nata

ttm

adweb

udgharsha

ಚಿತ್ರ: ನಟಸಾರ್ವಭೌಮ

ನಿರ್ಮಾಪಕ: ರಾಕ್‌ಲೈನ್‌ ವೆಂಕಟೇಶ್‌
ನಿರ್ದೇಶನ: ಪವನ್‌ ಒಡೆಯರ್‌
ಸಂಗೀತ: ಡಿ. ಇಮಾನ್
ತಾರಗಣ: ಪುನೀತ್ ರಾಜ್‌ಕುಮಾರ್‌, ರಚಿತಾ ರಾಮ್‌, ಅನುಪಮಾ ಪರಮೇಶ್ವರನ್‌, ರವಿಶಂಕರ್‌, ಚಿಕ್ಕಣ್ಣ

.

ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ ಅವರ ಸಿನಿಮಾಗಳಲ್ಲಿ ಫೈಟ್ಸ್‌, ಡಾನ್ಸ್‌, ಹಾಡು, ಲವ್‌ಸ್ಟೋರಿ , ಫ್ಯಾಮಿಲಿ ಸೆಂಟಿಮೆಂಟ್‌ ಎಲ್ಲವೂ ಇರುತ್ತದೆ. ಆದರೆ ನಟಸಾರ್ವಭೌಮದಲ್ಲಿ ಇದೆಲ್ಲದರ ಜತೆಗೆ ಹಾರರ್‌ ಎಲಿಮೆಂಟ್‌ ಸೇರಿಕೊಂಡು ಪ್ರೇಕ್ಷಕರಿಗೆ ಥ್ರಿಲ್‌ ನೀಡುತ್ತದೆ.

.

ನಾಯಕ ಗಗನ್‌ ದೀಕ್ಷೀತ್‌[ ಪುನೀತ್‌] ಕೋಲ್ಕತ್ತದಿಂದ ಬೆಂಗಳೂರಿಗೆ ವರ್ಗವಾಗಿ ಬರುವ ಪತ್ರಕರ್ತ. ಈತ ಬೆಂಗಳೂರಿಗೆ ಯಾರೊ ಒಬ್ಬರನ್ನು ಹುಡುಕಿಕೊಂಡು ಬರುತ್ತಾನೆ. ಬೆಂಗಳೂರಿಗೆ ಬಂದ ತಕ್ಷಣ ಕೇಂದ್ರದ ಸಚಿವರೊಬ್ಬರನ್ನು ಪ್ರಾಣಾಪಯದಿಂದ ಪಾರು ಮಾಡುತ್ತಾನೆ. ಆದರೆ ಇದೇ ಕೇಂದ್ರ ಸಚಿವರನ್ನು ಅವರ ಬರ್ತ್‌ಡೇ ಪಾರ್ಟಿಯಲ್ಲಿ ಹೊಡೆದು ನೆಲಕ್ಕೆ ಉರುಳಿಸುತ್ತಾನೆ. ಅದು ಯಾಕೆ, ಆ ಕೇಂದ್ರ ಸಚಿವರಿಗೂ ಗಗನ್‌ಗೂ ಏನು ಸಂಬಂಧ, ಜತೆಗೆ ಆತ ಬೆಂಗಳೂರಿಗೆ ಹುಡುಕಿಕೊಂಡ ಬಂದಿದ್ದು ಯಾರನ್ನು, ಇನ್ನು ಬಿಡುಗಡೆಯಾಗಿರುವ ಟ್ರೇಲರ್‌ನಲ್ಲಿ ಪುನೀತ್‌ ಮೈ ಮೇಲೆ ದೆವ್ವಬಂದಿದೆ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಆದರೆ ಅದು ಯಾಕೆ, ಆ ದೆವ್ವ ಯಾರು, ಪುನೀತ್‌ ಮೇಲೆ ಯಾಕೆ ಬಂದಿದೆ ಇಂತಹ ಹಲವು ಪ್ರಶ್ನೆಗಳನ್ನು ಸಿನಿಮಾದಲ್ಲಿಯೇ ನೋಡಬೇಕು.

.

ಎಲ್ಲ ಹಾರರ್‌ ಕಥೆಯಲ್ಲಿರುವಂತೆ ಈ ಸಿನಿಮಾದಲ್ಲಿಯೂ ಒಂದು ರಿವೇಂಜ್‌ ಕಥೆ ಇದೆ, ಆದರೆ ಪವನ್‌ ಒಡೆಯರ್‌ ಅದನ್ನು ತೆರೆ ಮೇಲೆ ತಂದಿರುವ ರೀತಿ ಚೆನ್ನಾಗಿದೆ. ಸಾಮಾನ್ಯ ಕಥೆಗೆ ಪುನೀತ್‌ ಅವರ ಸ್ಟಾರ್‌ಗಿರಿಯನ್ನು ಮಿಕ್ಸ್‌ ಮಾಡಿ , ಅದ್ಭುತವಾದ ಡಾನ್ಸ್‌,ಅಭಿಮಾನಿಗಳಿಗಾಗಿ ಅಭಿಮಾನದ ಡೈಲಾಗ್ಸ್‌ಗಳು, ಸುಮಧುರ ಹಾಡುಗಳು, ಹೀಗೆ ಎಲ್ಲವನ್ನು ಸೇರಿಸಿ ಸಿನಿಮಾವನ್ನು ಪಕ್ಕಾ ಎಂಟರ್‌ಟೇನರ್ ಮಾಡಿದ್ದಾರೆ. ಕೊಲ್ಕತಾದಲ್ಲಿ ಶೂಟ್ ಮಾಡಿರುವ ದೃಶ್ಯಗಳು ಮನಸ್ಸಿಗೆ ಹತ್ತಿರವಾಗುತ್ತವೆ.

ಸಿನಿಮಾ ಸಂಪೂರ್ಣ ಅಪ್ಪುಮಯ ಮಾಡಿರುವ ನಿರ್ದೇಶಕ ಪವನ್, ನಾಯಕಿಯರಿಗೆ ಹೆಚ್ಚು ಕೆಲಸ ಕೊಟ್ಟಿಲ್ಲ. ಚಿತ್ರದಲ್ಲಿ ಕೆಲವೊಂದು ದೃಶ್ಯಗಳ ಡಿಟೈಲಿಂಗ್ ಮಿಸ್ ಹೊಡೆದಿದೆ.

.

ಪುನೀತ್‌ರಾಜ್‌ಕುಮಾರ್‌ ಅವರು ಡಾನ್ಸ್‌, ಫೈಟ್ಸ್‌, ಲವ್‌ ಸೀನ್‌, ಸೆಂಟಿಮೆಂಟ್‌, ಕಾಮಿಡಿ ಎಲ್ಲದರಲ್ಲೂ ನೂರಕ್ಕೆ ನೂರರಷ್ಟು ಅಂಕ ಗಳಿಸಿದ್ದಾರೆ. ಹಾಗಾಗಿ ಅವರಿಗೆ ನಟಸಾರ್ವಭೌಮ ಎಂಟ ಟೈಟಲ್‌ ಸೂಟ್‌ ಆಗುತ್ತದೆ. ಇಬ್ಬರು ನಾಯಕಿಯರಲ್ಲಿ ಹೆಚ್ಚು ಮನಸ್ಸಿನಲ್ಲಿ ಉಳಿಯುವುದು ಅನುಪಮಾ ಪರಮೇಶ್ವರನ್‌. ರಚಿತಾ ಮುದ್ದಾಗಿ ಕಂಡರೂ, ಅವರಿಗೆ ಸ್ಕ್ರೀನ್‌ ಸ್ಪೇಸ್‌ ಕಮ್ಮಿಯೇ ಇದೆ. ಇನ್ನು ರವಿಶಂಕರ್‌ ಎಂದಿನಂತೆ ಅಬ್ಬರಿಸಿದ್ದಾರೆ. ಅಚ್ಯುತ್‌ಕುಮಾರ್‌ ಅವರದ್ದು ವಿಶೇಷ ಪ್ರಯತ್ನ. ಚಿಕ್ಕಣ್ಣ ಮತ್ತು ಸಾಧುಕೋಕಿಲಾ ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

.

ವೈದಿ ಅವರ ಕ್ಯಾಮೆರಾ, ಇಮಾನ್  ಅವರ ಸಂಗೀತ ಎರಡೂ ಹದವಾಗಿ ಬೆರೆತು ಸಿನಿಮಾ ಕಲರ್‌ಫುಲ್‌ ಆಗಿ ಕಂಡಿದೆ.ಪೀಟರ್ ಹೆನ್ ಅವರ ಸಾಹಸ ನಿರ್ದೇಶನ ಇನ್ನೂ ಚೆನ್ನಾಗಿರಬಹುದಿತ್ತು. ಪುನೀತ್‌ ಅವರನ್ನು ಅದ್ಭುತವಾಗಿ ಕುಣಿಸಿರುವ ನೃತ್ಯ ನಿರ್ದೇಶಕರು ಸಹ ಪ್ರಶಂಸಾರ್ಹರು. ಯಾವುದೇ ಕೊರತೆ ಇಲ್ಲದೆ ಸಿನಿಮಾ ಮಾಡಿರುವುದು ಎದ್ದು ಕಾಣುತ್ತದೆ. ಇದರ ಸಂಪೂರ್ಣ ಕ್ರೆಡಿಟ್‌ ರಾಕ್‌ಲೈನ್‌ ವೆಂಕಟೇರಶ್‌ ಅವರದ್ದು.

.

ಒಟ್ಟಿನಲ್ಲಿ ನಟಸಾರ್ವಭೌಮ ಫ್ಯಾಮಿಲಿ ಕಮ್‌ ಮಾಸ್‌ ಆಡಿಯನ್ಸ್‌ ಇಷ್ಟಪಡುವಂತಹ ಸಿನಿಮಾವಾಗಿದೆ. ಅದರಲ್ಲು ಅಪ್ಪು ಫ್ಯಾನ್ಸ್‌ ಅಂತೂ ಸಖತ್‌ ಎಂಜಾಯ್‌ ಮಾಡುತ್ತಾರೆ.

ರೇಟಿಂಗ್‌ : 3.75/5

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top