nata

ttm

adweb

udgharsha

The Terrorist,the 7th outing of Director PC Shekar has released this week along with the biggie The Villain. It may not be an exaggeration to say this film – The Terrorist – is quite different assignment for Action Queen Ragini Dwivedi. Her sober and clever performance will be a surprise package for class audiences. At the same time, her hard-core fans, who wish to see her in more action sequences, may get bit disappointed.But surely this is a welcome change for Ragini.

.

The film takes off with an Afghanistan sequence but returns to Krishna Rajendra market and its surrounding areas in Bengaluru. It is the story of two sisters – Reshma and Asma – who are misused by terrorists. Reshma (Ragini) is working at a star hotel and falls in love with one of the colleagues. She is set to marry him but fails due to some unavoidable circumstances.

.

She prepares to sacrifice herself to rescue her sister Asma from terrorists. She agrees even to plant bombs at strategic locations in Bengaluru and surrenders to police on her own. What happens to her? How she succeeds in rescuing her sister is the climax.

Ragini Dwivedi has tried her best to entertain audience. Her dialogue delivery and body language are good. The audiences can emphathise and sympathise with Ragini who has acted well as a hapless sister who complete the tasks put forth by the terrorists.

.

Though the pre-intermission session tests your patience, it is the post-interval session that keeps you remain in your seats in the theatre. It is quite interesting. Screenplay is crispy. Director P C Sekhar deserves appreciation ensuring the narration interesting. It literally put the audiences at the edge of their seats as they follow the sequence of events.

.

S Pradeep Verma has done a good job in providing suitable background score. Costumes by Shubhangi Singh are good.

It is worth watching if you are prepared to watch some off beat fresh narrative.

Rating -3.25/5

 

ಬೆಂಗಳೂರಿನ ಹೆಸರುಘಟ್ಟ ಆಚಾರ್ಯ ಕಾಲೇಜಿನಲ್ಲಿ ಖ್ಯಾತ ನಿರ್ದೇಶಕ ಆರ್.ಚಂದ್ರು ನಿರ್ದೇಶನ ಮಾಡಿ ಸಿದ್ದೇಶ್ವರ ಎಂಟರ್ ಪ್ರೈಸಸ್ ಅಡಿಯಲ್ಲಿ ನಿರ್ಮಿಸುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಚಿತಾ ರಾಮ್ ಆಭಿನಯದ ಬಹುನಿರೀಕ್ಷೆಯ ಐ ಲವ್ ಯೂ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು ತಮಿಳಿನ ಖ್ಯಾತ ಸಾಹಸ ನಿರ್ದೇಶಕ ಗಣೇಶ್ ಮಾರ್ಗದರ್ಶನದಲ್ಲಿ ಉಪೇಂದ್ರ ಅವರ ಕಾಲೇಜ್ ಕ್ರಿಕೆಟ್‍ನ ರೋಚಕ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ.
.
ಅದ್ದೂರಿ ವೆಚ್ಚದ ಈ ಸಾಹಸ ದೃಶ್ಯಕ್ಕಾಗಿ ಕಾಸ್ಟ್ಲೀ ಕಾರುಗಳನ್ನು ಬಳಸುತ್ತಿರುವ ಸ್ಟಾರ್ ನಿರ್ದೇಶಕ ಆರ್.ಚಂದ್ರು ಹಲವಾರು ಜನ ಕಲಾವಿದರನ್ನು ಈ ಭರ್ಜರಿ ಸಾಹಸ ದೃಶ್ಯಕ್ಕಾಗಿ ಬಳಸಿಕೊಂಡಿದ್ದಾರೆ. ಚಿತ್ರೀಕರಣ ಶುರುವಾದಾಗಿನಿಂದಲೂ ತನ್ನ ವೈಶಿಷ್ಟ್ಯಗಳಿಂದ ಗಮನ ಸೆಳೆದಿರುವ ಐ ಲವ್ ಯೂ ಚಿತ್ರಕ್ಕೆ ಖ್ಯಾತ ಸಾಹಸ ನಿರ್ದೇಶಕ ಡಾ.ರವಿವರ್ಮ , ವಿನೋದ್ , ಹಾಗೂ ತಮಿಳಿನ ಫೇಮಸ್ ಸ್ಟಂಟ್ ಮಾಸ್ಟರ್ ಗಣೇಶ್ ಸಾಹಸ ಸಂಯೋಜಿಸಿರೋದು ವಿಶೇಷ.
.
ಇನ್ನು ಬಹು ಬಾಷಾ ನೃತ್ಯ ಸಂಯೋಜಕ ಚಿನ್ನಿ ಪ್ರಕಾಶ್ ಐ ಲವ್ ಯೂ ಗಾಗಿ ನೃತ್ಯ ನಿರ್ದೇಶನ ಮಾಡಿರೋದು ಈ ಚಿತ್ರದ ಮತ್ತೊಂದು ವಿಶೇಷವಾಗಿದೆ

 

ಎಂ.ಹರಿಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ “ನಾವೇ ಭಾಗ್ಯವಂತರು” ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಮೊನ್ನೆ ನಡೆಯಿತು. ಈಗಿನ ಕಾಲದ ಯುವಜನತೆ ಕುಡಿತದಂತಹ ದುಶ್ಚಟಕ್ಕೆ ಬಲಿಯಾಗಿ ಹೆತ್ತವರನ್ನು ಹಾಗೂ ಮನೆಯವರನ್ನು ಹೇಗೆಲ್ಲಾ ನಿರ್ಲಕ್ಷ್ಯ ಮಾಡುತ್ತಾರೆ. ಅದರಿಂದ ಉಂಟಾಗುವ ಪರಿಣಾಮಗಳೇನು ಎಂಬುದನ್ನು ನಾವೇ ಭಾಗ್ಯವಂತರು ಎಂಬ ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ ನಿರ್ದೇಶಕ ಎಂ.ಹರಿಕೃಷ್ಣ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಚಿನ್ನೇಗೌಡರು, ಚಲನಚಿತ್ರ ನಿರ್ಮಾಪಕರಾದ ಡಾ. ಬೆಂ ಕೋ ಶ್ರೀನಿವಾಸ್ ಹಾಗೂ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯರಂತಹ ದಿಗ್ಗಜರೆಲ್ಲಾ ಸೇರಿ ನಾವೇ ಭಾಗ್ಯವಂತರು ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದರು. ಈ ಚಿತ್ರದ 3 ಜನ ನಾಯಕರು ಕನ್ನಡ ಚಿತ್ರರಂಗದ ದಿಗ್ಗಜರಾದ ಡಾ|| ರಾಜ್‍ಕುಮಾರ್, ವಿಷ್ಣುವರ್ಧನ್ ಹಾಗೂ ಶಂಕರ್‍ನಾಗ್ ರವರ ಅಭಿಮಾನಿಗಳಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಅವರ ಆದರ್ಶಗಳನ್ನು ತಪ್ಪದೇ ಪಾಲಿಸುವ ಈ ಹುಡುಗರಲ್ಲಿರುವ ಕೆಟ್ಟ ಅಭ್ಯಾಸ ಎಂದರೆ ಮದ್ಯಪಾನ ಎನ್ನುವುದನ್ನು ಪ್ರೇಕ್ಷಕರಿಗೆ ಅರ್ಥವಾಗುವಂತೆ ಹೇಳಲಾಗಿದೆ. ಹರಿಕೃಷ್ಣ ಮೂಲತಃ ಒಬ್ಬ ಛಾಯಾಗ್ರಾಹಕರು. ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ.
.

ಸೂರಜ್ ಶ್ರಾವಂತ್, ಲೋಕೇಶ್, ದಿವ್ಯ, ಚಂದನಗೌಡ ಹಾಗೂ ಶಿಲ್ಪ ರವಿ ಈ ಚಿತ್ರದ ನಾಯಕ - ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಲಕ್ಷ್ಮಿದೇವಮ್ಮ, ಮುಖ್ಯಮಂತ್ರಿ ಚಂದ್ರು, ಸುಂದರರಾಜ್, ನಾರಾಯಣಸ್ವಾಮಿ, ರಾಮಕೃಷ್ಣ, ಅಂಜನಪ್ಪ, ಸುಚೇಂದ್ರ ಪ್ರಸಾದ್, ಬೇಬಿ ಕಾರುಣ್ಯ, ಮಿಮಿಕ್ರಿ ರಾಜು ಹೀಗೆ ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಎಂ.ಪಿ.ಬಸವಣ್ಣ ಈ ಚಿತ್ರಕ್ಕೆ ಸಾಹಿತ್ಯ ರಚಿಸಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಎಂ.ಪ್ರಕಾಶ್ ಹಾಗೂ ಹೆಚ್.ಎಸ್. ಅಶ್ವಥ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಹರಿಕೃಷ್ಣ ಮಾತನಾಡಿ ಬೆಂಕೋಶ್ರೀ ಅವರಿಗೆ ಹಾಡನ್ನು ಕೇಳಿಸಿದಾಗ ತುಂಬ ಇಷ್ಟಪಟ್ಟರು. ಮದರ್ ಸೆಂಟಿಮೆಂಟ್ ಸಾಂಗ್ ಕೇಳಿ ನನಗೆ ತುಂಬಾ ತಾಯಿ ನೆನಪಾದರು ಎಂದು ಭಾವುಕರಾದರು. ರಾಜವಿಸ್ಕಿಯಿಂದಾಗುವ ಅನಾಹುತವನ್ನು ಹೇಳುವ ಚಿತ್ರವಿದು. 3 ಜನ ನಾಯಕರಾದರೂ ಒಂದೊಂದು ಕಥೆ ಇರುತ್ತದೆ. ಈ 3 ಜನರ ಕಥೆಯಲ್ಲಿ ಮದ್ಯಪಾನದ ದುಷ್ಪರಿಣಾಮ ಹಾಗೂ ತಾಯಿ ಸೆಂಟಿಮೆಂಟ್ ಕಾಮನ್ನಾಗಿದೆ. ಕನ್ನಡ ಚಿತ್ರರಂಗದ ಮೂವರು ದಿಗ್ಗಜರ ಅಭಿಮಾನಿಗಳಾಗಿದ್ದ ಇವರು ಹೇಗೆ ತಮ್ಮ ತಪ್ಪನ್ನು ತಿದ್ದಿಕೊಂಡು ಬದಲಾದವರು ಭಾಗ್ಯವಂತರು ಎನ್ನುವುದೇ ಈ ಚಿತ್ರ ಕಥೆ ಎಂದು ಹೇಳಿದರು.
.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಬೆಂಕೋಶ್ರೀ ಮಾತನಾಡಿ ಈ ಚಿತ್ರರಂಗದಲ್ಲಿ ಶ್ರಮಪಟ್ಟರೆ ಯಾರು ಬೇಕಾದರೂ ಬೆಳೆಯಬಹುದು. ಅದಕ್ಕೆ ನಾನು ಸ್ಪಷ್ಟ ಉದಾಹರಣೆ. ಶಾಂತಲ ಚಿತ್ರಮಂದಿರಲ್ಲಿ ಬುಕ್ಕಿಂಗ್ ಕ್ಲರ್ಕ್ ಆಗಿ ನಂತರ ವಿತರಕನಾದೆ ನಿರ್ಮಾಪಕನಾದೆ. ಚಿತ್ರರಂಗದಲ್ಲಿ ಸೋಲು ಗೆಲುವು ಎರಡನ್ನು ಕಂಡ ಸಮಾಜದಲ್ಲಿ ನಾನೇನಾದರೂ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಚಿತ್ರರಂಗ ಹಾಗೂ ಮಾಧ್ಯಮಗಳೇ ಕಾರಣ. ಇಲ್ಲಿ ಎಲ್ಲರೂ ಬೆಳೆಯಲು ಅವಕಾಶವಿದೆ. ಚಿನ್ನೇಗೌಡರು ನನಗೆ ತುಂಬಾ ಆತ್ಮೀಯರು. ವಜ್ರೇಶ್ವರಿ ಸಂಸ್ಥೆಯನ್ನು ಬೆಳೆಸಿದವರು. ಈಗ ಫಿಲಂ ಛೇಂಬರ್ಸ್ ಅಧ್ಯಕ್ಷರಾಗಿದ್ದಾರೆ. ಅವರ ಮುಂದೆ ಬಹಳಷ್ಟು ಸಮಸ್ಯೆಗಳಿವೆ ಎಂದು ಹೇಳಿದರು. ನಂತರ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ಚಿನ್ನೇಗೌಡರು ಚಿತ್ರದ ಬಗ್ಗೆ ಮಾತನಾಡಿದರು.

 

ವಿಭಿನ್ನ ರಿಯಾಲಿಟಿ ಶೋಗಳು ಧಾರಾವಾಹಿಗಳ ಮೂಲಕ ಜನಪ್ರಿಯವಾಗಿರುವ ಜೀ ಕನ್ನಡ ವಾಹಿನಿ ಈಗ ಪೌರಾಣಿಕ ಧಾರಾವಾಹಿಗಳತ್ತ ಮುಖ ಮಾಡಿದೆ. ಇತ್ತೀಚೆಗಷ್ಟೇ “ಉಘೇ ಉಘೇ ಮಾÀದೇಶ್ವರ” ಎಂಬ ಪೌರಾಣಿಕ ಧಾರಾವಾಹಿಯನ್ನು ಆರಂಭಿಸಿದ್ದು, ಕೆಲವೇ ದಿನಗಳಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಸಂಪಾದಿಸಿದೆ. ಅದೇ ರೀತಿ ಈಗ ಮತ್ತೊಂದು ಪೌರಾಣಿಕ ಧಾರಾವಾಹಿಯನ್ನು ಆರಂಭಿಸಲು ಅಣಿಯಾಗಿದೆ. “ಶ್ರೀ ವಿಷ್ಣು ದಶಾವತಾರ” ಎಂಬ ಶೀರ್ಷಿಕೆಯಡಿ ನಿರ್ಮಾಣವಾಗುತ್ತಿರುವ ಪೌರಾಣಿಕ ಧಾರಾವಾಹಿಯ ಮೂಲಕ ಶ್ರೀ ಮಹಾವಿಷ್ಣುವಿನ 10 ಅವತಾರಗಳನ್ನು ಜೀ ವಾಹಿನಿಯಲ್ಲಿ ವೀಕ್ಷಕರಿಗೆ ಪರಿಚಯಿಸಲಾಗುತ್ತಿದೆ. ಅದ್ಧೂರಿ ವೆಚ್ಚದ ವೈಕುಂಠದ ಸೆಟ್ ಹಾಗೂ ಇತರ ಆಕರ್ಷಣೆಗಳೊಂದಿಗೆ ಶ್ರೀ ವಿಷ್ಣು ದಶಾವತಾರ ಕನ್ನಡ ಪ್ರೇಕ್ಷಕರ ಮುಂದೆ ಬರಲಿದೆ.
.

ಒಂದು ಸಿನಿಮಾ ಶೈಲಿಯಲ್ಲೇ ಈ ಧಾರಾವಾಹಿಯನ್ನು ನಿರ್ಮಾಣ ಮಾಡಲಾಗುತ್ತಿದ್ದು, ಅದ್ಧೂರಿ ಸೆಟ್‍ಗಳ ಗ್ರಾಫಿಕ್ಸ್ ಈ ಸೀರಿಯಲ್‍ನ ವಿಶೇಷವಾಗಿದೆ. ಮುಂಬೈ ಮೂಲದ ಕ್ರಿಯೇಟಿವ್ ಐ ಸಂಸ್ಥೆಯ ಧೀರಜ್ ಕುಮಾರ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಧಾರಾವಾಹಿಯನ್ನು ಸಂತೋಷ್ ಬಾದಲ್ ನಿರ್ಮಾಣ ಮಾಡುತ್ತಿದ್ದಾರೆ. ಆರ್ಯ ಸೂರ್ಯ, ಕಾವ್ಯ ಮಹದೇವ್, ಹರ್ಷ, ಅರ್ಜುನ್, ವಂದನ ಈ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
.

ಅಕ್ಟೋಬರ್ 15 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 8.00 ಗಂಟೆಗೆ ಶ್ರೀ ವಿಷ್ಣು ದಶಾವತಾರ ಪ್ರಸಾರವಾಗಲಿದೆ. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಹೀಗೆ ಯುಗಯುಗಾದಿಗಳಿಂದಲೂ ಲೋಕಕಲ್ಯಾಣಕ್ಕಾಗಿ ಶ್ರೀ ಮಹಾವಿಷ್ಣು ಎತ್ತುವ 10 ಅವತಾರಗಳ ಕಥೆಯೇ ಶ್ರೀ ವಿಷ್ಣು ದಶಾವತಾರ. ಅಮಿತ್ ಕಷ್ಯಪ್ ಮಹಾವಿಷ್ಣುವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಳ್ಳಿ ಸೊಗಡು ಖ್ಯಾತಿಯ ನಿಷಾ ಇಲ್ಲಿ ಮಹಾಲಕ್ಷ್ಮಿಯ ಪಾತ್ರವನ್ನು ನಿರ್ವಹಿಸಿದ್ದಾರೆ.
.

ನಿರ್ಮಾಪಕ ಧೀರಜ್‍ಕುಮಾರ್ ಮಾತನಾಡಿ ಭಾಷೆಗೆ ಯಾವುದೇ ಗಡಿಯಿಲ್ಲ. ಒಂದು ಒಳ್ಳೆಯ ಧಾರಾವಾಹಿಯನ್ನು ಮಾಡಿದ್ದೇವೆ. ಕನ್ನಡ ಹಾಗೂ ತಮಿಳಿನಲ್ಲಿ ನಿರ್ಮಾಣ ಮಾಡುತ್ತಿದ್ದು, ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಿಸುವುದು ಸವಾಲಾಗಿತ್ತು. ಮುಂಬೈನಲ್ಲಿ ಈ ಧಾರಾವಾಹಿಯ ಚಿತ್ರೀಕರಣ ನಡೆಸುತ್ತಿದ್ದೇವೆ ಎಂದು ಹೇಳಿದರು. ನಂತರ ರಾಘವೇಂದ್ರ ಹುಣಸೂರು ಮಾತನಾಡುತ್ತಾ ಈವರೆಗೆ ರಿಮೇಕ್ ಧಾರಾವಾಹಿಗಳೇ ಕಿರುತೆರೆಯಲ್ಲಿ ಹೆಚ್ಚಾಗಿ ಮೂಡಿಬರುತ್ತಿದ್ದವು. ಆದರೆ ಜೀ ಕನ್ನಡ ವಾಹಿನಿ ಸ್ವಮೇಕ್ ಧಾರಾವಾಹಿಗಳತ್ತ ಹೆಚ್ಚು ಗಮನ ಹರಿಸಿದೆ. ವಿಷ್ಣು ದಶಾವತಾರ ಕನ್ನಡ ಹಾಗೂ ತಮಿಳಿನಲ್ಲಿ ಚಿತ್ರೀಕರಣವಾಗುತ್ತಿದೆ. ಈಗಾಗಲೇ 50 ಎಪಿಸೋಡ್‍ಗಳನ್ನು ರೆಡಿ ಇಟ್ಟುಕೊಂಡಿದ್ದೇವೆ. ಕನಿಷ್ಠ 400 ರಿಂದ 500 ಕಂತುಗಳನ್ನು ಮಾಡುವ ಉದ್ದೇಶವಿದೆ. ಎಲ್ಲಾ ಕಲಾವಿದರನ್ನು ಇಲ್ಲಿಂದ ಮುಂಬೈಗೆ ಕರೆದುಕೊಂಡು ಹೋಗಿದ್ದು. ಅಲ್ಲೇ ಅವರಿಗೆ ವಸತಿ ವ್ಯವಸ್ಥೆ ಕೂಡ ಮಾಡಿಕೊಟ್ಟಿದ್ದೇವೆ. ನಮ್ಮ ಬಹುತೇಕ ಕಲಾವಿದರು ತಮಿಳಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಜೆಟ್ ಹೆಚ್ಚು ಎನ್ನುವ ಕಾರಣಕ್ಕಾಗಿ ತಮಿಳಿನಲ್ಲಿ ಕೂಡ ಒಮ್ಮೆಗೆ ನಿರ್ಮಾಣ ಮಾಡಲಾಗುತ್ತಿದೆ.

ವಿಷ್ಣು ಪಾತ್ರಧಾರಿ ಅಮಿತ್ ಒಬ್ಬ ಸಾಫ್ಟ್‍ವೇರ್ ಇಂಜಿನಿಯರ್ ಈ ಧಾರಾವಾಹಿಗಾಗಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದಾರೆ.

ಟೀಸರ್‌ಗಳು, ಹಾಡುಗಳಿಂದ ಅದ್ಧೂರಿ ನಿರೀಕ್ಷೆ ಹುಟ್ಟು ಹಾಕಿರುವ 'ದಿ ವಿಲನ್‌' ಸಿನಿಮಾದಲ್ಲಿ ಕಿಚ್ಚ ಸುದೀಪ್‌ ವಿಭಿನ್ನ ಗೆಟಪ್ಗಳು ಮತ್ತು 3-4 ವಿಭಿನ್ನ ಹೇರ್‌ಸ್ಟೈಲ್ ಗಳಲ್ಲಿ ಮಿಂಚಲಿದ್ದರಂತೆ.

.

ಹೌದು, ಈಗ ಬಿಡುಗೆಯಾಗಿರುವ ಟೀಸರ್‌ಗಳಲ್ಲಿ ಸುದೀಪ್‌ ಉದ್ದ ಕೂದಲು ಬಿಟ್ಟು ಮತ್ತು ಶಾರ್ಟ್‌ ಕಟಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ರೀತಿಯ ಪ್ರಯೋಗ ಕಿಚ್ಚ ಸುದೀಪ್‌ ಅವರ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಆಗುತ್ತಿದೆ.

.

ಈ ಎರಡು ಹೇರ್‌ ಸ್ಟೈಲ್‌ಗಳನ್ನು ಸುದೀಪ್‌ ಪತ್ನಿ ಪ್ರಿಯಾ ಓಕೆ ಮಾಡಿದ್ದಂತೆ. ಪ್ರೇಮ್‌ ಹೆರ್‌ಸ್ಟೈಲ್‌ ಡಿಸೈನ್‌ ಮಾಡಿಕೊಂಡು ಮನೆಗೆ ತಂದು ಸುದೀಪ್‌ ಪತ್ನಿ, ಅಪ್ಪ ಅಮ್ಮ ಎಲ್ಲರಿಗೂ ತೋರಿಸಿ ಒಪ್ಪಿಗೆ ಪಡೆದುಕೊಂಡಿದ್ದರಂತೆ.

.

ಈ ಸಿನಿಮಾ ಇದೇ 18ಕ್ಕೆ ರಾಜ್ಯಾದ್ಯಂತ ದಾಖಲೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತದೆ.

 

2009ರಲ್ಲಿ ಬೆಂಗಳೂರಲ್ಲಿ ನಡೆದ ಸರಣಿ ಬಾಂಬ್‌ ಸೊಧೀಟದ ಸುತ್ತಮುತ್ತ 'ದಿ ಟೆರರಿಸ್ಟ್‌' ಕಥೆಯನ್ನು ಹೆಣೆದಿದ್ದಾರಂತೆ ನಿರ್ದೇಶಕ ಪಿ ಸಿ ಶೇಖರ್‌.
.
ಈ ಸಿನಿಮಾದಲ್ಲಿ ರಾಗಿಣಿ ಮುಸ್ಲೀಂ ಯುವತಿಯಾಗಿ ನಟಿಸಿದ್ದಾರೆ. ಈಗಾಗಲೇ ಟ್ರೇಲರ್‌ ಮತ್ತು ಫಸ್ಟ್‌ ಲುಕ್‌ನಿಂದ ಗಮನ ಸೆಳೆದಿರುವ ಈ ಸಿನಿಮಾ 'ದಿ ವಿಲನ್‌' ಚಿತ್ರದ ಎದುರು ಅಕ್ಟೋಬರ್ 18 ರಂದು ಬಿಡುಗಡೆಯಾಗುತ್ತಿದೆ.

.

2009 ಬೆಂಗಳೂರಿನಲ್ಲಿ ಕೇವಲ 20 ನಿಮಿಷದ ಅಂತರದಲ್ಲಿ ಸರಣಿ ಬಾಂಬ್‌ ಸ್ಪೋಟಗಳು ನಡೆದಿದ್ದವು, ಈ ಸಮಯದಲ್ಲಿ ತನಿಖೆ ಯಾವ ರೀತಿ ನಡೆಯಿತು, ಅದರ ಸುತ್ತ ಈ ದಿ ಟೆರರಿಸ್ಟ್‌ ಕಥೆ ನಡೆಯುತ್ತದೆಯಂತೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷೆಯ ಚಿತ್ರ 'ಕೆ.ಜಿ.ಎಫ್‌'ನಲ್ಲಿ ತಾಯಿಯ ಸೆಂಟಿಮೆಂಟ್‌ ಇದೆಯಂತೆ.

ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ಸ್ವತಃ ಚಿತ್ರತಂಡವೇ ಹೇಳಿದೆ.

.

ನ.16ಕ್ಕೆ ಬಿಡುಗಡೆಯಾಗಬೇಕಿದ್ದ ಸಿನಿಮಾವನ್ನು ಡಿ 21ಕ್ಕೆ ಮುಂದೂಡಲಾಗಿದೆ. ಈ ಸಿನಿಮಾದಲ್ಲಿ ಯುನಿವರ್ಸಲ್‌ ಸಬ್ಜೆಕ್ಟ್ ಇದೆ ತಾಯಿ ಸೆಂಟಿಮೆಂಟ್‌ ಜತೆಗೆ ಹೋರಾಟದ ಕಥೆಯಿದೆ ಎಂದು ಯಶ್‌ ಹೇಳಿದರು.
.

ಈ ಸಿನಿಮಾದ ಹಿಂದಿ ಸಿನಿಮಾದ ರೈಟ್ಸ್‌ನ್ನು ರವೀನಾ ಟಂಡನ್‌ ಪತಿ ಅನಿಲ್‌ ತದಾನಿ, ನಟ ಫರ್ಹಾನ್‌ ಆಖ್ತರ್‌ ಪಡೆದುಕೊಂಡಿದ್ದು, ಅವರು ಪ್ರಮೋಶನ್‌ಗಾಗಿ ಹೆಚ್ಚಿನ ಸಮಯ ಕೇಳುತ್ತಿದ್ದಾರೆ ಆ ಕಾರಣಕ್ಕಾಗಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದೇವೆ ಎಂದು ಇದೇ ಸಮಯದಲ್ಲಿ ಯಶ್‌ ತಿಳಿಸಿದರು.
.

ಪ್ರಶಾಂತ್‌ ನೀಲ್‌ ನಿರ್ದೇಶನದ ಈ ಸಿನಿಮಾವನ್ನು ಹೊಂಬಾಳೆ ಫಿಲಂಸ್‌ ಬ್ಯಾನರ್‌ನಡಿ ವಿಜಯ್‌ ಕಿರಗಂದೂರು ನಿರ್ಮಾಣ ಮಾಡಿದ್ದಾರೆ.

ಚಿತ್ರವು ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

 

ಸಂತೋಷ್‌ ಆನಂದ್‌ರಾಮ್‌ ಮತ್ತು ಪುನೀತ್‌ರಾಜ್‌ಕುಮಾರ್‌ ಕಾಂಬಿನೇಶನ್‌ ಸಿನಿಮಾದ ಟೈಟಲ್‌ ಲಾಂಚ್‌ ದಿನಾಂಕವನ್ನು ಅಭಿಮಾನಿಯೊಬ್ಬರು, ಅ.10ಕ್ಕೆ ಹೇಳಲಿದ್ದಾರಂತೆ.
.

ಹೌದು, ರಾಜಕುಮಾರ ನಂತರ ಈ ಜೋಡಿ ಒಂದಾಗಿದ್ದು, ಆ ಸಿನಿಮಾ ಟೈಟಲ್‌ ಬಗ್ಗೆ ಎಲ್ಲರಿಗೂ ಕುತೂಹಲ ಇದೆ. ಹಾಗಾಗಿ ಟೈಟಲ್‌ ಯಾವಾಗ ಲಾಂಚ್‌ ಮಾಡುತ್ತೇನೆ ಎಂಬುದನ್ನು ಚಿತ್ರತಂಡ ಅ.10ರಂದು ಅಭಿಮಾನಿಯ ಕೈಯಲ್ಲಿ ರಿವೀಲ್‌ ಮಾಡುತ್ತಾರಂತೆ. ಟೈಟಲ್ ಕೂಡ ಅಭಿಮಾನಿಯೊಬ್ಬರಿಂದ ಬಿಡುಗಡೆ ಮಾಡಿಸಲು ಚಿತ್ರತಂಡ ನಿರ್ಧರಿಸಿದೆ
.
ಈ ಸಿನಿಮಾವನ್ನು ಹೊಂಬಾಳೆ ಫಿಲಂಸ್‌ ಬ್ಯಾನರ್‌ನಡಿ ವಿಜಯ್‌ ಕಿರಗಂದೂರು ನಿರ್ಮಾಣ ಮಾಡುತ್ತಿದ್ದಾರೆ. ಡಿಸೆಂಬರ್‌ನಲ್ಲಿ ಈ ಚಿತ್ರದ ಶೂಟಿಂಗ್‌ ಆರಂಭವಾಗುತ್ತದೆ.


ರಂಜೀತ್ ಕುಮಾರ್ ಗೌಡ ಅವರ ನಿರ್ದೇಶನದ ಆಪಲ್ ಕೇಕ್ ಚಿತ್ರದ ಹಾಡುಗಳ ಧ್ವನಿ ಸುರಳಿ ಬಿಡುಗಡೆ ಸಮಾರಂಭ ಎಸ್.ಆರ್.ವಿ. ಥೀಯೇಟರಿನಲ್ಲಿ ನೆರವೇರಿತು. ವಿ.ನಾಗೇಂದ್ರ ಪ್ರಸಾದ್ ಅವರ ನೇತೃತ್ವದ ಮ್ಯೂಸಿಕ್ ಬಜಾರ್ ಈ ಹಾಡುಗಳನ್ನು ಮಾರುಕಟ್ಟೆಗೆ ತಂದಿದೆ. ಬೇಕರಿಯಲ್ಲಿ ಅಳಿದುಳಿದ ಕೇಕುಗಳನ್ನೆಲ್ಲ ಸೇರಿಸಿ ತಯಾರಿಸುವ ತಿನಿಸನ್ನು ಆಪಲ್ ಕೇಕ್ ಎನ್ನುತ್ತೇವೆ. ಅದೇ ರೀತಿ ಜೀವನದಲ್ಲಿ ಯಾವುದೋ ಒಂದು ಸಂದರ್ಭದಲ್ಲಿ ರಿಜಕ್ಟ್ ಆದಂತಹ ಪಾತ್ರಗಳೇ ಒಂದೆಡೆ ಸೇರಿ ಮಾಡುವ ಸಾಧನೆಯ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ.
.
ಈ ಚಿತ್ರದಲ್ಲಿ ಮೂರು ಹಾಡುಗಳನ್ನು ರಚಿಸಿದ ವಿ.ನಾಗೇಂದ್ರ ಪ್ರಸಾದ್ ಮಾತನಾಡಿ ಒಂದಷ್ಟು ಜನ ಹೊಸ ಹುಡುಗರು ನನ್ನ ಬಳಿ ಬಂದು ಈ ಸಿನಿಮಾ ಮಾಡುತ್ತಿರುವುದಾಗಿ ಹೇಳಿದರು. ಅಲ್ಲದೇ ಪ್ರತೀ ಹಂತದಲ್ಲೂ ನನ್ನಲ್ಲಿ ಚರ್ಚೆ ಮಾಡಿದ್ದಾರೆ. ರಂಜೀತ ಕುಮಾರ್ ಗೌಡ ಮೊದಲ ಚಿತ್ರದಲ್ಲೇ ತಾನೇನೆಂದು ತೊರಿಸಿದ್ದಾರೆ. ಕನ್ನಡದಲ್ಲಿ ಸಿನಿಮಾ ಮಾಡುವುದೇ ದೊಡ್ಡ ಶ್ರಮ ಅಂತಹದರಲ್ಲಿ ಇವರು ಕನ್ನಡ, ತಮಿಳು ಹಾಗು ತೆಲಗು ಸೇರಿದಂತೆ ಮೂರು ಭಾಷೆಗಳಲ್ಲಿ ಈ ಚಿತ್ರ ತಯಾರಿಸಿ ಸೆನ್ಸರ್ ಕೂಡ ಮಾಡಿಸಿದ್ದಾರೆ. ಹುಡುಗರು ತಮ್ಮ ಕನಸುಗಳನ್ನು ಈಡೇರಿಸಿಕೊಳಲ್ಲು ಹಾಕುವ ಎಪರ್ಟ್ ಈ ಚಿತ್ರದ ಕಥೆಯಾಗಿದೆ. ಜೀವನದಲ್ಲಿ ತುಂಬಾ ಶ್ರಮದಿಂದ ಮುಂದೆ ಬಂದಿರುವ ವಿಕ್ಟರಿ ವಾಸು, ನಾಗೇಂದ್ರ ಅರಸ್, ಕೆ.ಮಾದೇಶ್, ಅಲ್ಲದೇ ಇನ್ನೂ ಕೆಲವರ ಕೈಲಿ ಚಿತ್ರದ ಆಡಿಯೋ ರಿಲೀಸ್ ಮಾಡಿಸಬೇಕೆಂದು ಪ್ಲಾನ್ ಹಾಕಿಕೊಂಡಿದ್ದೆ. ಇಲ್ಲಿ ಈ ಮೂವರಷ್ಟೆ ಬಂದಿದ್ದಾರೆ ಎಂದು ಹೇಳಿದರು. ಅದೇ ರೀತಿ ನಿರ್ದೇಶಕರಾದ ವಿಕ್ಟರಿ ವಾಸು, ನಾಗೇಂದ್ರ ಅರಸ್ ಸೇರಿ ಚಿತ್ರದ ಆಡಿಯೊ ರಿಲೀಸ ಮಾಡಿದರು.
.
ಮೊದಲು ನಿದೇಶಕ ಮಾದೇಶ್ ಮಾತನಾಡಿ ಹೊಸಬರಾದರೂ ನಮ್ಮನ್ನು ಗುರುತಿಸಿ ನಮ್ಮಿಂದ ಆಡಿಯೊ ರಿಲೀಸ್ ಮಾಡಿಸಿದ್ದು ಖುಷಿ, ಹಾಡುಗಳನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ, ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. ಈ ಚಿತ್ರದ ನಾಯಕ ಹಾಗೂ ನಿರ್ಮಾಪಕರಾದ ಅರವಿಂದ ಕುಮಾರ್ ಗೌಡ ಮಾತನಾಡಿ ನಾನೂ ಕೂಡ ನಟನಾಗಿಯೇ ಚಿತ್ರರಂಗಕ್ಕೆ ಬಂದೆ, ದಾನಮ್ಮ ದೇವಿ ನನ್ನ ಮೊದಲ ಚಿತ್ರ, ಐದು ಜನ ಸ್ನೇಹಿತರು ಸೇರಿ ಒಂದು ಬ್ಯಾನರ್ ಆರಂಭಿಸಿದೆವು. ಸಿನಿಮಾ ಮಾಡುತ್ತೇನೆ ಎಂಬ ನಂಬಿಕೆ ಇರಲಿಲ್ಲ. ಶ್ರೀಧರ್ ಕಷ್ಟಪಟ್ಟು ಹಾಡುಗಳನ್ನು ಮಾಡಿಕೊಟ್ಟಿದ್ದಾರೆ ಎಂದರು.
.

ವಿಜಯ್ ಶಂಕರ್, ಅರವಿಂದ್ ಕುಮಾರ್, ರಂಜೀತಕುಮಾರ್, ಶುಭ ರಕ್ಷ, ಚೈತ್ರ ಶೆಟ್ಟಿ ಹಾಗು ಕೃಷ್ಣಹನಗಿ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

 

ನಟಸಾರ್ವಭೌಮ ಡಾ. ರಾಜ್‌ಕುಮಾರ್‌ ಅವರ ಮೊಮ್ಮಗ, ನಟ ರಾಮ್‌ಕುಮಾರ್‌ ಪುತ್ರ ಧೀರೇನ್‌ ರಾಮ್‌ಕುಮಾರ್‌ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗಲು ಸಕಲ ಸಿದ್ಧತೆಗಳು ನಡೆಯುತ್ತಿದ್ದು, ದಿಲ್‌ವಾಲ ಅನಿಲ್‌ಕುಮಾರ್‌ ನಿರ್ದೇಶನ ಮಾಡುತ್ತಾರಂತೆ.
.
ಈಗಾಗಲೇ ಹಬ್ಬಿರುವ ಸುದ್ದಿಗಳ ಪ್ರಕಾರ ಜಯಣ್ಣ-ಭೋಗಣ್ಣ ಜೋಡಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಾರಂತೆ.
.
ಅನಿಲ್‌ಕುಮಾರ್‌ ಈಗ ಜಯಣ್ಣ ಫಿಲ್ಮ್ಸ್ ಗಾಗಿ "ಮೈ ನೇಮ್‌ ಈಸ್‌ ಕಿರಾತಕ" ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ನಡುವೆ ರಾಮ್‌ಕುಮಾರ್‌ ಪುತ್ರನನ್ನು ಲಾಂಚ್‌ ಮಾಡಲು ಸಿದ್ಧತೆ ನಡೆಸುತ್ತಿದ್ದಾರಂತೆ.
.
ಕಥೆ ಈಗಾಗಲೇ ಸಿದ್ಧವಾಗಿದ್ದು, ಧೀರೇನ್‌ ಸಹ ನಿಧಾನವಾಗಿ ಸಿನಿಮಾಗಾಗಿ ತಯಾರಾಗುತ್ತಿದ್ದಾರೆ. ಅವರು ಇತ್ತೀಚೆಗೆ ಫೋಟೋ ಶೂಟ್‌ ಮಾಡಿಸಿದ್ದರು.

Page 8 of 27

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top