ಶೃಂಗಾರದ ಹೊಂಗೆ ಮರದ ಹಾಡಿನ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹಂಗಾಮ ಎಬ್ಬಿಸಿದ ಭಟ್ಟರ 'ಪಂಚತಂತ್ರ' ಸಿನಿಮಾ ಫೆಬ್ರವರಿಗೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
.
ಈಗಾಗಲೇ ಟೀಸರ್ ಮೂಲಕವೂ ಭಟ್ಟರು ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದ್ದಾರೆ. ವಿಹಾನ್ಗೌಡ ಮತ್ತು ಸೋನಲ್ ಮಂಥೇರೋ , ಅಕ್ಷರಗೌಡ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ಈ ಸಿನಿಮಾದ ಕಥೆ ಮಾಸ್ತಿ ಮತ್ತು ಕಾಂತರಾಜ್ ಅವರದ್ದು. ವಯೋವೃದ್ಧರು ಮತ್ತು ಯುವಕರ ನಡುವೆ ನಡೆಯುವ ಕಥೆ ಇದಾಗಿದ್ದು,ಇದರಲ್ಲಿ ಕಾರ್ ರೇಸ್ ಪ್ರಮುಖ ಅಂಶವಾಗಿದೆ.
.
ಹರಿಕೃಷ್ಣ ಸಂಗೀತ ನೀಡಿರುವ ಈ ಚಿತ್ರದಲ್ಲಿ ಮೆಲೋಡಿ ಜತೆಗೆ ಮಾಸ್ ಹಾಡುಗಳು ಇವೆಯಂತೆ. ಹರಿಪ್ರಸಾದ್ ಜಯಣ್ಣ ಮತ್ತು ಹೇಮಂತ್ ಪರಾಡ್ಕರ್ ಬಂಡವಾಳ ಹೂಡಿದ್ದಾರೆ. ಯೂತ್ ಮತ್ತು ಫ್ಯಾಮಿಲಿಗೆ ಈ ಚಿತ್ರ ಇಷ್ಟವಾಗುತ್ತದೆ.
.
ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಪ್ರೇಮಿಗಳ ದಿನ ಅಂದರೆ ಫೆ.14ಕ್ಕೆ ಚಿತ್ರವನ್ನು ಬಿಡುಗಡೆ ಮಾಡುತ್ತಾರೆ.
ಸಿನಿಮಾ: ನಾತಿಚರಾಮಿ
ನಿರ್ದೇಶಕ: ಮಂಸೋರೆ
ನಿರ್ಮಾಣ: ತೇಜಸ್ವಿನಿ ಎಂಟರ್ಪ್ರೈಸಸ್
ಕಲಾವಿದರು: ಶ್ರುತಿ ಹರಿಹರನ್, ಸಂಚಾರಿ ವಿಜಯ್, ಶರಣ್ಯ, ಪೂರ್ಣಚಂದ್ರ ಮೈಸೂರು.
----
ಮದುವೆ ಸಮಯದಲ್ಲಿ ಅರ್ಥೇಚ, ಧರ್ಮೇಚ, ಕಾಮೇಚ ಎಂದು ವಾಗ್ದಾನ ಮಾಡುವ ಪತಿ ಇದ್ದಕ್ಕಿದ್ದ ಹಾಗೆ ಮೃತಪಟ್ಟರೆ, ಮದುವೆಯಾದ ಪತ್ನಿಯ ಮನಸ್ಸಲ್ಲಿ ನಡೆಯುವ ಸಂಘರ್ಷವನ್ನು ತಡೆಯುವಯಾರು? ಈ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸ ಮಾಡಿದ್ದಾರೆ ನಿರ್ದೇಶಕ ಮಂಸೋರೆ.
.
ಗೌರಿ [ಶ್ರುತಿ ಹರಿಹರನ್] ಮತ್ತು ಸುಮಾ [ಶರಣ್ಯ] ಈ ಸಿನಿಮಾದ ಎರಡು ಮುಖಗಳು. ಪ್ರೀತಿಯಿಂದ ವಿವಾಹವಾಗಿ ದಾಂಪತ್ಯ ಸುಖದ ಅಲೆಯಲ್ಲಿ ತೇಲುತ್ತಿರುವ ಗೌರಿಗೆ ಗಂಡನ ಸಾವು ದೊಡ್ಡ ಅಘಾತ ನೀಡುತ್ತದೆ. ಗಂಡನ ನೆನಪು ಒಂದು ಕಡೆಯಾದರೆ, ತನ್ನೊಳಗೆ ಅದುಮಿಡಲು ಸಾಧ್ಯವಾಗದಿರು ಬಯಕೆಗಳು ಮತ್ತೊಂದು ಕಡೆ ಗೌರಿಯನ್ನು ಬಾಧಿಸುತ್ತಿರುತ್ತವೆ. ಅದೇ ರೀತಿ ಮದುವೆಯಾದ ದಿನದಿಂದ ಗಂಡ ಬರೀ ದೈಹಿಕ ವಾಂಛೆಗಷ್ಟೇ ನನ್ನನ್ನು ಬಳಸಿಕೊಳ್ಳುತ್ತಿದ್ದಾನೆ ಹೊರತು ನನಗೆ ತನ್ನ ಆತ್ಮ ಸಂಗಾತವನ್ನು ನೀಡುತ್ತಿಲ್ಲ ಎನ್ನುವ ನೋವಿನಲ್ಲಿ ದಿನ ದೂಡುತ್ತಿದ್ದಾಳೆ ಸುಮಾ. ಇವರಿಬ್ಬರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಇವರಿಬ್ಬರ ನಡುವೆ ದೊಡ್ಡ ದೊಡ್ಡ ಕನಸುಗಳನ್ನು ಕಾಣುವ ಮಧ್ಯಮ ವರ್ಗದ ಗಂಡನಾಗಿ ಸುರೇಶ್ [ಸಂಚಾರಿ ವಿಜಯ್] . ಈ ಮೂರು ಪಾತ್ರಗಳನ್ನು ಸಂಬಂಧ ಅನ್ನವು ದಾರದಿಂದ ಪೋಣಿಸಿದ್ದಾರೆ ಮಂಸೋರೆ.
.
ಮಹಿಳೆಯ ದೇಹ ಬಯಕೆಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳುವುದಿರಲಿ, ಹಂಚಿಕೊಳ್ಳುವುದರ ಬಗ್ಗೆ ಯಾರು ಯೋಚನೆಯೂ ಮಾಡುವುದಿಲ್ಲ. ಅಂತಹ ಸೂಕ್ಷ್ಮ ವಿಷಯವನ್ನು ನಿರ್ಧಿಷ್ಟ ಅವಧಿಯಲ್ಲಿ ತೆರೆದಿಡಿವ ಪ್ರಯತ್ನದಲ್ಲಿ ನಿರ್ದೇಶಕರು ತಕ್ಕ ಮಟ್ಟಿಗೆ ಗೆದಿದ್ದಾರೆ. ನಿರ್ದೇಶಕರ ಈ ಆಲೋಚನೆಗೆ ಜೀವ ತುಂಬಿರುವುದು, ಕಥೆಗಾರ್ತಿ ಸಂಧ್ಯಾರಾಣಿ, ಸಂಗೀತ ನಿರ್ದೇಶಕಿ ಬಿಂದು ಮಾಲಿನಿ ಮತ್ತು ಕಲಾವಿದರು. ಇವರ ಜತೆ ಉಳಿದ ತಂತ್ರಜ್ಞರ ಕೆಲಸವೂ ಸಿನಿಮಾದಲ್ಲಿ ಗಮನ ಸೆಳೆಯುತ್ತದೆ.
.
ದೇಹದ ಬಯಕೆಗಳನ್ನು ಮುಕ್ತವಾಗಿ ಮಾತನಾಡುವುದು ತಪ್ಪೋ ಸರಿಯೋ ಎಂಬ ಗೊಂದಲದಲ್ಲಿರುವ ಪಾತ್ರದಲ್ಲಿ ಶ್ರುತಿ ಹರಿಹರನ್ ಅವರದ್ದು ಕಾಡುವ ನಟನೆ. ಶ್ರುತಿ ಅವರು ಚಿತ್ರದಿಂದ ಚಿತ್ರಕ್ಕೆ ತಮ್ಮ ನಟನ ಸಾಮರ್ಥ್ಯವನ್ನು ಹೊರಹಾಕುತ್ತಿದ್ದಾರೆ. ಮಧ್ಯಮ ವರ್ಗದ ಗಂಡ ಹೆಂಡತಿಯಾಗಿ ಸಂಚಾರಿ ವಿಜಯ್ ಮತ್ತು ಶರಣ್ಯ ಚಪ್ಪಾಳೆ ಗಿಟ್ಟಿಸುವಂತೆ ನಟಿಸಿದ್ದಾರೆ. ಕೆಲವೇ ದೃಶ್ಯಗಳಲ್ಲಿ ಬರುವ ಪೂರ್ಣಚಂದ್ರ ಮೈಸೂರು ಇನ್ನೊಂದಷ್ಟು ಹೊತ್ತು ಇರಬೇಕಿತ್ತು ಅನ್ನಿಸುವಂತೆ ನಟಿಸಿದ್ದಾರೆ. ಬಾಲಾಜಿ ಮನೋಹರ್ ಸೇರಿದಂತೆ ಎಲ್ಲ ಕಲಾವಿದರು ನೈಜತೆಗೆ ಹತ್ತಿರವಾಗಿ ನಟಿಸಿದ್ದಾರೆ.
.
ಚಿತ್ರದ ತಾಂತ್ರಿಕತೆಯ ವಿಷ್ಯದಲ್ಲಿ ಹೇಳಿಕೊಳ್ಳುವ ಕೆಲಸವನ್ನು ಮಾಡಿಲ್ಲ. ತಾಂತ್ರಿಕ ದೋಷಗಳು ಚಿತ್ರದುದ್ದಕ್ಕೂ ಕಾಣುತ್ತಿರುತ್ತವೆ. ಚಿತ್ರದ ಹಿನ್ನಲೆ ಸಂಗೀತ ಹಾಡುಗಳಿಗಿಂತ ಚೆನ್ನಾಗಿದೆ.
ಮಂಸೋರೆ ಅವರು ಚಿತ್ರಕ್ಕೆ ಇನ್ನಷ್ಟು ವೇಗ ನೀಡಿದ್ದರೆ ಚೆನ್ನಾಗಿರುತ್ತಿತ್ತು ಎನ್ನಿಸದೇ ಇರದು.
.
ಸೂಕ್ಷ್ಮ ಸಂವೇದನೆ ಉಳ್ಳ ಸಿನಿಮಾ ಇದಾಗಿದ್ದು, ಅಂತಹ ಸಿನಿಮಾ ನೋಡೋ ಪ್ರೇಕ್ಷಕರಿಗೆ ಕಾಡದೇ ಬಿಡುವುದಿಲ್ಲ.
ರೇಟಿಂಗ್: 3.25/5
ಶ್ರುತಿ ನಾಯ್ಡು ಚಿತ್ರ ಲಾಂಛನದಲ್ಲಿ ಶ್ರುತಿ ನಾಯ್ಡು ಜೆ ಅವರು ನಿರ್ಮಿಸುತ್ತಿರುವ, ನವರಸ ನಾಯಕ ಜಗ್ಗೇಶ್ ನಾಯಕರಾಗಿ ನಟಿಸುತ್ತಿರುವ `ಪ್ರೀಮಿಯರ್ ಪದ್ಮಿನಿ` ಚಿತ್ರಕ್ಕಾಗಿ ಡಾ||ವಿ.ನಾಗೇಂದ್ರಪ್ರಸಾದ್ ಬರೆದಿರುವ `ನಾ ಹುಡುಕೊ ನಾಳೆ` ಎನ್ನುವ ಹಾಡನ್ನು ನಟ ರಕ್ಷಿತ್ ಶೆಟ್ಟಿ ಜನವರಿ 6ರಂದು ಬಿಡುಗಡೆ ಮಾಡಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿರುವ ಈ ಹಾಡನ್ನು ಸರಿಗಮಪ ಖ್ಯಾತಿಯ ನಿಹಾಲ್ ಹಾಡಿದ್ದಾರೆ. ಶ್ರುತಿ ನಾಯ್ಡು ಚಿತ್ರ ನಿಹಾಲ್ ಅವರಿಗೆ `ಪ್ರೀಮಿಯರ್ ಪದ್ಮಿನಿ` ಚಿತ್ರಕ್ಕೆ ಹಾಡಲು ಅವಕಾಶ ಮಾಡಿಕೊಟ್ಟಿದೆ. ಇದು ಚಿತ್ರದ ಎರಡನೇ ಹಾಡು.
.
ರಮೇಶ್ ಇಂದಿರಾ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಬಹುತೆಕ ಪೂರ್ಣವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಹಾಗೂ ರಾಜೇಂದ್ರ ಅರಸ್ ಅವರ ಸಂಕಲನವಿದೆ. ಕೃಷ್ಣ ಸಾರ್ಥಕ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.
.
ನವರಸ ನಾಯಕ, ಜಗ್ಗೇಶ್, ಮಧುಬಾಲ, ಸುಧಾರಾಣಿ, ಪ್ರಮೋದ್, ಹಿತ ಚಂದ್ರಶೇಖರ್, ವಿವೇಕ್ ಸಿಂಹ, ರಮೇಶ್ ಇಂದಿರಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಸಿನಿಮಾ: ಸ್ವಾರ್ಥರತ್ನ
ನಿರ್ದೇಶಕ: ಅಶ್ವಿನ್ ಕೋಡಂಗೆ
ಕಲಾವಿದರು: ಆದರ್ಶ್ ಗುಂಡುರಾಜ್, ಇಶಿತಾ ವರ್ಷ, ಸ್ನೇಹಾ ಸಿಂಗ್, ಸಾಧು ಕೋಕಿಲಾ, ರಮೇಶ್ ಭಟ್, ಸುಧಾ ಬೆಳವಾಡಿ, ಅಮಿತ್
.
ಬದುಕಿನಲ್ಲಿಪ್ರೀತಿ ಎಂಬುದು ಎಂತಹ ಮನುಷ್ಯನನ್ನು ಬೇಕಾದರೂ ಬದಲಾಯಿಸುತ್ತದೆ. ಅಂತಹ ಒಬ್ಬನ ಕಥೆಯೇ ಈ ಸ್ವಾರ್ಥರತ್ನ. ಪರಮ ಸ್ವಾರ್ಥಿಯಾಗಿದ್ದ ಒಬ್ಬ ಹುಡುಗ ತನ್ನ ಪ್ರೀತಿಗಾಗಿ ಹೇಗೆ ನಿಸ್ವಾರ್ಥಿಯಾಗುತ್ತಾನೆ ಎಂಬುದೇ ಈ ಸಿನಿಮಾದ ಕಥೆ.
ಅಶ್ವಿನ್ ಕೋಡಂಗೆ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸ್ವಾರ್ಥ ರತ್ನ, ವಿಶೇಷ ಸಬ್ಜೆಕ್ಟ್ ಇಟ್ಟುಕೊಂಡು ತಯಾರಾದ ಸಿನಿಮಾವಾಗಿದೆ. ಆದರೆ ಒಂದಷ್ಟು ಮುಖ್ಯ ಅಂಶಗಳ ಕೊರತೆಯಿಂದ ಈ ಸಿನಿಮಾ ಕೊರಗುತ್ತದೆ.
.
ನಾಯಕ ಆದರ್ಶ್ ಪರಮ ಸ್ವಾರ್ಥಿ ತಾನು ಪ್ರೀತಿಸುವ ಹುಡುಗಿಯ ಮುಂದೆ ಭಿಕ್ಷುಕರಿಗೆ ಹಣ ಕೊಟ್ಟರೂ ಅವಳು ಹೋದ ತಕ್ಷಣ ಅದನ್ನು ವಾಪಾಸ್ ಕಿತ್ತಕೊಳ್ಳುವ ಬುದ್ಧಿ. ಹೀಗಿದ್ದವನನ್ನು ನಾಯಕಿ ದೂರದಿಂದಲೇ ಬದಲಾಯಿಸುತ್ತಾಳೆ. ನಾಯಕಿ ಕವನ[ ಇಷಿತಾ] ಗೆ ಸಮಾಜ ಸೇವೆ ಮಾಡುವುದರಲ್ಲಿ ಆನಂದ. ನಿಧಾನವಾಗಿ ತನ್ನ ಹುಡುಗನನ್ನು ಅದೇ ಹಾದಿಗೆ ತರುವ ಪ್ರಯತ್ನ ಮಾಡುತ್ತಾಳೆ. ಆದರೆ ಸೆಕೆಂಡ್ ಹಾಫ್ನಲ್ಲಿ ಮತ್ತೊಬ್ಬ ಹುಡುಗಿ ನಾಯಕನನ್ನು ಪ್ರೀತಿಸುತ್ತಾಳೆ. ಆದರೆ ಅವನು ಮಾತ್ರ ಕವನಳಿಗಾಗಿಯೇ ನಿಸ್ವಾರ್ಥವಾಗಿ ಕಾಯುತ್ತಾ ಕೂರುತ್ತಾನೆ. ಇವನಿಗೆ ಕವನ ಸಿಗುತ್ತಾಳೋ ಇಲ್ಲವೋ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು.
.
ಸಿನಿಮಾದ ಸಂಭಾಷಣೆ ಬಹಳ ಚೆನ್ನಾಗಿ ಮೂಡಿ ಬಂದಿದ್ದು, ಇದನ್ನು ಚಿತ್ರಕಥೆ ಮಾಡಿಕೊಳ್ಳುವ ವಿಚಾರದಲ್ಲಿಯೂ ನಿರ್ದೇಶಕರು ಗಮನ ಹರಿಸಬೇಕಿತ್ತು. ಒಂದಷ್ಟು ಉತ್ತರ ಸಿಗದ ಪ್ರಶ್ನೆಗಳು ಸಿನಿಮಾದಲ್ಲಿವೆ.. ಇಡೀ ಚಿತ್ರವನ್ನು ನವ ನಟ ಆದರ್ಶ್ ಆವರಿಸಿಕೊಂಡಿದ್ದಾರೆ. ಇನ್ನೊಂದಿಷ್ಟು ಅಭಿನಯದ ಅವಶ್ಯಕತೆ ಅವರಿಗಿತ್ತು.. ಇಶಿತಾ ವರ್ಷ ಮತ್ತು ಸ್ನೇಹಾ ಸಿಂಗ್ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಹಾಸ್ಯ ನಟ ಅಮಿತ್ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾ ಕಡೆಯಲ್ಲಿ ಒಂದು ಮೆಸೆಜ್ ಕೊಡುವ ಪ್ರಯತ್ನ ಮಾಡುತ್ತದೆ.
.
ರೇಟಿಂಗ್: 3/5
ವಿಜಯ್ ಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಶನ್ನ "ತೋತಾಪುರಿ"- 'ತೊಟ್ ಕೀಳ್ಬೇಡಿ' ಸಿನಿಮಾದಲ್ಲಿ ಡಾಲಿ ಧನಂಜಯ ವಿಶೇಷ ಪಾತ್ರದಲ್ಲಿ ನಟಿಸುತ್ತಿರುವುದು ಗೊತ್ತಿರುವ ವಿಚಾರ, ಈಗ ಆ ಸಿನಿಮಾದಲ್ಲಿ ಅವರ ಲುಕ್ ರೀವಿಲ್ ಆಗಿದ್ದು, ಡಾಲಿ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ.
ನಾರಾಯಣ ಪಿಳ್ಳೈ ಎಂಬ ವ್ಯಾಪಾರಿಯ ರೋಲ್ ಇದಾಗಿದ್ದು, ಧನಂಜಯ,ಸುಮನ್ ರಂಗನಾಥ್ ಜೋಡಿಯಾಗಿ ನಟಿಸುತ್ತಿದ್ದಾರೆ.
ವಿಜಯ್ ಪ್ರಸಾದ್ ಅವರ ಕಾನ್ಸೆಪ್ಟ್ ಬಹಳ ಚೆನ್ನಾಗಿರುವ ಕಾರಣ ಅತಿಥಿ ಪಾತ್ರದಲ್ಲಿ ನಟಿಸಲು ಅವರು ಒಪ್ಪಿಕೊಂಡಿದ್ದಾರಂತೆ.
ಶ್ರುತಿ ಹರಿಹರನ್ ನಟನೆಯ ನಾತಿಚರಾಮಿ ಸಿನಿಮಾದಲ್ಲಿ ಹೆಣ್ಣಿನ ತುಮುಲಗಳನ್ನು ಹೇಳಿದ್ದಾರೆ ನಿರ್ದೇಶಕ ಮಂಸೂರೆ. ಈ ಹಿಂದೆ ಹರಿವು ಸಿನಿಮಾ ಮಾಡಿ ರಾಷ್ಟ್ರ ಪ್ರಶಸ್ತಿ ಗಳಿಸಿದ್ದ, ಇವರು ಈ ಬಾರಿ ಸ್ವಲ್ಪ ಕಮರ್ಷಿಯಲ್ ಅಂಶಗಳನ್ನು ಸಿನಿಮಾದಲ್ಲಿ ಸೇರಿಸಿದ್ದಾರಂತೆ.
.
ಶ್ರುತಿ ಹರಿಹರನ್ ಜತೆ ಸಂಚಾರಿ ವಿಜಯ್, ಪೂರ್ಣಚಂದ್ರ ಮೈಸೂರು, ಶರಣ್ಯ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಜಗನ್ಮೋಹನ್ ರೆಡ್ಡಿ ಹಾಗೂ ಶಿವಕುಮಾರ್ ರೆಡ್ಡಿ ಅವರು ನಿರ್ಮಾಣ ಮಾಡುತ್ತಿದ್ದಾರೆ.
.
ಈ ಸಿನಿಮಾದಲ್ಲಿ ಬಿಗಿ ನಿರೂಪಣೆಯಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ಎಲ್ಲರ ಗಮನಸೆಳೆದಿದೆ. ಜತೆಗೆ ಚಿತ್ರ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಲೇಖಕಿ ಸಂಧ್ಯರಾಣಿ ಸಂಭಾಷಣೆ ಬರೆಯುತ್ತಿದ್ದಾರೆ.
ಚಿತ್ರ ಇದೇ ಡಿಸೆಂಬರ್ 28 ರಂದು ತೆರೆಕಾಣುತ್ತಿದೆ.
ಚಿತ್ರ: ವಿರಾಜ್.
ನಿರ್ದೇಶಕ: ನಾಗೇಶ್ ನದಾಸಿ.
ನಿರ್ಮಾಣ : ಮಂಜುನಾಥ ಸ್ವಾಮಿ.
ಸಿನಿಮಾಟೋಗ್ರಫಿ : ಮಲ್ಲಿಕಾರ್ಜುನ್.
ಸಂಗೀತ: ಸುಭಾಷ್ ಆನಂದ್.
ತಾರಾಗಣ: ದೇವರಾಜ್, ವಿನಯ ಪ್ರಸಾದ್, ಜೈಜಗದೀಶ್, ವಿದ್ಯಾಭರಣ್, ಶಿರಿನ್ ಕಂಚವಾಲ, ನಿಖಿತಾ, ಸ್ವಾತಿ, ಕಡ್ಡಿಪುಡಿ ಚಂದ್ರು.
.
ಈ ವಾರ ಬಿಡುಗಡೆಯಾಗಿರುವ ವಿರಾಜ್ ತನ್ನ ಮೇಕಿಂಗ್ನಿಂದಾಗಿ ಒಂದಷ್ಟು ಗಮನ ಸೆಳೆದಿತ್ತುಘಿ. ನಾಗೇಶ್ ನರದಾಸಿ ಪ್ರೇಮ ಕಥೆಗೆ ಒಂದೆರೆಡು ಟ್ವಿಸ್ಟ್ , ಅದಕ್ಕೊಂದು ಫ್ಯಾಮಿಲಿ ಸೆಂಟಿಮೆಂಟ್ ಎಲ್ಲವನ್ನು ಬೆರಸಿ ಲವ್ ಕಮ್ ಆ್ಯಕ್ಷನ್, ಮತ್ತು ಫ್ಯಾಮಿಲಿ ಸಿನಿಮಾ ಮಾಡಿದ್ದಾರೆ.
.
ವಿರಾಜ್ ಎನ್ನುವುದು ಇಲ್ಲಿ ಸಿನಿಮಾ ನಾಯಕನ ಹೆಸರು. ಈತ ತಾತ ಅಜ್ಜಿಯ ಪ್ರೀತಿಯ ಮೊಮ್ಮಗ. ತಂದೆ ತಾಯಿ ಇಲ್ಲದ ಕಾರಣ ವಿರಾಜ್ ಕೂಡಾತನ್ನ ತಾತ ಮತ್ತು ಅಜ್ಜಿಯನ್ನು ದೇವರಂತೆ ಪೂಜಿಸುತ್ತಿರುತ್ತಾನೆ. ಅವರಿಗೆ ನೋವಾಗುವಂತಹ ಯಾವುದೇ ಕೆಲಸವನ್ನು ಅವನು ಮಾಡುವುದಿಲ್ಲ. ಹೀಗಿರುವಾಗ ಕಾಲೇಜಿನಲ್ಲಿ ಒಂದು ಹುಡುಗಿಯನ್ನು ಇಷ್ಟಪಡುತ್ತಾನೆ. ತಮ್ಮ ಮೊಮ್ಮಗ ಇಷ್ಟಪಟ್ಟಿದ್ದಾನೆ ಎಂದು ತಾತ, ಅಜ್ಜಿಯೂ ಒಪ್ಪಿಕೊಳ್ಳುತ್ತಾರೆ. ನಾಯಕಿಯ ತಂದೆ ತಾಯಿಗೆ ಯಾವಾಗಲೂ ಸ್ಟೇಟಸ್ದೇ ಚಿಂತೆ. ಈ ಸ್ಟೇಟಸ್ನಿಂದಾಗ ಇವರ ನಿಶ್ಚಿತಾರ್ಥ ಮುರಿದು ಬಿದ್ದು ಮದುವೆ ನಿಂತು ಹೋಗುತ್ತದೆ. ಆದರೆ ಹೀಗೆ ಸ್ಟೇಟಸ್ ನಿಂದ ದೂರವಾಗಿದ್ದ ಪ್ರೀತಿ ಮತ್ತೆ ಒಂದಾಗುತ್ತದೆ. ಹೀಗೆ ಒಂದಾದ ಪ್ರೀತಿಗೆ ಮತ್ತೆ ಕಂಟಕ ಬರುತ್ತದೆ. ಈ ಕಂಟಕವೇನು, ಆ ಕಂಟಕ ನಿವಾರಣೆಯಾಗಿ ಇವರಿಬ್ಬರು ಒಂದಾಗುತ್ತಾರೆ ಎಂಬದನ್ನು ಸಿನಿಮಾದಲ್ಲಿಯೇ ನೋಡಬೇಕು.
.
ಚಿತ್ರಕಥೆಯಲ್ಲಿ ಇನ್ನು ಒಂದಿಷ್ಟ ವೇಗ ಬೇಕಿತ್ತು, ಕಾಮಿಡಿ ದೃಶ್ಯಗಳನ್ನು ಕತ್ತರಿಸಬಹುದಿತ್ತು, ಸಿನಿಮಾಟೋಗ್ರಫಿ ಚೆನ್ನಾಗಿದೆ. ಒಂದೇ ಒಂದು ಹಾಡು ಮಾತ್ರ ಗುನುಗುವಂತಿದೆ. ಉಳಿದಂತೆ ನಾಯಕ ವಿಧ್ಯಾಭರಣ್ ಮೊದಲ ಪ್ರಯತ್ನಲದಲ್ಲಿಯೇ ಪಾಸ್ ಆಗಿದ್ದಾರೆ. ಇನ್ನೊಂದಿಷ್ಟ ಪ್ರಯತ್ನ ಮಾಡಿದರೆ ಒಳ್ಳೆ ನಟನಾಗುವ ಲಕ್ಷಣ ಕಾಣುತ್ತಿದೆ. ನಾಯಕಿಯರಿಬ್ಬರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ದೇವರಾಜ್, ಜೈಜಗದೀಶ್, ಸ್ವಾತಿ, ಶ್ರೀಧರ್, ಟೆನ್ನಿಸ್ ಕೃಷ್ಣ ಎಲ್ಲರೂ ತಮಗೆ ಕೊಟ್ಟ ಕೆಲಸವನ್ನು ನೀಟಾಗಿ ಮಾಡಿ ಮುಗಿಸಿದ್ದಾರೆ.
ವಿಕೇಂಡ್ನಲ್ಲಿ ಸಿನಿಮಾವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.
. ರೇಟಿಂಗ್ : 3/5
ಹೊಸಬರ ಹೊಸ ಪ್ರೇಮಕಥೆ ಈ "ವಿರಾಜ್" :
ಚಿತ್ರ: ವಿರಾಜ್ನಿರ್ದೇಶಕ: ನಾಗೇಶ್ ನದಾಸಿನಿರ್ಮಾಣ : ಮಂಜುನಾಥ ಸ್ವಾಮಿಸಿನಿಮಾಟೋಗ್ರಫಿ : ಮಲ್ಲಿಕಾರ್ಜುನ್ಸಂಗೀತ: ಸುಭಾಷ್ ಆನಂದ್ತಾರಾಗಣ: ದೇವರಾಜ್, ವಿನಯ ಪ್ರಸಾದ್, ಜೈಜಗದೀಶ್, ವಿದ್ಯಾಭರಣ್, ಶಿರಿನ್ ಕಂಚವಾಲ, ನಿಖಿತಾ, ಸ್ವಾತಿ, ಕಡ್ಡಿಪುಡಿ ಚಂದ್ರು..
ಈ ವಾರ ಬಿಡುಗಡೆಯಾಗಿರುವ ವಿರಾಜ್ ತನ್ನ ಮೇಕಿಂಗ್ನಿಂದಾಗಿ ಒಂದಷ್ಟು ಗಮನ ಸೆಳೆದಿತ್ತುಘಿ. ನಾಗೇಶ್ ನರದಾಸಿ ಪ್ರೇಮ ಕಥೆಗೆ ಒಂದೆರೆಡು ಟ್ವಿಸ್ಟ್ , ಅದಕ್ಕೊಂದು ಫ್ಯಾಮಿಲಿ ಸೆಂಟಿಮೆಂಟ್ ಎಲ್ಲವನ್ನು ಬೆರಸಿ ಲವ್ ಕಮ್ ಆ್ಯಕ್ಷನ್, ಮತ್ತು ಫ್ಯಾಮಿಲಿ ಸಿನಿಮಾ ಮಾಡಿದ್ದಾರೆ..
ವಿರಾಜ್ ಎನ್ನುವುದು ಇಲ್ಲಿ ಸಿನಿಮಾ ನಾಯಕನ ಹೆಸರು. ಈತ ತಾತ ಅಜ್ಜಿಯ ಪ್ರೀತಿಯ ಮೊಮ್ಮಗ. ತಂದೆ ತಾಯಿ ಇಲ್ಲದ ಕಾರಣ ವಿರಾಜ್ ಕೂಡಾತನ್ನ ತಾತ ಮತ್ತು ಅಜ್ಜಿಯನ್ನು ದೇವರಂತೆ ಪೂಜಿಸುತ್ತಿರುತ್ತಾನೆ. ಅವರಿಗೆ ನೋವಾಗುವಂತಹ ಯಾವುದೇ ಕೆಲಸವನ್ನು ಅವನು ಮಾಡುವುದಿಲ್ಲ. ಹೀಗಿರುವಾಗ ಕಾಲೇಜಿನಲ್ಲಿ ಒಂದು ಹುಡುಗಿಯನ್ನು ಇಷ್ಟಪಡುತ್ತಾನೆ. ತಮ್ಮ ಮೊಮ್ಮಗ ಇಷ್ಟಪಟ್ಟಿದ್ದಾನೆ ಎಂದು ತಾತ, ಅಜ್ಜಿಯೂ ಒಪ್ಪಿಕೊಳ್ಳುತ್ತಾರೆ. ನಾಯಕಿಯ ತಂದೆ ತಾಯಿಗೆ ಯಾವಾಗಲೂ ಸ್ಟೇಟಸ್ದೇ ಚಿಂತೆ. ಈ ಸ್ಟೇಟಸ್ನಿಂದಾಗ ಇವರ ನಿಶ್ಚಿತಾರ್ಥ ಮುರಿದು ಬಿದ್ದು ಮದುವೆ ನಿಂತು ಹೋಗುತ್ತದೆ. ಆದರೆ ಹೀಗೆ ಸ್ಟೇಟಸ್ ನಿಂದ ದೂರವಾಗಿದ್ದ ಪ್ರೀತಿ ಮತ್ತೆ ಒಂದಾಗುತ್ತದೆ. ಹೀಗೆ ಒಂದಾದ ಪ್ರೀತಿಗೆ ಮತ್ತೆ ಕಂಟಕ ಬರುತ್ತದೆ. ಈ ಕಂಟಕವೇನು, ಆ ಕಂಟಕ ನಿವಾರಣೆಯಾಗಿ ಇವರಿಬ್ಬರು ಒಂದಾಗುತ್ತಾರೆ ಎಂಬದನ್ನು ಸಿನಿಮಾದಲ್ಲಿಯೇ ನೋಡಬೇಕು..
ಚಿತ್ರಕಥೆಯಲ್ಲಿ ಇನ್ನು ಒಂದಿಷ್ಟ ವೇಗ ಬೇಕಿತ್ತು, ಕಾಮಿಡಿ ದೃಶ್ಯಗಳನ್ನು ಕತ್ತರಿಸಬಹುದಿತ್ತು, ಸಿನಿಮಾಟೋಗ್ರಫಿ ಚೆನ್ನಾಗಿದೆ. ಒಂದೇ ಒಂದು ಹಾಡು ಮಾತ್ರ ಗುನುಗುವಂತಿದೆ. ಉಳಿದಂತೆ ನಾಯಕ ವಿಧ್ಯಾಭರಣ್ ಮೊದಲ ಪ್ರಯತ್ನಲದಲ್ಲಿಯೇ ಪಾಸ್ ಆಗಿದ್ದಾರೆ. ಇನ್ನೊಂದಿಷ್ಟ ಪ್ರಯತ್ನ ಮಾಡಿದರೆ ಒಳ್ಳೆ ನಟನಾಗುವ ಲಕ್ಷಣ ಕಾಣುತ್ತಿದೆ. ನಾಯಕಿಯರಿಬ್ಬರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ದೇವರಾಜ್, ಜೈಜಗದೀಶ್, ಸ್ವಾತಿ, ಶ್ರೀಧರ್, ಟೆನ್ನಿಸ್ ಕೃಷ್ಣ ಎಲ್ಲರೂ ತಮಗೆ ಕೊಟ್ಟ ಕೆಲಸವನ್ನು ನೀಟಾಗಿ ಮಾಡಿ ಮುಗಿಸಿದ್ದಾರೆ. ವಿಕೇಂಡ್ನಲ್ಲಿ ಸಿನಿಮಾವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.
ರೇಟಿಂಗ್ :3/5
ಕನ್ನಡ ಸಿನಿರಸಿಕರಿಗೊಂದು ಸಂತಸದ ಸುದ್ದಿ. ಸಿರಿಕನ್ನಡ - ಸಿನಿಮಾ ಮತ್ತು ಮನರಂಜನಾ ವಾಹಿನಿ ವೀಕ್ಷಕರ ಮನೆಯಂಗಳದಲ್ಲಿ ಸಿನಿಮಾ ಮತ್ತು ಕಾರ್ಯಕ್ರಮಗಳ ಕಂಪನ್ನು ಬೀರಲಿದೆ.
.
ಸಿರಿಕನ್ನಡ ವಾಹಿನಿಯ ಮುಖ್ಯಸ್ಥರು ಹೇಳುವಂತೆ 84ರ ವಸಂತದಲ್ಲಿರುವ ಕನ್ನಡ ಸಿನಿಮಾರಂಗಕ್ಕೆ ಸಿರಿಕನ್ನಡ ವಾಹಿನಿಯು ಹೆಮ್ಮೆಯ ಕೊಡುಗೆಯಾಗಿದ್ದು ಈ ವಾಹಿನಿಯ ಪರಿಕಲ್ಪನೆಯೇ ವಿಭಿನ್ನ. ಸಿನಿಮಾ ವಾಹಿನಿಗಳೆಂದರೆ ಕೇವಲ ಸಿನಿಮಾಗಳಿಗಷ್ಟೇ ಸೀಮಿತವಾಗಿರುತ್ತವೆ ಆದರೆ ಸಿರಿಕನ್ನಡ ಇದಕ್ಕೂ ಮೀರಿದ ಮನರಂಜನೆಯನ್ನುತನ್ನ ವೀಕ್ಷಕರಿಗೆ ನೀಡಲಿದೆ. ಒಂದು ಸಿನಿಮಾದಿಂದ ವೀಕ್ಷಕರು ಬಯಸುವುದಯ ಪರಿಪೂರ್ಣ ಮನರಂಜನೆ, ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮೇಕಿಂಗ್ನ ಪ್ರತಿಯಂದು ಹಂತವನ್ನು ಒಂದು ಎಂಟರ್ಟೈನಮೆಂಟ್ ಪ್ಯಾಕೇಜ್ ಮೂಲಕ ವೀಕ್ಷಕರಿಗೆ ಕೊಡುವುದಲ್ಲದೇ ಹೊಸ ಸಿನಿಮಾಗಳ ಹೊಸ ವಿಷಯ, ನಟ ನಟಿಯರ ಲೈಫ್ ಸ್ಟೈಲ್, ಹಳೆಯ ಸಿನಿಮಾಗಳ ಮಧುರ ನೆನಪು ಎಲ್ಲವೂ ಕಾರ್ಯಕ್ರಮಗಳಾಗಿ ವೀಕ್ಷಕರನ್ನು ರಂಜಿಸಲಿವೆ. ಎವರ್ಗ್ರೀನ್ ಸಾಂಗ್ಸ್, ನಕ್ಕು ನಗಿಸೋ ಕಾಮಿಡಿ ಸೀನ್ಸ್ ಇದರೊಟ್ಟಿಗೆ ಭವಿಷ್ಯದ ಚಿಂತಕರಿಗೆ ಜ್ಯೋತಿಷ್ಯ, ಆರೋಗ್ಯ ವೃದ್ದಿಗಾಗಿ ಹೆಲ್ಥ್ ಪ್ರೋಗ್ರಾಮ್, ಕಣ್ಮನ ತಣಿಸೋ ಟ್ರಾವೆಲ್ ಶೋ ಈ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಸಿರಿಕನ್ನಡ ವಾಹಿನಿ ವೀಕ್ಷಕರಿಗೆ ನೀಡಲಿದೆ.
.
ಸಿರಿಕನ್ನಡದಲ್ಲಿ ಅತ್ಯುತ್ತಮ ಸಾಂಸಾರಿಕ, ಹಾಸ್ಯ, ಥ್ರಿಲ್ಲರ್, ಭಕ್ತಿಪ್ರಧಾನ, ಪ್ರೇಮಕಥೆಎಲ್ಲಾರೀತಿಯ ಸಿನಿಮಾಗಳ ಸಂಗ್ರಯವಿದ್ದುಎಲ್ಲಾ ವರ್ಗದ ವೀಕ್ಷಕರನ್ನು ರಂಗಿಸಲಿದೆ. ಮುಂಬರುವ ದಿನಗಳಲ್ಲಿ ನಮ್ಮ ಸಿನಿಮಾ ಸಂಗ್ರಹವನ್ನು ಹೆಚ್ಚಿಸುತ್ತಾ ಸಾಗುವ ಯೋಜನೆ ನಮ್ಮದಾಗಿದ್ದು ಹೆಚ್ಚು ಹೆಚ್ಚು ಉತ್ತಮ ಚಿತ್ರಗಳನ್ನು ಚಿತ್ರ ಪ್ರೇಮಿಗಳಿಗೆ ಕೋಡೋ ಹೆಬ್ಬಯಕೆ ಸಿರಿಕನ್ನಡದ್ದು. ಕಾರ್ಯಕ್ರಮಗಳಲ್ಲೂ ವಿಭಿನ್ನ ಬಗೆಯ ವಿನೂತನ ಪ್ರೋಗ್ರಾಮ್ ರೂಪಿಸೋ ಬಯಕೆ ನಮ್ಮದಾಗಿದ್ದು ಇದಕ್ಕಾಗಿ ಪ್ರತಿಭಾವಂತರ ತಂಡ ಮತ್ತು ಉತ್ಕಷ್ಠ ತಂತ್ರಜ್ಞಾನ ಬರುತ್ತಿರೋ ಸಿರಿಕನ್ನಡ ವಾಹಿನಿ ಉಚಿತವಾಗಿ (ಪ್ರೀಟುಏರ್) ನಿಮಗೆ ಲಭ್ಯವಾಗಿದ್ದು ಸಿರಿಕನ್ನಡ ವಾಹಿನಿ ವೀಕ್ಷಿಸಲು ನಿಮ್ಮ ಕೇಬಲ್ ಆಪರೇಟರ್ಗಳನ್ನು ಸಂಪರ್ಕಿಸಬಹುದಾಗಿದೆ.
.
ತಾರೆಯರ ಅಂದ ಚಂದಕ್ಕೆ ಅವರು ತಿನ್ನುವ ಆಹಾರವೂ ಅಷ್ಟೇ ಮುಖ್ಯ.ಆ ಬಗೆಗೆ ತಿಳಿಸಲು ಈ ವಾಹಿನಿಯಲ್ಲಿ ವಿಭ್ನಿನ್ನವಾದ ಅಡುಗೆ ಷೋ ಪ್ರಾರಂಭಿಸುತ್ತಿದ್ದಾರೆ. ಒಟ್ಟಾರೆ ಕರ್ನಾಟಕದ ಮೊದಲ ಸಿನಿಮಾ ಮತ್ತು ಮನರಂಜನಾ ವಾಹಿನಿ ಎಂಬ ಹೆಗ್ಗಳಿಕೆ "ಸಿರಿ ಕನ್ನಡ" ಚಾನಲ್ಗೆಇದೆ.
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯಂತೆ ಕನ್ನಡಿಗರ ನಾಡಿಯಾಗಿ ಮೂಡಿಬರಲಿದೆ ಸಿರಿಕನ್ನಡ ವಾಹಿನಿ. ಈ ನಿಮ್ಮಅಭಿಮಾನದ ವಾಹಿನಿಯನ್ನು ಎಲ್ಲರೂ ಹರಸಿ ಹಾರೈಸಬೇಕೆಂಬುದು ಸಿರಿಕನ್ನಡ ತಂಡದ ಆಶಯ.
ಹೇರಂಬ ಕಂಬೈನ್ಸ್ ಲಾಂಛನದಲ್ಲಿ ಮಂಜುನಾಥ ಸ್ವಾಮಿ ಅವರು ನಿರ್ಮಿಸಿರುವ `ವಿರಾಜ್` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
.
ನಾಗೇಶ್ ನಾರದಾಸಿ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಸುಭಾಷ್ ಆನಂದ್ ಸಂಗೀತ ನೀಡಿದ್ದಾರೆ. ಮಲ್ಲಿಕಾರ್ಜುನ್ ಛಾಯಾಗ್ರಹಣ, ನಂದಮೂರಿ ಹರಿ ಸಂಕಲನ, ಮಾಸ್ ಮಧು – ರಾಕೆಟ್ ವಿಕ್ರಮ್ ಸಾಹಸ ನಿರ್ದೇಶನ ಹಾಗೂ ಪ್ರದೀಪ್ ಅಂತೋನಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ನಾಯಕರಾಗಿ ವಿದ್ಯಾಭರಣ್ ಅಭಿನಯಿಸಿದ್ದಾರೆ.
.
ಶಿರಿನ್ ಕಂಚವಾಲ, ನಿಖಿತ, ದೇವರಾಜ್, ವಿನಯಪ್ರಸಾದ್, ಜೈಜಗದೀಶ್, ಸ್ವಾತಿ, ಕಡ್ಡಿಪುಡಿ ಚಂದ್ರು, ಟೆನ್ನಿಸ್ ಕೃಷ್ಣ, ಚಿದಾನಂದ್ ಶ್ರೀಧರ್, ಉಗ್ರಂ ಮಂಜು, ಉಗ್ರಂ ಶರತ್, ರಾಜ್ ದೀಪಕ್ ಶೆಟ್ಟಿ, ಕೃಷಿ ತಪಾಂಡ, ಕುರಿ ಸುನೀಲ್, ಕಾಮಿಡಿ ಕಿಲಾಡಿ ಸೂರ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Total Votes: | |
First Vote: | |
Last Vote: |