tarakaasura

ttm

adweb

udgharsha

Sunil HC Gowda

Sunil HC Gowda

ಮದುವೆಯ ಮಮತೆಯ ಕರೆಯೋಲೆ ಸಿನಿಮಾ ಮೂಲಕ ಗಮನ ಸೆಳೆದಿದ್ದ ಸೂರಜ್‌ ಗೌಡ ಈಗ ಸ್ನೇಹವೇ ಪ್ರೀತಿ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಈ ವಾರ ಬಿಡುಗಡೆಯಾಗುತ್ತಿದೆ.
.
ಗೆಳೆತನ ಮತ್ತು ಪ್ರೀತಿಯ ಕುರಿತಾದ ಸಿನಿಮಾ ಇದಾಗಿದ್ದು, ಸ್ನೇಹ ಮತ್ತು ಪ್ರೀತಿಯಲ್ಲಿ ಯಾವುದು ಮುಖ್ಯ ಎಂಬುದನ್ನು ಚರ್ಚೆ ಮಾಡುತ್ತದಂತೆ. ಸಿನಿಮಾದ ನಾಯಕ ಸ್ನೇಹಕ್ಕೆ ಮಹತ್ವ ನೀಡುತ್ತಾನೋ, ಪ್ರೀತಿಗೆ ಮಹತ್ವ ನೀಡುತ್ತಾನೋ ಎಂಬುದೇ ಸಿನಿಮಾದ ಗುಟ್ಟು ಎನ್ನುತ್ತದೆ ಚಿತ್ರತಂಡ.
.
ಈ ಸಿನಿಮಾವನ್ನು ಜಿಎಲ್‌ಬಿ ಶ್ರೀನಿವಾಸ್‌ ನಿರ್ದೇಶನ ಮಾಡಿದ್ದಾರೆ. ಇದು ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ನಿರ್ಮಾಣವಾಗಿದೆ.
.
ಸೋನಿಯಾ ನಾಯಕಿಯಾಗಿ ನಟಿಸಿದ್ದು, ಈ ಚಿತ್ರದ ಮೂಲಕ ಇವರು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಸಾಧು ಕೋಕಿಲಾ, ರಮೇಶ್‌ ಭಟ್‌ ಸೇರಿದಂತೆ ಸಾಕಷ್ಟು ಮಂದಿ ನಟಿಸಿದ್ದಾರೆ.
.
ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ.
#SnehavePreethi #Cineloka

 

ಜಾಲಿಡೇಸ್‌ ಮೂಲಕ ಗಮನ ಸೆಳೆದಿದ್ದ ನಿರಂಜನ್‌ ಶೆಟ್ಟಿ ಈಗ ಜಗತ್‌ ಕಿಲಾಡಿಯಾಗಿದ್ದಾರೆ.

ತಮಿಳಿನ ಸದುರಂಗ ವೆಟ್ಟೈ ಸಿನಿಮಾದ ರಿಮೇಕ್‌ ಆಗಿದ್ದರೂ ಇದು ಕನ್ನಡದ ನೇಟಿವಿಟಿಗೆ ತಕ್ಕಂತೆ ಇದೆಯಂತೆ.
.

ತನ್ನ ತಾಯಿಯ ಟ್ರಿಟ್‌ಮೆಂಟ್‌ಗೆ ಹಣ ಇಲ್ಲದೇ, ಆಕೆಯನ್ನು ಕಳೆದುಕೊಳ್ಳುವ ನಾಯಕ ಹಣಕ್ಕಾಗಿ ಏನೆಲ್ಲಾ ಮಾಡುತ್ತಾನೆ, ಅಲ್ಲದೆ ಆ ಹಣವನ್ನು ಗಳಿಸಿದ ಮೇಲೆ ಅವನಿಗೆ ಹಣದ ಹುಚ್ಚನ್ನು ಬಿಡಿಸುವವರು ಯಾರು ಎಂಬುದೇ ಸಿನಿಮಾದ ಕಥೆಯಂತೆ.
.

ಈ ಸಿನಿಮಾದಲ್ಲಿ ನಿರಂಜನ್‌ ಶೆಟ್ಟಿ 13 ಗೆಟಪ್‌ ಹಾಕಿದ್ದು, ಎಲ್ಲವೂ ಡಿಫ್ರೆಂಟ್‌ ಆಗಿದೆಯಂತೆ. ಅಮಿತಾ ಕುಲಾಲ್‌ ನಿರಂಜನ್‌ಗೆ ಜೋಡಿಯಾಗಿದ್ದಾರೆ.
.

ಜೈಜಗದೀಶ್‌, ಸುಚೇಂದ್ರ ಪ್ರಸಾದ್‌, ರಂಗಾಯಣ ರಘು, ಮೈಕೋ ನಾಗರಾಜ್‌, ಸೇರಿದಂತೆ ದೊಡ್ಡ ತಾರಬಳಗವೇ ಈ ಸಿನಿಮಾದಲ್ಲಿದೆ. ಈ ಸಿನಿಮಾದ ಮುಂದಿನ ತಿಂಗಳು ಬಿಡುಗಡೆಯಾಗುತ್ತದೆ. ಆರವ್‌ ಬಿ ಧೀರೆಂದ್ರ ನಿರ್ದೇಶಕರಾದರೆ, ಲಯನ್‌ ರಮೇಶ್‌ಬಾಬು ನಿರ್ಮಾಣ ಮಾಡಿದ್ದಾರೆ.

ಸಂಪೂರ್ಣ ಹೊಸಬರೇ ತುಂಬಿರುವ 'ಆದಿ ಪುರಾಣ' ಸಿನಿಮಾದಲ್ಲಿ ಕಾಲೇಜು ಹುಡುಗರ ಜೀವನವನ್ನು ಹೇಳಿದ್ದಾರಂತೆ ನಿರ್ದೇಶಕರು.

.
ಈಗಾಗಲೇ ಚಿತ್ರದ ಹಾಡುಗಳನ್ನು ಪ್ರೆಕ್ಷ ಕರು ಮೆಚ್ಚಿದ್ದು, ಟ್ರೇಲರ್‌ ಅಂತೂ ಸೂಪರ್‌ ಹಿಟ್‌ ಆಗಿದೆ. ಸೆನ್ಸಾರ್‌ ಮಂಡಳಿಯ ಕೆಲ ಸದಸ್ಯರು ಚಿತ್ರದ ಕಂಟೆಂಟ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಬದುಕಿನ ಮೌಲ್ಯಗಳನ್ನು ಮನರಂಜನೆಯ ಮೂಲಕ ತೋರಿಸುವ ಒಂದು ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಎನ್ನುತ್ತದೆ ಚಿತ್ರತಂಡ.
.
ಈ ಸಿನಿಮಾದ ಮೂಲಕ ಶಶಾಂಕ್‌ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾನೆ. ಅಹಲ್ಯ ಸುರೇಶ್‌ ಮತ್ತು ಮೋಕ್ಷಾ ಕುಶಾಲ್‌ ಎಂಬ ಇಬ್ಬರು ನಾಯಕಿಯರು ಸಿನಿಮಾದಲ್ಲಿದ್ದಾರೆ.

ಈ ಸಿನಿಮಾ ಇದೇ ವಾರ ಬಿಡುಗಡೆಯಾಗುತ್ತಿದೆ.

 

ಮನರಂಜನಾ ಕ್ಷೇತ್ರದ ಬದಲಾದ ಸನ್ನಿವೇಶದಲ್ಲಿ ಕಿರುತೆರೆಯೂ ಹಿರಿತೆರೆಯಷ್ಟು ಶ್ರೀಮಂತವಾಗಿದೆ. ವಿನೂತನಕಥೆ, ನಿರೂಪಣೆಗಳ ಜತೆಗೆ ಅದ್ಧೂರಿ ನಿರ್ಮಾಣಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ದಿಸೆಯಲ್ಲಿ ಕನ್ನಡ ಮನರಂಜನಾ ವಾಹಿನಿಗಳ ಹಿರಿಯಣ್ಣ ಉದಯ ಟಿವಿ ‘ಜೈ ಹನುಮಾನ್’ ಎಂಬ ಅದ್ಧೂರಿ ಧಾರಾವಾಹಿಯನ್ನು ಕನ್ನಡದ ವೀಕ್ಷಕರಿಗೆ ನೀಡಲು ಸಿದ್ಧತೆ ನಡೆಸಿದೆ.

.

ಅಕ್ಟೋಬರ್8 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತೀ ದಿನ ರಾತ್ರಿ 7.30ಕ್ಕೆ ಜೈ ಹನುಮಾನ್‍ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಪ್ರೋಮೋಗಳು ಪ್ರೇಕ್ಷಕರ ಮನಸೂರೆಗೊಂಡಿದ್ದು, ಸೋಶಿಯಲ್ ಮೀಡಿಯಾಗಳಲ್ಲೂ ಹವಾ ಸೃಷ್ಟಿಸಿದೆ. ಎಲ್ಲ ವಯೋಮಾನದ ವೀಕ್ಷಕರಿಗೂ ಇಷ್ಟವಾಗುವಂಥ ಕಥೆ, ನಿರೂಪಣೆ ಹಾಗೂ ಕಣ್ಮನ ಸೆಳೆಯುವ ನಿರ್ಮಾಣ ಈ ಧಾರಾವಾಹಿಯ ವಿಶೇಷವಾಗಿದೆ.

.
ಮುಂಬೈ ಮೂಲದ ಪ್ರಸಿದ್ಧ ನಿರ್ಮಾಣ ಸಂಸ್ಥೆ ಕಾಂಟಿಲೋ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಈಗಾಗಲೇ ಐವತ್ತಕ್ಕೂ ಹೆಚ್ಚಿನ ಸಂಚಿಕೆಗಳ ಚಿತ್ರೀಕರಣ ಪೂರೈಸಿದ್ದು, ಪ್ರತೀ ಪ್ರೇಂನಲ್ಲೂ ಸಿನಿಮಾದ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. ರೋಚಕ ಸನ್ನಿವೇಷಗಳನ್ನು ಹೆಣೆಯಲಾಗಿದ್ದು ಬಿಗಿಯಾದ ಚಿತ್ರಕಥೆ ಹಾಗೂ ಸತ್ವಯುತ ಸಂಭಾಷಣೆಳು ಈ ಧಾರಾವಾಹಿಯ ಇನ್ನಷ್ಟು ವಿಶೇಷಗಳಾಗಿವೆ ಎನ್ನುತ್ತಾರೆ ನಿರ್ಮಾಣ ಸಂಸ್ಥೆಯವರು.
ಹದಿನಾಲ್ಕು ಲೋಕಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು, ಅಜರಾಮರನಾಗುವ ವರ ಪಡೆದುಕೊಂಡಿದ್ದ ರಾವಣ ತನ್ನ ಅಧಿಕಾರ ಲಾಲಸೆಯಿಂದ ಇತರ ಜೀವಿಗಳ ಮೇಲೆ ಕ್ರೌರ್ಯ ಎಸಗುತ್ತಿದ್ದ. ಅವನನ್ನು ಸದೆಬಡಿಯಲು ಹನುಮಂತಜನ್ಮ ತಳೆಯುತ್ತಾನೆ. ಅವನ ಹುಟ್ಟಿನ ಹಿನ್ನೆಲೆ. ಮುಂದೆ ಸಾಗುವ ದಾರಿ, ಆತ ಹೇಗೆ ರಾಮನನ್ನು ಸಂಧಿಸುತ್ತಾನೆ? ರಾವಣನ ಸಂಹಾರಕ್ಕೆ ಹೇಗೆ ಸಾಥ್ ನೀಡುತ್ತಾನೆ ಇತ್ಯಾದಿ ಕುತೂಹಲಗಳಿಗೆ ಉತ್ತರ ನೀಡುತ್ತದೆ ಜೈ ಹನುಮಾನ್.

.
ಅದ್ಧೂರಿ ಸೆಟ್‍ ಜತೆಗೆ ಪೂರಕವಾದ ಗ್ರಾಫಿಕ್ಸ್‍ಗಳು ಗತವೈಭವವನ್ನು ಮತ್ತೆತೆರೆಯ ಮೇಲೆ ತಂದರೆ, ಕಲಾವಿದರ ಪ್ರೌಢ ನಟನೆ ಇಡೀ ಧಾರಾವಾಹಿಯನ್ನು ಮತ್ತೊಂದು ಎತ್ತರಕ್ಕೇ ಕೊಂಡೊಯುತ್ತದೆ. ಅದರಲ್ಲೂಇಲ್ಲಿನ ವೇಷ ಭೂಷಣಗಳು, ಚಿತ್ರ ವಿಚಿತ್ರ ಹೆಸರುಗಳು ಎಲ್ಲ ವರ್ಗಗಳ ವೀಕ್ಷಕರನ್ನೂ, ಮಕ್ಕಳನ್ನೂ ಹಿಡಿದಿಟ್ಟುಕೊಳ್ಳುತ್ತವೆ ಎನ್ನುತ್ತಾರೆ ನಿರ್ದೇಶಕ ವಾಸು.
.
ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿರುವವರು ಖ್ಯಾತ ನಿರ್ದೇಶಕ ಬುಕ್ಕಾಪಟ್ಟಣ ವಾಸು. ಕಿರುತೆರೆಯ ನುರಿತ ನರ್ದೇಶಕ, ಬರಹಗಾರ ಬ. ಲ. ಸುರೇಶ್ ‘ಜೈ ಹನುಮಾನ್’ ಗೆ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರಕಥೆ ನೀರಜ್ ಮತ್ತುತಂಡ ಮಾಡುತ್ತಿದ್ದರೆ, ನಿಷಿನ್ ಚಂದ್ರ ಡಿಓಪಿ ಆಗಿದ್ದಾರೆ. ಸಂತೋಷ್ ಸಂಕಲನದ ಜವಾಬ್ಧಾರಿ ಹೊತ್ತಿದ್ದಾರೆ. ಕಾಂಟಿಲೋ ಪ್ರೊಡಕ್ಷನ್ಸ್‍ನ ಮುಖ್ಯಸ್ಥ ಅಭಿಮನ್ಯು ಸಿಂಗ್ ಜತೆ ಯಶಸ್ವಿ ಹಿಂದಿ ಧಾರಾವಾಹಿಗಳಲ್ಲಿ ಕೆಲಸ ಮಾಡಿರುವ ಹಿಮಾನಿ, ಗೌತಮ್, ಮನಿಷ್ ಪೋಪಟ್ ಮುಂತಾದವರ ತಂಡ ಇದೆ.
.
ತಾರಾಗಣದಲ್ಲಿ ಬಾಲಕ ಹನುಮಾನ್ ಪಾತ್ರವನ್ನು ಪ್ರದ್ಯುಮ್ನ ನಿರ್ವಹಿಸುತ್ತಿದ್ದಾನೆ. ಅಂಜನಾ ಪಾತ್ರವನ್ನು ಪ್ರಿಯಾಂಕಾ ಚಿಂಚೋಳಿ, ಕೇಸರಿಯಾಗಿ ಪ್ರಸನ್ನ, ಶಿವನಾಗಿ ಮಧು, ರಾವಣನಾಗಿ ವಿನಯ್‍ಗೌಡ, ಕೈಕಸಿಯಾಗಿ ರಂಜಿತಾ ಸೂರ್ಯವಂಶಿ, ಪಾರ್ವತಿಯಾಗಿ ನಾಗಶ್ರಿ ವೀಕ್ಷಕರನ್ನು ರಂಜಿಸಲಿದ್ದಾರೆ.

.
ದುಷ್ಟರ ಸಂಹಾರಕ್ಕಾಗಿ ಅವತರಿಸಿದ “ಜೈ ಹನುಮಾನ” ಇದೇ ಅಕ್ಟೋಬರ್ 8ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 7.30 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

 

ಪ್ರಿಮೆಚ್ಯೂರ್ ಪ್ರೇಮ ಕತೆ ಹೊಂದಿರುವ ‘ನಡುವೆ ಅಂತರವಿರಲಿ’ ಚಿತ್ರವನ್ನು 12 ವರ್ಷದಿಂದ 50 ವರ್ಷದ ವಯೋಮಾನದವರಿಗೆ ಟೆಸ್ಟ್ ಚೆಕ್ ಎಂದು ತೋರಿಸಿದ್ದಾರೆ. 55 ನೋಡುಗರಲ್ಲಿ 38 ಮಂದಿ ಕಣ್ಣೀರು ಹಾಕಿದ್ದಾರೆ. ಅಂದರೆ ಎಷ್ಟರಮಟ್ಟಿಗೆ ಸಿನಿಮಾ ಆವರಿಸಿಕೊಂಡಿದೆ ಎಂಬುದನ್ನು ಗಮನಿಸಬೇಕಾಗಿದೆ. ಓದುವ ವಯಸ್ಸಿನಲ್ಲಿ ಓದಬೇಕು. ಅದು ಬಿಟ್ಟು ಪ್ರೀತಿ, ಪ್ರೇಮ ಅಂತ ಹಿಂದೆ ಹೋದರೆ ಅವರು ನೋವು ಅನುಭವಿಸುವುದು ಅಲ್ಲದೆ ಮನೆಯವರು ಕೂಡ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತಾರೆ. 18-20 ವಯಸ್ಸಿನ ಯುವಜನತೆಯ ಮನಸ್ಸು ಚಂಚಲವಾಗಿರುತ್ತದೆ. ಇದೇ ಅಂತರದಲ್ಲಿ ತಪ್ಪುಗಳು ಆಗುತ್ತದೆ. ಅದಕ್ಕೆ ಈ ವಯಸ್ಸುನಲ್ಲಿ ಅಂತರವಿರುವುದು ಒಳ್ಳೇದು ಎಂದು ಹೇಳುವ ಪ್ರಯತ್ನ ಮಾಡಲಾಗಿದೆ.

.
ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶನ ಮಾಡಿರುವ ರವೀನ್‍ಕುಮಾರ್ ಕತೆ,ಚಿತ್ರಕತೆ ಬರೆದು ಮೊದಲಬಾರಿ ನಿರ್ದೇಶನ ಜೊತೆಗೆ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇವರಿಗೆ ಜೊತೆಯಾಗಿ ನಾಗರಾಜ್ ಪಾಲುದಾರರು.
.
ರಂಗಭೂಮಿ ನಟ, ಸದ್ಯ ಇಂಜನಿಯರಿಂಗ್ ಓದುತ್ತಿರುವ ಪ್ರಖ್ಯಾತ್‍ಪರಮೇಶ್ ಸಂಭಾóಷಣೆ,ನಿರ್ದೇಶಕ ಮಂಜುಮಾಂಡವ್ಯ ಇವರ ಶೋಧದಿಂದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಐಶಾನಿಶೆಟ್ಟಿ ನಾಯಕಿ. ಇಬ್ಬರು ಮೇಕಪ್‍ರಹಿತ ನಟನೆ ಮಾಡಿರುವುದು ವಿಶೇಷ. ಉಳಿದಂತೆ ನಾಯಕಿಯ ಪೋಷಕರಾಗಿ ಅಚ್ಯುತಕುಮಾರ್-ತುಳಸಿಶಿವಮಣಿ, ನಗಿಸಲು ಚಿಕ್ಕಣ್ಣ , ಉದಯ್‍ಮೆಹ್ತಾ ನಟಿಸಿದ್ದಾರೆ. ಮಣಿಕಾಂತ್ ಖದ್ರಿ ಹಾಡುಗಳಲ್ಲಿ ‘ಶಕುಂತ್ಲೆ ಬಂದಳು’ ಗೀತೆ ಹಿಟ್ ಆಗಿದೆ. ಸದರಿ ಗೀತೆಯನ್ನು ಡಾ.ನಾಗೇಂದ್ರಪ್ರಸಾದ್ ಬೆಳಿಗ್ಗೆ ಆರು ಗಂಟೆಯಲ್ಲಿ ಕೇವಲ ಐದು ನಿಮಿಷದಲ್ಲಿ ರಚಿಸಿದ್ದಾರಂತೆ.
.

ವಿತರಕ ಕಾರ್ತಿಕ್‍ಗೌಡ ಮುಖಾಂತರ ಸುಮಾರು 100 ಕೇಂದ್ರಗಳಲ್ಲಿ ಅಕ್ಟೋಬರ್ 5ರಂದು ರಾಜ್ಯದ್ಯಂತ ತೆರೆ ಕಾಣಲಿದೆ.

ಹೆಸರಾಂತ ಸಂಕಲನಕಾರ, ಕಿರು ಚಿತ್ರಗಳ ನಿರ್ದೇಶಕ ಮೋಹನ್ ಕಾಮಾಕ್ಷಿ ಅವರ ಪ್ರಥಮ ನಿರ್ದೇಶನದ ಚಿತ್ರ ಆದಿ ಪುರಾಣ ಶಮಂತ್ ನಿರ್ಮಾಣದಲ್ಲಿ ರೈನ್ ಬೋ ಪೆÇ್ರಡಕ್ಷನ್ ಸಂಸ್ಥೆಯಲ್ಲಿ ಬಿಡುಗಡೆ ಆಗುತ್ತಿದೆ.

.

ಆದಿ ಪುರಾಣ ಚಿತ್ರದಿಂದ ಶಷಾಂಕ್, ಅಹಲ್ಯ ಸುರೇಶ್ ಹಾಗೂ ಮೋಕ್ಷ ಕುಶಾಲ್ ಪರಿಚಯ ಸಹ ಆಗುತ್ತಿದ್ದಾರೆ. ಎಂ ಜಿ ಗುರುಪ್ರಸಾದ್ ಛಾಯಾಗ್ರಹಣ, ವಿಕ್ರಮ್ ವಸಿಷ್ಠ, ಚಂದನ ವಸಿಷ್ಠ ಹಾಗೂ ಸಿದ್ದಾರ್ತ್ ಕಾಮತ್ ಸಂಗೀತ ನೀಡಿದ್ದಾರೆ. ಶಕ್ತಿ ವೆಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಕವಿರಾಜ್ ಹಾಗೂ ವಿಕ್ರಮ್ ವಸಿಷ್ಠ ಗೀತ ಸಾಹಿತ್ಯ, ಅನುಷ ಶಾಮಂತ್ ಹಾಗೂ ತೇಜಸ್ವಿನಿ ವಸ್ತ್ರ ವಿನ್ಯಾಸ, ರಘು ಕಲಾ ನಿರ್ದೇಶನ, ಜೈ ದೇವ್ ಸಹಾಯಕ ನಿರ್ದೇಶನ ಈ ಚಿತ್ರಕ್ಕೆ ಒದಗಿಸಿದ್ದಾರೆ.
.
ಯುವ ಮನಸನ್ನು ಸೂರೆ ಗೊಳ್ಳುವ ಸಿನಿಮಾದ ಪೋಷಕ ಪಾತ್ರಗಳಲ್ಲಿ ರಂಗಾಯಣ ರಘು, ನಾಗೇಂದ್ರ ಶಾ, ಕರಿ ಸುಬ್ಬು, ಡಾ ವತ್ಸಲಾ ಮೋಹನ್, ಶಕ್ತಿ ವೆಲ್, ಸಮೀರ, ಆದಿತ್ಯ ಭಾರದ್ವಾಜ್, ಜಿಮ್ ಶಿವು, ರಾಧ ಹಾಗೂ ಇತರರು ಇದ್ದಾರೆ.

ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ ಆರಂಭಿಸಿರುವ ಪಿಆರ್ಕೆ ಪ್ರೊಡಕ್ಷನ್‌ ಹೌಸ್‌ನಲ್ಲಿ 'ಹಂಬಲ್‌ ಪೊಲಿಟೀಶಿಯನ್‌ ನೋಗರಾಜ್‌' ಖ್ಯಾತಿಯ ದಾನಿಷ್ ನಾಯಕರಾಗುವ ಹೊಸ ಸಿನಿಮಾ ನಿರ್ಮಾಣವಾಗಲಿದೆ.

.

ಈ ಸಿನಿಮಾವನ್ನು ಹ್ಯಾಪಿ ನ್ಯೂ ಇಯರ್‌ ಸಿನಿಮಾ ಮೂಲಕ ಗಮನ ಸೆಳೆದಿದ್ದ ಪನ್ನಗಭರಣ ನಿರ್ದೇಶನ ಮಾಡಲಿದ್ದಾರೆ.

ನೋಗ್‌ರಾಜ್‌ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಿದ ದಾನಿಶ್‌ರನ್ನು ಈ ಸಿನಿಮಾದ ಮೂಲಕ ಬೇರೆಯದ್ದೇ ರೂಪದಲ್ಲಿ ತೋರಿಸಲಿದ್ದೇನೆ ಎನ್ನುತ್ತಾರೆ ನಿರ್ದೇಶಕ ಪನ್ನಗಭರಣ.

.

ಈ ಮೂಲಕ ಪುನೀತ್‌ರಾಜ್‌ಕುಮಾರ್‌ ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ಹೊಸ ರೀತಿಯ ಸಿನಿಮಾಗಳಿಗೆ ಬಂಡವಾಳ ಹೂಡುವುದನ್ನು ಮುಂದುವರೆಸಿದ್ದಾರೆ.

 

ಸಿಂಗಂ , ಕಮಾಂಡೋ ಸಿನಿಮಾಗಳಲ್ಲಿ ವಿಲನ್‌ ಆಗಿ ನಟಿಸಿದ್ದ ಠಾಕೂರ್‌ ಅನೂಪ್‌ ಸಿಂಗ್‌ ಸುನೀಲ್‌ಕುಮಾರ್‌ ದೇಸಾಯಿ ಅವರ ಉದ್ಘರ್ಷ ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ.

.

ಈ ಬಗ್ಗೆ ಠಾಕೂರ್‌ ಅನೂಪ್‌ ಸಿಂಗ್‌ ಅವರನ್ನು ಪರಿಚಯಿಸುವ ಸಲುವಾಗಿ ದೇಸಾಯಿ ಪತ್ರಿಕಾ ಗೋಷ್ಠಿ ಕರೆದಿದ್ದರು. ಅಲ್ಲಿ ಮಾತನಾಡಿದ ಅನೂಪ್‌ ಸಿಂಗ್‌ ದೇಸಾಯಿಯವರು ನನಗೆ ಮೊದಲು ವಿಲನ್‌ ಪಾತ್ರಕ್ಕೆ ಕರೆಯುತ್ತಾರೆ ಎಂದುಕೊಂಡಿದ್ದೆ, ಆದರೆ ಅವರು ನನಗೆ ನಾಯಕನ ಪಾತ್ರ ಕೊಟ್ಟರು ಎಂದು ಖುಷಿ ವ್ಯಕ್ತಪಡಿಸಿದ್ರು.

.

‘ಈ ಸಿನಿಮಾ ಬಗ್ಗೆ ನನಗೆ ಸಾಕಷ್ಟು ನಂಬಿಕೆ ಇದೆ. ದೇಸಾಯಿ ಸರ್‌ ನನಗೆ ಕಥೆ ಹೇಳಿದಾಗ ನಾನು ಈ ಚಿತ್ರಕ್ಕೆ ನಾಯಕ ಯಾರು ಎಂದು ಕೇಳಿದೆ, ಅದಕ್ಕೆ ಅವರು ನೀವೇ ಎಂದಾಗ ನನಗೆ ನಿಜಕ್ಕೂ ಶಾಕ್‌ ಆಯಿತು. ಮತ್ತೆ ಮತ್ತೆ ಕೇಳಿಕೊಂಡು ಕನಧಿರ್ಮ್‌ ಮಾಡಿಕೊಂಡೆ,’ಎಂದು ಹೇಳಿದರು ಅನೂಪ್‌.
ಠಾಕೂರ್‌ ಅನೂಪ್‌ ಸಿಂಗ್‌ಗೆ ಈ ಸಿನಿಮಾದಲ್ಲಿ ಕಬಾಲಿ ಖ್ಯಾತಿಯ ಧನ್ಸಿಕಾ, ತಾನ್ಯಾ ಹೋಪ್‌ ಜೋಡಿಯಾಗಿ ನಟಿಸಿದ್ದಾರೆ

 

ಸಿನಿಮಾ: ಕಿನಾರೆ

ನಿರ್ಮಾಣ: ರೆಡ್ ಆ್ಯಪಲ್ ಮೂವೀಸ್‌

ನಿರ್ದೇಶನ: ದೇವರಾಜ್‌ ಪೂಜಾರಿ

ತಾರಾಗಣ: ಸತೀಶ್ ರಾಜ್, ಗೌತಮಿ ಜಾಧವ್, ಅಪೇಕ್ಷಾ, ಸಿಹಿಕಹಿ ಚಂದ್ರು, ಅರುಣಾ ಬಾಲರಾಜ್, ಪವಿತ್ರಾ ಲೋಕೇಶ್

*
ಈ ವಾರ ಬಿಡುಗಡೆಯಾಗಿರುವ ಹೊಸಬರ "ಕಿನಾರೆ" ಸಿನಿಮಾ ಸತ್ವ ಕಳೆದುಕೊಂಡ ಊಟದಂತಾಗಿದೆ.

ಹೇಮಾಪುರ ಎಂಬ ಊರಿನಲ್ಲಿ ವಿಚಿತ್ರ ಖಾಯಿಲೆಯೊಂದು ಬಂದಿರುತ್ತದೆ. ಈ ಊರಿನಲ್ಲಿ ರಂಗ ಮತ್ತು ಮೀರಾ ಎಂಬ ಪಾತ್ರಗಳು ಬುದ್ದಿ ಹೀನರಾಗಿರುತ್ತಾರೆ. ಇವರ ಜತೆ ಆ ಊರಿನಲ್ಲಿ ಕೆಲ ಯುವಕ ಯುವತಿಯರು ಇದೇ ಸ್ಥಿತಿಯಲ್ಲಿರುತ್ತಾರೆ. ಇದಕ್ಕೆ ದೇವರ ಶಾಪ ಕಾರಣ ಎಂದು ಜ್ಯೋಯಿಸರು ಊರಿನ ಜನರನ್ನು ದಾರಿ ತಪ್ಪಿಸುತ್ತಿರುತ್ತಾರೆ. ಇದೇ ಸಮಯದಲ್ಲಿ ಊರಿಗೆ ವೈದ್ಯರ ಕ್ಯಾಂಪೊಂದು ಬಂದು ಮಕ್ಕಳ ಮಾನಸಿಕ ರೋಗವನ್ನು ದೂರ ಮಾಡುವ ಕೆಲಸದಲ್ಲಿ ತೊಡಗುತ್ತಾರೆ. ಈ ಸಮಯದಲ್ಲಿ ಮೀರಾ ಮತ್ತು ರಂಗ ನಡುವೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿಕೊಳ್ಳುತ್ತದೆ. ಆದರೆ ಈ ಪ್ರೀತಿಗೆ ಮೀರಾ ತಂದೆ ಅಡ್ಡ ಬರುತ್ತಾರೆ. ಇದೆಲ್ಲದನ್ನು ಮೀರಿ ರಂಗ-ಮೀರಾ ಒಂದಾಗುತ್ತಾರ ಎಂಬುದು ಸಿನಿಮಾದ ಕಥೆ.

.

ಕಿನಾರೆ ಸಿನಿಮಾ ಹೆಚ್ಚಾಗಿ ದಕ್ಷಿಣ ಕನ್ನಡದ ಸಮುದ್ರದ ತಟದಲ್ಲಿ ನಡೆಯುವ ಕಾರಣ ನೋಡಲು ಸುಂದರವಾಗಿ ಕಾಣುತ್ತದೆ. ಆದರೆ ಸಿನಿಮಾಟೋಗ್ರಫಿ ಚೆನ್ನಾಗಿರಬೇಕು ಎಂಬ ಕಾರಣಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ನಿರ್ದೇಶಕರು ಫೇಲವವಾಗಿಸಿದ್ದಾರೆ. ಚಿತ್ರದ ಒನ್ ಲೈನ್ ಸ್ಟೋರಿ ಚೆನ್ನಾಗಿದ್ರೂ, ಚಿತ್ರಕಥೆ ಹೆಣೆಯುವಲ್ಲಿ ನಿರ್ದೇಶಕರು ಜಾಣ್ಮೆ ತೋರುವಲ್ಲಿ ಎಡವಿದ್ದಾರೆ.

.

ಛಾಯಾಗ್ರಹಣ ಮಾಡಿದ ಅಭಿಷೇಕ್ ಕಾಸರಗೋಡು ಮತ್ತು ಅಭಿರಾಮ್, ಚಿತ್ರದ ಪ್ರತೀ ಫ್ರೇಮ್‌ ಸುಂದರವಾಗಿಸಿದ್ದಾರೆ. ಅತಿ ಹೆಚ್ಚು ಡ್ರೋಣ್‌ ಶಾಟ್‌ಗಳು ಪ್ರೆಕ್ಷಕರಿಗೆ ಬೋರ್‌ ಹೊಡೆಸುತ್ತವೆ.

ಕಥೆ ಕಾಲ್ಪನಿಕವೋ, ವಾಸ್ತವವೋ ಎಂಬ ಅರಿವು ಇಲ್ಲದೆ ನಿರ್ದೇಶಕರು ಸಿನಿಮಾ ಮಾಡಿದ್ದಾರೆ. ಬುದ್ಧಿ ಮಾಂದ್ಯರನ್ನು ವಾಸಿ ಮಾಡಲು ಹೊಸ ಮಾರ್ಗವನ್ನು ಕಂಡು ಹಿಡಿದಿದ್ದೇನೆ ಎನ್ನುವ ವೈದ್ಯರು, ಪರಪಕ್ರೂರಿ ಎಂದುಕೊಳ್ಳುವ ಜೋಯಿಸ ಇದ್ದಕ್ಕಿದ್ದ ಹಾಗೆ ಪಶ್ಚಾತಪದ ಬೇಗುದಿಗೆ ಸಿಕ್ಕಿಹಾಕಿಕೊಳ್ಳುವುದು ಎಲ್ಲವೂ ತುಂಬ ಬಾಲಿಶವಾಗಿದೆ.

 

.ಸಿನಿಮಾಗೆ ಪೂರಕವಾಗಬೇಕಿದ್ದ ಹಿನ್ನೆಲೆ ಸಂಗೀತ ಸಾಕಷ್ಟು ಕಡೆಗಳಲ್ಲಿ ಡೈಲಾಗ್‌ ಕೇಳಿಸದಂತೆ ಮಾಡುತ್ತದೆ. ಹಾಡುಗಳು ಸಹ ಅಷ್ಟೇನು ಗಮನ ಸೆಳೆಯುವುದಿಲ್ಲ. ಚಿತ್ರದಲ್ಲಿ ನಟಿಸಿದ ನಟ-ನಟಿಯರ ಅಭಿನಯ ಚಿತ್ರಕ್ಕೆ ಪೂರಕವಾಗಿದೆ.

ರೇಟಿಂಗ್‌:2/5

 
ಬೆಂಕೋಶ್ರೀ ಎಂದೇ ಖ್ಯಾತರಾಗಿರುವ ನಿರ್ಮಾಪಕ ಬಿ ಕೆ ಶ್ರೀನಿವಾಸ್‌  ಫಿಲಂ ಫ್ಯಾಕ್ಟರಿ ಎಂಬ ಹೊಸ ಪ್ರೊಡಕ್ಷನ್‌ ಹೌಸ್‌ನ್ನು ಆರಂಭಿಸಿದ್ದಾರೆ. ಈ ಮೂಲಕ ಅವರು ಪ್ರತಿ ವರ್ಷ ಹೊಸ ಹೊಸ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಲಿದ್ದಾರಂತೆ.
.
ಈ ಚಿತ್ರ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಣವಾಗುವ ಮೊದಲ ಸಿನಿಮಾದಲ್ಲಿ ಬೆಂಕೋಶ್ರೀ ತಮ್ಮ ಪುತ್ರ ಅಕ್ಷರ್‌ನನ್ನು ಲಾಂಚ್‌ ಮಾಡಲಿದ್ದಾರೆ. ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕಯೋಗರಾಜ್‌ ಭಟ್‌  ಬೆಂಕೋಶ್ರೀ ಫಿಲಂ ಫ್ಯಾಕ್ಟರಿಯ ಲೋಗೋವನ್ನು ಉದ್ಘಾಟಿಸಿದರು.
Page 6 of 39

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top