Headlines

ಪ್ರಸಿದ್ಧ ಚಲನಚಿತ್ರ “ಮಾನಸ ಸರೋವರ” ಈಗ ಕಿರುತರೆ ಧಾರಾವಾಹಿ
  ಉದಯ ಟಿವಿ ತನ್ನ ಹೊಸ ಬಗೆಯ ಕಾರ್ಯಕ್ರಮಗಳು ಮತ್ತು ನವನವೀನ ಪ್ರಯತ್ನಗಳಿಂದ ಕನ್ನಡಿಗರ ಮನಸ್ಸಿನಲ್ಲಿ ಬೇರೂರಿದೆ. ಕಳೆದ 23 ವರ್ಷಗಳಿಂದ ಬಗೆಬಗೆಯ ಸಿನಿಮಾಗಳು ಮತ್ತು ಧಾರಾವಾಹಿಗಳನ್ನು ವೀಕ್ಷಕರಿಗೆ ಉಣಬಡಿಸುತ್ತಲೇ ಇರುವ ಉದಯ ವಾಹಿನಿ, ಎಂದಿಗೂ ಕೂಡ ಹೊಸತನದತ್ತ ತುಡಿಯುವ ಮನರಂಜನಾ ವಾಹಿನಿ ಎಂದರೆ ತಪ್ಪಾಗಲಾರದು. ಕಳೆದ ಒಂದೆರಡು ವರುಷಗಳಿಂದ ಬೇರೆ ಬಗೆಯ... More detail
ಮಗಳನ್ನು ಜನ ಸ್ವೀಕರಿಸಿದ ಬಗೆಗೆ ಖುಷಿಯಾದ ಅರ್ಜುನ್‌...
ಆ್ಯಕ್ಷನ್‌ ಪ್ರಿನ್ಸ್‌ ಅರ್ಜುನ್‌ ಸರ್ಜಾ ತಮ್ಮ ಪುತ್ರಿಯನ್ನು ಕನ್ನಡದ ಜನತೆ ಮೆಚ್ಚಿಕೊಂಡುರುವುದಕ್ಕೆ ಖುಷಿಯಾಗಿದ್ದಾರೆ. ಕಳೆದ ವಾರ ಬಿಡುಗಡೆಯಾದ ಪ್ರೇಮ ಬರಹ ಚಿತ್ರದ ಮೂಲಕ ತಮ್ಮ ಹಿರಿಯ ಪುತ್ರಿ ಐಶ್ವರ್ಯಾ ಸರ್ಜಾ ಅವರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯ ಮಾಡಿದ್ದರು. ಈ ಚಿತ್ರ ಎಲ್ಲಡೆ ಒಳ್ಳೆ ಪ್ರತಿಕ್ರಿಯೆ... More detail
ಗಾಯಕ ಟಿಪ್ಪುಗೆ ಪ್ರೀತಿ ಕೈಕೊಟ್ಟಾಗ
  ಹೆಸರಾಂತ ಗಾಯಕ ಟಿಪ್ಪು ಇದೇ ಮೊದಲ ಬಾರಿಗೆ ಆಲ್ಬಂ ಹಾಡೊಂದಕ್ಕೆ ದನಿಯಾಗಿದ್ದಾರೆ. ಲವ್ ಲೆಫ್ಟ್ ಅಸ್ ಎಂಬ ಇಂಗ್ಲೀಷ್ ಶೀರ್ಷಿಕೆ ಹೊಂದಿರುವ ಈ ಹಾಡನ್ನು ಹೇಮಂತ್ ಎಸ್. ನಿರ್ಮಾಣ ಮಾಡಿದ್ದಾರೆ. ವಿಶೇಷವಾಗಿ ಈ ಹಾಡು ಕ್ಯೂ ಆರ್ ಕೋಡ್ ಮೂಲಕ ಬಿಡುಗಡೆಯಾಗಿದೆ. ಈ ತಂಡ ನೀಡುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಮೊಬೈಲ್‍ನಲ್ಲಿಯೇ ಈ ಹಾಡನ್ನು... More detail
ಗೂಳಿಹಟ್ಟಿ ಪವನ್ ನಟಿಸಿರುವ "ಉಡುಂಬ" ಚಿತ್ರಕ್ಕೆ...
  ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ `ಉಡುಂಬ' ಕನ್ನಡ ಚಿತ್ರಕ್ಕೆ ಯು/ ಎ ಅರ್ಹತಾ ಪತ್ರ ದೊರಕಿದೆ ಎಂದು ನಿರ್ದೇಶಕ ಶಿವರಾಜ್ ತಿಳಿಸಿದ್ದಾರೆ. ಕಡಲ ತೀರದ ಯುವಕ, ಮೀನು ಮಾರುವವನ ಕಥೆ ಹೊಂದಿರುವ ಈ ಚಿತ್ರದ ನಿರ್ಮಾಪಕರು ಹನುಮಂತ ರಾವ್, ವೆಂಕಟ್ ರೆಡ್ಡಿ ಹಾಗೂ ಮಹೇಶ್ ಕುಮಾರ್. 35 ದಿವಸಗಳಲ್ಲಿ ಉಡುಪಿ, ಮಂಗಳೂರು, ಗೋಕರ್ಣ, ರಾಮನಗರ ಸುತ್ತ ಮುತ್ತ ಚಿತ್ರೀಕರಣ... More detail
ಚಿತ್ರೀಕರಣ ಮುಗಿಸಿದ 'ಸುವರ್ಣ ಸುಂದರಿ' :
  `ಸುವರ್ಣ ಸುಂದರಿ' ಕನ್ನಡ ಸಿನಿಮಾ 600 ವರ್ಷಗಳ ಹಿಂದಿನ ಇತಿಹಾಸಕ್ಕೆ ತೆರಳಿ ಮೂರು ಹಂತಗಳಲ್ಲಿ ಪ್ರೇಕ್ಷಕನಿಗೆ ಮನರಂಜನೆಯನ್ನು ನೀಡಲು ಸಜ್ಜಾಗಿರುವ ಚಿತ್ರ 75 ದಿವಸದಲ್ಲಿ ಚಿತ್ರೀಕರಣ ಮುಗಿಸಿಕೊಂಡು ಮಾತಿನ ಭಾಗದ ರೆಕಾರ್ಡಿಂಗ್ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಸುತ್ತಿದೆ. ಇದೊಂದು ಪುನರ್ಜನ್ಮದ ವಿಚಾರವನ್ನು ಸಹ... More detail
prev
next

All New

chamak running success

anigif

adweb

raju

Sunil HC Gowda

Sunil HC Gowda

 

ಉದಯ ಟಿವಿ ತನ್ನ ಹೊಸ ಬಗೆಯ ಕಾರ್ಯಕ್ರಮಗಳು ಮತ್ತು ನವನವೀನ ಪ್ರಯತ್ನಗಳಿಂದ ಕನ್ನಡಿಗರ ಮನಸ್ಸಿನಲ್ಲಿ ಬೇರೂರಿದೆ. ಕಳೆದ 23 ವರ್ಷಗಳಿಂದ ಬಗೆಬಗೆಯ ಸಿನಿಮಾಗಳು ಮತ್ತು ಧಾರಾವಾಹಿಗಳನ್ನು ವೀಕ್ಷಕರಿಗೆ ಉಣಬಡಿಸುತ್ತಲೇ ಇರುವ ಉದಯ ವಾಹಿನಿ, ಎಂದಿಗೂ ಕೂಡ ಹೊಸತನದತ್ತ ತುಡಿಯುವ ಮನರಂಜನಾ ವಾಹಿನಿ ಎಂದರೆ ತಪ್ಪಾಗಲಾರದು. ಕಳೆದ ಒಂದೆರಡು ವರುಷಗಳಿಂದ ಬೇರೆ ಬಗೆಯ ಕಥಾಹಂದರಗಳನ್ನು ಹೊಂದಿರುವ ಧಾರಾವಾಹಿಗಳನ್ನು ಉದಯ, ನೋಡುಗರಿಗೆ ಕೊಡುಗೆಯಾಗಿ ನೀಡಿದೆ. ನಂದಿನಿ, ಜೀವನದಿ, ಜೋಜೋ ಲಾಲಿ, ಅರಮನೆ,ದೊಡ್ಡಮನೆ ಸೊಸೆ ಮತ್ತು ಬ್ರಹ್ಮಾಸ್ತ್ರ ಧಾರಾವಾಹಿಗಳ ಯಶಸ್ಸಿನ ನಂತರ, ಈಗ ಕಿರುತೆರೆಯಲ್ಲೇ ಮೊದಲ ಬಾರಿಗೆ ಹೊಸದೊಂದು ಸಾಹಸಕ್ಕೆ ಉದಯ ಟಿವಿ ಸಜ್ಜಾಗಿದೆ. ಮಧುರವಾದ ಹಳೆಯದೊಂದು ಅದ್ಭುತ ಕನ್ನಡ ಚಿತ್ರವೊಂದನ್ನು ಮತ್ತೆ ಜನಮಾನಸದ ಎದುರಿಗೆ ಹೊಸದೇ ರೀತಿಯಲ್ಲಿ ವಿನೂತನವಾಗಿತರುವ ಪ್ರಯತ್ನಕ್ಕೆ ಉದಯ ಟಿವಿ ಹೊರಟಿದೆ. ಅದೇ, “ಮಾನಸ ಸರೋವರ”ಎನ್ನುವ ಸುಂದರಚಿತ್ರವನ್ನುಧಾರಾವಾಹಿಯಾಗಿ ಮುಂದುವರಿಸುವಯತ್ನ.

 

“ಮಾನಸ ಸರೋವರ” 1983 ರಲ್ಲಿತೆರೆಕಂಡು ಸೂಪರ್ ಹಿಟ್‍ ಸಿನಿಮಾ. ಪುಟ್ಟಣ್ಣಕಣಗಾಲರ ನಿರ್ದೇಶನದ, ಶ್ರೀನಾಥ್, ಪದ್ಮ ವಾಸಂತಿ ಮತ್ತುರಾಮಕೃಷ್ಣರ ಮನೋಜ್ಞಅಭಿನಯ ಮತ್ತು ಆ ಸುಮಧುರ ಹಾಡುಗಳನ್ನ ಯಾರಿಗೆತಾನೆ ಮರೆಯೋದಕ್ಕೆ ಸಾಧ್ಯ. ಈಗ ಅದೇ ಸಿನಿಮಾದ ಮುಂದುವರೆದ ಭಾಗವಾಗಿ“ಮಾನಸ ಸರೋವರ”ಅನ್ನೋ ಹೆಸರಿನಲ್ಲೇಧಾರಾವಾಹಿ ಉದಯಟಿವಿಯಲ್ಲಿಟೆಲಿಕಾಸ್ಟ್ ಆಗೋಕೆ ರೆಡಿಯಾಗಿದೆ. 
ಈ ಧಾರಾವಾಹಿ ಎಲಾ ್ಲರೀತಿಯಲ್ಲೂ ಜನಮಾನಸದಲಿ ್ಲಒಂದು ಕುತೂಹಲವನ್ನೇ ಸೃಷ್ಠಿಸಿದೆ. ಒಂದುಕಡೆ ಶ್ರೀನಾಥ್, ಪದ್ಮ ವಾಸಂತಿ, ರಾಮಕೃಷ್ಣ ನಟಿಸುತ್ತಿದ್ದಾರೆ ಅನ್ನೋದಾದ್ರೆ ಮತ್ತೊಂದು ಕಡೆ ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಣ ಸಂಸ್ಥೆ ನಮ್ಮ ಡಾ|| ಶಿವರಾಜ್ ಕುಮಾರ್‍ರವರ ಬ್ಯಾನರ್ ಶ್ರೀ ಮುತ್ತು ಸಿನಿ ಕ್ರಿಯೇಷನ್ಸ್ ಈ ಧಾರಾವಾಹಿಯನ್ನ ನಿರ್ಮಾಣ ಮಾಡುತ್ತಿದ್ದಾರೆ. ಶಿವಣ್ಣರವರ ಮಗಳು ನಿವೇದಿತಾ ಶಿವರಾಜ್ ಕುಮಾರ್‍ಇದರ ಸಂಪೂರ್ಣಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಅನ್ನೋದು ವಿಶೇಷ. 
ಮನಸ್ಸಿನ ಆಧಾರದ ಮೇಲೆ ಚಿತ್ರಿತವಾಗಿದ್ದ ಮಾನಸ ಸರೋವರ ಸಿನಿಮಾ ಬಹು ಸೂಕ್ಷ್ಮಕಥಾಹಂದರ ಹೊಂದಿದ್ದಚಿತ್ರ. ಈಗ ಅದರದ್ದೇ ಮುಂದುವರೆದ ಭಾಗವಾಗಿ ಸೀರಿಯಲ್ ಬರ್ತಿದೆಅಂದ್ರೆ ವೀಕ್ಷಕ ಪ್ರಭುಗಳಿಗೆ ಅದೊಂದುರಸದೌತಣವೇ ಸರಿ.

 

ಮಾನಸ ಸರೋವರ ಸಿನಮಾದ ಕ್ಲೈಮಾಕ್ಸ್ ನಲ್ಲಿ ಹುಚ್ಚನಾದಡಾ||ಆನಂದ್ ಈಗ ಏನಾಗಿದ್ದಾರೆ? ಸಂತೋಷ್ ನನ್ನು ವರಿಸಿದ ವಾಸಂತಿ ಬದುಕು ಈಗ ಹೇಗಿದೆ? ಆನಂದ್ ನನ್ನುದುಡ್ಡಿನಾಸೆಗೆ ಬಿಟ್ಟು ಹೋಗಿದ್ದಅವರ ಪತ್ನೀ ಸರೋಜಾ ಈ ಏನು ಮಾಡುತ್ತಿದ್ದಾಳೆ? ಎಂಬ ಎಳೆಗಳನ್ನು ಇಟ್ಟುಕೊಂಡುಧಾರಾವಾಹಿಯನ್ನು ಮುಂದುವರಿಸಲಾಗಿದೆ.

“ಪುಟ್ಟಣ್ಣ ಅವರು ನನ್ನ ಫೇವರಿಟ್ ನಿರ್ದೇಶಕ, ಭಾರತೀಯ ಚಿತ್ರರಂಗದಲ್ಲೇ ಅವರಂತಹ ನಿರ್ದೇಶಕ ಇನ್ನೊಬ್ಬರಿಲ್ಲ್ಲ.ಡೈರೆಕ್ಟರ್ಸ್‍ ಡೈರೆಕ್ಟರ್‍ಅವರು. ಮಾಮೂಲಿ ಕಥೆಗಳನ್ನ ಹೊರತು ಪಡಿಸಿ ಹೊಸ ಪ್ರಯತ್ನ ಮಾಡಬೇಕು ಅನ್ನೋದು ನನ್ನ ಮಗಳ ಆಸೆ ಆಗಿತ್ತು. ಅದಕ್ಕೋಸ್ಕರ ಮಾನಸ ಸರೋವರಧಾರಾವಾಹಿ ಮಾಡೋಕೆ ಹೊರಟೆವು”ಎನ್ನುತ್ತಾರೆ ಶಿವಣ್ಣ.

“ಎಲ್ಲಿ ಕೂಡ ಕಾಂಪ್ರಮೈಸ್ ಮಾಡಿಕೊಳ್ಳದೇ ಧಾರಾವಾಹಿಯ ಚಿತ್ರೀಕರಣ ಮಾಡುತ್ತಿದ್ದೇವೆ. ಸಿನಿಮಾಗಳಿಗೆ ಬಳಸುವ ರೆಡ್‍ಎಪಿಕ್, ಆರೀಅಲೆಕ್ಸಾ ಕ್ಯಾಮರಾಗಳಲ್ಲಿ ಶೂಟಿಂಗ್ ನಡೀತಿದೆ. ಶ್ರೀನಾಥ್ ಸರ್ ಸೇರಿದಂತೆ ಪ್ರತೀಕಲಾವಿದರೂಕೂಡತುಂಬ ಚೆನ್ನಾಗಿಆಕ್ಟ್ ಮಾಡುತ್ತಿದ್ದಾರೆ”ಎನ್ನುತ್ತಾರೆ, ನಿರ್ಮಾಪಕಿ ನಿವೇದಿತಾ ಶಿವರಾಜ್ ಕುಮಾರ್.

“ನಾನು ಈ ಸೀರಿಯಲ್ ನಟನೆ ಮಾಡೋದಕ್ಕೆ ಮುಖ್ಯಕಾರಣಾನೇ ಪುಟ್ಟಣ್ಣಅವರು. ಪ್ರತೀ ಸೀನಿನಲ್ಲಿ ನಟನೆ ಮಾಡೋವಾಗ ಅವರೇ ಕಣ್ಮುಂದೆ ಬರುತ್ತಾರೆ. ಭೌತಿಕವಾಗಿ ನಮ್ಮಜೊತೆಗೆಅವರುಇಂದುಇರದೇಇದ್ದರೂ, ಮಾನಸಿಕವಾಗಿ ಜೊತೆಗಿದ್ದಾರೆಎನ್ನುವ ಭಾವ ನನ್ನನ್ನು ಆವರಿಸಿದೆ” ಎನ್ನುತ್ತಾರೆ ಪ್ರಣಯರಾಜಾ ಶ್ರೀನಾಥ್.
“ನಾನು ಧಾರಾವಾಹಿ ಮಾಡೋಕೆ ಶಿವರಾಜ್ ಕುಮಾರ್‍ ಅವರೇ ಕಾರಣ. ರಾಜಕುಮಾರ್‍ ಕುಟುಂಬ ಅಂದರೆ ನನಗೆ ಅಪರಿಮಿತ ವಿಶ್ವಾಸ, ಧಾರಾವಾಹಿ ಕೂಡತುಂಬ ಚೆನ್ನಾಗಿ ಮೂಡಿಬರುತ್ತಿದೆ”ಅನ್ನುವುದು ನಟರಾಮಕೃಷ್ಣ ಮನದಾಳದ ಮಾತು.

“ಮಾನಸ ಸರೋವರ ನನ್ನ ಫಸ್ಟ್ ಸಿನಿಮಾ. ಈಗ ಮತ್ತೆ ಅದೇ ಕಥೆಯ ಮುಂದುವರಿಕೆಯನ್ನ ಧಾರಾವಾಹಿಯಾಗಿ ಮಾಡ್ತಾ ಇರೋದೆ ಒಂದು ಥ್ರಿಲ್”ಎನ್ನುತ್ತಾರೆ, ನಟಿ ಪದ್ಮಾವಾಸಂತಿ.

ಮಾನಸ ಸರೋವರ ಧಾರಾವಾಹಿಯನ್ನು ಮೂಲಕಥೆಗೆ ಯಾವ ಚ್ಯುತಿಯೂ ಬರದ ಹಾಗೆ ಈ ಕಥೆಯನ್ನ ಹೊಸೆಯಲಾಗಿದೆ. ಧಾರಾವಾಹಿ ರಂಗದಲ್ಲಿ ನುರಿತ ನಿರ್ದೇಶಕರಾದರಾಮ್ ಜಯಶೀಲ್ ವೈದ್ಯ ನಿರ್ದೇಶನದಜವಾಬ್ದಾರಿ ವಹಿಸಿಕೊಂಡಿದ್ದಾರೆ. ಉಳಿದಂತೆ ಹಿರಿಯರಾದ ಶ್ರೀನಾಥ್, ಪದ್ಮಾ ವಾಸಂತಿ, ರಾಮಕೃಷ್ಣ ಮೊದಲಾದ ಹಿರಿಯ ಕಲಾವಿದರ ಜೊತೆ ಪ್ರಜ್ವಲ್, ಶಿಲ್ಪಾ, ಶೃತಿ ಮೊದಲಾದ ಹೊಸ ಕಲಾವಿದರ ದಂಡೆ ಇದೆ.

ಈ ಧಾರಾವಾಹಿಯ ಇನ್ನೊಂದು ಸ್ಪೆಷಾಲಿಟಿ ಅಂದ್ರೆ ಶಿವಣ್ಣನವರೇ ಮೊದಲ 10 ಎಪಿಸೋಡ್ಗಳ ಕಥೆಯನ್ನೂ ಹೇಳಿದ್ದಾರೆ. ಒಟ್ಟಿನಲ್ಲಿ ಕನ್ನಡ ಕಿರುತೆರೆಯಲ್ಲಿ ಒಂದು ಸಂಚಲನವನ್ನಂತು ಈ ಧಾರಾವಾಹಿ ಹುಟ್ಟುಹಾಕತ್ತೆ ಅನ್ನೋದ್ರಲ್ಲಿ ಯಾವ ಸಂಶಯವೂ ಇಲ್ಲ. ಧಾರಾವಾಹಿಯ ಕಥೆ ಹೇಗೆ ಶುರು ಆಗತ್ತೆ ಅಂದ್ರೆ ವಾಸಂತಿಯ ಮಗಳು ಸುನಿಧಿ ಮನಶ್ಶಾಸ್ತ್ರಜ್ಞೆ. ತನ್ನ ತಾಯಿಯಿಂದಲೇ ಹುಚ್ಚನಾದ ಡಾ||ಆನಂದ್ ನನ್ನು ಕ್ಯೂರ್ ಮಾಡುತ್ತೇನೆ ಎಂದು ಶಪಥ ಮಾಡುವ ಸುನಿಧಿ ಆ ಪ್ರಯತ್ನದಲ್ಲಿ ಗೆಲ್ಲುತ್ತಾಳಾ? ತನ್ನ ತಾಯಿಯಿಂದಾನೇ ಹೀಗಾಯ್ತು ಅಂತಗೊತ್ತಾದ್ರೆ ಸುನಿಧಿ ಏನು ಮಾಡ್ತಾಳೆ? ಇವೇ ಮೊದಲಾದ ಹತ್ತಾರುಟ್ವಿಸ್ಟ್ ಗಳನ್ನು ಒಳಗೊಂಡಿದೆ “ಮಾನಸ ಸರೋವರ” ಧಾರಾವಾಹಿ.

ಜೊತೆಗೆ ಮಾನಸ ಸರೋವರ ತಂಡ ಒಂದು ಕಾಂಟೆಸ್ಟ್ ಕೂಡಾ ಮಾಡ್ತಿದ್ದಾರೆ. ಫೆಬ್ರವರಿ 19 ರಿಂದ ಮಾರ್ಚ್ 2 ರವರೆಗೆ ಪ್ರತಿದಿನ ಮಾನಸ ಸರೋವರ ಕುರಿತಾದ ಪ್ರಶ್ನೆಗಳನ್ನು ಕೇಳುತ್ತಾರೆ, ಸರಿಯಾದ ಉತ್ತರಕೊಟ್ಟು ವಿಜಯಶಾಲಿಗಳಾದ ಒಂದು ಫ್ಯಾಮಿಲಿ ಇಡಿ ಮಾನಸ ಸರೋವರ ತಂಡದ ಜೊತೆ ಭೋಜನಕೂಟದಲ್ಲಿ ಭಾಗವಹಿಸಬಹುದು ಜೊತೆಗೆ ಹ್ಯಾಟ್ರಿಕ್ ಹಿರೋ ಶಿವಣ್ಣಾನೂ ಇರ್ತಾರೆ.

ಉದಯಟವಿಯ “ಮಾನಸ ಸರೊವರ”ಇದೇ ಫೆಬ್ರವರಿ 26ರಿಂದ ಸೋಮವಾರದಿಂದ ಶುಕ್ರವಾರದವರೆಗೆರಾತ್ರಿ 9.30ಕ್ಕೆಉದಯಟಿವಿಯಲ್ಲಿ ಪ್ರಸಾರವಾಗಲಿದೆ.

#ManasaSarovara #Cineloka

ಆ್ಯಕ್ಷನ್‌ ಪ್ರಿನ್ಸ್‌ ಅರ್ಜುನ್‌ ಸರ್ಜಾ ತಮ್ಮ ಪುತ್ರಿಯನ್ನು ಕನ್ನಡದ ಜನತೆ ಮೆಚ್ಚಿಕೊಂಡುರುವುದಕ್ಕೆ ಖುಷಿಯಾಗಿದ್ದಾರೆ.
ಕಳೆದ ವಾರ ಬಿಡುಗಡೆಯಾದ ಪ್ರೇಮ ಬರಹ ಚಿತ್ರದ ಮೂಲಕ ತಮ್ಮ ಹಿರಿಯ ಪುತ್ರಿ ಐಶ್ವರ್ಯಾ ಸರ್ಜಾ ಅವರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯ ಮಾಡಿದ್ದರು. ಈ ಚಿತ್ರ ಎಲ್ಲಡೆ ಒಳ್ಳೆ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಉತ್ತಮ ಕಲೆಕ್ಷನ್ ಮಾಡುತ್ತಿದ್ದೆ. ಈ ನಿಟ್ಟಿನಲ್ಲಿ ನಿರ್ದೇಶಕ ಕಮ್‌ ನಿರ್ಮಾಪಕ ಅರ್ಜುನ್‌ ಸರ್ಜಾ ಇತ್ತೀಚೆಗೆ ಪತ್ರಿಕಾ ಗೋಷ್ಠಿ ಕರೆದಿದ್ದರು.
’ನಾನು ತುಂಬಾ ಗೆಲುವನ್ನು ನೋಡಿದ್ದೇನೆ, ಸೋಲನ್ನು ನೋಡಿದ್ದೇನೆ. ಯಾವಾಗ ಬಿದ್ದರೂ ನಾನು ಡಿಪ್ರೆಸ್‌ ಆಗಿಲ್ಲ, ಯೋಚನೆ ಮಾಡಿಲ್ಲ ಈ ಸಿನಿಮಾ ಮಾಡುವಾಗಲೂ ಅಷ್ಟೇ ನನ್ನ ಮಗಳನ್ನು ನಾನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಬೇಕು ಎಂಬ ಕಾರಣದಿಂದ ಮಾಡಿದ್ದೇನೆ. ಇಂದು ಜನ ಅವಳ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಸಾಕಷ್ಟು ಜನ ನಿಮ್ಮ ಮಗಳ ನಟನೆ ಬಹಳ ಚೆನ್ನಾಗಿದ್ದು, ಮೊದಲ ಚಿತ್ರ ಎನ್ನಿಸುವುದಿಲ್ಲ. ಸುಮಾರು 50 ಚಿತ್ರಗಳಲ್ಲಿ ನಟಿಸಿದ ಕಲಾವಿದೆಯ ತರ ನಟಿಸಿದ್ದಾಳೆ ಎಂದಿದ್ದಾರೆ. ನನಗೆ ಈ ಸಿನಿಮಾ ಮಾಡಿದ್ದು ಖುಷಿಯಿದೆ,’ಎಂದಿದ್ದಾರೆ ಅರ್ಜುನ್‌ ಸರ್ಜಾ
ಜತೆಗೆ ಆ್ಯಕ್ಟಿಂಗ್‌ ಮತ್ತು ಡೈರೆಕ್ಷನ್‌ ಎರಡೂ ನನಗೆ ಇಷ್ಟ ಎಂದು ಅವರು ಹೇಳಿದ್ದಾರೆ. ಅರ್ಜುನ್‌ ಸರ್ಜಾ ಅವರಿಗೆ ಹಿಂದಿಯಲ್ಲಿಯೂ ಆಫರ್‌ ಬರುತ್ತಿದೆಯಂತೆ. ಆದರೆ ಈ ಚಿತ್ರಕ್ಕಾಗಿ ಯಾವುದನ್ನು ಒಪ್ಪಿಕೊಂಡಿರಲಿಲ್ಲವಂತೆ. ಒಟ್ಟಿನಲ್ಲಿ ಸರ್ಜಾ ಕುಟುಂಬದ ಐಶ್ವರ್ಯಾ ಸರ್ಜಾರನ್ನು ನಮ್ಮ ಜನ ಚೆನ್ನಾಗಿ ಸ್ವೀಕರಿಸಿದ್ದಾರೆ ಎಂಬುದು ತಿಳಿಯಿತು.
ಇನ್ನು ಐಶ್ವರ್ಯಾ ನಟನೆಯ ಬಗ್ಗೆ ಅಂಬರೀಷ್‌,ಸುದೀಪ್‌, ದರ್ಶನ್‌ ಸೇರಿದಂತೆ ಸಾಕಷ್ಟು ಮಂದಿ ಸ್ಟಾರ್‌ ನಟರು ಮೆಚ್ಚಿಕೊಂಡಿದ್ದಾರಂತೆ.
#PremaBaraha #Cineloka
 
 
ಹೆಸರಾಂತ ಗಾಯಕ ಟಿಪ್ಪು ಇದೇ ಮೊದಲ ಬಾರಿಗೆ ಆಲ್ಬಂ ಹಾಡೊಂದಕ್ಕೆ ದನಿಯಾಗಿದ್ದಾರೆ. ಲವ್ ಲೆಫ್ಟ್ ಅಸ್ ಎಂಬ ಇಂಗ್ಲೀಷ್ ಶೀರ್ಷಿಕೆ ಹೊಂದಿರುವ ಈ ಹಾಡನ್ನು ಹೇಮಂತ್ ಎಸ್. ನಿರ್ಮಾಣ ಮಾಡಿದ್ದಾರೆ. ವಿಶೇಷವಾಗಿ ಈ ಹಾಡು ಕ್ಯೂ ಆರ್ ಕೋಡ್ ಮೂಲಕ ಬಿಡುಗಡೆಯಾಗಿದೆ. ಈ ತಂಡ ನೀಡುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಮೊಬೈಲ್‍ನಲ್ಲಿಯೇ ಈ ಹಾಡನ್ನು ವೀಕ್ಷಿಸಬಹುದು. ಗಣೇಶ್ ಎಂಬ ಯುವಕ ಈ ಹಾಡನ್ನು ನಿರ್ದೇಶನ ಮಾಡಿದ್ದಾರೆ. ಈ ಹಾಡಿನ ಬಿಡುಗಡೆ ಸಮಾರಂಭ ಪ್ರೇಮಿಗಳ ದಿನದಂದು ವಿಶೇಷವಾಗಿ ಬಿಡುಗಡೆಯಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗಣೇಶ್ ನಮಗೆ ಯಾರಾದರೂ ಮೋಸ ಮಾಡಿದಾಗ ಇವರೇ ಹಿಂಗಾ, ಎಲ್ಲರೂ ಹಿಂಗಾ ಅನ್ನೋ ಉದ್ಘಾರ ಬರುತ್ತದೆ. ಅದನ್ನೇ ಆಧಾರವಾಗಿಟ್ಟುಕೊಂಡು ಈ ಹಾಡನ್ನು ಮಾಡಿದ್ದೇವೆ ಎಂದು ಹೇಳಿದರು. ನಿರ್ಮಾಪಕ ಹೇಮಂತ್ ಮಾತನಾಡಿ ನಮ್ಮ ಬ್ಯಾನರ್‍ನಲ್ಲಿ ಮೂಡಿರುವ ಮೊಟ್ಟಮೊದಲ ಆಲ್ಬಂ ಹಾಡಿನ ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವ ಯೋಜನೆಯೂ ಇದೆ ಎಂದು ಹೇಳಿದರು.
ಈ ಹಾಡಿನಲ್ಲಿ ರೋಹನ್ ರಾಜ, ವಿಜಯಶ್ರೀ ಎಂ.ಸಿ.ಬಿಜ್ಜು, ಅಕ್ಷಿತಾ, ಆರಾಧ್ಯ, ಅಮೂಲ್ಯ ಅಭಿನಯಿಸಿದ್ದಾರೆ. ಸುಮಾರು 7.8 ಲಕ್ಷಗಳ ಬಜೆಟ್‍ನೊಂದಿಗೆ ಈ ಹಾಡನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಆಲ್ಬಂ ಸಾಂಗೊಂದನ್ನು ಚಾಪರ್ ಉಪಯೋಗಿಸಿ ಚಿತ್ರೀಕರಣ ಮಾಡಲಾಗಿದೆ. ಭಾನುಪ್ರತಾಪ್ ಈ ಹಾಡನ್ನು ಅದ್ಭುತವಾಗಿ ಚಿತ್ರೀಕರಿಸಿದ್ದಾರೆ. ರಾಘವೇಂದ್ರ ಈ ಹಾಡಿಗೆ ಕಂಪೋಸ್ ಮಾಡಿದ್ದಾರೆ. ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ ಗಣೇಶ್.
#Cineloka

 

ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ `ಉಡುಂಬ' ಕನ್ನಡ ಚಿತ್ರಕ್ಕೆ ಯು/ ಎ ಅರ್ಹತಾ ಪತ್ರ ದೊರಕಿದೆ ಎಂದು ನಿರ್ದೇಶಕ ಶಿವರಾಜ್ ತಿಳಿಸಿದ್ದಾರೆ.

ಕಡಲ ತೀರದ ಯುವಕ, ಮೀನು ಮಾರುವವನ ಕಥೆ ಹೊಂದಿರುವ ಈ ಚಿತ್ರದ ನಿರ್ಮಾಪಕರು ಹನುಮಂತ ರಾವ್, ವೆಂಕಟ್ ರೆಡ್ಡಿ ಹಾಗೂ ಮಹೇಶ್ ಕುಮಾರ್. 35 ದಿವಸಗಳಲ್ಲಿ ಉಡುಪಿ, ಮಂಗಳೂರು, ಗೋಕರ್ಣ, ರಾಮನಗರ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ.

ನಾಯಕ ಪವನ್ ಸೂರ್ಯ ಈ ಚಿತ್ರಕ್ಕೆ `ಸಿಕ್ಸ್ ಪ್ಯಾಕ್' ತಯಾರಿ ಸಹ ಮಾಡಿಕೊಂಡಿದ್ದಾರೆ. ಮೂರು ಸಾಹಸ ಸನ್ನಿವೇಶಗಳಲ್ಲಿ ಅವರು ಪಾಲ್ಗೊಂಡಿದ್ದಾರೆ. ಚಿರಶ್ರೀ ಈ ಚಿತ್ರದ ಕಥಾ ನಾಯಕಿ. ಇರ್ಫಾನ್ ಖಳ ನಾಯಕ, ಶರತ್ ಲೋಹಿತಾಶ್ವ, ವಿನೀತ್ ರಾಜ್ ಸಂಗೀತ, ಹಾಲೇಶ್ ಛಾಯಾಗ್ರಹಣ, ಧನ್ ಕುಮಾರ್ ನೃತ್ಯ ನಿರ್ದೇಶನ, ಎಸ್ ಬಿ ಉದವ್ ಸಂಕಲನ ಈ ಚಿತ್ರಕ್ಕೆ ಒದಗಿಸಿದ್ದಾರೆ.

 
`ಸುವರ್ಣ ಸುಂದರಿ' ಕನ್ನಡ ಸಿನಿಮಾ 600 ವರ್ಷಗಳ ಹಿಂದಿನ ಇತಿಹಾಸಕ್ಕೆ ತೆರಳಿ ಮೂರು ಹಂತಗಳಲ್ಲಿ ಪ್ರೇಕ್ಷಕನಿಗೆ ಮನರಂಜನೆಯನ್ನು ನೀಡಲು ಸಜ್ಜಾಗಿರುವ ಚಿತ್ರ 75 ದಿವಸದಲ್ಲಿ ಚಿತ್ರೀಕರಣ ಮುಗಿಸಿಕೊಂಡು ಮಾತಿನ ಭಾಗದ ರೆಕಾರ್ಡಿಂಗ್ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಸುತ್ತಿದೆ. ಇದೊಂದು ಪುನರ್ಜನ್ಮದ ವಿಚಾರವನ್ನು ಸಹ ಒಳಗೊಂಡಿದೆ.
ಬೆಂಗಳೂರು, ವಿಜಾಪುರ, ಹೈದರಾಬಾದ್, ಕೇರಳದ ಅನೇಕ ಸುಂದರ ತಾಣಗಳಲ್ಲಿ ಚಿತ್ರೀಕರಣವನ್ನು ಮಾಡಲಾಗಿದೆ ಎಂದು ಚೊಚ್ಚಲ ನಿರ್ದೇಶನ ಮಾಡುತ್ತಿರುವ ಸೂರ್ಯ ಅವರು ತಿಳಿಸುತ್ತಾರೆ. ವಾಹಿನಿಗಳಲ್ಲಿ ಕೆಲಸ ಮಾಡಿ 10 ತೆಲುಗು ಸಿನಿಮಾಗಳಿಗೆ ಕಥೆಯ ರಚನೆಯಲ್ಲಿ ಅನುಭವ ಪಡೆದಿರುವ ಎಂ ಎಸ್ ಎನ್ ಸೂರ್ಯ ಈ `ಸುವರ್ಣ ಸುಂದರಿ' ಚಿತ್ರವನ್ನ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ವಿಜಯನಗರ ಸಾಮ್ರಾಜ್ಯಕ್ಕೆ ಹೋಗಿ ಇಂದಿನ ಕಾಲಕ್ಕೆ ಸಿನಿಮಾ ಕಥೆ ಬಂದು ನಿಲ್ಲುತ್ತದೆ.
10 ನಿಮಿಷದ ಕಪ್ಪು ಬಿಳುಪು ಸನ್ನಿವೇಶಗಳು, 15 ನಿಮಿಷದ ಗ್ರಾಫಿಕ್ಸ್ ತಂತ್ರಜ್ಞಾನ ಅಳವಡಿಸಿಕೊಂಡಿರುವ ಈ ಚಿತ್ರಕ್ಕೆ ರಾಮ್, ಸಾಕ್ಷಿ, ಪೂರ್ಣ, ಡಾ ಜಯಪ್ರದಾ, ಮಹಮ್ಮದ್ ಖಾನ್, ಸಾಯಿಕುಮಾರ್, ಅವಿನಾಷ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ಸಾಯಿ ಕಾರ್ತಿಕ್ ಅವರ ಸಂಗೀತ, ಈಶ್ವರ್ ಅವರ ಛಾಯಾಗ್ರಹಣ, ಎಸ್ ಟೀಮ್ ನಿರ್ಮಾಣ, ಪ್ರವೀಣ್ ಪುಡಿ ಸಂಕಲನ ಈ ಚಿತ್ರ ಒಳಗೊಂಡಿದೆ.
#SuvarnaSundari #Cineloka
 
ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ 51 ನೇ ಚಿತ್ರಕ್ಕೆ 'ಯಜಮಾನ' ಎಂಬ ಟೈಟಲ್‌ ಫಿಕ್ಸ್‌ ಆಗಿದೆ.
ಕೆಲ ವರ್ಷಗಳ ಹಿಂದೆ ಡಾ.ವಿಷ್ಣುವರ್ಧನ್‌ ನಾಯಕರಾಗಿ ನಟಿಸಿದ್ದ ಚಿತ್ರ ಟೈಟಲ್ ಇದಾಗಿದೆ. ಆ ಯಜಮಾನ ಕನ್ನಡ ಚಿತ್ರರಂಗದ ದೊಡ್ಡ ಹಿಟ್‌ ಚಿತ್ರ. 25 ವಾರಗಳ ಪ್ರದರ್ಶನ ಕಂಡಿತ್ತು. ಅಂತಹ ಯಶಸ್ವಿ ಸಿನಿಮಾದ ಟೈಟಲ್‌ನ್ನು ಮತ್ತೆ ಈಗ ದರ್ಶನ್‌ ಸಿನಿಮಾಗೆ ಬಳಸಿಕೊಳ್ಳಲಾಗುತ್ತಿದೆ.
 
ಬಿ ಸುರೇಶ್‌ ಮತ್ತು ಶೈಲಜಾ ನಾಗ್‌ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಪಿ ಕುಮಾರ್‌ ಡೈರೆಕ್ಟ್‌ ಮಾಡುತ್ತಿದ್ದಾರೆ. ಈ ಹಿಂದೆ 'ವಿಷ್ಣುವರ್ಧನ' ಎಂಬ ಟೈಟಲ್‌ ಇರುವ ಚಿತ್ರವನ್ನು ಕುಮಾರ್‌ ಕಿಚ್ಚ ಸುದೀಪ್‌ಗಾಗಿ ನಿರ್ದೇಶನ ಮಾಡಿದ್ದರು. ಈಗ ಡಾ.ವಿಷ್ಣುವರ್ಧನ್‌ ಅವರ ಇನ್ನೊಂದು ಚಿತ್ರದ ಟೈಟಲ್‌ನ್ನು ಇಟ್ಟು ದರ್ಶನ್‌ಗೆ ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ಬಾರಿ ದೊಡ್ಡ ಸಕ್ಸಸ್‌ ಕಂಡಿದ್ದ ಕುಮಾರ್‌, ಈ ಬಾರಿ ಮತ್ತೆ ಅದೇ ಹುರುಪಿನಲ್ಲಿದ್ದಾರೆ.
 
ಇನ್ನು ಈ ಚಿತ್ರದಲ್ಲಿ ದರ್ಶನ್‌ಗೆ ವಿಲನ್‌ ಆಗಿ ಧನಂಜಯ, ಅನುರಾಗ್‌ ಸಿಂಗ್‌ ಠಾಕೂರ್‌, ರವಿಶಂಕರ್ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ತಾನ್ಯ ಹೋಪ್‌ ನಾಯಕಿಯರಾಗಿದ್ದಾರೆ. ಫೆಬ್ರವರಿ 19ರಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ.
#Yajamana #Cineloka

ಇತ್ತೀಚೆಗೆ ಬಿಡುಗಡೆಯಾದ ಸಂಹಾರ ಚಿತ್ರದಲ್ಲಿ ಅಂಧನಾಗಿ ನಟಿಸಿ ಗಮನ ಸೆಳೆದ ಚಿರಂಜೀವಿ ಸರ್ಜಾ ಅಮ್ಮಾ ಐ ಲವ್‌ಯೂ ಚಿತ್ರದಲ್ಲಿ ಭಿಕ್ಷುಕನಾಗಿ ನಟಿಸಲಿದ್ದಾರೆ.

ತಮಿಳಿನಲ್ಲಿ ಸೂಪರ್‌ ಹಿಟ್‌ ಆಗಿದ್ದ ಪಿಚ್ಚಕಾರನ್‌ ಚಿತ್ರವನ್ನು ಕನ್ನಡಕ್ಕೆ ಕೆ ಎಂ ಚೈತನ್ಯ ರಿಮೇಕ್‌ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ನಾಯಕರಾಗಿದ್ದಾರೆ. ತಾಯಿಯ ಪಾತ್ರದಲ್ಲಿ ನಟಿ ಸಿತಾರಾ ಕಾಣಿಸಿಕೊಳ್ಳುತ್ತಿದ್ದಾರೆ. ನಿಶ್ವಿಕಾ ನಾಯ್ಡು ಎಂಬ ಹೊಸ ಪ್ರತಿಭೆಯನ್ನು ಈ ಚಿತ್ರದ ಮೂಲಕ ನಾಯಕಿಯಾಗಿ ಪರಿಚಯಿಸಲಾಗುತ್ತಿದೆ. ಉಳಿದಂತೆ ಕರಿಸುಬ್ಬು, ನಟನ ಪ್ರಶಾಂತ್‌ ಮುಖ್ಯ ತಾರಾಗಣದಲ್ಲಿದ್ದಾರೆ.

 

ಇದು ದ್ವಾರಕೀಶ್‌ ಪ್ರೊಡಕ್ಷನ್‌ ಹೌಸ್‌ನಲ್ಲಿ ನಿರ್ಮಾಣವಾಗುತ್ತಿರುವ 51ನೇ ಚಿತ್ರವಾಗಿದ್ದು, ಕೆ ಎಂ ಚೈತನ್ಯ ಮತ್ತು ಚಿರಂಜೀವಿ ಸರ್ಜಾ ಅವರ ಕಾಂಬಿನೇಶನ್‌ನ ನಾಲ್ಕನೇ ಸಿನಿಮಾ ಇದಾಗಿದೆ.

 

ಸುಮಾರು 54 ದಿನಗಳ ಕಾಲ ಉಡುಪಿ,ಬೆಂಗಳೂರು,ಮೈಸೂರಿನಲ್ಲಿ ಚಿತ್ರೀಕರಣ ಮಾಡಿರುವ ಚಿತ್ರತಂಡ ಈಗ ಡಬ್ಬಿಂಗ್‌ನಲ್ಲಿ ನಿರತವಾಗಿದೆ.

ಗುರು ಕಿರಣ್‌ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ,ಶೇಖರ್ ಚಂದ್ರ ಛಾಯಾಗ್ರಹಣವಿದೆ.

'ಅಕಿರ' ಸಿನಿಮಾದ ಬಳಿಕ ಅನೀಶ್‌ ತೇಜೆಶ್ವರ್‌ ನಟನೆಯ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾದ ಟೀಸರ್ ‌ ಬಿಡುಗಡೆಯಾಗಿ ಸುದ್ದಿ ಮಾಡಿತ್ತು. ಈಗ ಆ ಚಿತ್ರಕ್ಕೆ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಹಾಡಿದ್ದಾರೆ.

ಪುನೀತ್‌ರಾಜ್‌ಕುಮಾರ್‌ ಇಷ್ಟು ದಿನ ಸಾಕಷ್ಟು ಸಿನಿಮಾಗಳಲ್ಲಿ ಹಾಡಿದ್ದಾರೆ, ಇದರಲ್ಲೇನು ವಿಶೇಷ ಎಂದರೆ, ಅಪ್ಪು ಈ ಚಿತ್ರಕ್ಕೆ “ರಂಗೇರಿದೆ ಈ ಮನಸಿನ ಬೀದಿ” ಎಂದು ಶುರುವಾಗುವ ಒಂದು ರೊಮ್ಯಾಂಟಿಕ್‌ ಸಾಂಗ್‌ ಹಾಡಿದ್ದಾರೆ.

ಕಮರ್ಷಿಯಲ್‌ ಡೈಲಾಗ್ ಗಳ ಮೂಲಕ ಟೀಸರ್‌ನ್ನು ಸೆಳೆಯುವಂತೆ ಮಾಡಿದ್ದ ಅನಿಶ್‌ ಮತ್ತವರ ತಂಡ ಈಗ ಚಿತ್ರಕ್ಕೆ ಪುನೀತ್‌ರಾಜ್‌ಕುಮಾರ್‌ ಅವರ ಕೈಯಲ್ಲಿ ಹಾಡಿಸಿದೆ.

ಅಜನೀಶ್‌ ಲೋಕನಾಥ್‌ “ವಾಸು...”ಗೆ ಸಂಗೀತ ನೀಡಿದ್ದಾರೆ.

ಪಕ್ಕಾ ಲೋಕಲ್ ಹುಡುಗ 'ವಾಸು' ಸುತ್ತ ಹೆಣೆದಿರುವ ಕಥೆ 'ವಾಸು ನಾನ್ ಪಕ್ಕಾ ಕಮರ್ಷಿಯಲ್' . ಈ ಚಿತ್ರಕ್ಕೆ ಅಜಿತ್‌ವಾಸನ್‌ ಕ್ಯಾಪ್ಟನ್‌ ಆಗಿದ್ದಾರೆ.

ಈ ಕಥೆಯನ್ನು ಅನಿಶ್‌ಗೆ ಅಕಿರಾ ಟೈಮ್‌ನಲ್ಲಿ ಹೇಳಿದ್ದರಂತೆ. ಈ ವಾಸು ನಾನ್‌ ಪಕ್ಕಾ ಕಮರ್ಷಿಯಲ್‌ ಚಿತ್ರವನ್ನು ಅನಿಶ್‌ ಅವರೇ ಸ್ವತಃ ನಿರ್ಮಾಣ ಮಾಡುತ್ತಿದ್ದಾರೆ. ಟಾಕಿ ಭಾಗದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಒಂದು ಹಾಡು ಮಾತ್ರ ಬಾಕಿ ಇದೆಯಂತೆ.

ಜಗತ್ತಿನಲ್ಲೇ ತಂದೆ ತಾಯಿ ಪ್ರೀತಿಗಿಂತಲೂ ಮುಖ್ಯವಾದದ್ದು ಯಾವುದು ಇಲ್ಲ ಎಂಬುದನ್ನು ನಮ್ಮ ಯುವಕರಿಗೆ ತೋರಿಸಲು ಇದಂ ಪ್ರೇಮಂ ಜೀವನಂ ಎಂಬ ಚಿತ್ರ ಬರುತ್ತಿದೆ. ಸಂಪೂರ್ಣವಾಗಿ ಹೊಸಬರಿಂದಲೇ ನಿರ್ಮಾಣವಾಗಿರುವ ಈ ಚಿತ್ರವನ್ನು ರಾಘವಾಂಕ ಪ್ರಭು ಎಂಬುವವರು ನಿರ್ದೇಶನ ಮಾಡಿದ್ದಾರೆ.

ಇವರ ಹೊಸ ರೀತಿಯ ಪ್ರಯತ್ನಕ್ಕೆ ಕೆಆರ್‌ಜಿ ಸ್ಟೂಡಿಯೋಸ್‌ನ ಕಾರ್ತಿಕ್‌ ಗೌಡ ಬೆನ್ನೆಲುಬಾಗಿ ನಿಂತಿದ್ದಾರೆ.

ಈ ಹಿಂದೆ ಗಣಿತ ಉಪನ್ಯಾಸಕರಾಗಿದ್ದ ರಾಘವಾಂಕ ಪ್ರಭು ಸಿನಿಮಾ ಮೇಲಿನ ಆಸಕ್ತಿಯಿಂದಾಗಿ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಪ್ರತಿಯೊಬ್ಬರ ಬದುಕಿನಲ್ಲಿ, ತಂದೆ-ತಾಯಿ ಬಹಳ ದೊಡ್ಡ ಪಾತ್ರ ವಹಿಸುತ್ತಾರೆ. ಅವರಿಗಾಗಿ ಮಕ್ಕಳು ಏನು ಮಾಡುತ್ತಾರೆ ಎಂಬುದಕ್ಕೆ ಸ್ವಲ್ಪ ಕಮರ್ಷಿಯಲ್‌ ಟಚ್‌ ನೀಡಿ ಚಿತ್ರ ಮಾಡಿದ್ದಾರಂತೆ ನಿರ್ದೇಶಕ ರಾಘವಾಂಕ ಪ್ರಭು.

ಈ ಚಿತ್ರದಲ್ಲಿ ನಾಯಕ-ನಾಯಕಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು, ಕಥೆ ಎಂಜಿನಿಯರಿಂಗ್‌ ಕೊನೆ ಸೆಮಿಸ್ಟರ್‌ನಿಂದ ಆರಂಭವಾಗುತ್ತದೆ. ತಂದೆ ತಾಯಿ ಆಸೆ ಪೂರೈಸುವ ಸಲುವಾಗಿ ತಮ್ಮ ಪ್ರೀತಿ ತ್ಯಾಗ ಮಾಡಲು ಸಿದ್ಧರಾಗುವ ಕಥೆ ಇದರಲ್ಲಿದೆ .

ಕೆ ಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್‌ ಗೌಡ ಬರೀ ಟ್ರೇಲರ್‌ ನೋಡಿ ಈ ಚಿತ್ರವನ್ನು ವಿತರಣೆ ಮಾಡುತ್ತೇನೆ ಎಂದು ಒಪ್ಪಿಕೊಂಡಿದ್ದಾರಂತೆ.

ಚಿತ್ರದಲ್ಲಿ ತಂದೆ ತಾಯಿಯಾಗಿ ಅವಿನಾಶ್‌ - ಮಾಳವಿಕಾ ನಟಿಸಿದ್ದಾರೆ. ಸನತ್‌ ಸನ್ನಿ, ಶನಾಯ ಕಾತ್ವೆ ಎಂಬ ಹೊಸ ಪ್ರತಿಭೆಗಳು ನಾಯಕ -ನಾಯಕಿ. ಈ ಚಿತ್ರವನ್ನು ರಿಯೋನೊ ಪ್ರೋಡಕ್ಷನ್‌ ಹೌಸ್‌ ನಿರ್ಮಿಸಿದ್ದು, ಇದು ಗೋಕುಲ್‌ ಎನ್‌. ಕೆ, ನವೀನ್‌ ಕುಮಾರ್‌ ಜೆ.ಪಿ, ರಾಘವಂಕ ಪ್ರಭು ಸೇರಿ ಸ್ಥಾಪಿಸಿರುವ ಸಂಸ್ಥೆ. ಚಿತ್ರದ ಟ್ರೇಲರ್‌ನ್ನು ಜನವರಿ 1ರಂದು ಬಿಡುಗಡೆಯಾಗಿತ್ತು.

ಜ್ಯೂಡಾ ಸ್ಯಾಂಡಿ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಬೇಸಿಕಲ್‌, ನವೀನ್‌ ಪಂಚಾಕ್ಷರಿ ಎಂಬುವವರು ಸಿನಿಮಾಟೋಗ್ರಫಿ ಮಾಡಿದ್ದಾರೆ.

'ನನಗೆ ಸಿನಿಮಾ ಅಂದ್ರೆ ಬಹಳ ಇಷ್ಟ. ಇವತ್ತಿನ ಜನರೇಶನ್‌ಗೆ ಇಷ್ಟವಾಗುವ ಸಿನಿಮಾ ಮಾಡಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಅದರಂತೆ ಇದಂ ಪ್ರೇಮಂ ಜೀವನಂ ಚಿತ್ರ ಮಾಡಿದ್ದೇನೆ. ಎಂದು ಖುಷಿ ವ್ಯಕ್ತಪಡಿಸುತ್ತಾರೆ ಸಿನಿಮಾ ತಂಡ.

 

ಟೆರಾಯನ್ಸ್ ಎಂಟರ್‍ಟೈನ್‍ಮೆಂಟ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಚಿತ್ರ "ಕಂತ್ರಿ ಬಾಯ್ಸ್" ಈವಾರ ಬಿಡುಗಡೆಯಾಗುತ್ತಿದೆ. ವೆಂಕಟ್ ಗೌಡ ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ.

ಕಿರುತೆರೆಯ ಸಿಲ್ಲಿಲಲ್ಲಿ ಸೇರಿದಂತೆ ಹಲವಾರು ಕಾಮಿಡಿ ಧಾರಾವಾಹಿಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದ ರಾಜು ಚಟ್ನಳ್ಳಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಎಂ.ಸಿ ಹೇಮಂತ್ ಗೌಡ ಚಿತ್ರಕ್ಕೆ ಬಂಡವಾಳ ಹಾಕಿ ಚಿತ್ರ ನಿರ್ಮಿಸಿದ್ದಾರೆ ರಿಲೀಸ್ ಬಗ್ಗೆ ಒಂದಷ್ಟು ಮಾಹಿತಿಗಳನ್ನು ನೀಡಲು ಚಿತ್ರತಂಡ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕ ರಾಜು ಚಟ್ನಳ್ಳಿ ಇದೊಂದು ಸಪೂರ್ಣ ಹಾಸ್ಯ ಚಿತ್ರ. ಹಿಂದೆ ನಾನು ಕಾಮಿಡಿ ಸೀರಿಯಲ್‍ಗಳಿಗೆ ಕೆಲಸ ಮಾಡಿದ್ದು ಈ ಚಿತ್ರಕ್ಕೆ ಅನುಕೂಲಕರವಾಯಿತು. ಚಿತ್ರದ ಪ್ರತಿ ಸೀನ್ ಕಾಮಿಡಿಯಾಗಿದೆ. ಹೆಣ್ಣನ್ನು ಒಳ್ಳೇ ರೀತಿಯಲ್ಲಿ ನೋಡ ಎನ್ನುವುದೇ ನಮ್ಮ ಉದ್ದೇಶ. ಯಾವುದೋ ಕಾರಣಕ್ಕಾಗಿ ಪರಿಸ್ಥಿತಿಗೆ ಸಿಲುಕಿ ತಪ್ಪುದಾರಿ ಹಿಡಿದಿರುತ್ತಾರೆ. ಇಂಥವರನ್ನು ಸಮಾಜ ಗೌರವದಿಂದ ಕಾಣಬೇಕು ಎಂದು ಈ ಚಿತ್ರದಲ್ಲಿ ಹೇಳಿದ್ದೇವೆ. ಚಿತ್ರದಲ್ಲಿ ಅಬೀನಯಿಸಿರುವವರು ಯಾರೂ ಹೊಸಬರ ಹಾಗೆ ಕಾಣುವುದಿಲ್ಲ. ಗಡ್ಡಪ್ಪ ಚಿತ್ರದಲ್ಲಿ ಒಳ್ಳೇ ಪಾತ್ರ ಮಾಡಿದ್ದಾರೆ. ಚಿತ್ರವನ್ನು ನೋಡಿದವರೆಲ್ಲ ಮೆಚ್ಚಿದ್ದಾರೆ ಎಂದು ಹೇಳಿದರು.

ಚಿತ್ರದ ನಿರ್ಮಾಪಕ ಎಂ.ಸಿ. ಹೇಮಂತ ಗೌಡ ಮಾತನಾಡುತ್ತ ಈವರೆಗೆ ಚಿತ್ರರಂಗದಲ್ಲಿ ನಾನೂ ನಟನೆ, ಸಹನಿರ್ದೇಶನ ಅಂತ ತೊಡಗಿದ್ದೆ. ಈ ನಿರ್ದೇಶಕರು ಮಾಡಿದ್ದ ಕಥೆ ತುಂಬಾ ಇಷ್ಟವಾಯಿತು. ಸಿನಿಮಾ ಕೂಡ ಅದ್ಭುತವಾಗಿ ಮೂಡಿಬಂದಿದೆ. ಜನರಿಗೆಖಂಡಿತ ಉತ್ತಮ ಮನರಂಜನೆ ನೀಡಲಿದೆ ಎಂಬ ನಂಬಿಕೆ ವ್ಯಕ್ತಪಡಿಸಿದರು.

ವಿತರಕ ವೆಂಕಟ ಗೌಡಮಾತನಾಡಿ ನಾನು ಒಂದೆರಡು ಚಿನಿಮಾ ರಿಲೀಸ್ ಮಾಡಿದ್ದೆ. ಸ್ವಂತ ಆಫೀಸ್ ಮಾಡಿದ ಮೇಲೆ ರಿಲೀಸ್ ಮಾಡುತ್ತಿರುವ ಮೊದಲ ಚಿತ್ರವಿದು. ಈವರೆಗೆ 75ರಿಂದ 80 ಚಿತ್ರಮಂದಿರಗಳು ಕನ್‍ಫರ್ಮ್ ಆಗಿವೆ. ಹತ್ತರಿಂದ ಹದಿನೈದು ಮಲ್ಟಿಪ್ಲೆಕ್ಸ್ ಕೂಡ ಸಿಕ್ಕಿವೆ, ಒಳ್ಳೇ ಸಿನಿಮಾ ಮಾಡಿದ್ದಾರೆ. ನನಗೂ ತುಂಬಾ ಇಷ್ಟವಾಯಿತು ಎಂದು ಹೇಳಿದರು.

'ತಿಥಿ' ಖ್ಯಾತಿಯ ಗಡ್ಡಪ್ಪ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಹುತೇಕ ಹೊಸ ಕಲಾವಿದರನ್ನು ಬಳಸಿಕೊಂಡು ಕಂತ್ರಿಬಾಯ್ಸ್ ಚಿತ್ರವನ್ನು ನಿರ್ದೇಶಕ ರಾಜು ಚಟ್ನಳ್ಳಿ ನಿರೂಪಿಸಿದ್ದಾರೆ. ಮರ್ಡರಿ ಮಿಸ್ಟ್ರಿಯ ಥ್ರಿಲ್ಲರ್ ಕಥೆಯನ್ನು ಚಿತ್ರ ಒಳಗೊಂಡಿದೆ. ಅನಿವಾರ್ಯ ಕಾರಣಕ್ಕೆ ವೈಶ್ಯಾವೃತ್ತಿಗೆ ಇಳಿಯಲು ಬರೀ ಹೆಣ್ಣಿನದಷ್ಟೇ ತಪ್ಪು ಇರುವುದಿಲ್ಲ ಬದಲಾಗಿ ಪುರುಷನದು ಇರುತ್ತದೆ. ಇಂತಹ ಅನಿವಾರ್ಯ ಪರಿಸ್ಥಿತಿ ಮತ್ತು ಕಾರಣಗಳನ್ನು ಕಂತ್ರಿಬಾಯ್ಸ್ ಮಾಡುವ ಕಂತ್ರಿ ಕಂತ್ರಿ ಕೆಲಸಗಳು ಮತ್ತು ಅದರಿಂದ ಸಮಾಜಕ್ಕೆ ಅಗುವ ಒಳ್ಳೆಯ ಕೆಲಸದ ಸುತ್ತಾ ಈ ಚಿತ್ರದ ಕಥೆ ಸಾಗಲಿದೆ.

ನಟ ಅರವಿಂದ್ ಮಾತನಾಡಿ ಇದು ನನ್ನ ಮೂರನೇ ಚಿತ್ರ. ಉದಾಸೀನತೆಯಿಂದ ಇರುವ ಹುಡುಗನಾಗಿ ಅಭಿನಯಿಸಿದ್ದೇಬೆ ಎಂದು ತನ್ನ ಪಾತ್ರದ ಬಗ್ಗೆ ಹೇಳಿದರು. ನಟಿಯರಾದ ಸಂಧ್ಯಾ, ಅನಕ, ಬಸಂತಿ ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿದರು. ನಿರ್ಮಾಪಕ ಹೇಮಂತ್ ಗೌಡ, ಜೋಕರ್ ಹನುಮಂತ್, ಹೇಮಂತ್ ಸೂರ್ಯ, ದರ್ಶನ್ ರಾಜ್ ಸೇರಿದಂತೆ ಹಲವಾರು ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಹೇಮಂತ್ ಗೌಡ ಅವರ ಜೊತೆ ನಿರ್ಮಾಣದಲ್ಲಿ ಎಂ.ಸಿ. ರೇಣುಕ, ಮೋಹನ್ ಕೆ. ಕೃಷ್ಣಮೂರ್ತಿ ಎಂ, ಶ್ರೀಧರ್‍ರಾಜು, ದರ್ಶನ್‍ರಾಜ್ ಕೈಜೋಡಿಸಿದ್ದಾರೆ. ಪಿ.ವಿ ಅರ್. ಸ್ವಾಮಿ ಅವರ ಛಾಯಾಗ್ರಹಣ, ಕಿರಣ್ ಮಹದೇವ್ ಅವರ ಸಂಗೀತ ಸಂಯೋಜನೆ, ಡಿ. ರವೀಂದ್ರನಾಥ್ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.

Page 1 of 10

anigif sam

anigif tagaru

ad free

Cineloka TV

Photo Gallery

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top