DKD Gif

6ne maili release gif

adweb

Raambo 2 gIF

ಈ ವಾರ ಬಿಡುಗಡೆಯಾಗಿರುವ ಜಾನಿ ಜಾನಿ ಎಸ್‌ ಪಾಪಾ ಸಿನಿಮಾ ಫುಲ್‌ಟೈಮ್‌ ಕಾಮಿಡಿ ಸಿನಿಮಾವಾಗಿ ಹೊರ ಹೊಮ್ಮಿದೆ. ಇಷ್ಟು ದಿನ ಆ್ಯಕ್ಷನ್‌ ಮತ್ತು ಮಾಸ್‌ ಸಿನಿಮಾಗಳನ್ನು ಮಾಡಿಕೊಂಡು ಬಂದಿದ್ದ ದುನಿಯಾ ವಿಜಯ್‌ 'ಜಾನಿ ಜಾನಿ...'ಯ ಪ್ರತಿ ಫ್ರೇಮ್‌ನಲ್ಲಿಯೂ ನಗಿಸುತ್ತಾರೆ.

 

 

ರೈನ್‌ಬೋ ಎಂಬ ಕಾಲೋನಿಯಲ್ಲಿ ಪ್ರತಿ ಕೆಲಸಕ್ಕೂ ಜಾನಿ [ದುನಿಯಾ ವಿಜಯ್‌] ಮತ್ತು ಪಾಪಾ [ರಂಗಾಯಣ ರಘು] ಬೇಕಾಗಿರುತ್ತಾರೆ. ಪ್ರತಿ ಕೆಲಸವನ್ನು ಇವರು ಡೀಲ್‌ ಎಂದು ತಿಳಿದುಕೊಂಡು ಮಾಡುತ್ತಿರುತ್ತಾರೆ. ಯಾರ ಬಳಿಯ ಸಾಲ್ವ್‌ ಆಗದ ವಿಷಯಗಳನ್ನು ಈ ಜಾನಿ ಮತ್ತು ಪಾಪಾ ಇಬ್ಬರೂ ಕ್ಷಣ ಮಾತ್ರದಲ್ಲಿ ಬಗೆಹರಿಸಲಿ ಕಾಲೋನಿಯ ಪ್ರೀತಿ ಗಳಿಸಿರುತ್ತಾರೆ. ಈ ಸಮಯದಲ್ಲಿ ನಾಯಕಿ ಪ್ರಿಯಾ[ರಚಿತಾ ರಾಮ್‌] ಅಚಾನಕ್‌ ಭೇಟಿ, ನಂತರ ಅವಳ ಮೇಲೆ ಲವ್‌. ಇದೆಲ್ಲವು ನಡೆಯುತ್ತಿರುವಾಗ ನಾಯಕಿ ಪ್ರಿಯಾ ರೈನ್ ಬೋ ಕಾಲೋನಿಗೆ ಬಂದು ನೆಲೆಗೊಳ್ಳುತ್ತಾಳೆ. ಅಲ್ಲಿಂದ ಜಾನಿ ಮತ್ತು ಪ್ರಿಯಾಳ ಲವ್ ಸ್ಟೋರಿ ಆರಂಭ.

 

 

ಪ್ರಿಯಾಗೆ ಯು.ಎಸ್ ಗೆ ಹೋಗ್ಬೇಕು ಎಂಬ ಕನಸಿರುತ್ತದೆ. ಆದರೆ ಯುಎಸ್‌ಗೆ ಹೋದರೆ ಜಾನಿಯ ಲವ್‌ಗೆ ಕತ್ತರಿ ಬೀಳುತ್ತದೆ. ಹಾಗಾಗಿ ಜಾನಿ ಇವಳನ್ನು ಯುಎಸ್‌ಗೆ ಹೋಗದಂತೆ ಮತ್ತು ತನ್ನ ಬುಟ್ಟಿಯಲ್ಲಿ ಬೀಳಿಸಿಕೊಳ್ಳಲು ಸಿಕ್ಕಾಪಟ್ಟೆ ಸರ್ಕಸ್‌ ಮಾಡುತ್ತಾನೆ. ಪ್ರಿಯಾ ಯು.ಎಸ್ ಗೆ ಹೋಗ್ತಾಳ ಅಥವಾ ಜಾನಿಯನ್ನು ಲವ್‌ ಮಾಡುತ್ತಾಳಾ ಎಂಬುದೇ ಚಿತ್ರಕಥೆ.

 

 

2011ರಲ್ಲಿ ಬಿಡುಗಡೆಯಾಗಿದ್ದ ಜಾನಿ ಮೇರಾ ನಾಮ್‌ ಚಿತ್ರದಲ್ಲಿಯೂ ಇಂತಹದ್ದೇ ಕಥೆ ಇತ್ತು. ಇದು ಅದರ ಮುಂದುವರೆದ ಭಾಗ. ಈ ಜಾನಿ ಸಿಕ್ಕಾಪಟ್ಟೆ ಅಪ್‌ಡೇಟ್‌ ಆಗಿದ್ದಾನೆ. ಇಡೀ ಸಿನಿಮಾದಲ್ಲಿ ದೃಶ್ಯದಿಂದ ದೃಶ್ಯಕ್ಕೆ ವಿಜಯ್‌ ನಗಿಸುತ್ತಾ ಪ್ರೇಕ್ಷಕನಿಗೆ ಕಿಕ್‌ ಕೊಡುತ್ತಾರೆ. ಇವರಿಗೆ ರಂಗಾಯಣ ರಘು ಮತ್ತು ಪುಟ್ಟ ಬಾಲಕ ಹೇಮಂತ್ ಸಹ ಸಾಥ್‌ ನೀಡುತ್ತಾರೆ. ಇರುವ ಮೂರು ಫೈಟ್‌ನಲ್ಲಿ ವಿಜಯ್‌ ಎಂದಿನಂತೆ ಮಿಂಚಿದ್ದಾರೆ.

 

 

ನಿರ್ದೇಶಕ ಪ್ರೀತಂ ಗುಬ್ಬಿ ಒಳ್ಳೊಳ್ಳೆ ಸೆಟ್‌ ಹಾಕಿಸಿ ಸಿನಿಮಾವನ್ನು ಶ್ರೀಮಂತಗೊಳಿಸಿದ್ದಾರೆ. ಚಿತ್ರದ ಮೊದಲರ್ಧ ಹೋಗೋದೇ ಗೊತ್ತಾಗಲ್ಲ ಆದರೆ ಸೆಕಂಡ್ ಹಾಫ್ ಸ್ವಲ್ಪ ನಿಧಾನವೆನಿಸುತ್ತದೆ. ಮೋಹನ್‌ ಬಿ ಕೆರೆಯವರ ಕಲಾ ಕೆಲಸ ಅದ್ಭತವಾಗಿ ಮೂಡಿಬಂದಿದೆ. ಇನ್ನು ಸಿನಿಮಾಟೋಗ್ರಫರ್‌ ಕರುಣಾಕರ್‌ ಪ್ರತಿ ದೃಶ್ಯವನ್ನು ಸೊಗಸಾಗಿ ಸೆರೆ ಹಿಡಿದಿದ್ದಾರೆ. ಅಜನೀಶ್ ಸಂಗೀತ ನೀಡಿರುವ ಅರ್ಮಾನ್‌ ಮಲ್ಲಿಕ್‌ ಹಾಡಿರುವ 'ನೀನೇ ನಂಗೆಲ್ಲ' ಹಾಡು ಮತ್ತು 'ಹೊಸ ಪದ್ಮಾವತಿ' ಸಾಂಗ್‌ ಗುನುಗುವಂತೆ ಮಾಡುತ್ತವೆ.

 

 

ನಾಯಕಿ ರಚಿತಾ ರಾಮ್‌ ಸುಂದರವಾಗಿ ಕಾಣುವುದಲ್ಲದೆ ತಮ್ಮ ಮುಗ್ಧ ನಟನೆಯಿಂದ ಗಮನ ಸೆಳೆಯುತ್ತಾರೆ. ಈ ಚಿತ್ರಕ್ಕೆ ಅವರೇ ಡಬ್ಬಿಂಗ್‌ ಮಾಡಿರುವುದು ಬಹಳ ವಿಶೇಷವಾಗಿದೆ. ಉಳಿದಂತೆ ಅಚ್ಯುತ್‌ಕುಮಾರ್‌, ಸಾಧುಕೋಕಿಲಾ, ಗಡ್ಡಪ್ಪ, ನಾಗಭೂಷಣ್, ಸೇರಿದಂತೆ ಪ್ರತಿಯೊಬ್ಬ ನಟರು ಸಿನಿಮಾದ ಓಟಕ್ಕೆ ತಕ್ಕಂತೆ ನಟಿಸಿದ್ದಾರೆ.

 

 

ಈ ಸಿನಿಮಾದಲ್ಲಿ ಲಾಜಿಕ್‌ ಹುಡುಕುವ ಹಾಗಿಲ್ಲ, ಕಾಮಿಡಿ ಚಿತ್ರವಾದ್ದರಿಂದ ನಿರ್ದೇಶಕರು ಪ್ರತಿ ಸೀನ್‌ನಲ್ಲಿಯೂ ನಗಿಸುವ ಪ್ರಯತ್ನ ಮಾಡಿದ್ದಾರೆ ಎಂಬುದು ಫೈನಲ್‌ ಸ್ಟೇಟ್‌ ಮೆಂಟ್‌.

 

 

ರೇಟಿಂಗ್ : 3.25/5

ದುನಿಯಾ ಚಿತ್ರದಿಂದ ವಿಜಯ್‌ ನಟಿಸುವ ಸಿನಿಮಾಗಳೆಂದರೆ ಬಹುತೇಕ ಬರೀ ಆ್ಯಕ್ಷನ್‌ ಸಿನಿಮಾಗಳು, ಹೊಡೆದಾಟ ಬಡಿದಾಟಗಳೇ ಇರುತ್ತವೆ ಎನ್ನುತ್ತಾರೆ, ಆದರೆ 'ಜಾನಿ ಜಾನಿ ಎಸ್‌ ಪಾಪಾ' ಸಿನಿಮಾದಲ್ಲಿ ವಿಜಯ್‌ ಅವರು ಸ್ಟೈಲಿಷ್‌ ಕಾಸ್ಟ್ಯೂಮ್‌ ಹಾಕಿಕೊಂಡು ಇಡೀ ಸಿನಿಮಾ ಮಿಂಚಿದ್ದಾರೆ.

 

DUXqdCmVQAAy9jP

ಹೌದು ಜಾನಿ ಜಾನಿಯಲ್ಲಿ ಒಳ್ಳೊಳ್ಳೆ ಬಟ್ಟೆ, ಗಾಗಲ್ಸ್‌ ಹಾಕಿಕೊಂಡು ಮಿಂಚಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ 'ಜಾನಿ ಮೇರಾ ನಾಮ್‌' ಚಿತ್ರದಲ್ಲಿಯೂ ವಿಜಿ ಸ್ಟೈಲಿಷ್‌ ಆಗಿ ಕಾಣಿಸಿಕೊಂಡಿದ್ದರು. ಈಗ ಇದು ಅದರ ಮುಂದಿನ ಭಾಗವಾಗಿದ್ದು, ಇದರಲ್ಲಿಯೂ ಅವರು ಅದಕ್ಕಿಂತ ಸ್ಟೈಲಿಷ್‌ ಆಗಿದ್ದಾರೆ.

 

 

ಇದೇ 30ಕ್ಕೆ ಚಿತ್ರ ಬಿಡುಗಡೆಯಾಗಲಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ ಮತ್ತು ಪೋಸ್ಟರ್‌ಗಳು ಜನರಿಗೆ ಇಷ್ಟವಾಗಿದೆ.
ಚಿತ್ರದಲ್ಲಿ ಹೊಸ ಪದ್ಮಾವತಿಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಪ್ರೀತಂ ಗುಬ್ಬಿ ಇದರ ನಿರ್ದೇಶಕರು.

 
 ಪ್ರೀತಮ್ ಗುಬ್ಬಿ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಜಾನಿ ಜಾನಿ ಎಸ್ ಪಾಪಾ' ಸಿನಿಮಾದಲ್ಲಿ ದುನಿಯಾ ವಿಜಯ್ ರಾಮನಾಗಿದ್ದಾರೆ, ರಂಗಾಯಣ ರಘು ಹನುಮಂತನ ಅವತಾರವೆತ್ತಿದ್ದಾರೆ.
 
ಇದೇ 30ಕ್ಕೆ ಚಿತ್ರ ತೆರೆಗೆ ಬರುತ್ತಿದ್ದು, ಈ ಸಿನಿಮಾದಲ್ಲಿ ವಿಜಯ್‌ ಸಿಕ್ಸ್ ಪ್ಯಾಕ್ ರಾಮನಾಗಿದ್ದಾರೆ. ಚಿತ್ರದಲ್ಲಿ ಬರುವ ಒಂದು ಸಣ್ಣ ದೃಶ್ಯದಲ್ಲಿ ವಿಜಯ್‌ ರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಮನವಮಿ ಹಬ್ಬದ ದಿನ ಈ ರಾಮನ ಅವತಾರದ ಟೀಸರ್‌ನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು,ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
 
 WhatsApp Image 2018 03 25 at 3.04.09 PM
ಈ ಹಿಂದೆ ಪ್ರೀತಮ್‌ ಗುಬ್ಬಿ ಮತ್ತು ದುನಿಯಾ ವಿಜಯ್‌ ಜತೆಯಾಗಿ 'ಜಾನಿ ಮೇರಾ ನಾಮ,ಪ್ರೀತಿ ಮೇರಾ ಕಾಮ್' ಮಾಡಿದ್ದರು. ಈಗ ಅದರ ಮುಂದುವರೆದ ಭಾಗವಾಗಿ 'ಜಾನಿ ಜಾನಿ ಎಸ್ ಪಾಪ' ಸಿನಿಮಾ ಮಾಡಿದ್ದಾರೆ . ಕಳೆದ ಬಾರಿಯಂತೆ ಈ ಬಾರಿಯೂ ಕಾಮಿಡಿ ಇಟ್ಟುಕೊಂಡು ಜನರಿಗೆ ಫುಲ್ ಎಂಟರ್ಟೈನ್ಮೆಂಟ್ ನೀಡಲು ಬರುತ್ತಿದ್ದಾರಂತೆ.
 
ಈ ಸಿನಿಮಾದಲ್ಲಿ ರಾಮನ ಅವತಾರ ಯಾಕೆ ಬರುತ್ತದೆ ಎಂಬುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು ಅಂತಾರೆ ನಿರ್ದೇಶಕ ಪ್ರೀತಂ ಗುಬ್ಬಿ.
'ಜಾನಿ....'ಯನ್ನು ದುನಿಯಾ ವಿಜಯ್‌ ಅವರು ತಮ್ಮ ಹೋಮ್‌ ಬ್ಯಾನರ್‌ ಆದ ದುನಿಯಾ ಟಾಕೀಸ್‌ ಬ್ಯಾನರ್‌ನಡಿ ನಿರ್ಮಾಣ ಮಾಡಿದ್ದಾರೆ.
#JohnnyJohnnyYesPapa #Cineloka #DuniyaVijay

ದುನಿಯಾ ವಿಜಯ್‌ ಮತ್ತು ರಚಿತಾ ರಾಮ್‌ ನಟನೆಯ 'ಜಾನಿ ಜಾನಿ ಎಸ್‌ ಪಪ್ಪಾ' ಸಿನಿಮಾ ಸೆನ್ಸಾರ್‌ ಆಗಿದ್ದು, ಯು/ಎ ಪ್ರಮಾಣ ಪತ್ರ ಸಿಕ್ಕಿದೆ.

 

ಈಗಾಗಲೇ ಆಡಿಯೋ ಬಿಡುಡೆಯಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದೇ 30ಕ್ಕೆ ಸಿನಿಮಾ ಬಿಡುಗಡೆಯಾಗಲಿದ್ದು, ಪ್ರೀತಂ ಗುಬ್ಬಿ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.
ಜಾನಿ ಮೇರಾ ನಾಮ್‌ ಪ್ರೀತಿ ಮೇರಾ ಕಾಮ್‌ ಚಿತ್ರದ ಸಿಕ್ವೇಲ್‌ ಇದಾಗಿದ್ದು, ಫುಲ್‌ ಫನ್‌ನಿಂದ ಚಿತ್ರ ಕೂಡಿರುತ್ತದೆ ಎಂದು ಚಿತ್ರತಂಡ ಹೇಳಿದೆ.

 

ರಂಗಾಯಣ ರಘು, ಗಡ್ಡಪ್ಪ, ಅಚ್ಯುತಕುಮಾರ್‌ ಸೇರಿದಂತೆ ಸಾಕಷ್ಟು ಮಂದಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮೋಹನ್‌ ಬಿ ಕೆರೆ ಸೆಟ್‌ನ್ಲಲಿ ಈ ಚಿತ್ರದಕ್ಕಾಗಿ ವಿಶೇಷ ಸೆಟ್‌ ಹಾಕಲಾಗಿತ್ತು.

ದುನಿಯಾ ವಿಜಯ್‌ ತಮ್ಮ ಹೋಮ್‌ ಬ್ಯಾನರ್‌ ದುನಿಯಾ ಟಾಕೀಸ್‌ನಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Amma Gif Running S

MMCHHHHH

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top