nata

ttm

adweb

udgharsha

 

ಚಿತ್ರ : ಇರುವುದೆಲ್ಲವ ಬಿಟ್ಟು
ನಿರ್ದೇಶಕ : ಕಾಂತಾ ಕನ್ನಲಿ
ನಿರ್ಮಾಪಕ : ದೇವರಾಜ್‌ ದಾವಣಗೆರೆ
ಸಂಗೀತ : ಶ್ರೀಧರ್‌ ಸಂಭ್ರಮ್‌
ಕ್ಯಾಮೆರಾ : ವಿಲಿಯಂ ಡೇವಿಡ್‌
ತಾರಾಗಣ : ಮೇಘನಾ ರಾಜ್‌, ಶ್ರೀ, ತಿಲಕ್‌, ಅಚ್ಯುತ್‌ಕುಮಾರ್‌, ಅರುಣಾ ಬಾಲರಾಜ್‌, ಅಭಿಷೇಕ್‌ ರಾಯಣ್ಣ


ಕಣ್ಣೀರು ಹಾಕಿಕೊಂಡು ದ್ವೇಷ ಸಾಧಿಸುವವರನ್ನು ನಾನು ನೋಡುತ್ತಿದ್ದೇನೆ ಎನ್ನುತ್ತಾನೆ ನಾಯಕ ಆಕಾಶ್‌, ಇಂತಹ ಸಾಕಷ್ಟು ಭಾವಾನತ್ಮಕ ಡೈಲಾಗ್‌ಗಳಿಂದ ಇರುವುದೆಲ್ಲವ ಬಿಟ್ಟು ಸಿನಿಮಾ ಗಮನ ಸೆಳೆಯುತ್ತದೆ. ಸಂಬಂಧಗಳಲ್ಲಿ ಸ್ವಾಭಿಮಾನಕ್ಕಿಂತ ಪ್ರೀತಿ ಮುಖ್ಯ ಎಂದು ಹೇಳುತ್ತದೆ ಈ ಸಿನಿಮಾ.
.

ತನ್ನ ಕರಿಯರ್‌, ಕಾರ್ಪೋರೇಟ್‌ ಲೈಫ್‌, ಐಷರಾಮಿ ಬದುಕಿನ ಹಿಂದೆ ಓಡುವ ಪೂರ್ವಿ( ಮೇಘನಾರಾಜ್‌)ಗೆ ಬೇರೆಯವರಿಂದ ಆರ್ಡರ್‌ ಮಾಡಿಕೊಳ್ಳುವ ಬದಲಿಗೆ ತಾನೇ ಆರ್ಡರ್‌ ಮಾಡುವ ಸ್ಥಾನಕ್ಕೆ ಹೋಗಬೇಕು ಎಂಬ ಆಸೆ ಇರುತ್ತದೆ. ಅದನ್ನು ಆಕೆ ಸಾಧಿಸುತ್ತಾಳೆ. ಈ ಸಮಯದಲ್ಲಿ ಆಕೆಗೆ ದೇವ್‌ (ತಿಲಕ್‌) ನ ಪರಿಚಯವಾಗುತ್ತದೆ. ಇವರಿಬ್ಬರ ನಡುವೆ ಪ್ರೇಮ, ಪ್ರೀತಿ ಪ್ರಣಯ ಎಲ್ಲವೂ ಆಗುತ್ತದೆ ಆದರೆ ಮದುವೆ ಆಗುವುದಿಲ್ಲ. ಮದುವೆ ಎಂಬುದನ್ನು ಇವರಿಬ್ಬರು ನಂಬುವುದಿಲ್ಲ. ಆದರೆ ಈ ವಿಷಯ ಪೂರ್ವಿ ತಂದೆಗೆ ತಿಳಿದು, ಬೆಂಗಳೂರಿಗೆ ಬಂದು ಜಗಳ ಮಾಡುತ್ತಾರೆ. ಪೂರ್ವಿ ತನ್ನ ಪಾಲಿಗೆ ಸತ್ತಳು ಎಂದೇ ಆ ತಂದೆ ನಿರ್ಧಾರ ಮಾಡುತ್ತಾರೆ. ಇದೇ ಸಮಯದಲ್ಲಿ ಪೂರ್ವಿ ಗರ್ಭಿಣಿಯಾಗುತ್ತಾಳೆ, ಆಗ ದೇವ್‌ನೊಂದಿಗೆ ಯಾವುದೋ ವಿಷಯಕ್ಕೆ ಜಗಳ ಮಾಡಿಕೊಂಡು ದೂರವಾಗುತ್ತಾಳೆ. ತಂದೆಯ ಪ್ರೀತಿ, ಪ್ರೇಮಿಯ ಪ್ರೀತಿ ಎಲ್ಲವನ್ನು ಕಳೆದುಕೊಂಡ ಪೂರ್ವಿ ವೃತ್ತಿಯಲ್ಲಿ ಬೆಳೆಯುತ್ತಾ ಹೋಗುತ್ತಾಳೆ, ಆದರೆ ಪರ್ಸನಲ್‌ ಆಗಿ ಕುಗ್ಗಿ ಹೋಗುತ್ತಾಳೆ. ಈ ಸಮಯದಲ್ಲಿ ಆಕಾಶ್‌ ( ಶ್ರೀ) ಸಿಕ್ಕು, ಪೂರ್ವಿ ಬದುಕಲ್ಲಿ ತಂಪು ಗಾಳಿ ಬೀಸುವಂತೆ ಮಾಡುತ್ತಾನೆ. ಆದರೆ ಪೂರ್ವಿ ತನ್ನ ತಂದೆಯ ಜತೆ ಒಂದಾಗುತ್ತಾಳಾ, ಆಕಾಶ್‌ನನ್ನು ಮದುವೆ ಆಗುತ್ತಾಳಾ ಎಂಬುದಕ್ಕೆ ಸಿನಿಮಾ ನೋಡಬೇಕು.
.

ಹೆಸರು, ಹಣ ಎಲ್ಲದಕ್ಕಿಂತ ಸಂಬಂಧಗಳು ಎಷ್ಟು ಮುಖ್ಯ ಎಂಬುದನ್ನು ನಿರ್ದೇಶಕ ಕಾಂತಾ ಕನ್ನಲಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಕಾಂತಾ ಕನ್ನಲಿಯವರ ಕಲ್ಪನೆಗೆ ತಕ್ಕಂತೆ ಎಲ್ಲ ನಟ ನಟಿಯರು ಕೆಲಸ ಮಾಡಿದ್ದಾರೆ. ಯಾರು ನಿರೀಕ್ಷೆ ಮಾಡದಂತಹ ಕ್ಲೈಮ್ಯಾಕ್ಸ್‌ನಿಂದ ಪ್ರೇಕ್ಷಕರಿಗೆ ಅಚ್ಚರಿ ಮೂಡುವಂತೆ ಮಾಡುತ್ತಾರೆ ನಿರ್ದೇಶಕರು.
.

ನಟಿ ಮೇಘನಾ ರಾಜ್‌ ತಮ್ಮ ಅತ್ಯುತ್ತಮ ನಟನೆಯನ್ನು ಮತ್ತೊಮ್ಮೆ ಇಲ್ಲಿ ಪ್ರದರ್ಶನ ಮಾಡಿದ್ದಾರೆ. ನವ ನಟ ಶ್ರೀಗೆ ಇದು ಹೊಸ ಪ್ರಯತ್ನವಾದರೂ ಅದರಲ್ಲೇ ಅವರು ಸೆಂಚುರಿ ಬಾರಿಸಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿಯಾಗಿ ನಿಲ್ಲಬಲ್ಲ ಎಲ್ಲ ರೀತಿಯ ಲಕ್ಷಣಗಳು ಅವರ ನಟನೆ ಮತ್ತು ಲುಕ್ಸ್‌ನಲ್ಲಿದೆ. ತಿಲಕ್‌ ಮತ್ತು ಅಚ್ಯುತ್‌ಕುಮಾರ್‌ , ಅರುಣಾ ಬಾಲರಾಜ್‌ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.
.

ಶ್ರೀಧರ್‌ ಸಂಭ್ರಮ್‌ ಸಂಗೀತ ನಿಜಕ್ಕೂ ಕಾಡುತ್ತದೆ. ವಿಲಿಯಂ ಡೇವಿಡ್‌ ಅವರ ಕ್ಯಾಮೆರಾ ಎಲ್ಲರ ಭಾವನೆಗಳನ್ನು ಅದ್ಭುತವಾಗಿ ಸೆರೆ ಹಿಡಿದಿದೆ. ಜಲ್ಸಾ ಸಿನಿಮಾ ಮೂಲಕ ಒಂದಷ್ಟು ಭರವಸೆ ಮೂಡಿಸಿದ್ದ ನಿರ್ದೇಶಕ ಕಾಂತಾ ಕನ್ನಲಿ ಈ ಸಿನಿಮಾ ಮೂಲಕ ತಾನೊಬ್ಬ ಉತ್ತಮ ತಂತ್ರಜ್ಞ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಒಂದಷ್ಟು ಒಳ್ಳೆಯ ವಿಷಯವನ್ನು ಹೇಳಲು ಒಳ್ಳೆ ನಟ ನಟಿಯರನ್ನು ಆಯ್ಕೆ ಮಾಡಿಕೊಂಡು ನೀಟಾದ ಚಿತ್ರ ಮಾಡಿದ್ದಾರವರು.
.
ಈ ವೀಕೆಂಡ್‌ನಲ್ಲಿ ಕುಟುಂಬ ಸಮೇತ ಈ ಸಿನಿಮಾವನ್ನು ನೋಡಬಹುದು.
.
ರೇಟಿಂಗ್ - 3.25/5

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top