IB anigif

Ayugya Gif

adweb

udgharsha

Zee Kannada, creating the best entertainment programmes, has become a household name for quality entertainment. One of the most popular serials on Zee Kannada is Brahmagantu, which narrates the story of Gundamma, an overweight girl who has a helpful nature, and since the beginning, it has been leading the slot. In a surprising twist, Gundamma is going to be a part of Zee Kannada’s dance reality show Dance Karnataka Dance.
.
 The Dance Karnataka Dance competition will take part within the show, as a continuation of the story. Vijay Raghavendra and Arjuna will be the judges, and the programme is filmed on the DKD stage itself.
.
 The hero of the serial, Lucky, is the reason Gundamma chooses to audition for the competition. Lucky always challenges Gundamma to push her limits, and it has now made her try out a different platform. Adding to this, Gundamma's father always wanted his daughter to achieve success in her life in everything she does. However, after his demise, his aspirations stayed wandered, but Puttatthe ignites this in Gundamma again by saying, “It is not enough if you get love from Lucky, you also deserve respect from him. You have to show him that you can achieve anything.” Inspired by her words, Gundamma enters the Dance Karnataka Dance stage.
.
 Gundamma has already proved her mettle by playing kabaddi; she has also proven that her weight will never be a hindrance for her to achieve something. Whether she wins on this journey and is able to receive due respect from Lucky, or if she fails and is humiliated by it, is something we will have to wait and watch. Her dance journey will continue for over a month and a half months on Brahmagantu.
.
Brahmagantu airs from Monday to Friday at 10 pm on Zee Kannada. Shruthi Naidu, who is a popular name in the small screen industry, is directing and producing this serial.
#Cineloka #ZeeKannada

 

ಈ ಹಿಂದೆ ಎಣ್ಣೆ ಪಾರ್ಟಿ ಎಂಬ ಕಿರುಚಿತ್ರವನ್ನು ನಿರ್ಮಿಸಿ ಗುರುತಿಸಿಕೊಂಡಿದ್ದ ನಿರ್ದೇಶಕ ಅರುಣ್ ಎನ್.ಡಿ. ಈಗ ಬೆಳ್ಳಿ ತೆರೆಗೂ ಕಾಲಿಟ್ಟಿದ್ದಾರೆ. ದಿವಂಗತ ಮಂಜುನಾಥನ ಗೆಳೆಯರು ಎಂಬ ಚಲನಚಿತ್ರದ ಮೂಲಕ ಅರುಣ್ ಈಗ ನಿರ್ದೇಶಕರಾಗಿದ್ದು ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿಸಿ ಬಿಡುಗಡೆಗೆ ಸಿದ್ಧಗೊಳಿಸಿದ್ದಾರೆ.
.

ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಕಳೆದ ವಾರ ನಡೆಯಿತು. 5 ಜನ ಇಂಜಿನಿಯರಿಂಗ್ ಸ್ನೇಹಿತರು ಬಹಳ ವರ್ಷಗಳ ನಂತರ ಗ್ಯಾಪ್ ನಂತರ ಭೇಟಿಯಾಗುತ್ತಾರೆ. ಆದರೆ ಅವರೆಲ್ಲ ಸಂಧಿಸುವುದು ಒಂದು ಪೊಲೀಸ್ ಠಾಣೆಯಲ್ಲಿ ಸಂಧಿಸುವ ಸಂದರ್ಭ ಹೇಗೆ ಏಕೆ ಎಂಬುದುದನ್ನು ಹೇಳುವ ಚಿತ್ರವೇ ದಿವಂಗತ ಮಂಜುನಾಥನ ಗೆಳೆಯರು.
.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಹಾಗೂ ನಿರ್ಮಾಪಕರು ಆದ ಅರುಣ್ ಇದೊಂದು ಮಲ್ಟಿ ಲೇಯರ್ ಸಿನಿಮಾ 10 ವರ್ಷಗಳು ಕಳೆದ ನಂತರ ಈ ಸಿನಿಮಾ ನೋಡಿದರೂ ಹಳೆಯದು ಅನಿಸುವುದಿಲ್ಲ. ಸುಮಾರು 6-7 ತಿಂಗಳ ಕಾಲ ಕೂತು ಈ ಸ್ಕ್ರಿಪ್ಟ್ ಭರವಸೆಯ ಮೇಲೆ ಇದೇ ಟೈಟಲ್ ಕ್ಯಾಚಿಯಾಗಿದೆ ಅನಿಸಿತು. ಹಾಗಾಗಿ ದಿವಂಗತ ಮಂಜುನಾಥ ಗೆಳೆಯರು ಅಂತ ಹೆಸರಿಟ್ಟಿದ್ದೇವೆ. ಇಡೀ ಚಿತ್ರದಲ್ಲಿ ಈ ಟೈಟಲ್ ಕ್ಯಾರಿಯಾಗುತ್ತದೆ. ನಮ್ಮ ಚಿತ್ರದಲ್ಲಿ 90 ರಷ್ಟು ಹೊಸ ಕಲಾವಿದರೇ ನಟಿಸಿದ್ದಾರೆ. ಎಲ್ಲರನ್ನೂ ಆಡಿಷನ್ ಮೂಲಕವೇ ಸೆಲೆಕ್ಟ್ ಮಾಡಿದ್ದೇವೆ. ಪುಟ್ಟಣ್ಣ ಸ್ಟುಡಿಯೋ ಭೂಮಿಕ ಎಸ್ಟೇಟ್ ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ಈಗಾಗಲೇ ಚಿತ್ರದ ಸೆನ್ಸಾರ್ ಆಗಿದ್ದು ಯ/ಎ ಸರ್ಟಿಫಿಕೇಟ್ ಸಿಕ್ಕಿದೆ. ಇದೊಂದು ಕಾಮಿಡಿ ಕ್ರೈಂ ಥ್ರಿಲ್ಲರ್ ಚಿತ್ರ. ಸಿನಿಮಾ ಆಗಷ್ಟ ಮೊದಲವಾರ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಹೇಳಿದರು.
.

ರುದ್ದ ಪ್ರಯಾಗ್ ಹಾಗೂ ಶೀತಲ್ ಪಾಂಡ್ಯ ಪ್ರಮುಕ ಪಾತ್ರದಲ್ಲಿ ನಟಿಸಿದ್ದು ಶಂಕರ್ ಮೂರ್ತಿ ಅವಿನಾಶ್ ಮುದ್ದಪ್ಪ ಸತೀಶ್ ಉಳಿದ ತಾರಾಬಳಗದಲ್ಲಿದ್ದಾರೆ. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ವಿನಯ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರಕ್ಕೆ ಸತೀಶ್ ಆರ್ಯನ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಅರುಣ್ ಹಾಗೋ ಗೋಪಿ ಶೀಗೆಹಳ್ಳಿ ಸಾಹಿತ್ಯ ಬರೆದಿದ್ದಾರೆ. ರವಿಪೂಜಾರ್ ಈ ಚಿತ್ರದ ಕಲಾ ನಿರ್ದೇಶನ ಹಾಗೂ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
.

ನಾಯಕ ರುದ್ರ ಪ್ರಯಾಗ್ ಐ.ಟಿ.ಕಂಪನಿಯಲ್ಲಿ ವರ್ಕ್ ಮಾಡುತ್ತಿದ್ದವರು ಒಬ್ಬ ಕಲಾವಿದನಾಗಬೇಕೆಂದ ಆಸೆಯಿಂದ ಕೆಲಸ ತೊರೆದು ಚಿತ್ರ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.
.
#ManjunathanaGeleyaru #Cineloka

 
ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಚಲನಚಿತ್ರಗಳ ಶೀರ್ಷಿಕೆಗಳೇ ವಿಶೇಷವಾಗಿರುತ್ತವೆ. ಆಕರ್ಷಕವು ಆಗಿರುತ್ತದೆ. ಅಂತಹ ಮತ್ತೊಂದು ಚಿತ್ರವೇ ‘ಗಂಡುಲಿ’ ವಿನಯ್ ರತ್ನಸಿದ್ದಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಕಳೆದ ಸೋಮವಾರ ಆರ್.ಟಿ.ನಗರದ ಶ್ರೀವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಪಕ್ಕ ಹಳ್ಳಿಯ ಸೊಗಡಿನ ಕಥಾ ಹಂದರ ಹೊಂದಿರುವ ಈ ಚಿತ್ರದ ನಾಯಕನ ಪಾತ್ರವನ್ನೂ ಕೂಡ ನಿರ್ದೇಶಕ ವಿನಯ್ ಅವರೇ ನಿರ್ವಹಿಸುತ್ತಿದ್ದಾರೆ. ವಿನಯ್ ರತ್ನಸಿದ್ದಿ ಈ ಹಿಂದೆ ಇಂಜಿನಿಯರ್ಸ್ ಹಾಗೂ ಕಿಲಾಡಿಗಳು ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಗಂಡುಲಿ ಇವರ ಮೂರನೇ ಚಿತ್ರವಾಗಿದೆ.
ಇದೇ ಮೊದಲ ಬಾರಿಗೆ ಗ್ರಾಮೀಣ ಕಥಾ ಹಂದರವನ್ನು ಕೈಗೆತ್ತಿಕೊಂಡಿರುವ ವಿನಯ್ ಈ ಚಿತ್ರಕ್ಕೆ ತುಮಕೂರು, ಕೆ.ಆರ್.ಪೇಟೆ, ಚಾಮರಾಜನಗರ ಸುತ್ತಮುತ್ತ 35 ದಿನಗಳ ಕಾಲ ಚಿತ್ರೀಕರಣ ನಡೆಸುವ ಯೋಜನೆ ಹಾಕಿಕೊಂಡಿದ್ದಾರೆ. ಮುಹೂರ್ತದ ನಂತರ ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡಿದ ವಿಜಯರ್‍ರತ್ನಸಿದ್ಧಿ ಗಂಡುಲಿ ಎನ್ನುವುದು ನಾಯಕನ ನಿಕ್‍ನೇಮ್ ಗ್ರಾಮೀಣ ಪ್ರದೇಶಗಳಲ್ಲಿ ಧೈರ್ಯವಂತ, ಸಾಹಸಿ ಯುವಕರನ್ನು ಗಂಡುಲಿ (ಗಂಡುಹುಲಿ) ಎಂದು ಕರೆಯುವುದು ರೂಡಿಯಲ್ಲಿದೆ. ಅದನ್ನೇ ಚಿತ್ರದ ಶೀರ್ಷಿಕೆಯಾಗಿ ಮಾಡಿಕೊಂಡಿದ್ದೇವೆ. ನಮ್ಮ ಚಿತ್ರದ ಕಥೆ ಕೂಡ ಅಂತ ಒಬ್ಬ ಯುವಕನ ಮೇಲೆ ನಡೆಯುತ್ತದೆ. ಒಬ್ಬ ಹುಡುಗ ತನ್ನ ಹಳ್ಳಿಯನ್ನು ಹೇಗೆಲ್ಲ ಏಳಿಗೆ ಮಾಡಬಹುದು ಅಲ್ಲದೇ ಹಳ್ಳಿಯನ್ನು ಹೇಗೆಲ್ಲ ಹಾಳುಮಾಡಬಹುದು ಎಂಬುದನ್ನು ಚಿತ್ರದಲ್ಲಿ ನಾಯಕನ ಪಾತ್ರದ ಮೂಲಕ ತೋರಿಸಿದ್ದೇವೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಇಡೀ ಚಿತ್ರದ ಕಥೆ ಹಳ್ಳಿ ಬ್ಯಾಕ್ ಡ್ರಾಪ್‍ನಲ್ಲಿ ನಡೆಯುತ್ತಿದೆ ಎಂದು ಹೇಳಿದರು.
.
ನಂತರ ನಾಯಕಿ ಛಾಯಾದೇವಿ ಮಾತನಾಡಿ ಸಿಟಿಯಿಂದ ಹಳ್ಳಗೆ ಡಾಕ್ಟರ್ ಆಗಿ ಬರುವ ಪಾತ್ರವನ್ನು ನಾನು ಕಾಣಿಸಿಕೊಂಡಿದ್ದೇನೆ ಎಂದು ತನ್ನ ಪಾತ್ರದ ಬಗ್ಗೆ ಹೇಳಿದರು. ಈ ಹಿಂದೆ ಎ.ಟಿ.ಎಂ. ಚಿತ್ರಕ್ಕೆ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿದ್ದ ರವಿದೇವ್ ಈ ಚಿತ್ರದ 4 ನಾಡುಗಳನ್ನು ಕಂಪೋಸ್ ಮಾಡಿದ್ದಾರೆ. ಆಗಷ್ಟ್ ಅಂತ್ಯದ ವೇಳೆಗೆ ಚಿತ್ರೀಕರಣ ಮುಗಿಸಿ ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರಬೇಕೆಂಬ ಯೋಜನೆಯನ್ನು ಚಿತ್ರದ ನಿರ್ದೇಶಕ ಆದ ವಿನಯ್ ರತ್ನ ಸಿದ್ದಿ ಹಾಕಿಕೊಂಡಿದ್ದಾರೆ.
.
ಧಮೇಂದ್ರ ಅರಸ್ ಸುಧಾ ಬೆಳವಾಡಿ ಗೌತಮ್ ವಿಜಯ್ ಪ್ರಜ್ವಲ್, ಶಿವು ಹಾಗೂ ಸಂತೋಷ್ ಉಳಿದ ತಾರಾಬಳಗದಲ್ಲಿ ನಟಿಸುತ್ತಿದ್ದಾರೆ.
#Ganduli #Cineloka

ಸರ್ಜಾ ಕುಟುಂಬದಿಂದ ಇಂಡಸ್ಟ್ರಿಗೆ ಕಾಲಿಟ್ಟಿರುವ ಎಲ್ಲ ಪ್ರತಿಭೆಗಳು ಆ್ಯಕ್ಷನ್‌ ಸ್ಟಾರ್‌ಗಳೇ, ಈಗ ಆ ಮನೆಯಿಂದ ಬಂದಿರುವ ಪವನ್‌ತೇಜಾ ನಟನೆಯ 'ಅಥರ್ವ' ಸಹ ಪಕ್ಕಾ ಆ್ಯಕ್ಷನ್‌ ಮತ್ತು ಕಮರ್ಷಿಯಲ್‌ ಸಿನಿಮಾ.

ಕಾಲೇಜಿನಲ್ಲಿ ಓದುತ್ತಿರುವ ಸಾಮಾನ್ಯ ಹುಡುಗ ಅಥರ್ವ, ಮೊದಲ ಬಾರಿಗೆ ನೋಡಿದ ಕೂಡಲೇ ನಾಯಕಿ ಮೇಲೆ ಲವ್‌ ಆಗುತ್ತದೆ. ಇನ್ನೇನು ಪ್ರೀತಿ ಬಲಿಯಬೇಕು ಎನ್ನುವಷ್ಟರಲ್ಲಿ ನಾಯಕ ನಾಯಕಿಯ ಕಣ್ಣಿಗೆ ವಿಲನ್‌ ರೀತಿ ಕಾಣುತ್ತಾನೆ, ಇದ್ಯಾಕೆ ಹೀಗೆ ಎಂದು ತಿಳಿಯಲು ಚಿತ್ರಮಂದಿರಕ್ಕೆ ಹೋಗಬೇಕು.
.

ಅಥರ್ವ ಚಿತ್ರದಲ್ಲಿ ಎಲ್ಲವೂ ಇದೆ, ಸುಂದರ ಹಾಡುಗಳು, ಕಣ್ಣಿಗೆ ಹಬ್ಬ ಎನಿಸುವಂತಹ ಛಾಯಾಗ್ರಹಣ, ನಾಯಕನ ಭರ್ಜರಿ ಆ್ಯಕ್ಷನ್‌ ಹೀಗೆ ಇದೆಲ್ಲದರ ನಡುವೆ ಒಂದಷ್ಟು ನ್ಯೂನ್ಯತೆಗಳು ಇದೆ. ಆದರೆ ನಿರ್ದೇಶಕರ ಮೊದಲ ಸಿನಿಮಾ ಎಂದು ಆ ನ್ಯೂನ್ಯತೆಗಳಿಗೆ ಮಾರ್ಜಿನ್‌ ನೀಡಬಹುದು.
.

ಪವನ್‌ ತೇಜಾ ಮೊದಲ ಚಿತ್ರವಾದರೂ ಒಳ್ಳೆ ಅಭಿನಯ ನೀಡಿದ್ದಾರೆ. ಆ್ಯಕ್ಷನ್‌ ಸಿನಿಮಾ ಮಾಡುವುದಕ್ಕೆ ಹೇಳಿ ಮಾಡಿಸಿದಂತಹ ಮೈಕಟ್ಟು ಅವರದ್ದು, ನಾಯಕಿಗೆ ಮೊದಲ ನೋಟದಲ್ಲಿಯೇ ಇಷ್ಟವಾಗುವಂತೆ ನೋಡುಗರಿಗೂ ಇಷ್ಟವಾಗುತ್ತಾರೆ.ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಆರಡಿ ನಟ ಸಿಕ್ಕಿದ್ದಾನೆ.  ಸನಂ ಶೆಟ್ಟಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದಾರೆ. ಸಿನಿಮಾದ ಅಚ್ಚರಿ ಎಂದರೆ ಖಳ ನಟ ಯಶ್‌ ಶೆಟ್ಟಿ, ಕನ್ನಡ ಚಿತ್ರರಂಗದಲ್ಲಿ ಪ್ರತಿಭಾವಂತ ಖಳರಿಗೆ ಬರ ಇದ್ದು, ಬೇರೆ ಭಾಷೆಯಿಂದ ಆಮದು ಮಾಡಿಕೊಳ್ಳುತ್ತಿರುವ ಈ ಸಮಯದಲ್ಲಿ ಯಶ್‌ ಶೆಟ್ಟಿ ಖಡಕ್‌ ವಿಲನ್‌ ಆಗಿ ಹೊರ ಹೊಮ್ಮಿದ್ದಾರೆ. ತಮ್ಮ ವಿಚಿತ್ರ ಮ್ಯಾನರಿಸಂನಿಂದಾಗಿ ಪ್ರೇಕ್ಷರನ್ನು ದಿಗಿಲುಗೊಳ್ಳುವಂತೆ ಮಾಡುತ್ತಾರೆ.
.

ಉಳಿದಂತೆ ತಾರಾ ತಾನು ಮತ್ತೊಮ್ಮೆ ಅದ್ಭುತ ಅಮ್ಮ ಎಂಬುದನ್ನು ಪ್ರೂವ್‌ ಮಾಡಿದ್ದಾರೆ. ವಿಜೇತ್‌ಕೃಷ್ಣ ಅವರ ಸಂಗೀತ ಮತ್ತು ಸಿನಿಮಾಟೋಗ್ರಫರ್‌ ಶಿವಸೀನ ಅವರ ಕೆಲಸ ಇಷ್ಟವಾಗುತ್ತದೆ. ಪಕ್ಕಾ ಕಮರ್ಷಿಯಲ್‌ ಮತ್ತು ಆ್ಯಕ್ಷನ್‌ ಸಿನಿಮಾಗಳನ್ನು ಇಷ್ಟಪಡುವವರು ಈ ಚಿತ್ರವನ್ನು ಎಂಜಾಯ್‌ ಮಾಡಬಹುದು.
.
ರೇಟಿಂಗ್- 3/5

ನಿನ್ನೆ ಬಿಡುಗಡೆಯಾಗಿದ್ದ ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ 'ದಿ ವಿಲನ್‌' ಚಿತ್ರದ ‘ಐ ಆ್ಯಮ್‌ ವಿಲನ್‌’ ಹಾಡು ಒಂದು ಮಿಲಿಯನ್‌ ವಿವ್ಯ್ಸೂ ಆಗಿದೆ ಮತ್ತು ಯೂಟ್ಯೂಬ್‌ನಲ್ಲಿ ನಂ 1 ಸ್ಥಾನದಲ್ಲಿ ಟ್ರೆಂಡಿಂಗ್‌ನಲ್ಲಿದ್ದಾನೆ.

.

ಡಾ.ಶಿವರಾಜ್‌ಕುಮಾರ್‌ ಮತ್ತು ಕಿಚ್ಚ ಸುದೀಪ್‌ ನಟನೆಯ ಈ ಚಿತ್ರದ ಎರಡು ಟೀಸರ್‌ಗಳು ಇತ್ತೀಚಗೆ ಯೂ ಟ್ಯೂಬ್‌ನಲ್ಲಿ ದೊಡ್ಡ ಹಂಗಾಮವನ್ನೇ ಮಾಡಿದ್ದವು. ಈಗ ಈ ಲಿರಿಕಲ್‌ ಹಾಡು ದೊಡ್ಡ ಹಿಟ್‌ ಆಗಿದ್ದು, ಇಬ್ಬರು ನಟರ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಹಾಡಿನಲ್ಲಿ ಸಿನಿಮಾದ ಮೇಕಿಂಗ್‌ ವಿಡಿಯೋವನ್ನು ಹಾಕಲಾಗಿದ್ದು, ಶಿವರಾಜ್‌ಕುಮಾರ್‌ ಅವರ ಸ್ಟಂಟ್‌ ಮತ್ತು ಸುದೀಪ್‌ ಅವರ ಕೆಲ ಸೀನ್‌ಗಳು ನೋಡುಗರನ್ನು ಸೆಳೆದಿದೆ.
.

ಒಟ್ಟಿನಲ್ಲಿ ವಿಲನ್‌ ಸಿನಿಮಾ ಬಿಡುಗಡೆಗೆ ಮುನ್ನವೇ ಈ ರೀತಿಯ ಕ್ರೇಜ಼್ ಕ್ರಿಯೇಟ್‌ ಆಗಿದೆ, ಸಿನಿಮಾ ಬಿಡುಗಡೆಯಾದ ನಂತರ ಏನೇನಾಗುತ್ತೋ ನೋಡಬೇಕು.

Song Link -->> https://www.youtube.com/watch?v=CMVd2MYd0cc&feature=youtu.be


#Cineloka #TheVillain 

 
ಹಾರರ್‌ ಸಿನಿಮಾಗಳಲ್ಲಿ ದೆವ್ವ ಚಿತ್ರದ ಪಾತ್ರದಾರಿಗಳಿಗೆ ಕಾಟ ಕೊಡುವುದು ಎಲ್ಲ ಸಿನಿಮಾಗಳಲ್ಲಿಯೂ ಬರುತ್ತದೆ. ಅದು ಟ್ರಂಕ್‌ನಲ್ಲಿಯೂ ಮರುಕಳಿಸಿದೆ. ಆದರೆ ಟ್ರಂಕ್‌ ಹಾರರ್‌ ಕಥೆಗೆ ಸೆಂಟಿಮೆಂಟ್‌ ಅಂಶಗಳನ್ನು ಬೆರಸಿ ಒಂದಷ್ಟು ಇಷ್ಟವಾಗುವಂತೆ ಮಾಡಿದ್ದಾರೆ.
.
ತನ್ನ ಸುತ್ತ ಆತ್ಮವೊಂದು ಓಡಾಡುತ್ತಿದೆ, ಎಂಬುದರ ಅರಿವು ನಾಯಕನಿಗೆ ಬರುತ್ತದೆ, ಇದೇ ಅನುಭವ ಆತನ ತಾಯಿಗೂ ಆಗಿರುತ್ತದೆ ಹಾಗಾಗಿ ಆತ ಮನೆಗೆ ರಿಯಲ್‌ ಗೋಸ್ಟ್‌ ಹಂಟರ್‌ಗಳನ್ನು ಕರೆತಂದು ಆತ್ಮದ ಹುಡುಕಾಟಕ್ಕೆ ಸಿದ್ಧವಾಗುತ್ತಾನೆ.
ರಿಯಲ್‌ ಗೋಸ್ಟ್‌ ಹಂಟರ್‌ಗಳು ಬಂದು ಆತ್ಮವನ್ನು ಹುಡುಕುತ್ತಾರೆ. ಆ ಆತ್ಮದಿಂದ ಏನಾದರೂ ಸಮಸ್ಯೆ ಆಗುತ್ತಾದ ಎಂಬುದು ಚಿತ್ರದ ಕಥೆ. ಆತ್ಮದಿಂದ ಸಮಸ್ಯೆಗೆ ಸಿಲುಕುವ ಸಾಕಷ್ಟು ಸಿನಿಮಾಗಳು ಬಂದಿವೆ, ಅವೆಲ್ಲವೂ ಒಂದೇ ಫಾರ್ಮ್ಯಾಟ್‌, ಟ್ರಂಕ್‌ ಕೂಡಾ ಆ ವಿಚಾರದಲ್ಲಿ ಅದೇ ಸಾಲಿಗೆ ಸೇರುತ್ತದೆ. ಆದರೆ ಈ ಸಿನಿಮಾದ ಪರಿಸರ ಮಾತ್ರ ಬೇರೆ ಅಷ್ಟೇ.
.
ಬಹುತೇಕ ಹಾರರ್‌ ಸಿನಿಮಾಗಳಂತೆ ಈ ಚಿತ್ರದಲ್ಲಿಯೂ ಮೊದಲರ್ಧ ವೀಕು, ದ್ವಿತಿಯಾರ್ಧ ಸಸ್ಪೆನ್ಸ್ ಗೆ ಬ್ರೇಕು ಎಂಬಂತೆ ಫಸ್ಟ್‌ ಆಫ್‌ನಲ್ಲಿ ಪ್ರೇಕ್ಷಕನಿಗೆ ಏನನ್ನು ಹೇಳದೆ, ಎಲ್ಲವನ್ನು ಸೆಕೆಂಡ್‌ ಆಫ್‌ನಲ್ಲಿ ರಿವೀಲ್‌ ಮಾಡುತ್ತಾ ಹೋಗುತ್ತಾರೆ.
.
ಟ್ರಂಕ್‌ ಸಿನಿಮಾದಲ್ಲಿ ಹಿನ್ನೆಲೆ ಸಂಗೀತ ಮತ್ತು ಸಿನಿಮಾಟೋಗ್ರಫರ್‌ ಮಾಡಿಕೊಂಡಿರುವ ಲೈಟಿಂಗ್‌ ಗಮನ ಸೆಳೆಯುತ್ತದೆ. ಈ ಸಿನಿಮಾದಲ್ಲಿ ಹಾರರ್‌ ಜತೆ ಸಹೋದರ-ಸಹೋದರಿಯ ಬಾಂಧವ್ಯದ ಕಥೆಯೂ ಇದೆ. ನಿರ್ದೇಶಕಿ ರಿಶಿಕಾ ಫ್ಲ್ಯಾಶ್‌ ಬ್ಯಾಕ್‌ನ್ನು ಬಹಳ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಹಾರರ್‌ ಕಥೆಯಲ್ಲೂ ಸೆಂಟಿಮೆಂಟ್‌ ಬೆರೆಸಿ, ಒಂದಷ್ಟು ಹೊತ್ತು ಮನಮಿಡಿಯುವಂತೆ ಮಾಡಲಾಗಿದೆ. ಆದರೆ ಕ್ಲೈಮ್ಯಾಕ್ಸ್‌ನ್ನು ಫೇಲವ ಗೊಳಿಸಿದ್ದು ಮಾತ್ರ ನೋಡುಗನಿಗೆ ನಿರಾಸೆ ಆಗುತ್ತದೆ. ಟ್ರಂಕ್‌ ಸಿನಿಮಾ ಟೆಕ್ನಿಕಲಿ ಬಹಳ ಚೆನ್ನಾಗಿದೆ.
.
ನಿಹಾಲ್‌, ವೈಶಾಲಿ ದೀಪಕ್‌ ಇಬ್ಬರು ಭರವಸೆಯ ನಟ ನಟಿಯರಾಗಿ ಹೊರ ಹೊಮ್ಮಿದ್ದಾರೆ. ಅರುಣಾ ಬಾಲರಾಜ್‌, ಸುಂದರಶ್ರೀ ತಮಗೆ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.
ಹಾರರ್‌ ಸಿನಿಮಾವನ್ನು ನೋಡಲು ಇಷ್ಟಪಡುವವರು ಟ್ರಂಕ್‌ ಸಿನಿಮಾವನ್ನೊಮ್ಮೆ ನೋಡಬಹುದು.
.
ರೇಟಿಂಗ್ - 3.25/5.
#TRUNK #Cineloka
ದುಡ್ಡೇ ಜೀವನ ಅಲ್ಲ ಎನ್ನುವ 'ಡಬಲ್‌ ಇಂಜೀನ್‌' :
---------------
ಬಾಂಬೆ ಮಿಠಾಯಿ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಚಂದ್ರಮೋಹನ್‌ ಡಬಲ್ ಇಂಜೀನ್‌ ಎಂಬ ಮತ್ತೊಂದು ಸಿನಿಮಾ ಮಾಡಿದ್ದು, ಅದು ಈ ವಾರ ಬಿಡುಗಡೆಯಾಗಿದೆ.
ಬಾಂಬೆ ಮಿಠಾಯಿಯಲ್ಲಿ ಚಂದ್ರಮೋಹನ್‌ ಡಬ್ಬಲ್‌ ಮೀನಿಂಗ್‌ ಡೈಲಾಗ್‌ಗಳ ಮೂಲಕ ಭರ್ಜರಿ ಎಂಟರ್‌ಟೈನ್‌ಮೆಂಟ್‌ ನೀಡಿದ್ದರು. ಈಗ ಡಬಲ್‌ ಇಂಜಿನ್‌ನಲ್ಲಿ ಅದನ್ನು ದುಪ್ಪಟ್ಟು ಮಾಡಿದ್ದಾರೆ.
ಒಂದು ಊರಿನಲ್ಲಿ ಮೂವರು ಕೆಲಸಕ್ಕೆ ಬಾರದ ಯುವಕರು (ಚಿಕ್ಕಣ್ಣ, ಪ್ರಭು, ಅಶೋಕ). ಇರುತ್ತಾರೆ, ಅದೇ ಊರಿನಲ್ಲಿ ಜೀವನಕ್ಕಾಗಿ ಯಥೇಚ್ಚವಾಗಿ ಸಾಲ ಮಾಡಿಕೊಂಡಿರುವ ವಿಧವೆ[ಸುಮನ್‌ ರಂಗನಾಥ್‌] ಯೊಬ್ಬಳು ಇರುತ್ತಾಳೆ. ಈ ಮೂರು ಜನರಿಗೆ ಆಕೆಯ ಮೇಲೆ ಕಣ್ಣು, ಕಡೆಗೆ ಹಣ ಸಂಪಾದನೆಗೆ ಒಂದು ಚೊಂಬಿನ ಹಿಂದೆ ಎಲ್ಲರೂ ಬೀಳುತ್ತಾರೆ. ಕಡೆಗೆ ಆ ಚೊಂಬು ಅವರಿಗೆ ಸಿಗುತ್ತದಾ, ಅದನ್ನು ಪಡೆದು ಹಣ ಸಂಪಾದಿಸುತ್ತಾರಾ ಎಂಬುದೇ ಸಿನಿಮಾದ ಕಥೆ.
ಸಿನಿಮಾ ಶುರುವಾದಾಗಿನಿಂದಲೂ ಎಂಟರ್‌ಟೈನ್‌ ಮಾಡಲೇಬೇಕು ಎಂಬ ಉದ್ದೇಶದಿಂದ ನಿರ್ದೇಶಕರು ಯಥೇಚ್ಚವಾಗಿ ಡಬ್ಬಲ್‌ ಮೀನಿಂಗ್‌ ಡೈಲಾಗ್‌ಗಳನ್ನು ತುಂಬಿದ್ದಾರೆ. ಚಿತ್ರವು ಎಲ್ಲೂ ಬೋರ್ ಆಗದ ರೀತಿ ನಿರ್ದೇಶಕರು ದೃಶ್ಯಗಳನ್ನು ಹೆಣೆದಿದ್ದಾರೆ.
ನಿರ್ದೇಶಕರ ಎಂಟರ್‌ಟೈನ್‌ಮೆಂಟ್‌ ಫ್ಯಾಕ್ಟರ್‌ಗೆ ಇಡೀ ಸಿನಿಮಾ ತಂಡ ಸಾಥ್‌ ನೀಡಿದೆ. ಸುಚೇಂದ್ರ ಪ್ರಸಾದ್, ಸಾಧುಕೋಕಿಲಾ, ಚಿಕ್ಕಣ್ಣ, ಸುಮನ್‌ ರಂಗನಾಥ್‌ ಎಲ್ಲರೂ ತಮ್ಮ ನಟನೆ ಮೂಲಕ ಜನರನ್ನು ನಕ್ಕು ನಗಿಸುತ್ತಾರೆ.
.
ಈ ಸಿನಿಮಾದಲ್ಲಿ ಬರೀ ತಮಾಷೆಯಿಲ್ಲ ಬದಲಿಗೆ ಯುವಕರಿಗೆ ಹಣದ ಹಿಂದೆ ಹೋಗಬೇಡಿ, ಕೃಷಿಯನ್ನು ನಂಬಿ ಅದು ನಿಮ್ಮನ್ನು ಕೈ ಬಿಡುವುದಿಲ್ಲ ಎಂಬ ಸಂದೇಶವಿದೆ. ಯುವಕರು ಈ ಸಿನಿಮಾವನ್ನು ಸಿಕ್ಕಾಪಟ್ಟೆ ಎಂಜಾಯ್‌ ಮಾಡುತ್ತಾರೆ.
.
ಎರಡು ಗಂಟೆ ಸಂಪೂರ್ಣ ಮನರಂಜನೆ ಬಯಸುವ ಪ್ರೇಕ್ಷಕರು ಈ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು.
.
ರೇಟಿಂಗ್ - 3.5/5
.
#DoubleEngine #Cineloka

Director Mahesh known as Mussanje Mahesh, who had handled the megaphone for Kannada film Jindaa that was released in 2017, has tried his best with a murder mystery this time. Though he has succeeded in ensuring the screenplay crisp during the pre-intermission session, he lost control over it in the post-intermission, especially in the climax. Though some of the dialogues are good, others dialogues, especially those in the court hall deserve to be trimmed or removed.

.

During the first half, Ragini Dwivedi steals the show with her sterling performance. She is convincing as a rough and tough cop. Her body language and mannerisms and also dialogue delivery deserve appreciation. Among the four heroines, it is Meghana Raj who looks bold and beautiful. Surprisingly, Deepti, who maintains a low profile throughout the film, becomes emboldened in the climax scene.

.

The film begins with conservancy workers finding a dead body in a garbage bin near a community hall. The police commissioner hands over the case to Jhansi (Ragini Dwivedi) who was under suspension for threatening a Deputy Commissioner of Police (DCP) with a pistol. Director makes Ragini’s entry interesting with a stunt sequence in which many well-built goons biting the dust for making an attempt to rape her.

.

The story of MMCH is about four girls Megha (Meghana Raj), Mala (Deepti), Chaya (Prathama Prasad) and Harshita (Samyukta Hornad) who hail from Mengaluru, Mysuru, Chamarajanagar and Hassan. They come to Bengaluru to pursue higher studies. They happen to visit Nanjundeswara Bakery maintained by Manoj (Yuvaraj). Manoj tries to come to closer to Deepti. After a few days friendship that leads to physical relationship, Manoj wants to avoid Deepti. He becomes adamant when Deepti’s friends plead him to marry her. In unavoidable circumstances, Deepti’s friends have to take a decision. To know about  their decision and who kills whom, you have to visit the nearest theatre to watch this 129-minute film.

Music director Sridhar V Sambram has done a good job. Songs are peppy and melodious.

 

Barring few flaws,MMCH is worth a dekko.

 Rating - 3/5

 
ಮೊದಲ ಸಂಚಿಕೆಯಲ್ಲಿ ಬಹದ್ದೂರ್‍ ಎಂಟ್ರಿ ಇದೇ ಭಾನುವಾರದಿಂದ ರಾತ್ರಿ 9ಕ್ಕೆ
.
ಕನ್ನಡಕಿರುತೆರೆಯಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಸಮಾಜ ಕಾಳಜಿ ಇಟ್ಟುಕೊಂಡು ಸಾಮಾನ್ಯಜನರಿಗೆ ಅನಕೂಲವಾಗಲು ಸೆಲಬ್ರಿಟಿಗಳು ಸಾಮನ್ಯಜನರಂತೆ ಕೆಲಸವನ್ನು ಮಾಡಿ ನೊಂದ ಮನಸ್ಸಿಗೆ ಸಹಾಯ ಮಾಡುವ ಏಕೈಕ ಶೋ "ಸದಾ ನಿಮ್ಮೊಂದಿಗೆ" ಇದೇ ಭಾನುವಾರದಿಂದರಾತ್ರಿ 9ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗುತ್ತಿದೆ.
.
ಪ್ರತಿಒಂದು ವಾರ ಅಸಹಾಯಕರಿಗೆ ಅವರ ಅವಶ್ಯಕತೆಗೆ ಚಿತ್ರರಂಗದ ದಿಗ್ಗಜರು ಸಾಮಾನ್ಯ ಜನರಂತೆ ಸಾರ್ವಜನಿಕರ ಮುಂದೆ ಕೆಲಸವನ್ನು ಮಾಡಿ ಹಣವನ್ನು ಸಂಗ್ರಹಿಸುತ್ತಾರೆ. ಆ ಸಂದರ್ಭದಲ್ಲಿ ಬಂದ ಹಣಕ್ಕೆ ಉದಯ ಟಿವಿ ಆ ಒಟ್ಟು ಹಣಕ್ಕೆ 100ರಷ್ಟು ಸೆರಿಸಿ ಅವರ ಜೀವನಕ್ಕೆ ಅನುಕೂಲವನ್ನು ಮಾಡಿಕೊಡುವ ಸಮಾಜ ಕಳಕಳಿಯ ಕಾರ್ಯಕ್ರಮ ಇದಾಗಿದೆ. ಹೂವು ಮಾರುವುದು, ಏಳೆನೀರು ಮಾರುವುದು, ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುವುದು,ಆಟೋ ಓಡಿಸುವುದು, ಗೋಲಿ ಸೋಡಾ ಮಾರುವುದು,ಸೊಪ್ಪು ಮಾರುವುದು ಪಾನಿ ಪುರಿ,ಕಬ್ಬಿನ ಹಾಲು ಮಾರುವುದು ಹೀಗೆ ಇನ್ನೂ ಅನೇಕ ಕೆಲಸವನ್ನು ಸಾರ್ವಜನಿಕರ ನಡುವೆ ಮಾಡಿ ಈ ಶೋಗೆ ಕೈ ಜೋಡಿಸಿದ್ದಾರೆ ಸ್ಯಾಂಡಲ್‍ವುಡ್‍ ತಾರೆಯರು.
.
"ಸದಾ ನಿಮ್ಮೊಂದಿಗೆ" ಯ ಮುಂಚುಣಿಯನ್ನು ಪಂಚಭಾಷಾತಾರೆ, ಕನ್ನಡದ ಹೆಸರಾಂತ ನಟಿ, ಚಿತ್ರರಂಗದಲ್ಲಿ 50 ವರ್ಷವನ್ನು ಯಶಸ್ವಿಯಾಗಿ ಪೂರೈಸಿದ “ಜೂಲಿಲಕ್ಮೀ”ಯವರು ವಹಿಸಿಕೊಂಡಿದ್ದಾರೆ. ಲಕ್ಷ್ಮೀಯವರು ಈ ಕಾರ್ಯಮದಲ್ಲಿ ತಮ್ಮ ಜೀವನಾನುಭವದಲ್ಲಿ ನೋಡಿರುವ ಘಟನೆಗಳನ್ನು ಉದಾಹರಣೆಗೆ ತೆಗೆದುಕೊಂಡು ಬಹಳ ಘನತೆಯಿಂದ ನಡೆಸಿಕೊಡುತ್ತಿದ್ದಾರೆ.
.
“ಎಷ್ಟೋ ಸಲ ನಮಗೆ ಅಸಹಾಯಕರಿಗೆ ಸಹಾಯ ಮಾಡಬೇಕು ಅನಿಸುತ್ತೆ ಆದರೆ ಯಾವುದೋ ಸಂದರ್ಭದಲ್ಲಿ ಅದನ್ನು ನಾವು ಮರೆತು ಬಿಡುತ್ತೇವೆ. ಆದರೆ ಉದಯ ಟಿವಿ ಈ ಕಾರ್ಯವನ್ನು ಕರ್ತವ್ಯ ಎಂದು ಭಾವಿಸಿ ದುರ್ಬಲರಿಗೆ ಬಲವನ್ನು ಕೊಡುವ ಅದ್ಭುತ ಕಾರ್ಯವನ್ನು ಮಾಡುತ್ತಿದೆ.ಇದಕ್ಕೆ ಸ್ಯಾಂಡಲ್‍ವುಡ್‍ನ ನಟನಟಿಯರು ಕೈ ಜೋಡಿಸಿದ್ದಾರೆ ಎಂಬುದು ಸಂತಸದ ವಿಷಯ. ಕನ್ನಡ ಕಿರುತೆರೆಯ ಇತಿಹಾದಲ್ಲಿಯೇ ಮೊದಲ ಬಾರಿಗೆ ಉದಯ ಟಿವಿ ಇಂತಹ ಕಾರ್ಯಕ್ರಮವನ್ನು ನಡೆಸುತ್ತಿರುವುದು ಅಭಿನಂದನಾರ್ಹ” ಎಂದು ಜುಲಿ ಲಕ್ಷ್ಮೀ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
.
“ಸದಾ ನಿಮ್ಮೊಂದಿಗೆ” ಕಾರ್ಯಕ್ರಮದಲ್ಲಿ ಮೊದಲ ಸಂಚಿಕೆಯಲ್ಲಿ ಅದ್ಧೂರಿಯಾಗಿ ಎಂಟ್ರಿ ಕೊಟ್ಟು ಬಹದ್ದೂರ್ ಆಗಿ ಮಿಂಚಿರೋ ಸರ್ಜಾ ಫ್ಯಾಮಿಲಿಯ ಭರ್ಜರಿ ಹುಡ್ಗ ಧ್ರುವ ಸರ್ಜಾ. ಇವರು ನರೇಂದ್ರಕುಮಾರ್ ಎಂಬ ಒಬ್ಬ ಆಟೋ ಡ್ರೈವರ್‍ಗೆ ಸಹಾಯ ಮಾಡಿದ್ದಾರೆ. ಧ್ರುವ ಸರ್ಜಾ ಅವರು ನರೇಂದ್ರ ಕುಮಾರ್‍ರ ಹಾಗೆ ಆಟೋ ಓಡಿಸಿ ಅವರಿಗೆ ಸಹಾಯವನ್ನು ಮಾಡಿದ್ದಾರೆ.
.
ಅಟೋ ಓಡಿಸುವ ಮೊದಲು ಆಟೋರಾಜ ಶಂಕ್ರಣ್ಣನ ಪ್ರತಿಮೆಗೆ ಹೂವಿನಹಾರ ಹಾಕಿ ನಮಸ್ಕರಿಸಿ ಶ್ರದ್ಧೆಯಿಂದಆಟೋ ಹತ್ತಿದರು. ಇವರಿಗೆ ಸಿಕ್ಕ ಮೊಟ್ಟ ಮೊದಲ ಕಸ್ಟಮರ್‍ ಗರ್ಭಿಣಿ ಅವರನ್ನು ಕರೆದುಕೊಂಡು ಹೋಗಿ ಶ್ರೀನಗರ ಆಸ್ಪತ್ರೆಗೆ ಬಿಟ್ರು. ಆ ಗರ್ಭಿಣಿ ಹತ್ರ ದುಡ್ಡು ತೆಗೆದುಕೊಳ್ಳದೇ ತಾವೇ ಆ ದುಡ್ಡನ್ನ ತಮ್ಮ ಜೇಬಿನಿಂದ ಕೊಟ್ಟಿದ್ದಾರೆ. ನಂತರ ವಿದ್ಯಾರ್ಥಿಗಳನ್ನು ವಾಸವಿ ಕಾಲೇಜ್‍ಗೆ ಬಿಟ್ಟು ಅಲ್ಲಿ ಸ್ಟೂಡೆಂಟ್ಸ್‍ ಜೊತೆ ಕುಣಿದು ಕುಪ್ಪಳಿಸಿ, ಮೋಜು ಮಸ್ತಿ ಮಾಡಿ ಮತ್ತೆ ಆಟೋ ಹತ್ತಿದರು. ಹೀಗೆ ದಿನ ಪೂರ್ತಿಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧ ದಂಪತಿಗಳ ವರೆಗೂ ಬೆಂಗಳೂರಿನಾದ್ಯಂತ ಎಲ್ಲಕಡೆ ಆಟೋ ಓಡಿಸಿದರು ಬಂದ ಹಣದಿಂದ ನರೇಂದ್ರಕುಮಾರ್‍ ಅವರ ಸ್ವಂತ ಆಟೋ ಮಾಡಿಕೊಳ್ಳೋ ಆಸೆಯನ್ನು ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ.
.
ಈ ಶೋನಲ್ಲಿ ಪ್ರತಿ ವಾರವೂಒಬ್ಬೊಬ್ಬ ಸೆಲಬ್ರಿಟಿಗಳು ಬಂದಿದ್ದಾರೆ ಅವರುಗಳಲ್ಲಿ ಶ್ರೀ ಮುರಳಿ, ಲವ್ಲಿ ಸ್ಟಾರ್ ಪ್ರೇಮ್, ಪ್ರೀಯಾಂಕ ಉಪೇಂದ್ರ, ಪಾರೂಲ್‍ ಯಾದವ್,ವಿಜಯರಾಘವೇಂದ್ರ, ಸೃಜನ್ ಲೋಕೇಶ್, ಮಾನ್ವಿತಾ ಹರೀಶ್,ಪ್ರೀಯಾಮಣಿ, ರಶ್ಮೀಕಾ ಮಂದಣ್ಣ, ರ್ಧನಂಜಯ್, ಚಿರಂಜೀವಿ ಸರ್ಜಾ, ಹೀಗೆ ಇನ್ನೂ ಅನೇಕರು ಭಾಗವಹಿಸಿದ್ದಾರೆ.
.
ಇನ್ನು ಈ ಕಾರ್ಯಕ್ರಮ ಸೃಜನ್ ಲೋಕೇಶ್ ನೇತೃತ್ವದ ಪ್ರತಿಷ್ಠಿತ"ಲೋಕೇಶ್ ಪ್ರೊಡಕ್ಷನ್" ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.
ಆರ್ಥಿಕ ದುರ್ಭಲರಿಗೆ ಬೆಂಬಲ ನೀಡಿ, ಬಲಹೀನರಿಗೆ ದೈರ್ಯ ತುಂಬುವ ಶಕ್ತಿ ನೀಡುವ, ಕಷ್ಟದ ಕಗ್ಗತ್ತಲೆಯಲ್ಲಿ ಮುಳಗಿದವರಿಗೆ ಬೆಳಕಿನ್ನು ಕೊಡುವ, ನೊಂದ ಬೆಂದ ಮನಸ್ಸಿಗೆ ಸೆಲಬ್ರಿಟಿಗಳಿಂದ ಸಾಂತ್ವನ ಹೆಳುವ ಉದಯ ಟಿವಿಯ ರೀಯಾಲಿಟಿ ಅಲ್ಲ್ಲರೀಯಲ್ ಶೋ "ಸದಾ ನಿಮ್ಮೊಂದಿಗೆ" ಪ್ರತಿ ಭಾನುವಾರ(15.7.2018) 9ಕ್ಕೆ ಪ್ರಸಾರವಾಗಲಿದೆ.
#UdayaTv #Cineloka #SadaNimmondige

ಮನರಂಜನೆಯೇ ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಸವಾಲು ಜವಾಬುಗಳ ಜುಗಲ್ಬಂದಿಯಾಗಿ ತೆರೆಯ ಮೇಲೆ ಇದೊಂದು ಹೊಸ ರೀತಿಯ, ವಿನೂತನ ರಿಯಾಲಿಟಿ ಶೋ ಆಗಿ ಮೂಡಿಬರಲಿದೆ. ಸವಾಲ್ ಗೆ ಸೈ ಕಾರ್ಯಕ್ರಮದಲ್ಲಿ ಹಿರಿತೆರೆ ಮತ್ತು ಕಿರುತೆರೆಯ ತಾರೆಯರ ದಂಡು ಭಾಗವಹಿಸಲಿದ್ದಾರೆ.

.

ಆಟದಲ್ಲಿ ಎರಡು ತಂಡವಿದ್ದು, ಪ್ರತಿ ತಂಡದಿಂದ ನಾಲ್ಕು ಜನ ಸ್ಪರ್ಧಿಸುತ್ತಾರೆ. ಸವಾಲುಗಳಿಗೆ ಜವಾಬು ಕೊಡಲು ತಾರೆಯರ ಪರದಾಟ, ಸೆಣೆಸಾಟ, ಜೊತೆಗೆ ಒಂದಿಷ್ಟು ಹುಡುಗಾಟವನ್ನೂ ನಾವು ನೋಡಬಹುದು. ಜವಾಬು ನೀಡಲಾಗದಿದ್ದರೆ ಅನಿರೀಕ್ಷಿತವಾದರೂ ಮಜ ನೀಡುವಂತ ಸಜೆಗಳನ್ನು ನೀಡಲಾಗುವುದು. ಗೆಲುವು ಸೋಲಿಗಿಂತ ಇಲ್ಲಿ ಕೊಡುವ ಕ್ರಿಯಾಶೀಲ ಸವಾಲುಗಳನ್ನು ಎದುರಿಸಲು ತಾರೆಯರು ಬರುತ್ತಿರುವುದು ಒಂದು ವಿಶೇಷ. ಹಿರಿಯರಿಂದ ಕಿರಿಯರವರೆಗೂ ಮನೆಮಂದಿಯೆಲ್ಲಾ ಕೂತು ನೋಡುವಂತ ಶೋ “ಸವಾಲ್ ಗೆ ಸೈ”.

.
ಹಿರಿತೆರೆ ಮತ್ತು ಕಿರುತೆರೆ, ಎರಡರಲ್ಲೂತನ್ನ ನಟನೆಯಿಂದ ಮನೆಮಾತಾಗಿರೋ ನಿತ್ಯರಾಂ, ಇದೇ ಮೊದಲ ಬಾರಿಗೆ “ಸವಾಲ್ ಗೆ ಸೈ” ಕಾರ್ಯಕ್ರಮದಿಂದ ನಿರೂಪಕಿಯಾಗಲಿದ್ದಾರೆ. ಜೊತೆಗೆ ತನ್ನ ಮಾತಿನಿಂದಲೇ ನಗುವಿನ ಹೊಳೆ ಹರಿಸುವ ನಿರಂಜನ್‍ ದೇಶಪಾಂಡೆ ಸಹ ನಿರೂಪಕನಾಗಿ ಕಾರ್ಯ ವಹಿಸಲಿದ್ದಾರೆ.
ವಾರಾಂತ್ಯದಲ್ಲಿ ಪ್ರಸಾರವಾಗುವ ಈ ಶೋನಲ್ಲಿ ಜನಕ್ಕೆ ತಮ್ಮ ನೆಚ್ಚಿನ ತಾರೆಯರ ಪರಿಚಯ, ಮತ್ತಷ್ಟು ಹತ್ತಿರದಿಂದ ಆಗುವುದರಲ್ಲಿ ಅನುಮಾನವೇಇಲ್ಲ. ಹಾಗೆ ಮಸ್ತಿ ಮತ್ತು ಮನರಂಜನೆ ಅನಿಯಮಿತವಾಗಿ ದೊರೆಯಲಿದೆ ಎಂಬುದು ಉದಯ ಟಿವಿಯ ಆಶಯ.

Page 6 of 17

LJOS nigif

May 1st

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top