tarakaasura

ttm

adweb

udgharsha

 
ರಾಜಕುಮಾರದ ನಂತರ ಸಂತೋಷ್‌ ಆನಂದ್‌ರಾಮ್‌ ಮತ್ತು ಪವರ್ ಸ್ಟಾರ್  ಪುನೀತ್‌ರಾಜ್‌ಕುಮಾರ್‌ ಮತ್ತೆ ಒಂದಾಗಿರುವ ಯುವರತ್ನ ಸಿನಿಮಾದ ಮುಹೂರ್ತ ಬೆಂಗಳೂರಿನ ಪಂಚಮುಖ ಗಣೇಶ ದೇವಸ್ಥಾನದಲ್ಲಿ ಸರಳವಾಗಿ ಬುಧವಾರ ನಡೆದಿದೆ.
yuva rathan.JPG7
.
ಪುನೀತ್‌ರಾಜ್‌ಕುಮಾರ್‌ ಪತ್ನಿ ಅಶ್ವಿನಿ ಕ್ಯಾಮೆರ ಬಟನ್‌ ಪ್ರೆಸ್‌ ಮಾಡುವ ಮೂಲಕ ಸಿನಿಮಾಗೆ ಚಾಲನೆ ನೀಡಿದ್ದಾರೆ.  ಕೆಜಿಎಫ್‌, ರಾಜಕುಮಾರ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ವಿಜಯ್‌ ಕಿರಗಂದೂರು ಅವರೇ ಈ ಚಿತ್ರಕ್ಕೂ ಹಣ ಹಾಕುತ್ತಿದ್ದಾರೆ.
.
ಕಳೆದ ಬಾರಿ ಫ್ಯಾಮಿಲಿ ಡ್ರಾಮಾ ಹೇಳಿ ಸೂಪರ್‌ ಡ್ಯೂಪರ್‌ ಹಿಟ್‌ ಮಾಡಿದ್ದ ಸಂತೋಷ್‌, ಈ ಬಾರಿ ಅಪ್ಪುಗಾಗಿ ಯಾವ ಥರಹದ ಕಥೆ ಮಾಡಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಸದ್ಯದಲ್ಲೇ ಉಳಿದ ತಾರಾಗಣದ ಮಾಹಿತಿಯನ್ನು ಸಂತೋಷ್‌ ಹಂಚಿಕೊಳ್ಳಲಿದ್ದಾರಂತೆ. 
yuva rathan11111

 

ಪವನ್‌ ಒಡೆಯರ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ನಟ ಸಾರ್ವಭೌಮ ಚಿತ್ರದ ಹಾಡಿನ ಚಿತ್ರೀಕರಣ ಚಿಕ್ಕಮಗಳೂರು, ಹೊರನಾಡು, ಕಳಸ ಸುತ್ತಮುತ್ತ ನಡೆಯುತ್ತಿದೆ.
.
ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಮತ್ತು  ನಟಿ ರಚಿತಾ ರಾಮ್‌ ಈ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಪ್ಪು ಈ ಸಿನಿಮಾದಲ್ಲಿ ಪೋಟೋಗ್ರಫರ್‌ ಪಾತ್ರದಲ್ಲಿ ನಟಿಸಿದ್ದು, ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣ ಮಾಡುತ್ತಿದ್ದಾರೆ.

.

ಶೂಟಿಂಗ್‌ನಲ್ಲಿ ಬಿಡುವು ಮಾಡಿಕೊಂಡು ಪುನೀತ್‌ ಅವರು ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದಿದ್ದಾರೆ.

 

ಪುನೀತ್‌ರಾಜ್‌ಕುಮಾರ್‌ ಮತ್ತು ಸಂತೋಷ್‌ ಆನಂದ್‌ರಾಮ್‌ ಕಾಂಬಿನೇಶನ್‌ನ ಹೊಸ ಚಿತ್ರದಲ್ಲಿ ಪೊಲಿಟಿಕಲ್‌ ಡ್ರಾಮಾ ಜಾನರ್ ಕತೆ ಇದೆಯಂತೆ.

"ರಾಜಕುಮಾರ" ಮೂಲಕ 50 ಕೋಟಿ ಕ್ಲಬ್‌ ಓಪನ್‌ ಮಾಡಿದ ಈ ಜೋಡಿಯ ಹೊಸ ಚಿತ್ರದ ಟೈಟಲ್‌ ನವೆಂಬರ್‌ 1ರಂದು ಅನೌನ್ಸ್‌ ಆಗಲಿದೆ. ಪುನೀತ್‌ರಾಜ್‌ಕುಮಾರ್‌ ಅವರ ಅಭಿಮಾನಿಗಳು ಈ ಟೈಟಲ್‌ನ್ನು ಲಾಂಚ್‌ ಮಾಡಲಿದ್ದಾರೆ.

ಹೊಸ ಸಿನಿಮಾದಲ್ಲಿ ಕಥೆ ಏನು ಇರಲಿದೆ ಎಂಬ ಅಭಿಮಾನಿಗಳು ಪ್ರಶ್ನೆ ಕೇಳುತ್ತಲೇ ಇದ್ದಾರೆ. ಚಿತ್ರದಲ್ಲಿ ಫ್ಯಾಮಿಲಿ ಮತ್ತು ಪೊಲಿಟಿಕಲ್‌ ಡ್ರಾಮಾ ಇರಲಿದೆ ಎಂಬ ಸುದ್ದಿ ಹಬ್ಬಿದೆ.

"ರಾಜಕುಮಾರ" ಚಿತ್ರವನ್ನು ನಿರ್ಮಾಣ ಮಾಡಿದ್ದ ವಿಜಯ್‌ ಕಿರಗಂದೂರು ಅವರೇ ಹೊಸ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ.

 

ಸಂತೋಷ್‌ ಆನಂದ್‌ರಾಮ್‌ ಮತ್ತು ಪುನೀತ್‌ರಾಜ್‌ಕುಮಾರ್‌ ಕಾಂಬಿನೇಶನ್‌ ಸಿನಿಮಾದ ಟೈಟಲ್‌ ಲಾಂಚ್‌ ದಿನಾಂಕವನ್ನು ಅಭಿಮಾನಿಯೊಬ್ಬರು, ಅ.10ಕ್ಕೆ ಹೇಳಲಿದ್ದಾರಂತೆ.
.

ಹೌದು, ರಾಜಕುಮಾರ ನಂತರ ಈ ಜೋಡಿ ಒಂದಾಗಿದ್ದು, ಆ ಸಿನಿಮಾ ಟೈಟಲ್‌ ಬಗ್ಗೆ ಎಲ್ಲರಿಗೂ ಕುತೂಹಲ ಇದೆ. ಹಾಗಾಗಿ ಟೈಟಲ್‌ ಯಾವಾಗ ಲಾಂಚ್‌ ಮಾಡುತ್ತೇನೆ ಎಂಬುದನ್ನು ಚಿತ್ರತಂಡ ಅ.10ರಂದು ಅಭಿಮಾನಿಯ ಕೈಯಲ್ಲಿ ರಿವೀಲ್‌ ಮಾಡುತ್ತಾರಂತೆ. ಟೈಟಲ್ ಕೂಡ ಅಭಿಮಾನಿಯೊಬ್ಬರಿಂದ ಬಿಡುಗಡೆ ಮಾಡಿಸಲು ಚಿತ್ರತಂಡ ನಿರ್ಧರಿಸಿದೆ
.
ಈ ಸಿನಿಮಾವನ್ನು ಹೊಂಬಾಳೆ ಫಿಲಂಸ್‌ ಬ್ಯಾನರ್‌ನಡಿ ವಿಜಯ್‌ ಕಿರಗಂದೂರು ನಿರ್ಮಾಣ ಮಾಡುತ್ತಿದ್ದಾರೆ. ಡಿಸೆಂಬರ್‌ನಲ್ಲಿ ಈ ಚಿತ್ರದ ಶೂಟಿಂಗ್‌ ಆರಂಭವಾಗುತ್ತದೆ.

ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ ಆರಂಭಿಸಿರುವ ಪಿಆರ್ಕೆ ಪ್ರೊಡಕ್ಷನ್‌ ಹೌಸ್‌ನಲ್ಲಿ 'ಹಂಬಲ್‌ ಪೊಲಿಟೀಶಿಯನ್‌ ನೋಗರಾಜ್‌' ಖ್ಯಾತಿಯ ದಾನಿಷ್ ನಾಯಕರಾಗುವ ಹೊಸ ಸಿನಿಮಾ ನಿರ್ಮಾಣವಾಗಲಿದೆ.

.

ಈ ಸಿನಿಮಾವನ್ನು ಹ್ಯಾಪಿ ನ್ಯೂ ಇಯರ್‌ ಸಿನಿಮಾ ಮೂಲಕ ಗಮನ ಸೆಳೆದಿದ್ದ ಪನ್ನಗಭರಣ ನಿರ್ದೇಶನ ಮಾಡಲಿದ್ದಾರೆ.

ನೋಗ್‌ರಾಜ್‌ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಿದ ದಾನಿಶ್‌ರನ್ನು ಈ ಸಿನಿಮಾದ ಮೂಲಕ ಬೇರೆಯದ್ದೇ ರೂಪದಲ್ಲಿ ತೋರಿಸಲಿದ್ದೇನೆ ಎನ್ನುತ್ತಾರೆ ನಿರ್ದೇಶಕ ಪನ್ನಗಭರಣ.

.

ಈ ಮೂಲಕ ಪುನೀತ್‌ರಾಜ್‌ಕುಮಾರ್‌ ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ಹೊಸ ರೀತಿಯ ಸಿನಿಮಾಗಳಿಗೆ ಬಂಡವಾಳ ಹೂಡುವುದನ್ನು ಮುಂದುವರೆಸಿದ್ದಾರೆ.

 
ನಿರ್ದೇಶಕ ಸೂರಿ ಈಗ ಟಗರು ಚಿತ್ರದ ಯಶಸ್ಸಿನಲ್ಲಿದ್ದಾರೆ, ಭಾನುವಾರ ನೂರನೇ ದಿನದ ಸಂಭ್ರಮವನ್ನು ಅಭಿಮಾನಿಗಳ ಜತೆ ಹಂಚಿಕೊಂಡ ಸೂರಿ, ಶಿವರಾಜ್‌ಕುಮಾರ್‌ ಮತ್ತು ಅಪ್ಪು ಅವರಿಗಾಗಿ ಟಗರು-2 ಚಿತ್ರ ಮಾಡುವುದಾಗಿ ಹೇಳಿದ್ದಾರೆ.
.
ಈ ವರ್ಷ ಶತದಿನ ಪೂರೈಸಿದ ಮೊದಲ ಚಿತ್ರವಾಗಿ ಟಗರು ಹೊರ ಹೊಮ್ಮಿದೆ. ಜನ ಈಗ ಟಗರು ಸಿಕ್ವೇಲ್‌ ಮಾಡಿ ಎಂದು ಸೂರಿಯವರನ್ನು ಕೇಳುತ್ತಿದ್ದಾರಂತೆ.
ಟಗರು 2 ಮಾಡಬೇಕೆಂಬ ಆಸೆ ನನಗೂ ಇದ್ದು, ಅದು ಟಗರುಗಿಂತಲೂ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಬೇಕು, ಅಲ್ಲದೇ ಇದು ಟಗರು ಚಿತ್ರದ ಮುಂದಿನ ಭಾಗವಲ್ಲ ಅಲ್ಲಿ ಎರಡು ಖಡಕ್‌ ಟಗರುಗಳ ಕಥೆ ಹೇಳಲು ಇಷ್ಟಪಡುತ್ತೇನೆ ಆ ಎರಡು ಟಗರುಗಳು ಪುನೀತ್‌ ಮತ್ತು ಶಿವರಾಜ್‌ಕುಮಾರ್‌ ಆಗಿರುತ್ತಾರೆ ಎಂದು ಹೇಳಿದ್ದಾರೆ ಸೂರಿ.
.
ನಿರ್ದೇಶಕ ಸೂರಿ ಶಿವಣ್ಣ ಮತ್ತು ಅಪ್ಪು ಇಬ್ಬರನ್ನು ತಲೆಯಲ್ಲಿ ಇಟ್ಟುಕೊಂಡು ಕಥೆ ಮಾಡಬೇಕು. ಇಬ್ಬರ ಅಭಿಮಾನಿಗಳನ್ನು ಅವರು ತೃಪ್ತಿಪಡಿಸಬೇಕು. ಸೂರಿ ಈಗ ಧನಂಜಯ ಮತ್ತು ನಿವೇದಿತಾ ಜತೆ 'ಪಾಪ್‌ ಕಾರ್ನ್‌ ಮಂಕಿ ಟೈಗರ್‌' ಸಿನಿಮಾ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಅಪ್ಪು ಮತ್ತು ಶಿವಣ್ಣ ಒಂದೇ ಸಿನಿಮಾದಲ್ಲಿ ನಟಿಸುವ ದಿನಗಳು ಬಹಳ ದೂರವಿಲ್ಲ .
.
#Tagaru #Cineloka #PowerStarPuneethRajkumar #KarunadaChakravarthy #DrShivanna

ಸ್ಯಾಂಡಲ್‌ವುಡ್‌ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್‌ ಮತ್ತು ನಿಶ್ವಿಕಾ ನಾಯ್ಡು ನಟನೆಯ ಪಡ್ಡೆ ಹುಲಿ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ಆಚರಿಸಿಕೊಂಡಿದೆ.

ಕೆ. ಮಂಜು ಪುತ್ರ ಶ್ರೇಯಸ್‌ಗೆ ಇದು ಡೆಬ್ಯೂ ಮೂವಿ ಆಗಿದ್ದು, ನಟ ಸುದೀಪ್‌,ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ಸಾಕಷ್ಟು ಮಂದಿ ಚಿತ್ರರಂಗದ ಗಣ್ಯರು ಬಂದು ಶ್ರೇಯಸ್‌ಗೆ ವಿಷ್‌ ಮಾಡಿದರು.

 

ಈ ಚಿತ್ರದ ನಾಯಕಿ ನಿಶ್ವಿಕಾ ನಾಯ್ಡು ‘ವಾಸು - ಪಕ್ಕಾ ಕಮರ್ಷಿಯಲ್‌’ ಮತ್ತು ‘ಅಮ್ಮ ಐ ಲವ್‌ ಯು’ ಎಂಬ ಎರಡು ಚಿತ್ರಗಳಲ್ಲಿ ನಿಶ್ವಿಕಾ ನಾಯಕಿಯಾಗಿ ನಟಿಸಿದ್ದರು. ಆ ಎರಡು ಚಿತ್ರಗಳು ಬಿಡುಗಡೆಯಾಗುವ ಮುನ್ನವೇ ‘ಪಡ್ಡೆ ಹುಲಿ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

 

ಚಿತ್ರವನ್ನು ಗುರು ದೇಶಪಾಂಡೆ ನಿರ್ದೇಶಿಸುತ್ತಿದ್ದು, ಉಳಿದ ತಾರಾಗಣದ ಆಯ್ಕೆ ನಡೆಯುತ್ತಿದೆ. ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ ಮತ್ತು ಕೆ.ಎಸ್‌. ಚಂದ್ರಶೇಖರ್‌ ಛಾಯಾಗ್ರಹಣ ಇದೆ. ರಮೇಶ್‌ರೆಡ್ಡಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

 

ಪಡ್ಡೆ ಹುಲಿ’ ಚಿತ್ರವು ಇವತ್ತಿನ ಟ್ರೆಂಡ್‌ಗೆ ಇರುವ ಒಂದು ಕಾಲೇಜ್‌ ಲವ್‌ ಸ್ಟೋರಿ ಚಿತ್ರವಾಗಿರುತ್ತದೆ ಎನ್ನುತ್ತಾರೆ ನಿರ್ದೇಶಕ ಗುರು ದೇಶಪಾಂಡೆ. ಇಲ್ಲೊಂದು ಯೂಥ್‌ ಸ್ಟೋರಿ ಇರಲಿದ್ದು, ಈಗಿನ ಕಾಲದ ಪ್ರೇಮ ಲೋಕ’ ಎನ್ನುತ್ತಾರೆ ಗುರು ದೇಶಪಾಂಡೆ.

ಈ ಚಿತ್ರಕ್ಕಾಗಿ ಈಗಾಗಲೇ ಅದ್ಧೂರಿಯಾಗಿ ಫೋಟೋ ಶೂಟ್‌, ಪ್ರೋಮೋ ಶೂಟ್‌ನ್ನು ನಿರ್ದೇಶಕರು ಮಾಡಿಸಿದ್ದಾರೆ.

 
ಪುನೀತ್‌ ರಾಜ್‌ಕುಮಾರ್‌ ಅವರ 28 ನೇ ಚಿತ್ರದ ನಾಯಕಿ ಬದಲಾಗಿದ್ದಾರೆ. ಸೋಮವಾರದಿಂದ ಚಿತ್ರೀಕರಣ ಆರಂಭಿಸಿರುವ ಚಿತ್ರಕ್ಕೆ ಈ ಮೊದಲು ತೆಲುಗಿನ ಪ್ರಿಯಾಂಕ ಜ್ವಾಲಾಕರ್‌ ನಾಯಕಿಯಾಗಿದ್ದರು. ಈಗ ಅದೇ ಜಾಗಕ್ಕೆ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಎಂಟ್ರಿ ಕೊಟ್ಟಿದ್ದಾರೆ.
 
ಪವನ್‌ ಒಡೆಯರ್ ನಿರ್ದೇಶನದ ರಾಕ್‌ಲೈನ್‌ ವೆಂಕಟೇಶ್‌ ಉಸ್ತುವಾರಿಯಲ್ಲಿ ನಿರ್ಮಾಣವಾಗುತ್ತಿರು ಈ ಚಿತ್ರಕ್ಕೆ ಮೊದಲು ಪ್ರಿಯಾಂಕ ಜ್ವಾಲಕರ್‌ ಆಯ್ಕೆಯಾಗಿದ್ದರು. ಆದರೆ ಡೇಟ್ಸ್‌ ಕ್ಲಾಶ್‌ ಆಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ ರಚಿತಾ ರಾಮ್‌ ಮೊರೆ ಹೋಗಿದೆ.
 
ಮಂಗಳವಾರದಿಂದ ರಚಿತಾ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದು, ಅಪ್ಪು ಮತ್ತು ರಚಿತಾ ಕಾಂಬಿನೇಶನ್‌ನ ಒಂದಷ್ಟು ದೃಶ್ಯಗಳನ್ನು ಯಲಹಂಕ ಬಳಿ ಶೂಟಿಂಗ್‌ ಮಾಡಿಕೊಂಡಿದ್ದಾರೆ ನಿರ್ದೇಶಕ ಪವನ್‌ ಒಡೆಯರ್‌. ರಚಿತಾ ರಾಮ್‌ ಈ ಹಿಂದೆ ಚಕ್ರವ್ಯೂಹದಲ್ಲಿ ಪುನೀತ್‌ ಜತೆ ರೊಮ್ಯಾನ್ಸ್‌ ಮಾಡಿದ್ದರು.
 
ರಚಿತಾ ರಾಮ್‌ ನಟನೆಯ 'ಜಾನಿ ಜಾನಿ ಎಸ್‌ ಪಪ್ಪಾ' ಚಿತ್ರೀಕರಣ ಇತ್ತೀಚೆಗೆ ಕಂಪ್ಲೀಟ್‌ ಆಯಿತು. ಇನ್ನು ನೀನಾಸಂ ಸತೀಶ್‌ ನಾಯಕರಾಗಿರುವ 'ಅಯೋಗ್ಯ'ದಲ್ಲಿಯೂ ರಚಿತಾ ರಾಮ್‌ ನಾಯಕಿಯಾಗಿದ್ದಾರೆ. ಒಟ್ಟಿನಲ್ಲಿ ಅಪ್ಪು ಮತ್ತು ರಚಿತಾ ಮತ್ತೆ ಒಂದಾಗಿರುವು ಇಬ್ಬರ ಅಭಿಮಾನಿಗಳಿಗೂ ಖುಷಿ ತಂದಿದೆ.
 
ಈ ಬಾರಿ ಯುಗಾದಿ ಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಮತ್ತು ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ ಮನೆಗಳಿಗೆ ಬರಲಿದ್ದಾರೆ. ಹೌದು ಈ ಇಬ್ಬರು ನಟಿಸಿದ ಸೂಪರ್‌ ಹಿಟ್‌ ಚಿತ್ರಗಳಾದ ಅಂಜನಿಪುತ್ರ ಮತ್ತು ತಾರಕ್‌ ಸಿನಿಮಾಗಳು ಟಿವಿಯಲ್ಲಿ ಪ್ರಸಾರವಾಗುತ್ತಿದೆ.
ದರ್ಶನ್‌ ನಟನೆಯ ತಾರಕ್‌ ಚಿತ್ರ ಸ್ಟಾರ್‌ ಸುವರ್ಣದಲ್ಲಿ ಯುಗಾದಿ ಹಬ್ಬದ ದಿನ ಪ್ರಸಾರವಾಗಲಿದೆ. ಪುನೀತ್‌ ರಾಜ್‌ಕುಮಾರ್‌ ಅವರ ‘ಅಂಜನಿಪುತ್ರ’ ಸಿನಿಮಾ ಕೂಡ ಅದೇ ದಿನ ಪ್ರಸಾರ ಆಗುತ್ತಿದೆ. ಯುಗಾದಿ ಹಬ್ಬಕ್ಕೆ ಉದಯ ಟಿವಿಯಲ್ಲಿ ಪುನೀತ್‌ ಸಿನಿಮಾ ಸಂಜೆ ಆರು ಗಂಟೆಗೆ ಟೆಲಿಕಾಸ್ಟ್‌ ಆಗುತ್ತಿದೆ.
ಕನ್ನಡದ ಸ್ಟಾರ್‌ ನಟರಾದ ದರ್ಶನ್‌ ಮತ್ತು ಪುನೀತ್‌ ಅವರ ಸಿನಿಮಾಗಳು ಒಂದೇ ದಿನ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿದ್ದು, ಯಾವ ಸಿನಿಮಾಗೆ ಟಿಆರ್‌ಪಿ ಹೆಚ್ಚಾಗಿ ಬರುತ್ತದೆ ಎಂಬ ಲೆಕ್ಕಾಚಾರ ಈಗಾಗಲೇ ಆರಂಭವಾಗಿದೆ.
ಇಲ್ಲಿಯವರೆಗೆ ಕನ್ನಡ ಕಿರುತೆರೆಯಲ್ಲಿ ‘ದೊಡ್ಮೆನೆ ಹುಡ್ಗ’ ಸಿನಿಮಾ ಅತಿ ಹೆಚ್ಚು ಟಿ ಆರ್‌ ಪಿ ಪಡೆದ ಸಿನಿಮಾವಾಗಿ ರೆಕಾರ್ಡ್‌ ಮಾಡಿದೆ.
ಒಟ್ಟಿನಲ್ಲಿ ಯುಗಾದ ಹಬ್ಬದ ದಿನ ಚಾಲೆಂಜಿಂಗ್ ಸ್ಟಾರ್ ಮತ್ತು ಪವರ್ ಸ್ಟಾರ್ ಅಭಿಮಾನಿಗಳಿಗೆ ನಿಜಕ್ಕೂ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ.
#AnjaniPutra #Tarak #ChallengingStarDarshan #PowerStarPuneethRajkumar #Cineloka

ಕನ್ನಡದಲ್ಲಿ ಈಗಾಗಲೇ ಮಲ್ಟಿಸ್ಟಾರ್ ಸಿನಿಮಾಗಳು ಹೆಚ್ಚಾಗುತ್ತಿದ್ದು ಸ್ಟಾರ್ ನಟರು ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ, ಮತ್ತೊಮ್ಮೆ ಕನ್ನಡ ದಲ್ಲಿ ಅಂತಹ ಪ್ರಯತ್ನ ಮಾಡಲಾಗಿದೆ.

  •  Start 
  •  Prev 
  •  1  2 
  •  Next 
  •  End 
Page 1 of 2

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top