nata

ttm

adweb

udgharsha

ಚಿತ್ರ: ಸೀತಾರಾಮ ಕಲ್ಯಾಣ
ನಿರ್ದೇಶನ : ಎ ಹರ್ಷ
ನಿರ್ಮಾಣ : ಅನಿತಾ ಕುಮಾರಸ್ವಾಮಿ
ಸಂಗೀತ : ಅನೂಪ್ ರೂಬೆನ್ಸ್
ಸಿನಿಮಾಟೋಗ್ರಾರ್ : ಸ್ವಾಮಿ
ತಾರಾಗಣ : ನಿಖಿಲ್‌ಕುಮಾರ್, ರಚಿತಾರಾಮ್, ಶರತ್‌ಕುಮಾರ್, ಮಧುಬಾಲ, ಆದಿತ್ಯ ಮೆನನ್, ಚಿಕ್ಕಣ್ಣ,ನಯನ ಮತ್ತಿತರರು.

.


ನಿಖಿಲ್‌ಕುಮಾರ್‌ ಮತ್ತು ರಚಿತಾ ರಾಮ್‌ ನಟನೆಯ ಸೀತಾರಾಮ ಕಲ್ಯಾಣ ಸಿನಿಮಾ ಮೇಕಿಂಗ್‌, ಸಂಗೀತ, ಆ್ಯಕ್ಷನ್‌, ಕಾಮಿಡಿ, ಹೀಗೆ ಎಲ್ಲದರಿಂದಲೂ ಒಟ್ಟಾಗಿ ಕೌಟುಂಬಿಕ ಕಲ್ಯಾಣವಾಗಿದೆ.

ಸೀತಾ ರಾಮ ಕಲ್ಯಾಣದಲ್ಲಿ ಎಲ್ಲವೂ ಇದೆ. ಲವ್‌ಸ್ಟೋರಿ, ಕಾಮಿಡಿ, ಎಮೋಷನ್ಸ್‌, ಆ್ಯಕ್ಷನ್ ಹೀಗೆ ಎಲ್ಲ ಅಂಶಗಳನ್ನು ಒಳಗೊಂಡಿರುವ ಒಂದು ಕಂಪ್ಲೀಟ್‌ ಪ್ಯಾಕೇಜ್‌ ಈ ಸಿನಿಮಾ.

.

ಮದುವೆಯೊಂದರಲ್ಲಿ ನಾಯಕ ಆರ್ಯ [ನಿಖಿಲ್‌]ಗೆ ಗೀತಾ [ರಚಿತಾ ರಾಮ್‌]ಳನ್ನು ನೋಡುತ್ತಾನೆ. ನೋಡಿದ ತಕ್ಷಣ ಲವ್‌ಲ್ಲಿ ಬೀಳೋ ಆರ್ಯ ಅದನ್ನು ಹೇಳುವುದು ಮಾತ್ರ ಸಿನಿಮಾದ ಇಂಟರ್‌ವೆಲ್‌ ಅಷ್ಟೊತ್ತಿಗೆ. ಅಷ್ಟೊರಳಗೆ ಒಂದು ಫೈಟ್‌, ಒಂದಷ್ಟು ಕಥೆಯ ವಿಸ್ತರಣೆ ಆಗಿರುತ್ತದೆ. ಅದೇನು ಎಂಬುದನ್ನು ಸಿನಿಮಾದಲ್ಲಿಯೇ ನೋಡಿದರೆ ಚಂದ.

.

ನಿರ್ದೇಶಕ ಹರ್ಷ ಮೇಕಿಂಗ್‌, ಲೊಕೇಶನ್‌ ಸೆಲೆಕ್ಷನ್‌, ಹಾಡುಗಳ ಆಯ್ಕೆ, ಚಿತ್ರಕಥೆ ಎಲ್ಲದರಲ್ಲಿಯೂ ಅಚ್ಚುಕಟ್ಟಾಗಿ ಕೆಲಸ ಮಾಡಿ ಗಮನ ಸೆಳೆದಿದ್ದಾರೆ. ಚಿತ್ರದ ಕೆಲವು ದೃಶ್ಯಗಳಲ್ಲಿ ಒಂದೆರಡು ತೆಲುಗು ಸಿನಿಮಾಗಳ ಛಾಯೆಯಿದೆ.

.

ಹರ್ಷ ಅವರ ಕನಸಿಗೆ ಸಿನಿಮಾಟೋಗ್ರಫರ್‌ ಸ್ವಾಮಿ ಮತ್ತು ಸಂಗೀತ ನಿರ್ದೇಶಕ ಅನುಪ್‌ ರೂಬೆನ್ಸ್‌ ನೀರೆರೆದಿದ್ದಾರೆ. ಅತಿ ಹೆಚ್ಚು ಗಮನ ಸೆಳೆಯುವುದು ಇವರಿಬ್ಬರ ಕೆಲಸ. ಇನ್ನು ನಿಖಿಲ್‌ಕುಮಾರ್‌ ಮೊದಲ ಸಿನಿಮಾಗೂ ಈ ಸಿನಿಮಾಗೂ ಸಾಕಷ್ಟು ಪಳಗಿದ್ದಾರೆ. ಡೈಲಾಗ್‌ ಡಿಲವರಿ, ಆ್ಯಕ್ಷನ್‌, ನಟನೆ, ರೊಮ್ಯಾನ್ಸ್‌, ಕಾಮಿಡಿ ಹೀಗೆ ಎಲ್ಲವನ್ನು ಲೀಲಾಜಾಲವಾಗಿ ಮಾಡಿ ನಟನಾಗಿ ಮಾಗಿದ್ದಾರೆ.

.

ರಚಿತಾ ರಾಮ್‌ ಇಲ್ಲಿ ಪಕ್ಕಾ ಫ್ಯಾಮಿಲಿ ಗರ್ಲ್‌. ಇಡೀ ಸಿನಿಮಾದ ಲಂಗ ದಾವಣಿ ಹಾಕಿಕೊಂಡು ಇಷ್ಟವಾಗುತ್ತಾರೆ. ಅಲ್ಲದೆ ತಮ್ಮ ಎಂದಿನಂತೆ ಲವಲವಿಕೆಯ ನಟನೆಯನ್ನು ಅವರು ಮುಂದುವರೆಸಿದ್ದಾರೆ. ಉಳಿದಂತೆ ಚಿಕ್ಕಣ್ಣ, ಮತ್ತು ಕಾಮಿಡಿ ಕಿಲಾಡಿಗಳು ಗ್ಯಾಂಗ್‌ ನಗಿಸುವಲ್ಲಿ ಯಶಸ್ವಿಯಾಗಿದೆ. ಚಿತ್ರದಲ್ಲಿರುವ ಸೆಂಟಿಮೆಂಟ್ ಸೀನ್‌ಗಳಲ್ಲಿ ರವಿಶಂಕರ್ ಮತ್ತು ಶರತ್ ಕುಮಾರ್ ಪೈಪೋಟಿಗೆ ಬಿದ್ದು ನಟಿಸಿದ್ದಾರೆ.

.

ಒಟ್ಟಿನಲ್ಲಿ ಸೀತಾ ರಾಮ ಕಲ್ಯಾಣವನ್ನು ನೋಡಲು ಇಡೀ ಫ್ಯಾಮಿಲಿ ಜತೆ ಯಾವುದೇ ಇರಿಸುವ ಮುರಿಸಿಲ್ಲದೇ ಹೋಗಬಹುದು.

ರೇಟಿಂಗ್‌: 3.75/5

ನಿಖಿಲ್‌ಕುಮಾರ್‌ ನಟನೆಯ ಬಹು ನಿರೀಕ್ಷಿತ 'ಸೀತಾರಾಮಾ ಕಲ್ಯಾಣ' ಸಿನಿಮಾದ ಟ್ರೇಲರ್‌ ಮತ್ತು ಪ್ರೀ ರಿಲೀಸ್‌ ಕಾರ್ಯಕ್ರಮ ಮೈಸೂರಿನಲ್ಲಿ ಜ.19ಕ್ಕೆ ನಡೆಯುತ್ತದೆ.

.

ಈ ಕಾರ್ಯಕ್ರಮದಲ್ಲಿ ಸರಿ ಸುಮಾರು ಮೂರು ಲಕ್ಷ ಮಂದಿ ಸೇರುವ ಸಾಧ್ಯತೆ ಇದೆ ಎಂದು ಚಿತ್ರತಂಡ ತಿಳಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಭರ್ಜರಿ ಆ್ಯಕ್ಷನ್‌ ಸನ್ನೀವೇಶಗಳಿದ್ದು, ಈಗ ಬರುವ ಟ್ರೇಲರ್‌ನಲ್ಲಿ ಏನಿದೆ ಎಂಬುದನ್ನು ನಿಖಿಲ್‌ ಅಭಿಮಾನಿಗಳು ಕಾಯುತ್ತಿದ್ದಾರೆ.

.

ನನ್ನ ರಾಜ ನಾನು,ರಾಣಿ ನೀನು ಎಂಬ ಹಾಡು ಯೂಟ್ಯೂಬ್‌ನಲ್ಲಿ ದೊಡ್ಡ ಹಿಟ್‌ ಆಗಿದ್ದು, ಸಿನಿಮಾ ಮೇಲೆ ದೊಡ್ಡ ನಿರೀಕ್ಷೆ ಹುಟ್ಟಿದೆ. ನೂರಕ್ಕೂ ಹೆಚ್ಚುಮುಖ್ಯ ಕಲಾವಿದರು ನಟಿಸಿರುವ ಈ ಸಿನಿಮಾದಲ್ಲಿ ನಿಖಿಲ್‌ಗೆ ಜೋಡಿಯಾಗಿ ರಚಿತಾರಾಮ್‌ ನಟಿಸಿದ್ದಾರೆ. ಶರತ್‌ಕುಮಾರ್‌, ಮಧುಬಾಲ,ರವಿಶಂಕರ್ ಸೇರಿದಂತೆ ದೊಡ್ಡ ದೊಡ್ಡ ನಟರು ನಟಿಸಿದ್ದಾರೆ,

 

ನಿಖಿಲ್‌ಕುಮಾರ್‌ ನಟನೆಯ ಸೀತಾರಾಮ ಕಲ್ಯಾಣ ಚಿತ್ರ ಇದೇ 25ಕ್ಕೆ ಬಿಡುಗಡೆಯಾಗಲಿದ್ದು, ಸಿನಿಮಾದ ಬಗೆಗಿನ ನಿರೀಕ್ಷೆಗಳು ದುಪ್ಪಟ್ಟಾಗುತ್ತಲೇ ಇದೆ. ಈ ಸಿನಿಮಾದಲ್ಲಿ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಅಂಶಗಳಿವೆ ಎಂದು ನಿರ್ದೇಶಕ ಹರ್ಷ ಹೇಳಿದ್ದಾರೆ.

.

ಕಾಮಿಡಿ, ಫ್ಯಾಮಿಲಿ ಎಮೋಷನ್ಸ್‌, ಲವ್‌ಸ್ಟೋರಿ, ಮಾಸ್‌ ಫೈಟ್‌ಗಳು, ಎಲ್ಲವೂ ಇದ್ದು ಇದೊಂದು ಪವರ್‌ ಪ್ಯಾಕ್‌ ಎಂಟರ್‌ಟೈನ್‌ಮೆಂಟ್‌ ಸಿನಿಮಾ ಎಂದಿದ್ದಾರವರು.

ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ ಮತ್ತು ಲಿರಿಕಲ್‌ ಹಾಡುಗಳಿಂದ ಸಿನಿಮಾ ಸಖತ್‌ ರಿಚ್‌ ಆಗಿ ಮೂಡಿಬಂದಿರುವುದು ಗೊತ್ತಾಗುತ್ತದೆ. ಈ ಚಿತ್ರಕ್ಕೆ ಪದ್ಮಾವತ್‌ ಹಿಂದಿ ಚಿತ್ರಕ್ಕೆ ಡಿ ಐ ಮಾಡಿದ್ದ ಆಶೀರ್ವಾದ್‌ ಕೆಲಸ ಮಾಡಿದ್ದಾರೆ. ದಕ್ಷಿಣ ಭಾರತದ ಖ್ಯಾತ ಸಾಹಸ ನಿರ್ದೇಶಕರಾದ ರಾಮ್‌ಲಕ್ಷ್ಮಣ್‌ ಫೈಟ್ಸ್‌ ಕಂಪೋಸ್‌ ಮಾಡಿದ್ದಾರೆ. ಇವೆಲ್ಲವೂ ಸೇರಿಕೊಂಡು ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆ ಮೇಲೆ ಕಾಣಿಸುತ್ತದೆ. ನಿಖಿಲ್‌ ಅವರಂಥೂ ಅದ್ಭುತವಾಗಿ ನಟಿಸಿದ್ದಾರೆ. ಅವರ ಕೆಲ ಲುಕ್ಸ್‌ಗಳು ಈ ವರ್ಷದಲ್ಲಿ ಟ್ರೆಂಡ್‌ ಆಗುವ ಎಲ್ಲ ಸಾಧ್ಯತೆಗಳಿವೆ ಎನ್ನುತ್ತಾರೆ ಹರ್ಷ.

.

ಸಿನಿಮಾ ಇದೇ ಜ.25 ಕ್ಕೆ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗುತ್ತದೆ.

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top