tarakaasura

ttm

adweb

udgharsha

 

ನಿರ್ದೇಶನ: ಶಿವ ಗಣೇಶ್‌
ನಿರ್ಮಾಣ: ರಾಹುಲ್‌ ಐನಾಪೂರ್‌
ಛಾಯಾಗ್ರಹಣ: ವಿನೋದ್‌ ಭಾರತಿ
ಸಂಕಲನ : ಸುರೇಶ್‌ ಅರ್ಮುಗಂ
ಕಲಾವಿದರು: ರಾಹುಲ್‌ ಐನಾಪೂರ್‌, ಅಜಿತ್‌ ಜಯರಾಜ, ಭವಾನಿ ಪ್ರಕಾಶ್‌,ನಂದಗೋಪಾಲ್, ಯಶ್‌ ಶೆಟ್ಟಿ ಮತ್ತು ಇತರರು
.
--------------

ಇತ್ತೀಚಿನ ದಿನಗಳಲ್ಲಿ ಥ್ರಿಲ್ಲರ್‌ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ, ಆ ಸಾಲಿಗೆ ಹೊಸ ಸೇರ್ಪಡೆ ತ್ರಾಟಕ. ಕೆಲ ದಿನಗಳಿಂದ ಬಿಡುಗಡೆಯಾದ ಥ್ರಿಲ್ಲರ್‌ ಸಿನಿಮಾಗಳಲ್ಲಿ ತ್ರಾಟಕ ಸ್ವಲ್ಪ ಥ್ರಿಲ್ಲಿಂಗ್‌ ಅನುಭವ ನೀಡುವಂತಹದ್ದು ಎನ್ನಬಹುದು.
.

ದೇವ್‌ (ರಾಹುಲ್‌ ಐನಾಪೂರ್ರ್‌) ಹಾಗೂ ರವಿ (ಅಜಿತ್‌ ಜಯರಾಜ್‌) ಎಂಬ ಇಬ್ಬರು ಪೋಲೀಸ್‌ ಆಫೀಸ್‌ರ್‌ ಗಳಿರುತ್ತಾರೆ. ಇದರಲ್ಲಿ ದೇವ್‌ ಅವರ ಸಹೋದರನ ಕೊಲೆ ಯಾಗುತ್ತದೆ. ಆ ಕೊಲೆ ಯಾರು ಮಾಡಿದ್ದಾರೆ ಎಂಬುದರ ಹಿಂದೆ ಬೀಳುವ ಈ ಆಫಿಸರ್‌ಗಳ ಕಥೆಯೇ ತ್ರಾಟಕ. 
.

ಈ ಚಿತ್ರ ಆರಂಭದಿಂದ ಕೊನೆಯವರೆಗೂ ಭಯ ಮತ್ತು ಸಾಕಷ್ಟು ಥ್ರಿಲ್ಲಿಂಗ್‌ ಮೂಡಿಸುತ್ತದೆ. ಆಗಾಗ ನೀಡುವ ಟ್ವಿಸ್ಟ್‌ಗಳು ಜನರನ್ನು ಬೆಚ್ಚಿ ಬೀಳುವಂತೆ ಮಾಡುತ್ತದೆ. ಈ ನಿಟ್ಟಿನಲ್ಲಿ ಇದು ಸೈಕಾಲಾಜಿಕಲ್‌ ಥ್ರಿಲ್ಲರ್‌ ಎನ್ನಬಹುದು. ಚಿತ್ರದ ಮೊದಲಾರ್ಧದಲ್ಲಿ ನಿರ್ದೇಶಕ ಪ್ರೇಕ್ಷಕರನ್ನು ಕನ್‌ಫ್ಯೂಸ್ ಮಾಡಲು ಹೋಗಿ ಅವರೇ ಕನಫ್ಯೂಸ್ ಆಗಿದ್ದಾರಾ ಎನ್ನೋ ಫೀಲ್ ಬರತ್ತದೆ. ಅಷ್ಟರ ಮಟ್ಟಿಗೆ ಈ ಚಿತ್ರದಲ್ಲಿ ಟ್ವಿಸ್ಟ್ ಗಳಿವೆ.
.

ದೇವ್‌ ಸಹೋದರನ ಕೊಲೆ ತನಿಖೆ ನಡೆಯುತ್ತಿರುವಾಗ ಒಬ್ಬನನ್ನು ತನಗೆ ಅರಿವಲ್ಲದಂತೆ ಕೊಲೆ ಮಾಡುತ್ತಾನೆ. ಇದಕ್ಕೆ ಆತನ ಮಾನಸಿಕ ಸ್ಥಿತಿಯೇ ಕಾರಣವಾ ಎನ್ನುವ ಅನುಮಾನ ಸೃಷ್ಟಿಯಾಗುತ್ತದೆ. ಆದರೆ ಯಾರು ಕೊಲೆ ಮಾಡಿದ್ದಾರೆ ಎಂಬುದನ್ನು ತಿಳಿಯಲು ಸಿನಿಮಾವನ್ನು ಕೊನೆಯ ವರೆಗೂ ನೋಡಬೇಕು. ನಿರ್ದೇಶಕ ಶಿವಗಣೇಶ್‌ ಚಿತ್ರಕಥೆಯಲ್ಲಿ ಸಾಕಷ್ಟು ಅನುಮಾನಗಳನ್ನು ಬಿಟ್ಟು ಪ್ರೇಕ್ಷಕರ ತಲೆಗೆ ಹುಳ ಬಿಡುತ್ತಾರೆ. ಈ ಅನುಮಾನಗಳನ್ನು ಪರಿಹರಿಸಿಕೊಳ್ಳಬೇಕಾದರೆ ಚಿತ್ರವನ್ನು ನೋಡಲೇ ಬೇಕು. ಕೊನೆಯ 30-40 ನಿಮಿಷಗಳು ಚಿತ್ರದ ಹೈಲೈಟ್.
.
ರಾಹುಲ್‌ ಸಿನಿಮಾ ಪೂರ್ತಿ ಯಾವುದೇ ಏರಿಳಿತಗಳಿಲ್ಲದೇ ನಟಿಸ ಮೊದಲ ಪ್ರಯತ್ನದಲ್ಲಿಯೇ ಗಮನ ಸೆಳೆದಿದ್ದಾರೆ. ಅಜಿತ್‌ ಜಯರಾಜ್‌ ಖಡಕ್‌ ಪೊಲೀಸ್‌ ಆಫೀಸರ್‌ ಪಾತ್ರದಲ್ಲಿ ಶಕ್ತಿ ಮೀರಿ ನಟಿಸಿ ನ್ಯಾಯ ಒದಗಿಸಿದ್ದಾರೆ. ನಟಿ ಹೃದಯ ಸಹ ಇಷ್ಟವಾಗುತ್ತಾರೆ. ಭವಾನಿ ಪ್ರಕಾಶ್‌ ಮತ್ತು ಯಶ್‌ ಶೆಟ್ಟಿ ಮತ್ತೊಮ್ಮೆ ತಮ್ಮ ಅಭಿನಯದ ಮೂಲಕ ಪ್ರತಿಭಾವಂತರೆಂದು ಪ್ರೂವ್‌ ಮಾಡಿದ್ದಾರೆ.ಹಾಸ್ಯ ನಟನಾಗಿ ನಂದ ಗೋಪಾಲ್ ಚೆನ್ನಾಗಿ ನಟಿಸಿದ್ದಾರೆ. ಅಕ್ಷತಾ ಅವರು ಆಟಕ್ಕುಂಟು ಲೆಕ್ಕಕಿಲ್ಲ ಎನ್ನುವ ಪಾತ್ರ ಮಾಡಿದ್ದಾರೆ
.
ನಿರ್ದೇಶಕ ಶಿವಗಣೇಶ್‌ ಮೇಕಿಂಗ್‌ ಬಹಳಷ್ಟು ಒತ್ತು ನೀಡಿದ್ದಾರೆ. ಹಾಡುಗಳು ಮತ್ತು ಹಿನ್ನಲೆ ಸಂಗೀತ ಕೊಂಚ ಮಂಕು ಎನಿಸುತ್ತದೆ. ಕ್ಯಾಮೆರವರ್ಕ್ ನೀಟಾಗಿದೆ.

ಥ್ರಿಲ್ಲರ್‌ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರು ಈ ಚಿತ್ರವನ್ನು ಒಮ್ಮೆ ನೋಡಬಹುದು.
.
ರೇಟಿಂಗ್ - 3/5

#Trataka #Cineloka

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top