tarakaasura

ttm

adweb

udgharsha

`ಜೈ ಮಾರುತಿ 800’ ಹಿಂದಿನ ಮರ್ಮ!

`ಜೈ ಮಾರುತಿ 800’ ಹಿಂದಿನ ಮರ್ಮ!

ಇದೇ ಯುಗಾದಿ ಹಬ್ಬಕ್ಕೆ ‘ಜೈ ಮಾರುತಿ 800’ ಎಂಬ ಡಿಫೆರೆಂಟ್ ಟೈಟಲ್ ಇರುವ ಚಿತ್ರ ಬಿಡುಗಡೆಯಾಗುತ್ತಿದೆ. ತಮ್ಮ ಹಿಂದಿನ ಚಿತ್ರಗಳ ಮೂಲಕ ಭರವಸೆಯ ಯುವ ನಿರ್ದೇಶಕ ಎಂದು ಗುರುತಿಸಿಕೊಂಡಿರುವ ಎ.ಹರ್ಷ ‘ಸಿನಿಲೋಕ’ದೊಡನೆ ಹರ್ಷದಿಂದಲೇ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ...

 

* ‘ಜೈ ಮಾರುತಿ 800'ನ ಸ್ಪೆಶಾಲಿಟಿ ಏನು?
- ಮೊದಲನೆಯದಾಗಿ ‘ಹಾಸ್ಯ ಮಹಾರಾಜ್’ ಶರಣ್. ಚಿತ್ರದಲ್ಲಿ ಶರಣ್ ರವರು ಹಿಂದೆಂದಿಗೂ ನೀಡದ ಅಭಿನಯವನ್ನು ನಿರೀಕ್ಷಿಸಬಹುದು. ಇದು ಬರೇ ಕಾಮಿಡಿ ಚಿತ್ರ ಅನ್ನೋದಕ್ಕಿಂತ, ಹಾಸ್ಯದ ಜೊತೆ ಜೊತೆಗೆ ಸಂಬಂಧಗಳ ನಡುವಿನ ಸೂಕ್ಷ್ಮಗಳನ್ನು ಹೇಳು ಪ್ರಯತ್ನ ನನ್ನದು. ಶುಭಾ ಪುಂಜಾರ ಗ್ಲಾಮರ್ ಜೊತೆ ಕಾಮಿಡಿ ತುಂಬಾ ಚೆನ್ನಾಗಿ ಮೂಡಿಬಂದಿದೆ. ಮಕ್ಕಳಿಗೆಂದೇ ‘ಡಿಂಗ್..ಡಾಂಗ್’ ಅನ್ನುವ ಸಾಂಗ್ ಮಾಡಿದ್ದೇನೆ. ಇದರಲ್ಲಿ ಸಾಕಷ್ಟು ಅನಿಮೇಶನ್ ತಂತ್ರಜ್ಞಾನವನ್ನು ಬಳಸಿಕೊಂಡಿದ್ದೇನೆ.ಎರಡು ಉತ್ತಮ ಫೈಟ್‍ಗಳಿವೆ . ಇನ್ನು, ಶರಣ್‍ರ ಸಿನಿಮಾ ಪ್ರೀತಿಯ ಬಗ್ಗೆ ನೀವು ಅಚ್ಚರಿ ಪಡುವಂತಹ ಸಂಗತಿಯೊಂದಿದೆ. ಅದನ್ನು ಮಾತಿನಲ್ಲಿ ಹೇಳುವುದಕ್ಕಿಂತ ಚಿತ್ರದಲ್ಲಿ ನೋಡುವುದೇ ಉತ್ತಮ.

* ಚಿತ್ರದಲ್ಲಿ ಇಬ್ಬರು ಹಿರೋಯಿನ್ ಇದ್ದಾರಲ್ಲಾ..? ಟ್ರಾಯಾಂಗಲ್ ಲವ್ ಸ್ಟೋರಿನಾ?
-ಇದನ್ನು ಈಗಲೇ ಹೇಳದಿರುವುದು ಉತ್ತಮ. ಚಿತ್ರದಲ್ಲಿ ಶ್ರುತಿ ಹರಿಹರನ್ ಮತ್ತು ಶರಣ್ ನಡುವೆ ಒಂದು ಸಿಂಪಲ್ ಲವ್ ಸ್ಟೋರಿಯಿದೆ. ಇಡೀ ಚಿತ್ರ ಲವ್ ಸ್ಟೋರಿ ಮೇಲೆ ನಿಂತಿಲ್ಲ. ಒಟ್ಟು ಮಾನವೀಯ ಸಂಬಂಧಗಳ ಮೇಲೆ ಪಾತ್ರವನ್ನು ಕಟ್ಟಿ ಕೊಟ್ಟಿದ್ದೇನೆ.
* ಚಿತ್ರದ ಇತರೇ ನಟರ ಬಗ್ಗೆ..
- ಹಾಸ್ಯ ನಟರ ದಂಡೇ ಚಿತ್ರದಲ್ಲಿದೆ. ಅದರಲ್ಲೂ ಅರುಣ್ ಸಾಗರ್ ಮತ್ತು ಸಾಧು ಕೋಕಿಲಾರ ಅಭಿನಯ ಮನಸ್ಸಿಗೆ ಮುದ ನೀಡುತ್ತದೆ. ಉಳಿದಂತೆ ಕುರಿ ಪ್ರತಾಪ್, ಬಿರಾದರ್..ಹೀಗೆ ಎಲ್ಲರೂ ನನ್ನ ನಿರೀಕ್ಷೆಗೂ ಮೀರಿದ ಕೆಲಸ ಮಾಡಿದ್ದಾರೆ.

* ‘ಮಾರುತಿ 800' ಟೈಟಲ್ ಯಾಕೆ?
- ಚಿತ್ರದಲ್ಲಿ ಈ ಟೈಟಲ್ ರಿವೀಲ್ ಆಗುವುದೇ ಒಂದು ಪ್ರಮುಖ ಘಟ್ಟದಲ್ಲಿ ಅದನ್ನು ಈಗಲೇ ಹೇಳಿವುದಕ್ಕಿಂತ..(ನಗು). ಆದರೆ ನನ್ನ ಈ ಹಿಂದಿನ ಚಿತ್ರಗಳಂತೆ ಚಿತ್ರದ ಪ್ರಮುಖ ಎಳೆಯನ್ನು ಚಿತ್ರದ ಇಂಟೆರ್‍ವಲ್ ಸಮಯದಲ್ಲಿ ಓಪನ್ ಮಾಡದೆ, ಚಿತ್ರದ ಆರಂಭದಲ್ಲೇ ಚಿತ್ರದ ಕಥಾ ಹಂದರ ಅರ್ಥವಾಗಿ ಬಿಡುತ್ತದೆ. ಅದೇ 800 ಸ್ಪೆಷಲ್.

* ಈ ಕಥೆಯ ಹುಟ್ಟು ಹೇಗಾಯ್ತು?
- ‘ಕಥೆ-ಚಿತ್ರಕಥೆಗಾಗಿ ಸಾಕಷ್ಟು ಶ್ರಮ ಪಟ್ಟಿದ್ದೇನೆ’ ಅಂದರೆ ತಪ್ಪಾಗುತ್ತದೆ. ‘ಪಟ್ಟಿದ್ದೇವೆ’ ಅನ್ನವುದು ಹೆಚ್ಚು ಸತ್ಯ. ಯಾಕೆಂದರೆ, ಕಾಲಿವುಡ್ನ ಸಾಕಷ್ಟು ಸೂಪರ್‍ಹಿಟ್ ಚಿತ್ರಗಳಿಗೆ ಕಥೆ ಬರೆದಿದ್ದ ಮೂವರು ದಿಗ್ಗಜರೊಡನೆ ಕೂಡಿ ಕಥೆ ಸಿದ್ಧ ಪಡಿಸಿದ್ದದೇನೆ. ಕಥೆ-ಚಿತ್ರಕಥೆ ಇನ್ನೊಬ್ಬರಲ್ಲಿ ಬರೆಸಿ ‘Written and Directed by’ ಕೆಳಗೆ ನನ್ನ ಹೆಸರು ಹಾಕಿಕೊಂಡು ಬೀಗುವುದರಲ್ಲಿ ಅರ್ಥ ಇಲ್ಲ. ಅವರವರ ಕೆಲಸಕ್ಕೆ ಅದರದ್ದದೇ ಆದ ಗೌರವ ಸಿಗಬೇಕು. ಅದಕ್ಕೆ ಎಚ್ಚರವಹಿಸಿ ಪ್ರತಿಯಬ್ಬ ಟೆಕ್ನಿಶಿಯನ್ಸ್‍ಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದೇನೆ.

* ‘ಶರಣ್ ಚಿತ್ರದಲ್ಲಿದ್ದಾರೆಂದರೆ ಹಾಸ್ಯಕ್ಕೇನು ಕೊರತೆ ಇಲ್ಲ’ ಅನ್ನವುದು ಗೊತ್ತಿರುವ ಸಂಗತಿ, ಹಾಸ್ಯ ಬಿಟ್ಟು ಏನು ಹೊಸತಿದೆ?
- ನನಗೆ ಈ ಚಿತ್ರ ಸಂಪೂರ್ಣ ಹೊಸದು. ಶರಣ್‍ನಲ್ಲಿರುವ ಅದ್ಭುತ ಟೈಮಿಂಗ್‍ನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದೇನೆ. ಇಮೋಷನ್ ಜೊತೆ ಜೊತೆಗೆ ಹಾಸ್ಯ ಹೇಳುವುದು ಚಾಲೆಂಜಿಂಗ್ ಆಗಿತ್ತು. ನಾನು ತೆಗೆದುಕೊಂಡ ರಿಸ್ಕನ್ನು ಶರಣ್ ನಿಭಾಯಿಸಿದ್ದಾರೆ.

* ಇದ್ದಕ್ಕಿದ್ದಂತೆ ಕಾಮಿಡಿ ಚಿತ್ರ ಯಾಕೆ?
- ಒಬ್ಬ ನಿರ್ದೇಶಕನಾಗಿ ಚಿತ್ರದಿಂದ ಚಿತ್ರಕ್ಕೆ ಕಲಿಯುತ್ತಿದ್ದೇನೆ. ಇದೊಂದು ಬೆರೆಯದೇ ರೀತಿಯಾದ ಕಲಿಕೆ. ‘ಹಾಸ್ಯ ಪ್ರಧಾನ ಚಿತ್ರ ಮಾಡಬೇಕು’ ಅಂತಂದುಕೊಂಡಾಗ ನನಗೆ ಪ್ರೇರಣೆ ನೀಡಿದ್ದು ಶರಣ್.
‘ಕಾಮಿಡಿ ಚಿತ್ರಕ್ಕೆ ಬೇಕಾಗಿದ್ದು ಟೈಮಿಂಗ್ ಸೆನ್ಸ್, ನೃತ್ಯ ನಿರ್ದೇಶಕನಾದವನಿಗೆ ಅದರ ಪರಿಚಯ ಅದಾಗಲೇ ಪರಿಚಯವಿರುತ್ತದೆ’ ಅಂತಂದ ಶರಣ್ ಮಾತು ನನ್ನಲ್ಲಿ ಸಾಕಷ್ಟು ಕಾನ್ಫಿಡೆನ್ಸ್ ತುಂಬಿತು.ಕಾಮಿಡಿ ಜಾನರ್ ಚಿತ್ರ ನಿರ್ದೇಶಿಸುವುದು ಉಳಿದ ಚಿತ್ರಗಳಂತಲ್ಲ. ಒಂದು ವಿಶೇಷವಾದ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಸ್ವಲ್ಪ ಏಮಾರಿದರು ಹಾಸ್ಯ ಅಪಹಾಸ್ಯವಾಗುವ ಸಾಧ್ಯತೆ ಇದೆ.


- ನವೀನ್‍ಕೃಷ್ಣ ಪುತ್ತೂರು

Rate this item
(0 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top