಹಳ ಶ್ರಮ ಪಟ್ಟಿದ್ದಾರೆ. ಜನರಿಗೆ ಕನಕದಾಸರ ಕಥೆಯನ್ನು ಅರ್ಥ ಮಾಡಿಸಲು, ಒಂದಷ್ಟು ರಂಜನೆಯುಳ್ಳ ಅಂಶಗಳನ್ನು ಸೇರಿಸಿದ್ದಾರೆ. ಇದು ಕೆಲವೆಡೆ ಸಿನಿಮಾದ ಆಶಯವನ್ನು ಹಿಂದೆ ತಳ್ಳಿತೇನೋ ಎಂದು ಭಾಸವಾಗುತ್ತದೆ. ಕನಕದಾಸರ ಕೀರ್ತನೆಗಳನ್ನು ಗೀತೆ, ಸಂಭಾಷಣೆ ರೂಪದಲ್ಲಿ ಬಳಸಿಕೊಳ್ಳಲಾಗಿದೆ. ಆದರೆ ಸಂಗೀತ ಅಂತಹ ಮದ ನೀಡುವುದಿಲ್ಲ.
.
ನಿರ್ದೇಶಕರ ಕಲ್ಪನೆಯಲ್ಲಿ ನಟ ಯಶಸ್‌ ಸೂರ್ಯ ರಾಮ, ಕನಕದಾಸರಾಗಿ ಮಿಂದು ಎದ್ದಿದ್ದಾರೆ. ನಿಮಿಕಾ ರತ್ನಾಕರ ಸೀತೆಯಾಗಿ, ಕನಕನ ಪತ್ನಿಯಾಗಿ ಹಾಗೂ ಆಧುನಿಕ ಹುಡುಗಿಯಾಗಿ ನೋಡುಗರಿಗೆ ಇಷ್ಟವಾಗುತ್ತಾರೆ. ಸಿನಿಮಾಟೋಗ್ರಫರ್‌ ಬೆನಕ ರಾಜು ಕೆಲಸ ಚಿತ್ರಕ್ಕೆ ಪ್ಲಸ್‌ ಪಾಯಿಂಟ್‌ ಆಗಿದೆ.
.
ರಾಮಧಾನ್ಯ ಚರಿತ ನಾಟಕಕ್ಕೆ ಕೆಲಸ ಮಾಡಿದ್ದ ಬಸವರಾಜ ಸೂಳೇರಿಪಾಳ್ಯ ಅವರ ಸಂಭಾಷಣೆ ಚಿತ್ರಕ್ಕೊಂದು ಹಿರಿತನ ನೀಡಿದೆ. ದೇಸಿ ಮೋಹನ್‌ ಇನ್ನಷ್ಟು ಒಳ್ಳೆಯ ಕಂಪೋಸಿಂಗ್‌ ನೀಡಬಹುದಿತ್ತು. ಒಂದಷ್ಟು ಮೈನಸ್‌ ಮತ್ತು ಪ್ಲಸ್‌ಗಳ ನಡುವೆ ಕನಕದಾಸರ ಬಗ್ಗೆ ಅರಿಯಲು ಸಿನಿಮಾ ನೋಡಬಹುದು ಜತೆಗೆ ಕುಟುಂಬ ಸಮೇತರಾಗಿ ಸಿನಿಮಾವನ್ನು ನೋಡಲು ಅಡ್ಡಿಯಿಲ್ಲ.
.
ರೇಟಿಂಗ್ - 3/5
#Ramadhanya #Cineloka
Rate this item
(0 votes)
Login to post comments

Amma Gif Running S

KK Gif Release

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top