mugulu

zeee n

adweb

raj vishnu

Nithyanand Amin

Nithyanand Amin

’ಚಕ್ರವರ್ತಿ’ ಚಿತ್ರದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ’ತಾರಕ್’ಚಿತ್ರದ ಹಾಡುಗಳ ಬಿಡುಗಡೆ ನಿನ್ನೆ ಆಗಸ್ಟ್ 18 ರಂದು ಆಗಿ ’ತಾರಕ್’ ಅಬ್ಬರ ಶುರುವಾಗಿದೆ.
ಸಧ್ಯ ಆಡಿಯೋ ರಿಲೀಸ್ ಆಗಿರುವ ಚಿತ್ರ ಸೆಪ್ಟೆಂಬರ್ ನಲ್ಲಿ ಥಿಯೇಟರ್ ನಲ್ಲಿ ಪ್ರದರ್ಶನ ಗೊಳ್ಳುವ ಸಾಧ್ಯತೆ ಇದೆ. ಶಾನ್ವಿ ಶ್ರೀವಾಸ್ತವ ಮತ್ತು ಶೃತಿ ಹರಿಹರನ್ ದರ್ಶನ್ ಗೆ ಜೋಡಿಯಾಗಿದ್ದು, ದೇವರಾಜ್, ಪ್ರಮುಖ ಪಾತ್ರದಲ್ಲಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ ರಕ್ಷಿತ್ ಶೆಟ್ಟಿ ನಿರ್ದೇಶನದ ಸುದೀಪ್ ಅಭಿನಯದ ’ಥಗ್ಸ್ ಆಫ್ ಮಾಲ್ಗುಡಿ’ ಇದೇ ಜೂನ್ ನಲ್ಲಿ ಚಿತ್ರೀಕರಣ ಆರಂಭವಾಗಬೇಕಿತ್ತು . ಆದರೆ ಹಿಂದಿನ ಕಮಿಟ್ ಮೆಂಟ್ ಗಳಿಂದಾಗಿ ಥಗ್ಸ್ ಆಫ್ ಮಾಲ್ಗುಡಿ ಶೂಟಿಂಗ್ ತಡವಾಗುತ್ತಿದೆ.

ಟಿ ಎನ್ ಸೀತಾರಾಮ್ ನಿರ್ದೇಶನದ ’ಮೀರಾ ಮಾಧವ ರಾಘವ’ ಚಿತ್ರದ ನಂತರ ಬಹು ನಿರ್‍ಈಕ್ಷೆಯೊಂದಿಗೆ ’ಕಾಫಿತೋಟ’ ಚಿತ್ರ ತೆರೆಗೆ ಬರುತ್ತಿದ್ದು , ನಾಳೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ’ಮನ್ವಂತರ ಚಿತ್ರ’ ಸಂಸ್ಥೆ ನಿರ್ಮಾಣ ಮಾಡಿರುವ ಈ ಚಿತ್ರ ಗಾಂಧಿನಗರದ ಅನುಪಮ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ ಸಿನಿಮಾ ನಾಳೆ ರಿಲೀಸ್ ಆಗಲಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ’ತಾರಕ್’ಚಿತ್ರದ ಹಾಡುಗಳ ಆಡಿಯೋ ಬಿಡುಗಡೆ ಕಾರ್ಯಕ್ರಮ ಇಂದು ಸಂಜೆ 7 ಕ್ಕೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಲಿದೆ.

ಕ್ರಿಕೆಟ್ ನಲ್ಲಿ ಇಲ್ಲದಿದ್ದರೂ, ಆಗಾಗ ಸಿನಿಮಾಗಳಲ್ಲಿ ಬಣ್ಣ ಹಚ್ಚುವ ಮೂಲಕ ಸುದ್ದಿಯಲ್ಲಿದ್ದರು ಶ್ರೀಶಾಂತ್. ಸ್ಪಾಟ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್ ಆರೋಪಗಳಿಗೆ ಅವರ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಜೀವ ನಿಷೇಧ ಹೇರಿತ್ತು.

ಇತ್ತೀಚೆಗೆ ಸುವರ್ಣ ನ್ಯೂಸ್ ನಲ್ಲಿ ಪ್ರಸಾರವಾದ ’ಓಪನ್ ಹೌಸ್ ವಿತ್ ಸುದೀಪ್’ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ದರ್ಶನ್ ಹಾಗೂ ಅವರ ಹೊಸ ಸಿನಿಮಾ ’ಕುರುಕ್ಷೇತ್ರ’ದ ಬಗ್ಗೆ  ಮನಬಿಚ್ಚಿ ಮಾತಾಡಿದ್ದಾರೆ

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ನಟಿಸಿರುವ ’ಸಾಹೇಬ’ ಚಿತ್ರ ಗಣೇಶ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ. ಇದು ಮನೋರಂಜನ್ ಅವರ ಚೊಚ್ಚಲ ಚಿತ್ರವಾಗಿದೆ.


ಚಿತ್ರತಂಡ ಜೂನ್ ನಲ್ಲಿ ಚಿತ್ರ ಬಿಡುಗಡೆಗೊಳಿಸುವ ಯೋಜನೆ ಹಾಕಿಕೊಂಡಿತ್ತು, ಚಿತ್ರದಲ್ಲಿ ಆನೆಯನ್ನು ಬಳಸಿಕೊಂಡಿದ್ದು, ಪ್ರಾಣಿ ಸೆನ್ಸಾರ್ ಮಂಡಳಿಯಿಂದ ಒಪ್ಪಿಗೆ ಸಿಗಲು ವಿಳಂಬವಾಗಿದ್ದಕ್ಕೆ ಚಿತ್ರ ಬಿಡುಗಡೆಗೆ ತಡವಾಯಿತು. ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿಯು  ಯು/ಎ ಸರ್ಟಿಫಿಕೇಟ್ ನೀಡಿ ಚಿತ್ರ ಬಿಡುಗಡೆಗೆ ಒಪ್ಪಿಗೆ ನೀಡಿದೆ.
ಈ ಚಿತ್ರದಲ್ಲಿ ವಿ. ಹರಿಕ್ರಷ್ಣ ಸಂಗೀತವಿದ್ದು, ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ ನಟಿಸಿದ್ದಾರೆ . ನಿರ್ದೇಶಕ ಭರತ್ ’ಕಾಂತಿ’ ಚಿತ್ರದ ನಂತರ ’ಸಾಹೇಬ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.     
ಮುಗುಳುನಗೆ, ಭರ್ಜರಿ ಚಿತ್ರಗಳ ಬಿಡುಗಡೆ ಮುಂದಕ್ಕೆ ಹೋಗಿದ್ದು, ಇದೀಗ ಗಣೇಶ ಹಬ್ಬಕ್ಕೆ ಎಲ್ಲಾ ವಿಘ್ನಗಳನ್ನು ನಿವಾರಿಸಿ ’ಸಾಹೇಬ’ ಇದೇ 25 ರಂದು ತೆರೆಗೆ ಬರಲು ಸಿದ್ಧವಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ರ 50 ನೇ ಚಿತ್ರ ’ಕುರುಕ್ಷೇತ್ರ’ದ ಮೂಹೂರ್ತಕ್ಕೆ ದಿನಗಣನೆ ಪ್ರಾರಂಭವಾಗುತ್ತಿರುವಂತೆ ದರ್ಶನ್ ತನ್ನ 51 ನೇ ಚಿತ್ರಕ್ಕೆ ಗ್ರೀನ್  ಸಿಗ್ನಲ್ ನೀಡಿದ್ದಾರೆ.

 

ಈ ಹಿಂದೆ ಪ್ರಿನ್ಸ್, ಐರಾವತ ಚಿತ್ರಗಳನ್ನು ನಿರ್ಮಿಸಿದ್ದ ಸಂದೇಶ್  ನಾಗರಾಜ್ ದರ್ಶನ್ ರ ೫೧ ನೇ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವವರು ಖ್ಯಾತ ನಿರ್ದೇಶಕ ಪವನ್ ಒಡೆಯರ್.

ಚಿತ್ರಕ್ಕೆ ’ಒಡೆಯರ್’ ಎಂದು ಶೀರ್ಷಿಕೆ ನೀಡಿದ್ದು, ಚಿತ್ರ ಡಿಸೆಂಬರ್ ನಲ್ಲಿ ಸೆಟ್ಟೇರಲಿದೆ. ದರ್ಶನ್ ಫೇವರಿಟ್ ಸಂಗೀತ ನಿರ್ದೇಶಕ ಬಿ. ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಲಿದ್ದಾರೆ.

ಡಾ. ರಾಜ್ ಕುಮಾರ್ ಕುಟುಂಬದಿಂದ ಮತ್ತೊಬ್ಬ ನಟ ಚಿತ್ರರಂಗಕ್ಕೆ ಪ್ರವೇಶ ಮಾಡಲಿದ್ದಾರೆ. ಈಗಾಗಲೇ ರಾಜ್ ಕುಟುಂಬದ ನಾಲ್ವರು ಚಿತ್ರರಂಗದಲ್ಲಿ ಮಿಂಚುತ್ತಿದ್ದು, ಈಗ ಚಿತ್ರರಂಗ ಐದನೇ ನಟನ ಪ್ರವೇಶಕ್ಕೆ  ಸಿದ್ಧವಾಗುತ್ತಿದೆ.

ದರ್ಶನ್ ಅಭಿನಯದ ತಾರಕ್ ಚಿತ್ರದ ಆಡಿಯೋ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದ ಹಾಡುಗಳು ಮಾರುಕಟ್ಟೆಗೆ ದಾಳಿಯಿಡುತ್ತಿದೆ.

Page 2 of 13

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top