IB anigif

Ayugya Gif

adweb

udgharsha

ಚಿತ್ರ: ಒಂದಲ್ಲಾ ಎರಡಲ್ಲಾ

ನಿರ್ದೇಶಕ: ಸತ್ಯಪ್ರಕಾಶ್‌
ನಿರ್ಮಾಪಕಿ: ಸ್ಮಿತಾ ಉಮಾಪತಿ
ತಾರಾಬಳಗ: ಮಾಸ್ಟರ್‌ ರೋಹಿತ್‌, ನಾಗಭೂಷಣ್‌, ಸಾಯಿಕೃಷ್ಣ ಕುಡ್ಲ, ಎಂ ಕೆ ಮಠ, ಉಷಾ ರವಿಶಂಕರ್‌, ರಂಜಾನ್‌ ಸಾಬ್‌ ಉಳ್ಳಾಗಡ್ಡಿ, ತ್ರೀವೆಣಿ, ಆನಂದ್‌ ನೀನಾಸಂ ಇತರರು

.

ರಾಮಾ ರಾಮಾ ರೇ ಸಿನಿಮಾದಲ್ಲಿ ಹುಟ್ಟು ಸಾವಿನ ನಡುವೆ ನಡೆಯುವ ಸಂಘರ್ಷದ ಕಥೆ ಹೇಳಿದ್ದ ಸತ್ಯ ಈ ಬಾರಿ ಆರಿಸಿಕೊಂಡಿರುವುದು ಮುಗ್ಧತೆಯ ಕಥೆ. ಮಾನವೀಯತೆ ಮತ್ತು ಮುಗ್ಧತೆಯನ್ನು ನೆನಪಿಸುವ ನಿಟ್ಟಿನಲ್ಲಿ ಸತ್ಯಪ್ರಕಾಶ್‌ 'ಒಂದಲ್ಲಾ ಎರಡಲ್ಲಾ' ಸಿನಿಮಾ ಮಾಡಿದ್ದಾರೆ.
.

ಸಮೀರ (ಮಾಸ್ಟರ್‌ ರೋಹಿತ್‌) ಮತ್ತವನ ಕುಟುಂಬಕ್ಕೆ ಭಾನು( ಹಸು) ಕಂಡರೆ ಎಲ್ಲಿಲ್ಲದ ಪ್ರೀತಿ. ತಮ್ಮ ಮನೆಯ ಸದಸ್ಯರ ರೀತಿ ಅದನ್ನು ನೋಡಿಕೊಳ್ಳುತ್ತಿರುತ್ತಾರೆ. ಸಮೀರನಿಗಂತೂ ಭಾನುವೇ ಎಲ್ಲ , ಅವನು ಎಲ್ಲಾದರು ಹೊರಗೆ ಹೊರಟರೆ ಅದನ್ನು ಜತೆಯಲ್ಲಿ ಕರೆದುಕೊಂಡು ಹೋಗುತ್ತಾನೆ. ಅಂತಹ ಭಾನು ಸಮೀರನ ಆಟ ಆಡುವಾಗ ಕಳೆದು ಹೋಗುತ್ತಾಳೆ. ಇದನ್ನು ಹುಡುಕಿಕೊಂಡು ಸಮೀರ ಮನೆಯಲ್ಲಿ ಯಾರಿಗೂ ಹೇಳದೇ ಹೋರಡುತ್ತಾನೆ. ಈ ಹುಡಕಾಟದಲ್ಲಿನ ಘಟನೆಗಳನ್ನಿಟ್ಟುಕೊಂಡು ಸತ್ಯಪ್ರಕಾಶ್‌ ಸಿನಿಮಾ ಮಾಡಿದ್ದಾರೆ.
ಸಮೀರನಿಗೆ ಭಾನು ಸಿಗುತ್ತಾಳ, ಇಲ್ಲವಾ ಎನ್ನುವುದು ಸ್ಟೋರಿಯ ಒನ್‌ಲೈನ್‌ ಆದರೆ ಕಥೆಯ ಒಳಗೆ ಮಾನವೀಯತೆ, ಮುಗ್ಧತೆ, ಮಗುವಿಗಾಗಿ ಹಂಬಲಿಸುವ ತಾಯಿ ವೇದನೆ, ಮಗನನ್ನು ಕಳೆದುಕೊಂಡ ತಂದೆಯ ನೋವು ಎಲ್ಲವನ್ನು ಸೇರಿಸಿ ಕ್ಲಾಸಿಕ್‌ ಸಿನಿಮಾ ಮಾಡಿದ್ದಾರೆ ಸತ್ಯಪ್ರಕಾಶ್‌. ಒಂದು ಮುಸ್ಲೀಂ ಕುಟುಂಬದೊಂದಿಗೆ ಹಸು ಸಹ ಸದಸ್ಯೆ ಆಗಿರುತ್ತದೆ ಎಂಬ ಅಂಶವೇ ಸಿನಿಮಾದ ಅಟ್ರಾಕ್ಷನ್‌ಗಳಲ್ಲೊಂದು.
.
ಇಡೀ ಸಿನಿಮಾ ಮಂಗಳೂರು ಬ್ಯಾಕ್‌ಡ್ರ್ಯಾಪ್‌ನಲ್ಲಿ ನಡೆಯುತ್ತದೆ. ಆದರೆ ಚಿತ್ರದಲ್ಲಿರುವ ಕಲಾವಿದರು ಕರ್ನಾಟಕದ ಎಲ್ಲ ಪ್ರದೇಶದ ಭಾಷೆಗಳನ್ನು ಮಾತನಾಡುತ್ತಾರೆ. ಜತೆಗೆ ಸಿನಿಮಾವನ್ನು ಇನ್ನೊಂದಿಷ್ಟು ಶಾರ್ಟ್‌ ಮಾಡಬಹುದಿತ್ತು ಇವೆರಡನ್ನು ಹೊರತುಪಡಿಸಿದರೆ "ಒಂದಲ್ಲಾ ಎರಡಲ್ಲಾ" ಸಿನಿಮಾ ಕ್ಲಾಸಿಕ್‌ ಚಿತ್ರಗಳ ಸಾಲಿಗೆ ಸೇರುವಂತಹದ್ದು.
.

ಸಿನಿಮಾದಲ್ಲಿ ಸಾಕಷ್ಟು ಹೊಸ ಕಲಾವಿದರು ನಟಿಸಿದ್ದು ಎಲ್ಲರೂ ಭರವಸೆ ಮೂಡಿಸುತ್ತಾರೆ. ಸಮೀರನ ಪಾತ್ರಧಾರಿ ರೋಹಿತ್‌ ತನ್ನ ಮುಗ್ಧತೆಯಿಂದ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾನೆ. ಆನಂದ್‌ ನೀನಾಸಂ ಮತ್ತು ನಾಗಭೂಷಣ್‌,ಸಾಯಿಕೃಷ್ಣ ಕುಡ್ಲ ಎಲ್ಲರೂ ಸೀರಿಯಸ್‌ ಆದ ಸಿನಿಮಾದಲ್ಲಿ ನಗಿಸುತ್ತಾರೆ. ಉಷಾ ರವಿಶಂಕರ್‌, ತ್ರಿವೇಣಿ, ನಾಗರಾಜ್‌ ಮಕ್ಕಳನ್ನು ಕಳೆದುಕೊಂಡವರ ನೋವನ್ನು ಅನುಭವಿಸಿ ನಟಿಸಿದ್ದಾರೆ. ಉಳಿದ ಎಲ್ಲ ಕಲಾವಿದರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯಸಲ್ಲಿಸಿದ್ದಾರೆ.
.
ವಾಸುಕಿ ವೈಭವ್‌ ತಮ್ಮ ಧ್ವನಿ ಮತ್ತು ಸಂಗೀತದಿಂದ ಇಡೀ ಸಿನಿಮಾವನ್ನು ಬೇರೆಯದ್ದೇ ಲೆವೆಲ್‌ಗೆ ತೆಗೆದುಕೊಂಡು ಹೋಗುತ್ತಾರೆ. ಲವಿತ್‌ ಅವರ ಛಾಯಾಗ್ರಹಣ ಸಹ ಚೆನ್ನಾಗಿದೆ. ವಿಕೇಂಡ್‌ನಲ್ಲಿ ಸಮಯ ಮಾಡಿಕೊಂಡು ಸಮೀರ ಮತ್ತು ಭಾನುವನ್ನು ನೋಡಿ ಮನತುಂಬಿಕೊಂಡು ಬರಬಹುದು.

.

 ರೇಟಿಂಗ್ - 3.75/5

LJOS nigif

May 1st

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top