tarakaasura

ttm

adweb

udgharsha

 

ಶಾಲಾ ದಿನಗಳ ಲವ್‌ಸ್ಟೋರಿಗಳನ್ನು ಸಾಕಷ್ಟು ಸಿನಿಮಾದಲ್ಲಿ ಕಥೆಯ ಅನುಕೂಲಕ್ಕಾಗಿ ಬಳಸಿಕೊಂಡಿದ್ದಿದೆ, ಆದರೆಈ ವಾರ ಬಿಡುಗಡೆಯಾಗಿರುವ ಪುಟ್ಟರಾಜು ಸಿನಿಮಾದ ಕಥೆಯೇ ಹೈಸ್ಕೂಲ್‌ ಲವ್‌ ಸ್ಟೋರಿಯನ್ನು ಆಧರಿಸಿದೆ.

ಇದೊಂದು ನೈಜ ಘಟನೆಯನ್ನು ಆಧರಿಸಿದ ಚಿತ್ರ ಎಂದು ನಿರ್ದೇಶಕರು ಹೇಳಿದ್ದಾರೆ. ಆದರೆ ಸಾಕಷ್ಟು ದೃಶ್ಯಗಳನ್ನು ಒಂದಷ್ಟು ಸಿನಿಮಾಗಳಿಂದ ಸ್ಪೂರ್ತಿ ಪಡೆದು ಮಾಡಿದ್ದಾರೆ ಎನ್ನಿಸುತ್ತದೆ.

.

ಹೈಸ್ಕೂಲ್‌ ಮಕ್ಕಳ ಪ್ರೀತಿ ಪ್ರೇಮ ಈ ಸಿನಿಮಾದ ಒನ್‌ ಲೈನ್‌ ಸ್ಟೋರಿ. ಪುಟ್ಟರಾಜು ಎಂಬ ಹುಡುಗ ಶಶಿಕಲಾ ಜತೆ ಲವ್‌ನಲ್ಲಿ ಬೀಳುತ್ತಾನೆ ಆಮೇಲಾಗುವ ಘಟನೆಗಳನ್ನು ಒಂದಷ್ಟು ಹಾಸ್ಯ ಮಿಶ್ರಿತವಾಗಿ ತೆರೆ ಮೇಲೆ ತಂದಿದ್ಧಾರೆ ನಿರ್ದೇಶಕರು.

.

ಹೈಸ್ಕೂಲ್‌ ಹುಡುಗನಿಗೂ ಒಬ್ಬ ವಿಲನ್‌ ಬೇಕು ಎಂಬುದು ಚಿತ್ರತಂಡದ ಅಂಬೋಣ. ನಾಯಕ ಮತ್ತು ನಾಯಕನ ಅಜ್ಜ ಇಬ್ಬರೂ ಲವ್‌ನಲ್ಲಿ ಬೀಳುವಂತಹ ದೃಶ್ಯಗಳು ಈ ಸಿನಿಮಾದಲ್ಲಿದೆ. ಮಾಸ್‌ ಪ್ರೇಕ್ಷಕರನ್ನು ಸೆಳೆಯಲು ಸನ್ನಿಲಿಯೋನ್‌ ಫೋಟೋ ಮತ್ತು ಒಂದೆರೆಡು ಫೈಟ್‌ಗಳು ಇವೆ. ಸಿನಿಮಾದಲ್ಲಿ ಒಂದಷ್ಟು ನ್ಯೂನ್ಯತೆಗಳಿದ್ದರೂ ಶಾಲಾ ದಿನಗಳಲ್ಲಿ ಸೆಳೆತಕ್ಕೆ ಬಿದ್ದು ಪ್ರೀತಿ ಮಾಡಬಾರದು ಎಂಬ ಸಂದೇಶವನ್ನು ನೀಡುತ್ತದೆ ಚಿತ್ರ.

.

ಚಿತ್ರದ ಕ್ಯಾಮರವರ್ಕ್ ಚೆನ್ನಾಗಿದೆ ಮತ್ತು ಚಿತ್ರದ ಎರಡು ಹಾಡುಗಳು ಗುನುಗುವಂತಿವೆ.

.

ನಿರ್ದೇಶಕ ಸಹದೇವ ಹೊಸ ರೀತಿಯಲ್ಲಿ ಸಿನಿಮಾ ಮಾಡಿ ಸ್ವಲ್ಪ ಭರವಸೆ ಮೂಡಿಸಿದ್ದಾರೆ. ನಾಯಕ ಅಮಿತ್‌ಗಿದು ಮೊದಲ ಪ್ರಯತ್ನವಾದರೂ, ಇಷ್ಟವಾಗುತ್ತಾರೆ. ಜಯಶ್ರೀ ಆರಾಧ್ಯ, ಸುಶ್ಮಿತಾ ಸಹ ಚೆಂದವಾಗಿ ನಟಿಸಿದ್ದಾರೆ.  ಉಳಿದಂತೆ ಎಲ್ಲ ಕಲಾವಿದರು ತಮ್ಮಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದಾರೆ.

.

ರೇಟಿಂಗ್ - 2.75/5

ಶ್ರೀ ಹನುಮಾನ್ ಟಾಕೀಸ್ ಅಡಿಯಲ್ಲಿ ಒಂದು ನೈಜ ಘಟನೆ ಆಧಾರಿತ ಚಿತ್ರ ಪುಟ್ಟರಾಜು... ಲವರ್ಸ್ ಆಫ್ ಶಶಿಕಲಾ ಇದೆ ಶುಕ್ರವಾರ ಬಿಡುಗಡೆ ಆಗುತ್ತಿದೆ. ನಾಗರಾಜು ಎಚ್, ರಾಜು ಬಾಲಕೃಷ್ಣ ಅವರ ಜಂಟಿ ನಿರ್ಮಾಣದ ಈ ಚಿತ್ರದ ನಿರ್ದೇಶಕರು ಸಹದೇವ.

.
ಅಮಿತ್, ಸುಶ್ಮಿತ, ಜಯಶ್ರೀ ಆರಾಧ್ಯ ಮುಖ್ಯ ತಾರಗಣದ ಈ ಚಿತ್ರ ಪ್ರೀತಿಯ ಜೊತೆ ಕುತೂಹಲಕಾರಿ ವಿಷಯಗಳನ್ನು ಇಟ್ಟುಕೊಂಡಿದೆ. ಪ್ರೇಕ್ಷಕರಿಗೆ ಅದರಲ್ಲೂ ಹಿರಿಯರಿಗೆ ತಮ್ಮ ಶಾಲಾ ದಿವಸಗಳನ್ನು ನೆನಪಿಗೆ ತರುವುದು ಎಂದು ನಿರ್ದೇಶಕ ಸಹದೇವ ತಿಳಿಸುತ್ತಾರೆ.
.
ಜನಪ್ರಿಯ ಸಂಗೀತ ನಿರ್ದೇಶಕ ಗಂಧರ್ವ ಅವರ ಪುತ್ರ ಶ್ರೀರಾಮ್ ಈ ಸಿನಿಮಾ ಇಂದ ಸಂಗೀತ ನಿರ್ದೇಶಕ ಆಗುತ್ತಿದ್ದಾರೆ. ವೆಂಕಿ, ಕರಣ್ ಮಹಾದೇವ್, ರಾಜು ಶಿರಾ, ಮೋಹನ್, ಕಂಬಿ ರಾಜು, ನೀಲ್ ರಾಜ್, ಸತೀಶ್ ರಾಜೇಂದ್ರನ್, ಈಶ್ವರ್ ಗೌಡ ತಂತ್ರಜ್ಞರ ಪಟ್ಟಿಯಲ್ಲಿ ಇದ್ದಾರೆ.
.
#Cineloka #Puttaraju

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top