IB anigif

Ayugya Gif

adweb

udgharsha

 ಚಿರು ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಕೃತಿ, ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ದಳಪತಿ ಚಿತ್ರದ ಪ್ರಮೋಷನ್‌ಗಾಗಿ ಬೆಂಗಳೂರಿಗೆ ಬಂದಿದ್ದ ಕೃತಿ ಸಿನಿಲೋಕದೊಂದಿಗೆ ಮಾತನಾಡಿದ್ದಾರೆ.
.
ದಳಪತಿ ಒಪ್ಪಿಕೊಳ್ಳೋಕೆ ಏನು ಕಾರಣ?
------
ನಾನು ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರ ಸಿಕ್ಕಿತು. ಕಥೇಲಿ ಫ್ರೆಶ್‌ನೆಸ್ ಇದೆ. ಪ್ರೇಮ್ ಸರ್ ಜೊತೆನೂ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಒಳ್ಳೆ ತಂಡ,ಒಪ್ಪಿಕೊಂಡೆ.
.
ಬಾಲಿವುಡ್‌ನಲ್ಲಿ ಸಖತ್‌ ಬೋಲ್ಡ್‌ ಆಗಿ ನಟಿಸಿದ್ದೀರಾ?
------
ಹೌದು ನಾನು ಒಬ್ಬ ನಟಿಯಾಗಿ ಬರೀ ಗೌರಮ್ಮನ ಥರದ ರೋಲ್‌ಗಳಲ್ಲಿ ಮಾತ್ರ ನಟಿಸಿದ್ದೆ. ನನಗೆ ಒಂದು ಡಿಫ್ರೆಂಟ್‌ ಆಗಿರುವ ಪಾತ್ರ ಬೇಕಿತ್ತು ಹಾಗಾಗಿ ಬೋಲ್ಡ್‌ ಆಗಿ ನಟಿಸಿದೆ. ಇದರಿಂದ ನನಗೇನು ತೊಂದರೆಯಿಲ್ಲ. ನನ್ನ ಫ್ಯಾಮಿಲಿ ಕೂಡಾ ನನ್ನನ್ನು ಈ ಬಗ್ಗೆ ಪ್ರಶ್ನೆ ಮಾಡಿಲ್ಲ.
.
ಆ ಸಿನಿಮಾ ಆದ ಮೇಲೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೂ ಕೆಲವರು ನಿಮ್ಮನ್ನು ಆ ರೀತಿಯ ಪಾತ್ರಗಳಲ್ಲಿ ನಟಿಸಲು ಕೇಳಿದ್ರಾ?
------
ಇಲ್ಲ. ಯಾರು ನನಗೆ ಆ ರೀತಿ ಪಾತ್ರ ಮಾಡಿ ಎಂದು ಕೇಳಿಲ್ಲ . ರಾಝ್‌ ಸಿನಿಮಾಗೆ ಆ ಬೋಲ್ಡ್‌ನೆಸ್‌ ಅವಶ್ಯಕತೆ ಇತ್ತು. ಹಾಗಾಗಿ ಅಲ್ಲಿ ನಟಿಸಿದೆ. ಇಲ್ಲಿಯೂ ಸ್ಕ್ರಿಪ್ಟ್‌ನಲ್ಲಿ ಹಾಟ್‌ ಸೀನ್‌ನ ಅವಶ್ಯಕತೆ ಇದ್ದರೆ ನಾನು ನಟಿಸುತ್ತೇನೆ.
.
ನಿಮ್ಮ ಸಿನಿ ಜರ್ನಿಯಲ್ಲಿ ಸಿಗುತ್ತಿರುವ ಪಾತ್ರಗಳ ಬಗ್ಗೆ ತೃಪ್ತಿ ಇದೆಯೇ?
-----
ಐ ಆಮ್ ಹ್ಯಾಪೀ..ನಾನು ಈಗಾಗಲೇ ರೊಮ್ಯಾಂಟಿಕ್‌ , ಕಾಮಿಡಿ, ಹಾರರ್‌, ಡ್ರಾಮಾ, ಗ್ಲಾಮರ್ ಹೀಗೆ ಸಾಕಷ್ಟು ವಿವಿಧ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಈಗ ನಟಿಸುತ್ತಿರುವ ಯಮ್ಲಾ ಪಾಗ್ಲಾ ದಿವಾನ ಚಿತ್ರ ನನ್ನ ಸಿನಿ ಕರಿಯರ್‌ನಲ್ಲಿ ಬಹು ದೊಡ್ಡ ಸಿನಿಮಾವಾಗಲಿದೆ.
.
ಬೇರೆ ಯಾವುದೇ ಕನ್ನಡ ಚಿತ್ರದಿಂದ ಅವಕಾಶ ಬರಲಿಲ್ವಾ?
-----
ಸಾಕಷ್ಟು ಕಥೆಗಳನ್ನು ಕೇಳಿದ್ದೇನೆ. ದರ್ಶನ್ ಅವರ ಯಜಮಾನ ಚಿತ್ರದಲ್ಲಿ ನಾನು ನಟಿಸಬೇಕಿತ್ತು ಆದರೆ ಡೇಟ್ಸ್‌ನ ಸಮಸ್ಯೆಯಿಂದಾಗಿ ಕೈ ಬಿಡಬೇಕಾಯಿತು.  ದರ್ಶನ್ ಅವರ ಜತೆ ನಟಿಸಲು ಮುಂದಿನ ದಿನಗಳಲ್ಲಿ ಮತ್ತೆ ಅವಕಾಶ ಸಿಕ್ಕರೆ ನಟಿಸುತ್ತೇನೆ.
.
ಕನ್ನಡದಲ್ಲಿ ಯಾವ ಸ್ಟಾರ್ ನಟನ ಜೊತೆ ನಟಿಸಬೇಕು ಎಂಬ ಆಸೆ ಇದೆ?
------
 ನನಗೆ ಎಲ್ಲರ ಜೊತೆ ನಟಿಸಲು ಇಷ್ಟ. ಅದರಲ್ಲಿ ಒಬ್ಬ ನಟ ಅಂದರೆ ಕಿಚ್ಚ ಸುದೀಪ್. ಏಕೆಂದರೆ ನಾನು ಒಂದ್ಸಲ ಬಿಗ್ ಬಾಸ್ ಶೋಗೆ ಹೋಗಿದ್ದಾಗ ಅವರಲ್ಲಿ ಪಾಸಿಟಿವ್ ವೈಬ್ಸ್ ಕಾಣಿಸಿತು. ಅವರಿಗೆ ಸಿನಿಮಾ ಎಂದರೆ ಸಕ್ಕತ್ ಪ್ಯಾಶನ್, ಅಂತವರ ಜೊತೆ ಕೆಲಸ ಮಾಡಲು ನನಗೆ ಖುಷಿ ಕೊಡುತ್ತೆ .
.
ಬಾಲಿವುಡ್‌ನಲ್ಲಿ ಸ್ಯಾಂಡಲ್‌ವುಡ್‌, ಟಾಲಿವುಡ್‌ ಎಲ್ಲ ಕಡೆಯೂ ನಟಿಸಿದ್ದೀರಾ, ಇದರಲ್ಲಿ ಬೆಸ್ಟ್‌ ಯಾವುದು?
-----
ನನಗೆ ಎಲ್ಲವೂ ಬೆಸ್ಟ್‌ ಬೇರೆ ಬೇರೆ ಇಂಡಸ್ಟ್ರಿಗಳನ್ನು ಕಂಪೇರ್‌ ಮಾಡಬಾರದು. ಇದುವರೆಗೂ ನಾನು ಕೆಲಸ ಮಾಡಿರುವ ಎಲ್ಲ ಕಡೆಯಲ್ಲೂ ನನಗೆ ಯಾವುದೇ ರೀತಿಯ ಕೆಟ್ಟ ಅನುಭವಗಳಾಗಿಲ್ಲ. ಹಾಗಾಗಿ ನನಗೆ ಎಲ್ಲವೂ ಬೆಸ್ಟ್‌ ಆಗಿದೆ.
.
ಕಾಸ್ಟಿಂಗ್‌ ಕೌಚ್‌ ಬಗ್ಗೆ ನಿಮ್ಮ ಅಭಿಪ್ರಾಯ??
-------
ಕಾಸ್ಟಿಂಗ್‌ ಕೌಚ್‌ ವಿಚಾರದಲ್ಲಿ ನಾನು ಬಹಳ ಸ್ಟ್ರಿಕ್ಟ್‌. ನನ್ನನ್ನು ಯಾರಾದ್ರು ಆ ದೃಷ್ಟಿಯಲ್ಲಿ ನೋಡಿದ್ರೆ ಅವರನ್ನು ಕೊಲೆ ಮಾಡುತ್ತೇನೆ. ನಾವು ಸ್ಟ್ರಿಕ್ಟ್‌ ಆಗಿದ್ದರೆ ಯಾರು ನಮ್ಮ ಬಳಿ ಬರುವುದಿಲ್ಲ.
#Dalapathi #Cineloka

LJOS nigif

May 1st

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top