nata

ttm

adweb

udgharsha

Sunil HC Gowda

Sunil HC Gowda

 

ಶರಣ್‌ ನಟನೆಯ ವಿಕ್ಟರಿ -2 ಈ ವಾರ ಬಿಡುಗಡೆಯಾಗುತ್ತಿದೆ, ಈ ಸಿನಿಮಾದಲ್ಲಿ ಶರಣ್‌ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. "ವಿಕ್ಟರಿ" ಸಿಕ್ವೇಲ್‌ ಇದಾಗಿದೆ. ಆದರೆ ಮೊದಲ ಸಿನಿಮಾಗಿಂತಲೂ ಈ ಸಿನಿಮಾದಲ್ಲಿ ಅತಿ ಹೆಚ್ಚು ಕಾಮಿಡಿ ಇದೆಯಂತೆ.
.
ಕಾಲೇಜ್‌ಕುಮಾರ್‌ ಸಿನಿಮಾ ನಿರ್ದೇಶನ ಮಾಡಿದ್ದ ಹರಿ ಸಂತು ವಿಕ್ಟರಿ -2 ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ ಸೂಪರ್‌ ಹಿಟ್‌ ಆಗಿದೆ. ಭಟ್ಟರು ಬರೆದಿರುವ "ನಾವು ಮನೆಗ್ ಹೋಗೋದಿಲ್ಲ" ಹಾಡು ಈಗಾಗಲೇ ಎಲ್ಲರ ಬಾಯಲ್ಲೂ ಕೇಳಿ ಬರುತ್ತಿದೆ.
.
ಮೊದಲ ಭಾಗದಲ್ಲಿದ್ದ ಮಿತ್ರ, ರವಿಶಂಕರ್‌ ಎಲ್ಲರೂ ಎರಡನೇ ಭಾಗದಲ್ಲಿಯೂ ಮುಂದುವರೆದಿದ್ದಾರೆ. ಒಟ್ಟಿನಲ್ಲಿ ವಿಕ್ಟರಿ -2 ನೋಡುವ ಪ್ರತಿಯೊಬ್ಬರನ್ನು, ವಿಕ್ಟರಿ 1ಕ್ಕಿಂತಲೂ ನಕ್ಕು ನಗಿಸುತ್ತದೆ ಎನ್ನುವುದು ಚಿತ್ರತಂಡದ ಮಾತು.

 

ಪುನೀತ್‌ರಾಜ್‌ಕುಮಾರ್‌ ಮತ್ತು ಸಂತೋಷ್‌ ಆನಂದ್‌ರಾಮ್‌ ಕಾಂಬಿನೇಶನ್‌ನ ಹೊಸ ಚಿತ್ರದಲ್ಲಿ ಪೊಲಿಟಿಕಲ್‌ ಡ್ರಾಮಾ ಜಾನರ್ ಕತೆ ಇದೆಯಂತೆ.

"ರಾಜಕುಮಾರ" ಮೂಲಕ 50 ಕೋಟಿ ಕ್ಲಬ್‌ ಓಪನ್‌ ಮಾಡಿದ ಈ ಜೋಡಿಯ ಹೊಸ ಚಿತ್ರದ ಟೈಟಲ್‌ ನವೆಂಬರ್‌ 1ರಂದು ಅನೌನ್ಸ್‌ ಆಗಲಿದೆ. ಪುನೀತ್‌ರಾಜ್‌ಕುಮಾರ್‌ ಅವರ ಅಭಿಮಾನಿಗಳು ಈ ಟೈಟಲ್‌ನ್ನು ಲಾಂಚ್‌ ಮಾಡಲಿದ್ದಾರೆ.

ಹೊಸ ಸಿನಿಮಾದಲ್ಲಿ ಕಥೆ ಏನು ಇರಲಿದೆ ಎಂಬ ಅಭಿಮಾನಿಗಳು ಪ್ರಶ್ನೆ ಕೇಳುತ್ತಲೇ ಇದ್ದಾರೆ. ಚಿತ್ರದಲ್ಲಿ ಫ್ಯಾಮಿಲಿ ಮತ್ತು ಪೊಲಿಟಿಕಲ್‌ ಡ್ರಾಮಾ ಇರಲಿದೆ ಎಂಬ ಸುದ್ದಿ ಹಬ್ಬಿದೆ.

"ರಾಜಕುಮಾರ" ಚಿತ್ರವನ್ನು ನಿರ್ಮಾಣ ಮಾಡಿದ್ದ ವಿಜಯ್‌ ಕಿರಗಂದೂರು ಅವರೇ ಹೊಸ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ.

 

ತಾಯಿಗೆ ತಕ್ಕ ಮಗ ಸಿನಿಮಾದ ಬಿಡುಗಡೆಯ ಬಿಝಿಯಲ್ಲಿರುವ ನಿರ್ದೇಶಕ ಶಶಾಂಕ್‌ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ನಿರ್ದೇಶನ ಮಾಡಲಿದ್ದಾರೆ.
.
ಈ ಹಿಂದೆ ಶಶಾಂಕ್‌ ಉಪೇಂದ್ರ ಜತೆ ಸಿನಿಮಾ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಉಪ್ಪಿ ಪ್ರಜಾಕೀಯದಲ್ಲಿ ಬಿಝಿಯಾದ ನಂತರ ಶಶಾಂಕ್‌ ಸಿನಿಮಾ ನೆನೆಗುದಿಗೆ ಬಿದ್ದಿತ್ತು. ಆದರೆ ಮೊನ್ನೆ ತಾಯಿಗೆ ತಕ್ಕ ಮಗ ಸುದ್ದಿಗೋಷ್ಠಿಯಲ್ಲಿ ಶಶಾಂಕ್‌ ಮತ್ತು ಉಪೇಂದ್ರ ಇಬ್ಬರು ಒಟ್ಟಿಗೆ ಸಿನಿಮಾ ಮಾಡುವುದಾಗಿ ಅನೌನ್ಸ್‌ ಮಾಡಿದರು.
.
ಶಶಾಂಕ್‌ ಕನ್ನಡದ ಸೂಕ್ಷ್ಮ ಸಂವೇದನೆ ಉಳ್ಳ ನಿರ್ದೇಶಕ ಎಂದು ಹೆಸರು ಮಾಡಿದವರು, ಉಪ್ಪಿ ಡಿಫ್ರೆಂಟ್‌ ಆಗಿ ಸಿನಿಮಾಗಳನ್ನು ಮಾಡಿಕೊಂಡು ಬಂದವರು ಈಗ ಇಬ್ಬರೂ ಒಂದಾಗುತ್ತಿದ್ದಾರೆ. ಇಬ್ಬರ ಸಿನಿಮಾ ಹೇಗಿರುತ್ತದೋ ಕಾದು ನೋಡಬೇಕಿದೆ.

 

ಜೋಶ್‌ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶ ಮಾಡಿದ ನಟ ರಾಕೇಶ್‌ ಅಡಿಗ ಈಗ ನಿರ್ದೇಶಕರಾಗಿದ್ದು, ನೈಟ್‌ ಔಟ್‌ ಎಂಬ ಸಿನಿಮಾ ಮಾಡುತ್ತಿದ್ದಾರೆ.
.
ಈಗಾಗಲೇ ಸಿನಿಮಾದ ಮೊದಲ ಹಂತ ಪೂರ್ಣಗೊಂಡಿದೆ. ಈ ಸಿನಿಮಾದಲ್ಲಿ ಅಕ್ಷಯ್‌ ಮತ್ತು ಭರತ್‌ ನಟಿಸುತ್ತಿದ್ದಾರೆ.ಇವರ ಜತೆ ‘ಸಂಕಷ್ಟಕರ ಗಣಪತಿ’ ಚಿತ್ರದ ನಾಯಕಿ ಶ್ರುತಿ ಗೊರಾಡಿಯ ನಟಿಸುತ್ತಿದ್ದಾರೆ. ಶ್ರುತಿ ಈ ಸಿನಿಮಾದಲ್ಲಿ ಈ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಅಮೆರಿಕ ಮೂಲದ ನವೀನ್‌ ಕೃಷ್ಣ ಎಂಬುವರು ಈ ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ.
.
ಇಬ್ಬರು ಸ್ನೇಹಿತರ ನಡುವೆ ನಡೆಯುವ ‘ನೈಟ್‌ ಔಚ್‌’ ಜರ್ನಿ ಹೇಗಿರುತ್ತೆ, ಏನೆಲ್ಲ ನಡೆಯುತ್ತದೆ ಅನ್ನುವುದೇ ಸಿನಿಮಾದ ಕಥೆ.

 

ತರುಣ್ ಟಾಕೀಸ್ ಲಾಂಛನದಲ್ಲಿ ಮಾನಸ ತರುಣ್ ಮತ್ತು ತರುಣ್ ಶಿವಪ್ಪ ನಿರ್ಮಿಸಿರುವ `ವಿಕ್ಟರಿ 2` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
.
ಹರಿ ಸಂತೋಷ್ ನಿರ್ದೇಶನದ ಈ ಚಿತ್ರಕ್ಕೆ ತರುಣ್ ಕಿಶೋರ್ ಸುಧೀರ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಗುರು ಪ್ರಶಾಂತ್ ರೈ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಪ್ರಕಾಶ್ ಸಂಕಲನ, ವಿಕ್ರಂ ಸಾಹಸ ನಿರ್ದೇಶನ, ಧನು, ಭೂಷಣ್ ನೃತ್ಯ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ.
.
ಶರಣ್ ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಅಪೂರ್ವ, ಅಸ್ಮಿತ ಸೂದ್, ರವಿಶಂಕರ್, ಅವಿನಾಶ್, ಸಾಧುಕೋಕಿಲ, ಅರಸು, ನಾಜಿರ್, ತಬಲಾನಾಣಿ, ಸುಂದರ್, ಮಂಜುನಾಥ್ ಹೆಗಡೆ, ಮಿಮಿಕ್ರಿ ದಯಾನಂದ್, ರಾಜಶೇಖರ್, ಕೀರ್ತಿರಾಜ್, ಕುರಿ ಪ್ರತಾಪ್, ಲಹರಿ ವೇಲು, ಮಂಜುನಾಥ್, ಎಂ.ಎನ್.ಲಕ್ಷ್ಮೀದೇವಮ್ಮ ಮುಂತಾದವರಿದ್ದಾರೆ.

 

ಸ್ಯಾಂಡಲ್‌ವುಡ್‌ನಲ್ಲೀಗ ಐತಿಹಾಸಿಕ ಸಿನಿಮಾಗ ಅಬ್ಬರ ಜೋರಾಗಿದೆ. ಆ ಸಾಲಿಗೆ ಹೊಸ ಸೇರ್ಪಡೆ ಕ್ರಾಂತಿಕಾರಿ, ಜನಪ್ರಿಯ ಬಂಡಾಯ ನಾಯಕ ’ಶೂರ ಸಿಂಧೂರ ಲಕ್ಷ್ಮಣ’ ಸಿನಿಮಾ ಸೆಟ್ಟೇರುತ್ತಿದೆ.
.

Shura Sindura Lakshmana 127

ಈ ಸಿನಿಮಾದಲ್ಲಿ ಮೊದಲು ಸುದೀಪ್‌ ನಟಿಸಬೇಕಿತ್ತು. ಆದರೆ ಅವರು ಮದಕರಿ ನಾಯಕ ಸಿನಿಮಾ ಮಾಡುತ್ತಿರುವುದರಿಂದ ಶೂರ ಸಿಂಧೂರ ಲಕ್ಷ್ಮಣ ಪಾತ್ರವನ್ನು ಬಹುಭಾಷಾ ನಟ ಕಿಶೋರ್‌ ಮಾಡ್ತಾರಂತೆ.
ಪಲ್ಲಕ್ಕಿ ರಾಧಾಕೃಷ್ಣ ಸುದೀಪ್‌ಗಾಗಿಯೇ ಈ ಕಥೆ ಮಾಡಿದ್ದರಂತೆ. ಅಲ್ಲದೇ ಚಿತ್ರತಂಡದ ಅಭಿಲಾಶೆ ಕೂಡಾ ಆಗಿತ್ತಂತೆ. ಆದರೆ ಅವರ ಬಿಝಿ ಇದ್ದ ಕಾರಣ ಕಿಶೋರ್‌ ಆ ಪಾತ್ರವನ್ನು ಮಾಡುತ್ತಿದ್ದಾರೆ. ಈ ವಿಷಯವನ್ನು ಸ್ವತಃ ನಿರ್ದೇಶಕರೇ ಮಾಧ್ಯಮದವರೊಂದಿಗೆ ಹಂಚಿಕೊಂಡರು.
.

1920ರ ಆಸುಪಾಸಿನಲ್ಲಿ ಬ್ರಿಟಿಷರ ವಿರುದ್ಧ ದಂಗೆ ಎದ್ದಿದ್ದ ಲಕ್ಷ್ಮಣ ಸಿಕ್ಕಾಪಟ್ಟೆ ಹೆಸರು ಮಾಡಿದ್ದರು. ಜಾನಪದ ಗೀತೆಗಳಲ್ಲೂ ಲಕ್ಷ್ಮಣನ ಸಾಹಸದ ಉಲ್ಲೇಖ ಇದೆ. ಸಿಂಧೂರ ಲಕ್ಷ್ಮಣನ ಬಗ್ಗೆ ನಿರ್ದೇಶಕು ತಂಡ ಕಟ್ಟಿಕೊಂಡು ಸಿಕ್ಕಾಪಟ್ಟೆ ಓಡಾಡಿ ವಿಷಯ ಸಂಗ್ರಹಿಸಿದ್ದಾರೆ. ಅವರ ಬದುಕನ್ನು ನೈಜವಾಗಿ ತೆರೆ ಮೇಲೆ ತರಲು ಅವರು ಹೊರಟಿದ್ದಾರಂತೆ. ಈಗಾಗಲೇ ಕಿಶೋರ್‌ಗೆ ಲುಕ್‌ ಟೆಸ್ಟ್‌ ಸಹ ಮಾಡಲಾಗಿದೆ ಎಂಬುದನ್ನು ನಿರ್ದೇಶಕರು ಹೇಳಿದ್ದಾರೆ.

 

ತನ್ನ ಟ್ರೇಲರ್‌ನಿಂದ ಗಮನ ಸೆಳೆದಿರುವ 'ಕನ್ನಡ ದೇಶದೋಳ್‌' ಸಿನಿಮಾ ಕನ್ನಡಾಭಿಮಾನದ ಸಿನಿಮಾವಂತೆ.

.
ಈ ಸಿನಿಮಾವನ್ನು ಭಾಷೆಯ ಉಳಿವಿಗಾಗಿ ಮಾಡಿದ್ದಾರಂತೆ ನಿರ್ದೇಶಕರು ಇದೊಂದು ಪಕ್ಕಾ ಕನ್ನಡಾಭಿಮಾನ ಚಿತ್ರವಾಗಿದ್ದು ಈ ಚಿತ್ರದ ಮೂಲಕ ಕನ್ನಡಪರ ಹೋರಾಟ ಮಾಡುತ್ತಿರುವುದಾಗಿ ಚಿತ್ರತಂಡ ಹೇಳಿದೆ. ವಿಶೇಷ ಎಂದರೆ ಈ ಸಿನಿಮಾ ನವೆಂಬರ್‌ 1ರಂದು ಕನ್ನಡ ರಾಜ್ಯೋತ್ಸವದಂದು ಬಿಡುಗಡೆಯಾಗುತ್ತಿದೆ.

.

ದೊಡ್ಡ ನಗರಗಳಲ್ಲಿ ಕನ್ನಡ ಭಾಷೆಯ ಮೇಲೆ ಆಗುತ್ತಿರುವ ಆಕ್ರಮಣಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ವಿಷಯ ಸಿನಿಮಾದಲ್ಲಿದೆ. ಅವಿರಾಮ್ ಕಂಠೀರವ ಇದನ್ನು ನಿರ್ದೇಶನ ಮಾಡಿದ್ದಾರೆ.

ಪ್ರಚಾರದಲ್ಲಿ ಚಿತ್ರತಂಡಕ್ಕೆ ಎಲ್ಲಾ ದೊಡ್ಡ ಸ್ಟಾರ್ಸ್ ಗಳ ಸಪೋರ್ಟ್ ಸಿಕ್ಕಿದೆ.

.

 

ಇತ್ತೀಚಿನ ದಿನಗಳಲ್ಲಿ ಚಲನಚಿತ್ರ ನಿರ್ಮಾಣ, ನಿರ್ದೇಶನ, ಕಥೆ, ಚಿತ್ರಕಥೆ, ಸಂಭಾಷಣೆ, ವಿತರಣೆ ಹೀಗೆ ಚಿತ್ರ ನಿರ್ಮಾಣದ ಹಲವಾರು ವಿಭಾಗಗಳಲ್ಲಿ ನಿರ್ದೇಶಕರೊಬ್ಬರೇ ತೊಡಗಿಕೊಂಡು ಕೆಲಸ ಮಾಡುವುದು ಬೆಳೆದು ಬಂದಿದೆ. ಈಗಾಗಲೇ ಕ್ರೇಜಿಸ್ಟಾರ್ ರವಿಚಂದ್ರನ್, ಎಸ್. ನಾರಾಯಣ್‍ರಂಥ ತಂತ್ರಜ್ಞರು ಇದನ್ನು ಮಾಡಿ ತೋರಿಸಿದ್ದಾರೆ. ಈ ಸಾಲಿಗೆ ಈಗ ಮತ್ತೊಬ್ಬ ಪ್ರತಿಭೆ ಸೇರಿದ್ದಾರೆ. ಅವರ ಹೆಸರು ರವಿ ಶತಭಿಷ. ಇವರ ನಿರ್ಮಾಣ ಸಾರಥ್ಯದಲ್ಲಿ ಮೂಡಿಬರುತ್ತಿರುವ ಚಿತ್ರದ ಹೆಸರು ಪ್ರಸ್ತ. ಈ ಚಿತ್ರದ ಹಾಡುಗಳ ಅನಾವರಣ ಸಮಾರಂಭ ಇತ್ತೀಚೆಗೆ ನೆರವೇರಿತು. ಅಶ್‍ಬೆಲ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರದಲ್ಲಿ ಒಟ್ಟು 3 ಹಾಡುಗಳಿದ್ದು, ಮೋಹನ್, ಛಾಯಾಂಕ್ ಹಾಗೂ ಶಿವರಾಜ್ ಗುಬ್ಬಿ ಸಾಹಿತ್ಯ ರಚಿಸಿದ್ದಾರೆ.
.
ಪಕ್ಕಾ ಹಳ್ಳಿ ಲವ್ ಸ್ಟೋರಿ ಎಂಬ ಟ್ಯಾಗ್‍ಲೈನ್ ಹೊಂದಿರುವ ಈ ಚಿತ್ರದಲ್ಲಿ ಗ್ರಾಮೀಣ ಪರಿಸರದಲ್ಲಿ ನಡೆಯುವ ಒಂದು ತ್ರಿಕೋನ ಪ್ರೇಮಕಥಾನಕವನ್ನು ಹೇಳುವ ಪ್ರಯತ್ನವನ್ನು ನಿರ್ದೇಶಕ ರವಿ ಶತಭಿಷ ಅವರು ಮಾಡಿದ್ದಾರೆ. ಹಳ್ಳಿ ಪರಿಸರದಲ್ಲೇ ಬೆಳೆದು ಪ್ರೀತಿ ಅಂದ್ರೆ ತಮಾಷೆ ಅಂದುಕೊಂಡಿದ್ದ ನಾಯಕನಿಗೆ ಪ್ರೀತಿಯ ಮಧುರ ಅನುಭವ ಹಾಗೂ ಅದರ ಮಹತ್ವವನ್ನು ಚಿತ್ರದ ನಾಯಕಿ ತಿಳಿಸಿಕೊಡುತ್ತಾಳೆ. ಚಿತ್ರದ ಕೊನೆಯ ಭಾಗದ ಕಥೆ ನಡೆಯುವುದು ಪ್ರಸ್ತ ಎಂಬ ವಿಷಯದ ಮೇಲೆಯೇ, ಹಾಗಾಗಿ ಚಿತ್ರಕ್ಕೆ ಆ ಶೀರ್ಷಿಕೆಯನ್ನು ಇಟ್ಟಿರುವುದಾಗಿ ನಿರ್ದೇಶಕ ರವಿ ಶರಭಿಷ ಅವರ ಹಾಡುಗಳ ಸಿಡಿ ಬಿಡುಗಡೆಯ ಸಂದರ್ಭದಲ್ಲಿ ಹೇಳಿಕೊಂಡರು. ರವಿ ಶರಭಿಷ ಕಳೆದ ಏಳೆಂಟು ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅಭಿಜ್ಞ ಕ್ರಿಯೇಶನ್ಸ್ ಆರಂಭಿಸಿ ಅದರ ಮೂಲಕ ಒಂದಷ್ಟು ಕಿರುಚಿತ್ರಗಳನ್ನು ಕೂಡ ನಿರ್ಮಾಣ ಮಾಡಿದ್ದಾರೆ, ಆ ಮೂಲಕ ಒಂದಷ್ಟು ಹೊಸ ಪ್ರತಿಭೆಗಳಿಗೆ ಅವಕಾಶವನ್ನೂ ನೀಡಿದ್ದಾರೆ.
.

ಇದೇ ಮೊದಲಬಾರಿಗೆ ಚಿತ್ರ ನಿರ್ಮಾಣಕ್ಕೆ ಕೈ ಹಾಕಿ ಪ್ರಸ್ತ ಚಿತ್ರವನ್ನು ಹೊರತರುತ್ತಿದ್ದಾರೆ. ಈ ಚಿತ್ರದಲ್ಲಿ ವಿಶ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯರಾಗಿ ವರ್ಷಾ ಹಾಗೂ ಯಾದ್ವಿಕಾ ನಟಿಸಿದ್ದಾರೆ. ಅಲಂಕಾರ್ ಚಂದ್ರು ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ. ನಾಯಕ ವಿಶ್ ಮಾತನಾಡಿ ಈ ಹಿಂದೆ ನಾನು ಸ್ಟೈಲ್‍ರಾಜಾ ಎಂಬ ಚಿತ್ರದಲ್ಲಿ ಅಭಿನಯಿಸಿದ್ದೆ. ನಿರ್ದೇಶಕರು ಬಂದು ಈ ಕಥೆ ಹೇಳಿದರು, ಚಿತ್ರದಲ್ಲಿ ಯಾವುದೇ ಡಬಲ್ ಮೀನಿಂಗ್ ಡೈಲಾಗ್ ಇಲ್ಲ. ಕಥೆ ತುಂಬಾ ಚೆನ್ನಾಗಿದೆ. ಅಲ್ಲದೆ ಅಷ್ಟೇ ಸೊಗಸಾಗಿ ತೆರೆ ಮೇಲೆ ಕೂಡ ಮೂಡಿಬಂದಿದೆ. ಚಿತ್ರದ ಶೀರ್ಷಿಕೆಯ ಕಾರಣದಿಂದಲೇ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿದೆ. ಟೈಟಲ್ ಛೇಂಜ್ ಮಾಡಿಕೊಂಡರೆ ಯುಎ ನೀಡುತ್ತೇವೆ ಎಂದು ಹೇಳಿದ್ದಾರೆ ಎಂಬ ಮಾತನ್ನು ಹೇಳಿಕೊಂಡರು.

 

ಚಿನ್ನಾರಿಮುತ್ತ ವಿಜಯರಾಘವೇಂದ್ರ ನಟನೆಯ ಪರದೇಸಿ ಛಿ/o ಲಂಡನ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಯಿತು. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಎಸ್.ಎ. ಚಿನ್ನೇಗೌಡ ಹಾಗೂ ನಟಿ ಪ್ರಣೀತಾ ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದರು. ಡಿಸೆಂಬರ್ ತಿಂಗಳಿನಲ್ಲಿ ಪರದೇಸಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾನೆ.
.

ಈ ಚಿತ್ರದ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಎಂ. ರಾಜಶೇಖರ್ ಈ ಹಿಂದೆ ಈ ಸಂಭಾಷಣೆ ಹಾಗೂ ರಾಜ ಲವ್ಸ್ ರಾಧೆ ಚಿತ್ರಗಳನ್ನು ನಿರ್ದೇಶಿಸಿದ್ದರು. ಅವರ ಮೂರನೇ ಚಿತ್ರ ಪರದೇಸಿ ಛಿ/o ಲಂಡನ್. ಪರದೇಸಿ ಶಬ್ದಕ್ಕೆ ಎರಡು ಅರ್ಥಗಳಿವೆ ಪರದೇಶಕ್ಕೆ ಹೋದಾಗ ಹಾಗೂ ದಿಕ್ಕುದೆಸೆಯಿಲ್ಲದವ ಎಂದು ಹೇಳಬಹುದು. ಈ ಎರಡು ಶಬ್ದಗಳಿಗೂ ಕಥೆಯ ನಂಟಿದ್ದು, ಅದೆನೆಂದು ತಿಳಿಯಲು ಚಿತ್ರಮಂದಿರಕ್ಕೆ ಹೋಗಬೇಕು ಎನ್ನುತ್ತಾರೆ ನಿರ್ದೇಶಕರು.
.
ಬೆಂಗಳೂರು, ಮೈಸೂರು, ಸಿರಗುಪ್ಪ, ಪಾಂಡವಪುರ ಮೊದಲಾದ ಕಡೆಗಳಲ್ಲಿ 45 ದಿನಗಳ ಕಾಲ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಚಿತ್ರಕ್ಕೆ ಸಂಗೀತ ಸಂಯೋಜನೆ ವೀರ ಸಮರ್ಥ್ ಮಾಡಿದ್ದಾರೆ. ಚಿತ್ರದಲ್ಲಿ ನಾಲ್ಕು ಗೀತೆಗಳಿದ್ದು, ಕವಿರಾಜ್, ಯೋಗರಾಜ ಭಟ್, ಶಿವು ಬೆರಗಿ, ಡಾ|| ವಿ. ನಾಗೇಂದ್ರ ಪ್ರಸಾದ್, ಸಾಹಿತ್ಯ ರಚಿಸಿದ್ದು, ಶಂಶಾಕ್ ಶೇಷಗಿರಿ, ವಿಜಯಪ್ರಕಾಶ್, ರವೀಂದ್ರ ಸೊರಗಾವಿ, ಶಮಿತಾ ಮಲ್ನಾಡ್, ಅನುರಾಧ ಭಟ್, ಹೇಮಂತ್, ಗಂಗಮ್ಮ, ಚಿತ್ರಕ್ಕೆ ದನಿಗೂಡಿಸಿದ್ದಾರೆ. ಲಹರಿ ಆಡಿಯೋ ಮೂಲಕ ಚಿತ್ರದ ಹಾಡುಗಳು ಮಾರುಕಟ್ಟೆಗೆ ತಲುಪಿದೆ. ಚಿದಾನಂದ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ, ಪತ್ರಕರ್ತ ವಿಜಯ್ ಭರಮಸಾಗರ ಸಂಭಾಷಣೆ, ಕಲೈ ಮಾಸ್ಟರ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ.
.
ವೇದಿಕೆಯಲ್ಲಿದ್ದ ಲಹರಿ ವೇಲು ಮನ ಮೆಚ್ಚಿದ ಹುಡುಗಿ ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆಗೆ ಕೊಡುವ ಮೂಲಕ ವಜ್ರೇಶ್ವರಿ ಸಂಸ್ಥೆಯ ನಂಟು ಆರಂಭವಾಗಲು ಚಿನ್ನೇಗೌಡರು ನೆರವಾಗಿದ್ದರು ಎಂದು ಹೇಳಿದರು. ತಂದೆಯೇ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಮಾರಂಭದಲ್ಲಿ ವೇದಿಕೆ ಹಂಚಿಕೊಳ್ಳಲು ಮುಜುಗರ ಎಂದ ವಿಜಯರಾಘವೇಂದ್ರರವರು ತಂದೆ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನ ಅಲಂಕರಿಸಿದ ನಂತರ ಇದೇ ಮೊದಲಬಾರಿಗೆ ಒಟ್ಟಾಗಿ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದೇವೆ ಎಂದರು.
.

ಪರದೇಸಿ ಕೇರ್ ಆಫ್ ಲಂಡನ್ ಗೆ ವಿಜಯ್ ರಾಘವೇಂದ್ರ ನಾಯಕ,ರಾಶಿ ಚಿತ್ರದ ನಾಯಕಿ.
ಚಿತ್ರಕ್ಕೆ ಬದರಿ ನಾರಾಯಣ್ ಬಂಡವಾಳ ಹಾಕಿದ್ದಾರೆ. ನಿರ್ದೇಶಕರ ರಾಜಶೇಖರ್ ಅವರ ಸ್ನೇಹಿತರೂ ಹೌದು.
ಉಳಿದಂತೆ ತಾರಾಬಳಗದಲ್ಲಿ ಸುಚೇಂದ್ರ ಪ್ರಸಾದ್, ರಂಗಾಯಣ ರಘು, ಶೋಭರಾಜ್,ತಬಲನಾಣಿ, ಡ್ಯಾನಿ ಕುಟ್ಟಪ್ಪ ,ಸಂಗೀತ, ಪೆಟ್ರೋಲ್ ಪ್ರಸನ್ನ,ಕುರಿ ಸುನೀಲ್ ಮತ್ತಿತರಿದ್ದಾರೆ.

 
ರಿಯಾಲಿಟಿ ಶೋ ಗಳಲ್ಲಿ ನಿರೀಕ್ಷೆಗೂ ಮೀರಿತನ್ನದೇ ಸಂಚಲನ ಮೂಡಿಸಿದ ವಾಹಿನಿ ಜೀಕನ್ನಡ,, ಪ್ರೇಕ್ಷಕರ ಬೇಕು ಬೇಡಗಳನ್ನು ಅರ್ಥೈಸಿಕೊಂಡು ಇಲ್ಲಿಯವರೆಗೂ ಹತ್ತು ಹಲವು ಸದಭಿರುಚಿಯ ವಿಭಿನ್ನಪ್ರಯೋಗಗಳನ್ನು ಮಾಡುತ್ತ ಹೊಸ ದಾಖಲೆಗಳಿಗೆ ನಾಂದಿ ಹಾಡುತ್ತಿದೆ.
.
ರಿಯಾಲಿಟಿ ಶೋ ಚಿತ್ರಿಕರಣ ಮತ್ತು ಪ್ರಸಾರ ಎರಡೂ ಜನರಿಂದ ದೂರವಾಗಿ ನಡೆಯುವಂತ ಪ್ರಕ್ರಿಯೆ. ಇಲ್ಲಿ ಪ್ರೇಕ್ಷಕರಿಗು, ನಟರಿಗು ನೇರ ಮುಖಾಮುಖಿ ಇರುವುದಿಲ್ಲ,,ಆದರೆ ರಂಗಭೂಮಿ ಜನರ ನೇರ ಸಂಪರ್ಕಕ್ಕೆ ಮತ್ತು ಸಂವಹನಕ್ಕೆ ಒಳಪಡುವಂತದ್ದು.
.
“ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ ಶೋ” ಮುಗ್ದಮನಸ್ಸಿನ ಮಕ್ಕಳ ನಟನಾ ಕೌಶಲ್ಯಕ್ಕೆ ಮತ್ತು ಅವರ ಅಭಿನಯ ಸಾಮಾಥ್ರ್ಯಕ್ಕೆ ವೇದಿಕೆಯನ್ನು ಒದಗಿಸುವ ಒಂದು ಉತ್ತಮ ಶೋ. ಈ ಶೋ ಕೇವಲ ಮನರಂಜನೆಯನ್ನಷ್ಟೇ ನೀಡದೇ, ವಿನೂತನ, ವಿಭಿನ್ನ ಪ್ರಯೋಗಗಳನ್ನು ಮಾಡಿ ಹೊಸ ದಾಖಲೆಗಳಿಗೆ ನಾಂದಿ ಹಾಡಿದೆ.. ಅಭಿನಯದ ಜೊತೆಗೆ ರಂಗಭೂಮಿಯ ವಿವಿಧ ಮಜಲುಗಳನ್ನು ಪರಿಚಯಿಸುವುದರ ಜೊತೆಗೆ ಸಾಮಾಜಿಕ ಸಂದೇಶಗಳನ್ನು ನೀಡುತ್ತ ಪ್ರೇಕ್ಷಕ ಮಹಾಶಯರಿಂದ ಇದೊಂದು ಅದ್ಭುತವಾದ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕನ್ನಡ ಚಿತ್ರರಂಗಕ್ಕೆ ಹತ್ತು ಹಲವೂ ಬಾಲ ಕಲಾವಿದರನ್ನು ಕೊಡುಗೆಯಾಗಿ ನೀಡುವ ನಿಟ್ಟಿನಲ್ಲಿ ಆರಂಭವಾದ “ಡ್ರಾಮಾಜ್ಯೂನಿಯರ್ಸ್ ಸೀಸನ್ 1 ಮತ್ತು ಸೀಸನ್ 2” ಎಂಬ ಅತ್ಯದ್ಭುತ ಯಶಸ್ಸಿನ ಕಾರ್ಯಕ್ರಮವನ್ನು ಪರಿಚಯಿಸಿದಲ್ಲದೇ, ಅದುಕರ್ನಾಟಕವಲ್ಲದೇ ದೇಶ ವಿದೇಶz Àಕನ್ನಡಿಗರಲ್ಲೆರು ಅದರ ಒಂದು ಭಾಗವಾಗುವಂತೆ ಮಾಡಿದ ಕೀರ್ತಿ ಜೀ ವಾಹಿನಿಗೆ ಸಲ್ಲುತ್ತದೆ. ಅದರ ಮುಂದುವರಿದ ಅಧ್ಯಾಯವೆಂಬಂತೆ “ಡ್ರಾಮಾಜ್ಯೂನಿಯರ್ಸ್ ಸೀಸನ್ 3” ಆರಂಭಗೊಳ್ಳುತಿದ್ದು ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಸಾಕ್ಷಿಯಾಗುತ್ತಿದೆ.
.
ಕರ್ನಾಟಕದಾದ್ಯಂತ 30 ಜಿಲ್ಲೆಗಳಲ್ಲಿ ಆಡಿಷನ್ ಪ್ರಕ್ರಿಯೆ ನಡೆದಿದ್ದು, ಅದರಲ್ಲಿಅಭನಯಕೌಶಲ್ಯದ ಹಿನ್ನಲೆಯುಳ್ಳ 30 ಮಕ್ಕಳನ್ನು ಆಯ್ಕೆ ಮಾಡಿಕೊಂಡಿದ್ದು, ಆ 30 ಮಕ್ಕಳುಗಳು ಮೆಗಾ ಆಡಿಷನ್ ನಲ್ಲಿ ಭಾಗಿಯಾಗಲು ತಯಾರಾಗಿದ್ದಾರೆ.
.
ಹೊಸ ಹೊಸ ಪ್ರಯೋಗಗಳು, ಹೊಸ ಪ್ರಯತ್ನದೊಂದಿಗೆ ಹಿಂದೆಂದು ನೋಡಿರದಂತ, ಹಿಂದೆಂದು ಕೇಳಿರದಂತ ಮನರಂಜನೆ ಈ ಒಂದುಕಾರ್ಯಕ್ರಮದಲ್ಲಿ ನಿಮಗಾಗಿ ಎದುರುಗೊಳ್ಳುತ್ತಿದೆ.
ಇನ್ನುಳಿದಂತೆ ಕಾರ್ಯಕ್ರಮಕ್ಕೆ ಅಂದದ ಮೆರುಗೆಂಬಂತೆ ತ್ರಿವಳಿ ಜೆಡ್ಜಸ್ ಗಳಾದ “ಜೂಲಿ ಲಕ್ಷ್ಮಿ, ಮುಖ್ಯಮಂತ್ರಿಚಂದ್ರು ಹಾಗು ವಿಜಯರಾಘವೇಂದ್ರ” ರವರ ುಕಾರ್ಯಕ್ರಮದ ನಿರ್ಣಾಯಕರಾದರೆ ಮಕ್ಕಳಿಂದ ಹಿಡಿದು ವಯೋಮಾನದವರಿಗೆಲ್ಲರಿಗು ಪ್ರೀತಿ ಪಾತ್ರರಾದ“ಮಾಸ್ಟರ್‍ಆನಂದ್” ತಮ್ಮ ಮಾತಿನ ಚಟಾಕಿಯ ಮೂಲಕ ನಿರೂಪಣೆಯನ್ನು ನೀಡಲಿದ್ದಾರೆ.
“ಡ್ರಾಮಾ ಜ್ಯೂನಿಯರ್ಸ್ ಸೀಸನ್ 3 ಪುಟಾಣಿಗಳು” ಇದೇ ಅಕ್ಟೋಬರ್ 20 ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ, ನಿಮ್ಮ ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
#ZeeKannada #DramaJuniors #Cineloka
Page 8 of 43

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top