DKD Gif

Shatayu

adweb

Raambo 2 gIF

Sunil HC Gowda

Sunil HC Gowda

ಈಗಿನ ಕಾಲದ ಯುವಕರು ಸೃಷ್ಟಿಸುತ್ತಿರುವ ಸಮಸ್ಯೆಗಳನ್ನು ನಿರ್ದೇಶಕ ಶ್ರೀನಿ ಸಿನಿಮಾಡಿ ಅದಕ್ಕೆ "ಕೆಲವು ದಿನಗಳ ನಂತರ" ಎಂದು ಹೆಸರಿಟ್ಟಿದ್ದಾರೆ. ಇದು ಹಾರರ್ ಥ್ರಿಲ್ಲರ್‌ ಸಿನಿಮಾವಾಗಿದೆ.
.
ಇಂದಿನ ಕಾಲದ ಹುಡುಗರು ಅನುಭವಿಸುತ್ತಿರುವ ಕಷ್ಟಗಳಿಗೆ ಅವರೇ ಮಾಡಿಕೊಂಡಿರುವ ತಪ್ಪುಗಳು ಕಾರಣ ಎನ್ನುವುದನ್ನು ಈ ಸಿನಿಮಾ ಹೇಳುತ್ತದೆ. ಈ ಚಿತ್ರದಲ್ಲಿ ನಟಿ ಶುಭಾ ಪೂಂಜಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
.
ಬೆಂಗಳೂರು,ಚಿಕ್ಕಮಗಳೂರು, ಸಾವನದುರ್ಗದಲ್ಲಿ ಚಿತ್ರೀಕರಣ ನಡೆದಿರುವ ಈ ಸಿನಿಮಾದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೊಕೇಶ್‌ ನಟಿಸಿದ್ದಾರೆ. ಜಗದೀಶ್‌ ಅವರು ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಸೋನುಪಾಟೀಲ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಇಲ್ಲಿ ಕಥೆಯೇ ಹೀರೋ ಮತ್ತು ಹಿರೋಯಿನ್‌ ಎನ್ನುತ್ತಾರೆ ಅವರು.
.
ಎಚ್‌.ಪಿ. ಮುತ್ತುರಾಜ,ಬಿ.ಎಂ. ವಸಂತ್‌ ಕುರ್ಮಾ ಹಾಗೂ ಚಂದ್ರಕುಮಾರ್‌ ಈಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮುರಳೀಧರ್‌ ಹಾಗೂ ನವೀನ್‌ ಕುಮಾರ್‌ ಸಿನಿಮಾಟೋಗ್ರಫರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಆರು ತಿಂಗಳ ಮಗುವೊಂದನ್ನು 3ಡಿ ಮೂಲಕ ಚಿತ್ರಿಸಲಾಗಿದೆ.
.
ಚಿತ್ರವು ಇದೆ ಜೂನ್ 22 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
 
#KelavuDinagalaNantara #Cineloka

 

ಚಿತ್ರರಂಗದಲ್ಲಿ ಇತ್ತೀಚೆಗೆ ಆಲ್ಬಂ ಮ್ಯೂಜಿಕ್ ಟ್ರೆಂಡ್ ಆಗುತ್ತಿದೆ. ಈ ಹಿಂದೆ ಹಾಲಿವುಡ್, ಬಾಲಿವುಡ್ ನಲ್ಲಿ ಮಾತ್ರ ಕೇಳಿಬರುತ್ತಿದ್ದ ಮ್ಯೂಜಿಲ್ ಆಲ್ಬಂ ಕನ್ನಡದಲ್ಲಿಯೂ ಹೆಚ್ಚು ಜನಪ್ರಿಯವಾಗುತ್ತಿದೆ. ಶರಣ್ ಮ್ಯೂಜಿಕ್ ಅಕಾಡೆಮಿ ಸಂಸ್ಥೆಯು ಕನ್ನಡ ಹಾಗೂ ಹಿಂದಿ ಭಾಷೆಯ ಎರಡು ವಿಡಿಯೋ ಆಲ್ಬಂಗಳನ್ನು ಹೊರತಂದಿದೆ. ಹಿಂದೂಸ್ಥಾನಿ ಗಾಯಕ ಶರಣ್ ಚೌದರಿ ಅವರ ಸಂಗೀತ ಸಂಯೋಜನೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ‘’ಮನಸೇ ನಿನ್ನ ದಾರಿಯು ಎಲ್ಲಿಗೆ’’ ಎಂಬ ಕನ್ನಡದ ವಿಡಿಯೋ ಆಲ್ಬಂ ಹಾಗೂ ಏ ಮನ್ ಕಹಾನ್ ಚಲಾ ಎಂಬ ಹಿಂದಿ ವಿಡಿಯೋ ಆಲ್ಬಂಗಳ ಲೋಕಾರ್ಪಣೆ ಸಮಾರಂಭ ಮಲ್ಲೇಶ್ವರಂನ ಎಸ್.ಆರ್.ವಿ. ಥಿಯೇಟರ್ ನಲ್ಲಿ ನೆರವೇರಿತು.

.

ಯುವ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರು ಈ ಎರಡು ಆಲ್ಬಂಗಳನ್ನು ಲೋಕಾರ್ಪಣೆ ಮಾಡಿದರು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿರ್ಮಾಪಕ ವಿಶ್ವ ಕಾರಿಯಪ್ಪ, ನವೀನ್ ಚಂದ್ರ, ಬಿಗ್ ಎಫ್ ಎಂ ನ ಆರ್.ಜೆ. ಶ್ರುತಿ ಸೇರಿದಂತೆ, ಹಲವರು ಆಗಮಿಸಿ ಶರಣ್ ಚೌದರಿ ಅವರ ಈ ಹೊಸ ಪ್ರಯತ್ನಕ್ಕೆ ಶುಭ ಕೋರಿದರು. ಈ ವಿಡಿಯೋ ಆಲ್ಬಂನಲ್ಲಿ ಅನುರಾಧ ಭಟ್ ಹಾಗೂ ರುಮಿತ್ ಕೆ. ಅವರ ಗಾಯನವಿದ್ದು, ಧನುಶ್ರೀ ಹಾಗೂ ರುಮಿತ್ ಅವರ ಅಭಿನಯವಿದೆ. ವಿಜಯ್ ಅವರ ಸಾಹಿತ್ಯ ಹಾಗೂ ಟಗರು ಖ್ಯಾತಿಯ ರಾಜು ಈ ಹಾಡುಗಳಿಗೆ ಕೊರಿಯೋಗ್ರಫಿ ಮಾಡಿದ್ದಾರೆ.

.

ಸಮಾರಂಭಕ್ಕೂ ಮುನ್ನ ಈ ಎರಡು ವಿಡಿಯೋ ಸಾಂಗ್ ಗಳನ್ನು ತೆರೆಯ ಮೇಲೆ ಪ್ರದರ್ಶಿಸಲಾಯಿತು. ನಂತರ ಈ ಆಲ್ಬಂಗಳ ಕುರಿತಂತೆ ಮಾತನಾಡಿದ ಶರಣ್ ಚೌದರಿ ನಾನು ಈ ಹಿಂದೆ ಗೆಳೆತನ ಎಂಬ ಮ್ಯೂಜಿಕ್ ಆಲ್ಬಂ ಮಾಡಿದ್ದೆ. ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಸಂಗೀತ ಕ್ಷೇತ್ರಗಳಲ್ಲಿ ಹಲವಾರು ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವ ನಾನು ಏನಾದರೂ ಹೊಸತನ್ನು ನೀಡಬೇಕು ಹಾಗೂ ಹೊಸ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎಂಬ ನಿಟ್ಟಿನಲ್ಲಿ ಈ ಎರಡು ಸಂಗೀತ ಗುಚ್ಚಗಳನ್ನು ಹೊರತಂದಿದ್ದೇನೆ. ಇಂದಿನಿಂದ ಸೋಷಿಯಲ್ ಮೀಡಿಯಾಗಳಲ್ಲಿ ಈ ಹಾಡುಗಳನ್ನು ವೀಕ್ಷಿಸಬಹುದಾಗಿದೆ. ಈ ಆಲ್ಬಂಗಳ ನಿರ್ಮಾಣದಲ್ಲಿ ನನ್ನ ಹಲವಾರು ಸ್ನೇಹಿತರು ಕೈಜೋಡಿಸಿದ್ದಾರೆ. ಬೆಂಗಳೂರು ಸುತ್ತಮುತ್ತ ಈ ಹಾಡುಗಳನ್ನು ಚಿತ್ರೀಕರಿಸಿದ್ದೇವೆ. ಈ ರೊಮ್ಯಾಂಟಿಕ್ ಡ್ಯುಯೆಟ್ ಹಾಡುಗಳು ಸಂಗೀತ ಪ್ರಿಯರನ್ನು ತಕ್ಷಣವೇ ಸೆಳೆಯುವಂತಿದೆ. ಜನಪ್ರಿಯ ಆಲ್ಬಂಗಳ ಸಾಲಿಗೆ ನಮ್ಮ ಈ ಆಲ್ಬಂ ಕೂಡ ಸೇರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

 

ಸಂಚಾರಿ ವಿಜಯ್‌ ಮುಖ್ಯ ಭೂಮಿಕೆಯಲ್ಲಿರುವ 6 ನೇಮೈಲಿ ಚಿತ್ರ ಸೆನ್ಸಾರ್‌ ಆಗಿದ್ದು, ಅದಕ್ಕೆ ಯು/ಎ ಪ್ರಮಾಣ ಪತ್ರ ನೀಡಲಾಗಿದೆ.
.
ಸೀನಿ ನಿರ್ದೇಶನ ಮಾಡಿರುವ, ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ ಇದಾಗಿದ್ದು, ಇದರಲ್ಲಿ ಆರ್‌ಜೆ ನೇತ್ರಾ, ಸುದೇಶ್‌ ಸೇರಿದಂತೆ ಬಹು ತಾರಾಗಣವೇ ಇದೆ. ಈ ಚಿತ್ರದಲ್ಲಿ ಒಂದು ಹಾಡಿದ್ದು ಅದನ್ನು ನಟ ವಸಿಷ್ಠ ಸಿಂಹ ಹಾಡಿದ್ದಾರೆ. ಈ ಹಾಡು ಈಗಾಗಲೇ ಸೂಪರ್‌ ಹಿಟ್‌ ಆಗಿದೆ. ಈ ಹಾಡಿಗೆ ಡೆತ್‌ಮೆಟಲ್‌ ಮ್ಯೂಸಿಕ್‌ ಎಂಬ ಹೊಸ ಫಾರ್ಮಾ್ಯಟ್‌ನ್ನು ಬಳಸಲಾಗಿದೆ.
.

ಡಾ. ಶೈಲೇಶ್‌ಕುಮಾರ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸದ್ಯದಲ್ಲೇ 6 ನೇ ಮೈಲಿ ತೆರೆಗೆ ಬರುತ್ತದೆ.

#6neMaili #Cineloka

 
ಈ ಅಭಿಯಾನ ಚಾನೆಲ್‍ನ ಹೊಸ ಧಾರಾವಾಹಿ, `ಕಮಲಿ'ಗೆ ಪೂರಕವಾಗಿದ್ದು ಹಳ್ಳಿಯಿಂದ ನಗರಕ್ಕೆ ಬಂದ ಹುಡುಗಿಯೊಬ್ಬಳು ಸವಾಲುಗಳನ್ನು ಹೇಗೆ ಎದುರಿಸುತ್ತಾಳೆ ಎನ್ನುವುದನ್ನು ನಿರೂಪಿಸುತ್ತದೆ.
.
ರಾಜ್ಯದಾದ್ಯಂತ ವಿದ್ಯಾರ್ಥಿಗಳು ತಮ್ಮಉನ್ನತಅಧ್ಯಯನಕ್ಕಾಗಿ ನಗರಗಳಿಗೆ ಬರುತ್ತಾರೆ, ಈ ಹಿನ್ನೆಲೆಯಲ್ಲಿ ಚಾನೆಲ್‍ ರ್ಯಾಗಿಂಗ್‍ನ ದುಷ್ಪರಿಣಾಮಗಳ ಕುರಿತು ಅರಿವನ್ನು ಉಂಟು ಮಾಡುವ ಮಹತ್ತರ ಜವಾಬ್ದಾರಿ ತೆಗೆದುಕೊಂಡಿದೆ. ಜೀóಕನ್ನಡದ ಹೊಸ ಕಾರ್ಯಕ್ರಮ ಈ ಅಭಿಯಾನದ ಮುಂಚೂಣಿಯಲ್ಲಿದ್ದು, ಕರ್ನಾಟಕದ ವಿದ್ಯಾರ್ಥಿ ಸಮುದಾಯದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಒತ್ತು ನೀಡಲಿದೆ.
.
ಕಮಲಿ ಧಾರಾವಾಹಿಯು ತನ್ನ ಶಿಕ್ಷಣದಲ್ಲಿ ಸಾಧನೆ ಮಾಡಬೇಕೆಂಬ ಹಂಬಲವುಳ್ಳ ಯುವತಿಯ ಕಥೆಯಾಗಿದ್ದು ಆಕೆ ತನಗೆ ಎದುರಾದ ಎಲ್ಲ ಅಡೆತಡೆಗಳನ್ನೂ ನಿವಾರಿಸಿ ಕಬಡ್ಡಿ ಆಟಗಾರ್ತಿಯಾಗುತ್ತಾಳೆ. ನಟಿ ಅಮೂಲ್ಯ ನಟನೆಯ ಕಮಲಿ ಹಲವು ಅಡೆತಡೆಗಳು ಎದುರಾದರೂ ದಿಟ್ಟತನದಿಂದ ಎದುರಿಸುವ ಬದ್ಧತೆ ಹೊಂದಿರುತ್ತಾಳೆ, ಹಳ್ಳಿಯಿಂದ ದೊಡ್ಡ ನಗರಕ್ಕೆ ಕಬಡ್ಡಿ ಪಟುವಾಗಬೇಕು ಹಾಗೂ ಉನ್ನತ ಅಧ್ಯಯನ ಮಾಡಬೇಕು ಎಂಬ ಬಯಕೆಯುಳ್ಳ ಅವಳಿಗೆ ರ್ಯಾಗಿಂಗ್‍ ದೊಡ್ಡ ಅಡ್ಡಿಯಾಗುತ್ತದೆ.
.
ರ್ಯಾಗಿಂಗ್‍ ದೇಶಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ಕಾಡುತ್ತಿರುವ ಬಹುಮುಖ್ಯ ಸಮಸ್ಯೆಯಾಗಿದ್ದು ಈ ಅಭಿಯಾನದ ಮೂಲಕ ಜೀó ಕನ್ನಡ ರ್ಯಾಗಿಂಗ್‍ನ ದುಷ್ಪರಿಣಾಮಗಳ ವಿರುದ್ಧ ಒಗ್ಗೂಡಿಸುವ ವಿಶಿಷ್ಟ ಪ್ರಯತ್ನ ಮಾಡುತ್ತಿದೆ. ಕಿರುನಾಟಕ ಮತ್ತು ಪೋಸ್ಟ್‍ಕಾರ್ಡ್ ವಿತರಣೆಯ ಮೂಲಕ ಈ ಅಭಿಯಾನ ಇಂದು ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ಚಾನೆಲ್ ನಗರದ ಸುರಾನಾಕಾಲೇಜ್ ಪೀಣ್ಯ, ಶ್ರೀ ಲಕ್ಷ್ಮಿಗ್ರೂಪ್‍ ಆಫ್‍ ಇನ್ಸ್‍ಟಿಟ್ಯೂಷನ್ ಮತ್ತು ಸುರಾನಾ ಕಾಲೇಜ್‍ ಕೆಂಗೇರಿ ಒಳಗೊಂಡು ನಾಲ್ಕು ಕಾಲೇಜುಗಳಿಗೆ ಭೇಟಿ ನೀಡಿತು. ಇದಲ್ಲದೆ ತುಮಕೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹುಬ್ಬಳ್ಳಿಯ ವಿವಿಧ ನಗರಗಳಲ್ಲಿರುವ 25 ಕಾಲೇಜುಗಳಲ್ಲಿ ಅಭಿಯಾನ ನಡೆಯಲಿದೆ.
.
ಈ ವಿನೂತನಅಭಿಯಾನಯುವ ವಿದ್ಯಾರ್ಥಿ ಸಮುದಾಯವನ್ನು ಸಂಪರ್ಕಿಸುವ ಉದ್ದೇಶ ಹೊಂದಿದ್ದು ಪ್ರತಿಯೊಂದು ಕಾಲೇಜಿನಲ್ಲಿ ನಾಲ್ಕು ಸದಸ್ಯರ ತಂಡವು ರ್ಯಾಗಿಂಗ್ ಹೇಗೆ ವಿದ್ಯಾರ್ಥಿಯ ಜೀವನದಲ್ಲಿ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಕಿರುನಾಟಕ ಪ್ರದರ್ಶನ ನೀಡುತ್ತದೆ.ಈ ಕಿರುನಾಟಕ ಮತ್ತು ಆಟಗಳ ನಂತರ ಕಮಲಿ ಶೈಲಿಯ ಪೋಸ್ಟ್ ಕಾರ್ಡ್‍ಗಳನ್ನು ವಿದ್ಯಾರ್ಥಿಗಳಿಗೆ ಹಂಚಲಾಗುತ್ತದೆ, ಅದರಲ್ಲಿ ರ್ಯಾಗಿಂಗ್ ಬಾಧಿತರಿಗೆ ಹೆಲ್ಪ್‍ಲೈನ್ ಒಳಗೊಂಡಿರುತ್ತದೆ. ರ್ಯಾಗಿಂಗ್ ವಿರೋಧಿ ಸಂದೇಶ ಒಳಗೊಂಡ ಈ ಪೋಸ್ಟ್‍ ಕಾರ್ಡ್‍ಗಳು ಬಾಧಿತ ವಿದ್ಯಾರ್ಥಿಗಳಿಗೆ ಮಾತನಾಡಲು ಮತ್ತು ಅವರ ಅನುಭವ ಹಂಚಿಕೊಳ್ಳಲು ಸೂಚಿಸುತ್ತವೆ. ಜೀóಕನ್ನಡದ ಪ್ರತಿನಿಧಿಗಳು ಯಾವುದೇ ಬಗೆಯ ದೂರುಗಳನ್ನು ಆಲಿಸಲು ಸ್ಥಳದಲ್ಲಿದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾರೆ. ವಿದ್ಯಾರ್ಥಿಗಳು ಒಂದುಗಂಟೆಯಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಉತ್ತೇಜಿಸಲಾಗುತ್ತಿದ್ದು ಪ್ರದರ್ಶನ, ಮಾಹಿತಿಪೂರ್ಣ ಮತ್ತು ನಿರ್ಣಾಯಕ ಮಾಹಿತಿ ಹೊಂದಿರುತ್ತದೆ.
.
ಈ ಅಭಿಯಾನ ಪ್ರಾರಂಭಿಸುವಕುರಿತುಜೀóಕನ್ನಡ ಬ್ಯುಸಿನೆಸ್ ಹೆಡ್‍ರಾಘವೇಂದ್ರ ಹುಣಸೂರು, `ರ್ಯಾಗಿಂಗ್‍ ದೇಶದಲ್ಲಿ ಅತ್ಯಂತ ಪ್ರಮುಖ ಸಮಸ್ಯೆಯಾಗಿದೆ ಮತ್ತು ಜೀó ಕನ್ನಡದಲ್ಲಿ ಈ ಸಮಸ್ಯೆಯನ್ನು ನಿವಾರಿಸಲು ಬದ್ಧರಾಗಿದ್ದೇವೆ. ನಮ್ಮ ಹೊಸದಾಗಿ ಪ್ರಾರಂಭವಾಗುವ ಕಮಲಿ ಧಾರಾವಾಹಿ ಈ ಅಭಿಯಾನದಲ್ಲಿ ಮುಂಚೂಣಿಯಲ್ಲಿದ್ದು ರ್ಯಾಗಿಂಗ್‍ನ ಪರಿಣಾಮಗಳ ಕುರಿತು ವಿದ್ಯಾರ್ಥಿ ಸಮುದಾಯದಲ್ಲಿ ಅರಿವನ್ನುಂಟು ಮಾಡುತ್ತದೆ ಮತ್ತು ರ್ಯಾಗಿಂಗ್ ಬಾಧಿತರಲ್ಲಿ ವಿಶ್ವಾಸ ಮೂಡಿಸುತ್ತದೆ' ಎಂದರು.
.
#ZeeKannada #Kamali #Cineloka
ನಟ, ನಿರ್ದೇಶಕ ಪ್ರಮೋದ್ ಚಕ್ರವರ್ತಿ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವಣ್ಣ ಅಭಿನಯಸುತ್ತಿರುವ ಹೊಸ ಚಿತ್ರಕ್ಕೆ "ದ್ರೋಣ" ಎಂದು ಹೆಸರಿಡಲಾಗಿದೆ.
.
ಈ ಚಿತ್ರದಲ್ಲಿ ಶಿವಣ್ಣ ಸ್ಕೂಲ್ ಟೀಚರ್ ಆಗಿ ನಟಿಸುತ್ತಿದ್ದಾರೆ.ಇತ್ತೀಚೆಗೆ ಚಿತ್ರಕ್ಕಾಗಿ ಶಿವಣ್ಣರ ಫೋಟೋಶೂಟ್ ಮಾಡಿಸಲಾಯಿತು.
.
#Drona #Cineloka #KarunadaChakravarthy #DrShivanna
 
ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಹೊಸ ಹೊಸ ಪ್ರತಿಭೆಗಳು ಗಮನ ಸೆಳೆಯುವಂತಹ ಸಿನಿಮಾ ಮಾಡುತ್ತಿದ್ದಾರೆ, ಆ ಸಾಲಿಗೆ ಹೊಸ ಸೇರ್ಪಡೆಯಾಗಿ 'ಕಟ್ಟು ಕಥೆ' ಸೇರಬಹುದು. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು, ಟ್ರೇಲರ್‌ ಎಲ್ಲವೂ ಭರವಸೆ ಹುಟ್ಟಿಸಿದೆ. ಒಂದಷ್ಟು ಮಾಹಿತಿ ಮತ್ತು ಕಲ್ಪನೆ ಎರಡನ್ನೂ ಸೇರಿಸಿ ಒಂದೊಳ್ಳೆ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ಮಾಡಿದ್ದಾರೆ ನಿರ್ದೇಶಕ ರಾಜ್‌ ಪ್ರವೀಣ್‌.
ಎ ರಿಯಲ್‌ ಸ್ಟೋರಿ ಎಂಬ ಅಡಿಬರಹದೊಂದಿಗೆ ತಯಾರಾಗಿರುವ ಈ ಸಿನಿಮಾ ಇದೇ ಜೂ.15ಕ್ಕೆ ಬಿಡುಗಡೆಯಾಗುತ್ತಿದೆ.
.
ನಿಜ ಜೀವನದ ಒಂದು ಘಟನೆಯನ್ನು ಇಟ್ಟುಕೊಂಡು ಅದಕ್ಕೆ ಪೂರಕವಾಗಿ ಹಲವು ಸಂಗತಿಗಳನ್ನು ಸೇರಿಸಿ ಸಿನಿಮಾ ಮಾಡಿದ್ದಾರಂತೆ ನಿರ್ದೇಶಕರು. ಈ ಚಿತ್ರದ ನಾಯಕ ಕಿವುಡ. ಒಂದು ಹೇಳಿದರೆ ಇನ್ನೇನೋ ತಿಳಿದುಕೊಳ್ಳುತ್ತಾನೆ. ಇದರಿಂದ ಹಲವು ಅವಾಂತರಗಳು ಸೃಷ್ಟಿಯಾಗುತ್ತದೆ. ಇದನ್ನು ಹಾಸ್ಯಾತ್ಮಕವಾಗಿ ಹೇಳಿಕೊಂಡು ಹೋಗುವ ಪ್ರಯತ್ನ ಮಾಡಿದ್ದಾರಂತೆ.
.
ಮಿತ್ರ ಈ ಚಿತ್ರದಲ್ಲಿ ಮೂರು ಬೇರೆ ಬೇರೆ ಛಾಯೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ಸೂರ್ಯ ಮತ್ತು ನಾಯಕಿ ಸ್ವಾತಿ ಕೊಂಡೆ ಇಬ್ಬರಿಗೂ ಇದು ಎರಡನೇ ಸಿನಿಮಾ. ರಾಜೇಶ್‌ ನಟರಂಗ ಈ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
.
ಟಗರು ಚಿತ್ರ ಖ್ಯಾತಿ ಮಾಸ್ತಿ ಈ ಚಿತ್ರಕ್ಕೂ ಸಂಭಾಷಣೆ ಬರೆದಿದ್ದಾರೆ. ಮೈಸೂರಿನ ಸ್ವೀಟ್‌ ಮಹಾದೇವ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಎನ್‌. ಸವಿತಾ ಕೂಡ ಅವರಿಗೆ ಕೈ ಜೋಡಿಸಿದ್ದಾರೆ.
#KattuKathe #Cineloka

ನೈಜ ಘಟನೆಯನ್ನು ಆಧರಿಸಿ ತಯಾರಾಗಿರುವ ಎಂಎಂಸಿಎಚ್‌ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಆನ್‌ಲೈನ್‌ನಲ್ಲಿ ಸದ್ದು ಮಾಡುತ್ತಿದೆ. 

.
ಈ ಚಿತ್ರದಲ್ಲಿ ಮೊದಲ ಬಾರಿಗೆ ಐವರು ನಾಯಕಿಯರು ಒಟ್ಟಾಗಿ ನಟಿಸುತ್ತಿದ್ದಾರೆ. ಮೆಲೋಡಿ ಕಿಂಗ್‌ ಎಂದೇ ಹೆಸರು ಮಾಡಿರುವ ಶ್ರೀಧರ್‌ ಸಂಭ್ರಮ್‌ ಈ ಸಿನಿಮಾಗಾಗಿ ನಾಲ್ಕು ಹಾಡುಗಳನ್ನು ಕಂಪೋಸ್‌ ಮಾಡಿದ್ದಾರೆ. ಇತ್ತೀಚೆಗೆ ಐವರು ನಾಯಕಿಯರು ತಮ್ಮ ತಾಯಂದಿರ ಜತೆಯಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದರು.
.
ರಾಗಿಣಿ,ಮೇಘನಾ ರಾಜ್‌, ಸಂಯುಕ್ತ ಬೆಳವಾಡಿ, ದೀಪ್ತಿ ಮತ್ತು ಪ್ರಥಮಾ ಹಾಗೂ ಇವರ ಅಮ್ಮಂದಿರಾದ ಸುಧಾ ಬೆಳವಾಡಿ, ಸುಮಿತ್ರಾ, ವಿನಯ ಪ್ರಸಾದ್‌ ಮತ್ತು ಪ್ರಮಿಳಾ ಜೋಷಾಯ್‌ ಪಾಲ್ಗೊಂಡಿದ್ದರು. ಜತೆಗೆ ಚಿತ್ರದ ನಿರ್ದೇಶಕ ಮುಸ್ಸಂಜೆ ಮಹೇಶ್‌, ಸಂಗೀತ ನಿರ್ದೇಶಕ ಶ್ರೀಧರ್‌ ಚಿತ್ರದ ಸಂಗೀತದ ಬಗ್ಗೆ ಮಾತನಾಡಿದರು.
.
ಈ ಸಿನಿಮಾದಲ್ಲಿ ಕೈಲಾಶ್‌ ಖೇರ್‌, ಶ್ರೇಯಾ ಘೋಷಾಲ್‌, ಅನೂಪ್‌ ಒಂದೊಂದು ಹಾಡನ್ನು ಹಾಡಿದ್ದಾರಂತೆ. ಈ ಸಿನಿಮಾದಲ್ಲಿ ಹಿನ್ನೆಲೆ ಸಂಗೀತ ಕೂಡಾ ಬಹಳ ವಿಶೇಷವಾಗಿದೆ ಎನ್ನುತ್ತಾರೆ ನಿರ್ದೇಶಕ ಶ್ರೀಧರ್‌. ಎಂಎಂಸಿಎಚ್‌ 90ರ ಕಾಲಘಟ್ಟದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ. ಎಸ್‌.ಪುರೋಷತ್ತಮ್‌, ಜೆ.ಜಾನಕಿರಾಮ್‌, ಅರವಿಂದ್‌ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

#MMCH #Cineloka

 
ತನ್ನವರಿಗೆ ಆದ ಅನ್ಯಾಯವನ್ನು ಸರಿ ಪಡಿಸಿಕೊಳ್ಳಲು ನಾಯಕ ಹೋರಾಡುವ ಕಥೆಗಳು ಬಹಳಷ್ಟು ಬಂದಿವೆ. ಆ ಸಾಲಿಗೆ ಹೊಸ ಸೇರ್ಪಡೆ ಶತಾಯ ಗತಾಯ. ಈ ಚಿತ್ರದಲ್ಲಿ ನಾಯಕನ ತಾಯಿಗೆ ಅನ್ಯಾಯವಾಗಿರುತ್ತದೆ, ಅದನ್ನು ತೀರಿಸಿಕೊಳ್ಳಲು ಆತ ಏನು ಮಾಡುತ್ತಾನೆ ಎಂಬುದೇ ಚಿತ್ರಕಥೆಯಾಗಿದೆ. ಸರುಕು ಹಳೆಯದಾದರೂ, ಸ್ವಲ್ಪ ರೋಚಕವಾಗಿ ಚಿತ್ರಕಥೆ ಮಾಡಿಕೊಂಡಿರುವ ಕಾರಣ ಚಿತ್ರ ಇದ್ದುದರಲ್ಲೇ ಗಮನ ಸೆಳೆಯುತ್ತದೆ.
.
ನಿರ್ದೇಶಕ ಸಂದೀಪ್‌ಗೌಡ ಅವರಿಗೆ ನಿರ್ದೇಶನ ಹೊಸದಾದರೂ, ಸ್ವಲ್ಪ ವೃತ್ತಿಪರರಂತೆ ಕೆಲ ದೃಶ್ಯಗಳನ್ನು ಕಟ್ಟಿದ್ದಾರೆ. ಕಥೆ ಹಳಿ ತಪ್ಪುತ್ತಿದೆ ಎಂದಾಗ, ನಾಯಕನ ತಾತನ ಬಾಯಲ್ಲಿ, ಕಥೆಯನ್ನು ಜ್ಞಾಪಿಸುವ ತಂತ್ರ ಚೆನ್ನಾಗಿ ವರ್ಕೌಟ್‌ ಆಗಿದೆ.
ತನ್ನ ತಾಯಿಗೆ ಆದ ಅನ್ಯಾಯವನ್ನು ಸರಿ ಪಡಿಸಬೇಕು ಎಂಬುದು ನಾಯಕನ ಒನ್‌ಲೈನ್‌ ಅಜೆಂಡಾ, ಮತ್ತು ಅದು ಕಥೆಯೂ ಸಹ ಹೌದು. ಈ ಮಧ್ಯೆ ಒಂದು ಲವ್‌ಸ್ಟೋರಿ, ಕಾಮಿಡಿ, ಹೀಗೆ ಒಂದಷ್ಟು ಕನ್‌ಫ್ಯೂಷನ್‌ಗಳಿವೆ. ಈ ಕನ್‌ಫ್ಯೂಷನ್‌ಗಳಿಂದ ಪ್ರೇಕ್ಷಕ ಕೊಂಚ ಗೊಂದಲಕ್ಕೀಡಾಗುತ್ತಾನೆ.
.
ಸಿನಿಮಾ ಅಂದರೆ ಪಕ್ಕಾ ಕಮರ್ಷಿಯಲ್‌ ಆಗಿರಬೇಕು, ಪ್ರೇಕ್ಷಕರು, ಆಗಾಗ ಶಿಳ್ಳೆ ಹೊಡೆಯಬೇಕು, ಐಟಂ ಸಾಂಗ್‌ ಇರಲೇಬೇಕು ಇಂತಹ ಸಾಕಷ್ಟು ಮಸಾಲೆಗಳನ್ನು ಸೇರಿಸಿ ಸಿನಿಮಾ ಮಾಡಿದ್ದಾರೆ ಸಂದೀಪ್‌ ಗೌಡ. ಈ ಮಸಾಲೆಗಳನ್ನು ಹದವಾಗಿ ಬೆರಸಿ ಸೇರಿಸಿದ್ದರೆ, ಒಂದೊಳ್ಳೆ ಥ್ರಿಲ್ಲಿಂಗ್‌ ಸಿನಿಮಾವಾಗುತ್ತಿತ್ತು.
ಈ ಚಿತ್ರದಲ್ಲಿ ನಿರ್ದೇಶಕರು ಸಸ್ಪೆನ್ಸ್ ಇಟ್ಟಿದ್ದಾರೆ,ಅದೇ ಚಿತ್ರದ ಮೇಜರ್ ಪ್ಲಸ್ ಪಾಯಿಂಟ್. ಡಬಲ್‌ ಮೀನಿಂಗ್‌ ಡೈಲಾಗ್‌ಗಳ ಹೆಚ್ಚಾಗಿರುವದರಿಂದ ಪಡ್ಡೆ ಹೈಕ್ಳಿಗೆ ಮಜಾ ಕೊಡುತ್ತದೆ ಎನ್ನಬಹುದು. ಒಟ್ಟಿನಲ್ಲಿ ಶತಾಯ ಗತಾಯ ಸಸ್ಪೆನ್ಸ್ ಥ್ರಿಲ್ಲರ್‌, ಅಥವಾ ಸೇಡಿನ ಕಥೆಯಾ, ಪ್ರೇಮ ಕಥೆಯಾ ಎಂದು ನೋಡಲು ಚಿತ್ರಮಂದಿರಕ್ಕೆ ಹೋಗಲೇಬೇಕು.
.
ನಾಯಕ ರಘು ರಾಮಪ್ಪ ಮೊದಲ ಪ್ರಯತ್ನವಾದರೂ, ಗಮನ ಸೆಳೆಯುತ್ತಾರೆ. ನಾಯಕಿ ಸೋನಿಕಾಗೌಡಾಗೆ ಹೆಚ್ಚಿನ ಚಾನ್ಸ್‌ ಇಲ್ಲ. ಸಿನಿಮಾ ನಿರೂಪಣಾ ಶೈಲಿಯನ್ನು ಬದಲಿಸಿಕೊಂಡಿದ್ದರೆ ಸಿನಿಮಾ ಇನ್ನಷ್ಟು ರೋಚಕವಾಗುತ್ತಿತ್ತು. ಹಾಡುಗಳು ಒಕೆ ಎನಿಸುವಂತೆ ಇಷ್ಟವಾಗುತ್ತವೆ.
ಶತಾಯ ಗತಾಯ ಸೀದಾ ಸಾದ ಕಮರ್ಷಿಯಲ್‌ ಸಿನಿಮಾವಾಗಿದೆ. ಆದರೆ ನಿರ್ದೇಶಕರು ತಮ್ಮ ಮೊದಲ ಪ್ರಯತ್ನದಲ್ಲಿಯೇ, ಕಂಪ್ಲೀಟ್‌ ಕಮಷಿರ್ಯಲ್‌ ಪ್ಯಾಕೇಜ್ ಮಾಡಿರುವುದು ಮೆಚ್ಚುಗೆಯಾಗುತ್ತದೆ.
.
#ShatayaGataya #Cineloka

 

‘’ಕಲರ್ಸ್ ಸೂಪರ್’’ ವಾಹಿನಿಯು ಯಶಸ್ವಿಯಾಗಿ ಎರಡು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಇದೇ ತಿಂಗಳು ವೀಕ್ಷಕರಿಗೆ ಎಂಟು ವಿಭಿನ್ನ ಮನರಂಜನೆಯ ರಸದೌತಣದ ಕಾರ್ಯಕ್ರಮಗಳನ್ನು ನೀಡಲು ಸಿದ್ದತೆಗಳನ್ನು ಮಾಡಿಕೊಂಡಿದೆ. ಭಕ್ತಿಪ್ರಧಾನ ಕತೆ ಹೊಂದಿರುವ ‘’ಇವಳೇ ವೀಣಾಪಾಣಿ’’. ಅಪ್ಪ ಅಮ್ಮನ ಹಾರೈಕೆಯಲ್ಲಿ ಬೆಳೆದ ಮಗಳು 32 ಜನ ಇರುವ ಕೂಡುಕುಟುಂಬದಲ್ಲಿ ಸವಾಲುಗಳನ್ನು ಎದುರಿಸಿ ಹೇಗೆ ಬದುಕು ಸಾಗಿಸುತ್ತಾಳೆ ಎನ್ನುವ ಕೌಟಂಬಿಕ ಧಾರವಾಹಿ ‘’ಮನಯೇ ಮಂತ್ರಾಲಯ’’. ಮಂಡೆ ಬಿಸಿ ಮಾಡುವ ನಿಟ್ಟಿನಲ್ಲಿ ತೀರ್ಪುಗಾರರಾಗಿ ರಚಿತಾರಾಮ್, ಗುರುಕಿರಣ್, ಮತ್ತು ನಿರಂಜನ್‍ದೇಶಪಾಂಡೆ ಸಾರಥ್ಯದ ಹೊಸ ಸೀಜನ್‍ದಲ್ಲಿ ‘’ಮಜಾಭಾರತ’’. ಕಥಾನಾಯಕಿ ಚುಕ್ಕಿ ಮದುವೆ ಸಿದ್ದತೆಯಲ್ಲಿ ಏನಾದರೂ ಎಡವಟ್ಟು ಮಾಡಿಕೊಳ್ಳುತ್ತಾಳಾ, ಅದರಿಂದ ಅವಳ ಬದುಕಿನ ದಿಕ್ಕು ಬದಲಾಗುತ್ತದಾ? ಎಂದು ಹೇಳುವ ‘’ರಾಜ ರಾಣಿ’’. ಶ್ರಾವಣಿ ನಂಬಿದ ಸಿದ್ದಿ ವಿನಾಯಕ ಕೊಟ್ಟ ವರ ಎಂಥದ್ದು. ಅದು ಅವಳ ಬದುಕಿನಲ್ಲಿ ಹೇಗೆ ಬಿರುಗಾಳಿ ತರುತ್ತದೆ ಕಥನವುಳ್ಳ ‘’ಮಾಂಗಲ್ಯಂ ತಂತು ನಾನೇನ’’.

.


ಹೊಸ ಹೊಸ ಪ್ರತಿಭೆಗಳಿಗೆ ವೇದಿಕೆ ಮಾಡಿಕೊಡುವ ‘’ಕನ್ನಡ ಕೋಗಿಲೆ” ಸಂಗೀತ ಕಾರ್ಯಕ್ರಮದಲ್ಲಿ ಸಾಧುಕೋಕಿಲ, ಗಾಯಕಿ ಅರ್ಚನಾಉಡುಪ, ಬಿಗ್‍ಬಾಸ್ ವಿಜೇತ ಚಂದನ್‍ಶೆಟ್ಟಿ ತೀರ್ಪಗಾರರಾಗಿರುತ್ತಾರೆ. ಮಾಯಾಮೃಗ, ಮನ್ವಂತರ, ಮುಕ್ತ ಧಾರವಾಹಿಗಳನ್ನು ನಿರ್ದೇಶನ ಮಾಡಿರುವ ಟಿ.ಎನ್.ಸೀತಾರಾಮ್ ಬಹಳ ವರ್ಷಗಳ ನಂತರ ಕಿರುತೆರೆಗೆ ಹಿಂದುರಿಗಿ ನಟಿಸಿ, ನಿರ್ದೇಶನ ಮಾಡುತ್ತಿರುವ ‘’ಮಗಳು ಜಾನಕಿ’’. ಹದಿನಾಲ್ಕು ವರ್ಷಗಳ ಹಿಂದೆ ಎಲ್ಲರ ಮನೆಮಾತಾಗಿದ್ದ ಚಿದಾನಂದ್, ಶಾಲಿನಿ ಅಭಿನಯಿಸಿದ್ದ ಹಾಸ್ಯ ಧಾರವಾಹಿ ‘’ಪಾಪ ಪಾಂಡು’’ ಮತ್ತೋಮ್ಮೆ ಬರಲು ಸಜ್ಜಾಗಿದೆ. ಇದರಲ್ಲಿ ಪಾಂಡುಗೆ ಮಗ, ಸೊಸೆ ಸೇರ್ಪಡೆಯಾಗಿರುವುದು ವಿಶೇಷ. ಎಲ್ಲವು ಜೂನ್ ಸೂಪರ್ ತಿಂಗಳಲ್ಲಿ ಪ್ರಸಾರವಾಗಲಿದೆ.

.

 
ಸ್ಯಾಂಡಲ್‌ವುಡ್‌ನಲ್ಲಿ ಹೊಸಬರ ಸಿನಿಮಾಗಳು ಮತ್ತೆ ಜೋರಾಗುತ್ತಿದೆ. ಆ ಸಾಲಿಗೆ ಹೊಸ ಸೇರ್ಪರೆ ಶತಾಯ ಗತಾಯ. ಈ ಚಿತ್ರ ಇದೇ ಶುಕ್ರವಾರ ಅಂದರೆ ಜೂ.8ಕ್ಕೆ ಬಿಡುಗಡೆಯಾಗಲಿದೆ.
.
ಶತಾಯ ಗತಾಯ ಸಸ್ಪೆನ್ಸ್‌ ಥ್ರಿಲ್ಲರ್ ಚಿತ್ರವಾಗಿದ್ದು, ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬಾಡಿ ಬಿಲ್ಡರ್‌ ರಘು ರಾಮಪ್ಪ ಈ ಚಿತ್ರಕ್ಕೆ ನಾಯಕರಾಗಿದ್ದರೆ. ಡಿಪ್ಲೊಮಾ ಇನ್ ಆಟೊಮೊಬೈಲ್ ಮಾಡಿರುವ ಯುವ ಪ್ರತಿಭೆ ಸಂದೀಪ್ ಗೌಡ ಸುಮಾರು ನಾಲ್ಕು ಕಿರುಚಿತ್ರಗಳನ್ನು ನಿರ್ದೇಶಿಸಿ ಈಗ ಶತಾಯಗತಾಯ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿದ್ದಾರೆ. ಜತೆಗೆ ಅವರೇ ಬಂಡವಾಳ ಹೂಡಿದ್ದಾರೆ.
.
ಈ ಚಿತ್ರದಲ್ಲಿ ತಾಯಿ ಮಗನ ಸೆಂಟಿಮೆಂಟ್ ಮುಖ್ಯ ಕಥಾ ಹಂದರವಾಗಿದೆ. ಜತೆಗೆ ಸುಮಾರು 60 ವರ್ಷ ಹಿಂದೆ ನಡೆದಂತಹ ನೈಜ ಘಟನೆಯನ್ನು ಆಧರಿಸಿ ಸಂದೀಪ್‌ ಈ ಕಥೆಯನ್ನು ಮಾಡಿಕೊಂಡಿದ್ದಾರೆ. ತಾಯಿಗೆ ಆದ ಅನ್ಯಾಯದ ವಿರುದ್ಧ ಮಗ ಸೇಡನ್ನು ತೀರಿಸಿಕೊಳ್ಳುವ ಎಳೆ ಈ ಚಿತ್ರದಲ್ಲಿದೆಯಂತೆ.
.
ರಘು ರಾಮಪ್ಪ ಅವರಿಗೆ ಸೋನು ಎಸ್‌ ಗೌಡ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡು ಒಂದು ಥೀಮ್ ಸಾಂಗ್ಸ್ ಇದ್ದು , ರವಿನಂದನ್ ಜೈನ್ ಸಂಗೀತವನ್ನು ಒದಗಿಸಿದ್ದಾರೆ.
.
#ShatayaGataya #Cineloka
Page 1 of 24

Amma ILU Reease Gif

KK Gif Release

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top