DKD Gif

Ayugya Gif

adweb

Raambo 2 gIF

'ಶತಾಯ ಗತಾಯ'- ಚಿತ್ರ ವಿಮರ್ಶೆ

 
ತನ್ನವರಿಗೆ ಆದ ಅನ್ಯಾಯವನ್ನು ಸರಿ ಪಡಿಸಿಕೊಳ್ಳಲು ನಾಯಕ ಹೋರಾಡುವ ಕಥೆಗಳು ಬಹಳಷ್ಟು ಬಂದಿವೆ. ಆ ಸಾಲಿಗೆ ಹೊಸ ಸೇರ್ಪಡೆ ಶತಾಯ ಗತಾಯ. ಈ ಚಿತ್ರದಲ್ಲಿ ನಾಯಕನ ತಾಯಿಗೆ ಅನ್ಯಾಯವಾಗಿರುತ್ತದೆ, ಅದನ್ನು ತೀರಿಸಿಕೊಳ್ಳಲು ಆತ ಏನು ಮಾಡುತ್ತಾನೆ ಎಂಬುದೇ ಚಿತ್ರಕಥೆಯಾಗಿದೆ. ಸರುಕು ಹಳೆಯದಾದರೂ, ಸ್ವಲ್ಪ ರೋಚಕವಾಗಿ ಚಿತ್ರಕಥೆ ಮಾಡಿಕೊಂಡಿರುವ ಕಾರಣ ಚಿತ್ರ ಇದ್ದುದರಲ್ಲೇ ಗಮನ ಸೆಳೆಯುತ್ತದೆ.
.
ನಿರ್ದೇಶಕ ಸಂದೀಪ್‌ಗೌಡ ಅವರಿಗೆ ನಿರ್ದೇಶನ ಹೊಸದಾದರೂ, ಸ್ವಲ್ಪ ವೃತ್ತಿಪರರಂತೆ ಕೆಲ ದೃಶ್ಯಗಳನ್ನು ಕಟ್ಟಿದ್ದಾರೆ. ಕಥೆ ಹಳಿ ತಪ್ಪುತ್ತಿದೆ ಎಂದಾಗ, ನಾಯಕನ ತಾತನ ಬಾಯಲ್ಲಿ, ಕಥೆಯನ್ನು ಜ್ಞಾಪಿಸುವ ತಂತ್ರ ಚೆನ್ನಾಗಿ ವರ್ಕೌಟ್‌ ಆಗಿದೆ.
ತನ್ನ ತಾಯಿಗೆ ಆದ ಅನ್ಯಾಯವನ್ನು ಸರಿ ಪಡಿಸಬೇಕು ಎಂಬುದು ನಾಯಕನ ಒನ್‌ಲೈನ್‌ ಅಜೆಂಡಾ, ಮತ್ತು ಅದು ಕಥೆಯೂ ಸಹ ಹೌದು. ಈ ಮಧ್ಯೆ ಒಂದು ಲವ್‌ಸ್ಟೋರಿ, ಕಾಮಿಡಿ, ಹೀಗೆ ಒಂದಷ್ಟು ಕನ್‌ಫ್ಯೂಷನ್‌ಗಳಿವೆ. ಈ ಕನ್‌ಫ್ಯೂಷನ್‌ಗಳಿಂದ ಪ್ರೇಕ್ಷಕ ಕೊಂಚ ಗೊಂದಲಕ್ಕೀಡಾಗುತ್ತಾನೆ.
.
ಸಿನಿಮಾ ಅಂದರೆ ಪಕ್ಕಾ ಕಮರ್ಷಿಯಲ್‌ ಆಗಿರಬೇಕು, ಪ್ರೇಕ್ಷಕರು, ಆಗಾಗ ಶಿಳ್ಳೆ ಹೊಡೆಯಬೇಕು, ಐಟಂ ಸಾಂಗ್‌ ಇರಲೇಬೇಕು ಇಂತಹ ಸಾಕಷ್ಟು ಮಸಾಲೆಗಳನ್ನು ಸೇರಿಸಿ ಸಿನಿಮಾ ಮಾಡಿದ್ದಾರೆ ಸಂದೀಪ್‌ ಗೌಡ. ಈ ಮಸಾಲೆಗಳನ್ನು ಹದವಾಗಿ ಬೆರಸಿ ಸೇರಿಸಿದ್ದರೆ, ಒಂದೊಳ್ಳೆ ಥ್ರಿಲ್ಲಿಂಗ್‌ ಸಿನಿಮಾವಾಗುತ್ತಿತ್ತು.
ಈ ಚಿತ್ರದಲ್ಲಿ ನಿರ್ದೇಶಕರು ಸಸ್ಪೆನ್ಸ್ ಇಟ್ಟಿದ್ದಾರೆ,ಅದೇ ಚಿತ್ರದ ಮೇಜರ್ ಪ್ಲಸ್ ಪಾಯಿಂಟ್. ಡಬಲ್‌ ಮೀನಿಂಗ್‌ ಡೈಲಾಗ್‌ಗಳ ಹೆಚ್ಚಾಗಿರುವದರಿಂದ ಪಡ್ಡೆ ಹೈಕ್ಳಿಗೆ ಮಜಾ ಕೊಡುತ್ತದೆ ಎನ್ನಬಹುದು. ಒಟ್ಟಿನಲ್ಲಿ ಶತಾಯ ಗತಾಯ ಸಸ್ಪೆನ್ಸ್ ಥ್ರಿಲ್ಲರ್‌, ಅಥವಾ ಸೇಡಿನ ಕಥೆಯಾ, ಪ್ರೇಮ ಕಥೆಯಾ ಎಂದು ನೋಡಲು ಚಿತ್ರಮಂದಿರಕ್ಕೆ ಹೋಗಲೇಬೇಕು.
.
ನಾಯಕ ರಘು ರಾಮಪ್ಪ ಮೊದಲ ಪ್ರಯತ್ನವಾದರೂ, ಗಮನ ಸೆಳೆಯುತ್ತಾರೆ. ನಾಯಕಿ ಸೋನಿಕಾಗೌಡಾಗೆ ಹೆಚ್ಚಿನ ಚಾನ್ಸ್‌ ಇಲ್ಲ. ಸಿನಿಮಾ ನಿರೂಪಣಾ ಶೈಲಿಯನ್ನು ಬದಲಿಸಿಕೊಂಡಿದ್ದರೆ ಸಿನಿಮಾ ಇನ್ನಷ್ಟು ರೋಚಕವಾಗುತ್ತಿತ್ತು. ಹಾಡುಗಳು ಒಕೆ ಎನಿಸುವಂತೆ ಇಷ್ಟವಾಗುತ್ತವೆ.
ಶತಾಯ ಗತಾಯ ಸೀದಾ ಸಾದ ಕಮರ್ಷಿಯಲ್‌ ಸಿನಿಮಾವಾಗಿದೆ. ಆದರೆ ನಿರ್ದೇಶಕರು ತಮ್ಮ ಮೊದಲ ಪ್ರಯತ್ನದಲ್ಲಿಯೇ, ಕಂಪ್ಲೀಟ್‌ ಕಮಷಿರ್ಯಲ್‌ ಪ್ಯಾಕೇಜ್ ಮಾಡಿರುವುದು ಮೆಚ್ಚುಗೆಯಾಗುತ್ತದೆ.
.
#ShatayaGataya #Cineloka
Rate this item
(1 Vote)
Login to post comments

LJOS nigif

May 1st

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top