IB anigif

Ayugya Gif

adweb

udgharsha

Sunil HC Gowda

Sunil HC Gowda

 

ಇತ್ತೀಚೆಗೆ ನಡೆದ ಸೈಮಾ ಅವಾರ್ಡ್‌ ಕಾರ್ಯಕ್ರಮದಲ್ಲಿ ಬೆಸ್ಟ್‌ ಕಾಮಿಡಿಯನ್ ಪ್ರಶಸ್ತಿ ಪಡೆದ ಸಾಯಿಕುಮಾರ್‌ ತಮ್ಮ ಪ್ರಶಸ್ತಿಯನ್ನು ನಿರ್ದೇಶಕ ಪನ್ನಗಭರಣಗೆ ಅರ್ಪಿಸಿದ್ದಾರೆ.

.

ಪನ್ನಗಭರಣ ನಿರ್ದೇಶನದ ಹ್ಯಾಪಿ ನ್ಯೂ ಇಯರ್‌ ಸಿನಿಮಾದ ಪಾತ್ರಕ್ಕಾಗಿ ಸಾಯಿಕುಮಾರ್‌ ಅವರಿಗೆ ಬೆಸ್ಟ್‌ ಕಮಡಿಯನ್‌ ಪ್ರಶಸ್ತಿ ಸಿಕ್ಕಿತು, ಪ್ರಶಸ್ತಿ ಪಡೆದುಕೊಂಡ ಸಾಯಿಕುಮಾರ್‌ ‘ನಾನು ಈ ಪ್ರಶಸ್ತಿಯನ್ನು ನನ್ನ ನಿರ್ದೇಶಕ ಪನ್ನಗಭರಣ ಅವರಿಗೆ ಅರ್ಪಿಸುತ್ತೇನೆ. ನಾನು ಜನರನ್ನು ನಗಿಸಬಲ್ಲೆ ಎಂದು ಕಾನ್ಫಿಡೆನ್ಸ್ ಇಂದ ನನ್ನ ಕೈಯಲ್ಲಿ ಇಂತಹ ಪಾತ್ರ ಮಾಡಿಸಿದ್ದಕ್ಕೆ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ನಾನು ಇವತ್ತು ಕಂಪ್ಲೀಟ್‌ ನಟ ಆದೆ ಅದಕ್ಕೆ ಮುಖ್ಯ ಕಾರಣ ಪನ್ನಗ,’ಎಂದು ಹೇಳಿದರು.

.

ಇದೇ ವೇದಿಕೆಯಲ್ಲಿದ್ದ ನಟ ವಿಜಯ್‌ ರಾಘವೇಂದ್ರ ಸಹ ಪನ್ನಗ ಅವರು ಸಾಯಿಕುಮಾರ್‌ ಅವರ ಹತ್ತಿರ ಇಂತಹ ಪಾತ್ರ ಮಾಡಿಸಿದ್ದು ನಿಜಕ್ಕೂ ಖುಷಿಯ ವಿಚಾರ, ಪ್ರಶಸ್ತಿ ಪಡೆದ ಸಾಯಿಕುಮಾರ್‌ ಅವರಿಗೂ, ನಿರ್ದೇಶಕ ಪನ್ನಗ ಅವರಿಗೂ ಅಭಿನಂದನೆಗಳು ಎಂದು ಹೇಳಿದರು.

ಒಟ್ಟಿನಲ್ಲಿ ಒಬ್ಬ ನಟ ತನ್ನ ಪ್ರಶಸ್ತಿಯನ್ನು ನಿರ್ದೇಶಕರಿಗೆ ಅರ್ಪಿಸಿದ್ದು ಖುಷಿಯ ವಿಚಾರ.

 

ಹಾಡುಗಳು, ಟ್ರೇಲರ್‌ನಿಂದಾಗಿ ಗಮನ ಸೆಳೆದಿರುವ "ಇರುವುದೆಲ್ಲವ ಬಿಟ್ಟು" ಸಿನಿಮಾವನ್ನು ಒಂದಷ್ಟು ಜನರಿಗೆ ತೋರಿಸಿ ಅವರಿಂದ ತಂಡ ಮೆಚ್ಚುಗೆ ಗಳಿಸಿಕೊಂಡಿದೆ.
ಹೌದು, ಕಳೆದ ವಾರ ಒಂದಷ್ಟು ಪಬ್ಲಿಕ್‌ಗೆ ಅವರ ಎಲ್ಲ ಕೆಲಸಗಳನ್ನು ಬಿಟ್ಟು, ಸಿನಿಮಾ ನೋಡುವ ಚಾಲೆಂಜ್‌ ನೀಡಲಾಗಿತ್ತು, ಸಾಕಷ್ಟು ಮಂದಿ ಇರುವುದೆಲ್ಲವ ಬಿಟ್ಟು, ಅಂದರೆ ಅವರ ಕೆಲಸಗಳನ್ನು ಬಿಟ್ಟು ಸಿನಿಮಾ ನೋಡಿದ್ದಾರೆ.
.

ಚಿತ್ರತಂಡ ನಿರೀಕ್ಷೆ ಮಾಡದಷ್ಟರ ಮಟ್ಟಿಗೆ ಈ ಪಬ್ಲಿಕ್‌ ಶೋ ಹೌಸ್‌ ಫುಲ್‌ ಆಗಿದೆ, 16 ಮಂದಿ ಸಿನಿಮಾ ತಂಡ ಮಾತ್ರ ಈ ಶೋನಲ್ಲಿತ್ತು. ನೋಡಿದ ಪ್ರತಿಯೊಬ್ಬರು ಸಿನಿಮಾದ ಸಬ್ಜೆಕ್ಟ್ ಬಗ್ಗೆ ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ವಯೋವೃದ್ಧರು ಈ ಸಿನಿಮಾವನ್ನು ನೋಡಿ ಇದು ಫ್ಯಾಮಿಲಿ ಓರಿಯೆಂಟೆಡ್‌ ಸಿನಿಮಾ ಎಂದು ಹೊಗಳಿದ್ದಾರೆ. ಮೇಘನಾ ರಾಜ್‌, ತಿಲಕ್‌, ಮತ್ತು ಶ್ರೀ ನಟನೆಯನ್ನು ಪ್ರತಿಯೊಬ್ಬರು ಹೊಗಳಿದರು. ಬಿಡುಗಡೆಗೆ ಮುನ್ನವೇ ಒಂದಷ್ಟು ಜನರಿಂದ ಈ ಸಿನಿಮಾ ಒಳ್ಳೆ ಅಭಿಪ್ರಾಯವನ್ನು ಗಳಿಸಿದೆ.
.

ಕಾಂತಾ ಕನ್ನಲಿ ನಿರ್ದೇಶನ ಈ ಸಿನಿಮಾ ಇದೇ 21ಕ್ಕೆ ಬಿಡುಗಡೆಯಾಗಲಿದ್ದು, ದೇವರಾಜ್‌ ದಾವಣಗೆರೆ ನಿರ್ಮಾಣ ಮಾಡಿದ್ದಾರೆ.
.

ಇದೇ 21ಕ್ಕೆ ಬಿಡುಗಡೆಯಾಗುತ್ತಿರುವ "ಇರುವುದೆಲ್ಲವ ಬಿಟ್ಟು" ಸಿನಿಮಾದಲ್ಲಿ ಮೇಘನಾ ರಾಜ್‌ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಮೇಘನಾ ಜತೆಗೆ ತಿಲಕ್‌ ಮತ್ತು ಶ್ರೀ ಮಹದೇವ್‌ ಮುಂತಾದವರು ನಟಿಸಿರುವ ಈ ಚಿತ್ರವನ್ನು ಕಾಂತಾ ಕನ್ನಲಿ ನಿರ್ದೇಶಿಸಿದ್ದಾರೆ.

.

ಈ ಸಿನಿಮಾದಲ್ಲಿ ಮೇಘನಾ ಮೂರು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಮುದ್ದಿನ ಮಗಳಾಗಿ, ಯಶಸ್ವಿ ಉದ್ಯಮಿಯಾಗಿ, ಪ್ರೀತಿಯನ್ನು ಹುಡುಕುವ ಹುಡುಗಿಯಾಗಿದ್ಧಾರೆ.

.

ಈ ಸಿನಿಮಾಗೆ ಯು ಸರ್ಟಿಫಿಕೇಟ್‌ ಸಿಕ್ಕಿದ್ದು, ಇದಕ್ಕೆ ನಿರ್ದೇಶಕ ಕಾಂತಾ ಕನ್ನಲಿ ಖುಷಿಯಾಗಿದ್ದಾರೆ. ಈ ಚಿತ್ರವನ್ನು ಬಿಲ್ವ ಕ್ರಿಯೇಶನ್ಸ್‌ ನಡಿ ದೇವರಾಜ್‌ ದಾವಣಗೆರೆ ನಿರ್ಮಾಣ ಮಾಡಿದ್ದಾರೆ.

ಪ್ರೀತಂ ಗುಬ್ಬಿ ಮತ್ತು ಗೊಲ್ಡನ್‌ ಸ್ಟಾರ್‌ ಗಣೇಶ್‌ ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಕಳೆದ 6 ತಿಂಗಳುಗಳಿಂದ ಓಡಾಡುತ್ತಲೇ ಇತ್ತು. ಈಗ ಅದು ನಿಜವಾಗುತ್ತಿದೆ.

.

ಹೌದು, ಗಣೇಶ ಹಬ್ಬದ ದಿನ ಪ್ರೀತಂ ಗುಬ್ಬಿ ಅವರು ಈ ಚಿತ್ರದ ಟೈಟಲ್ ಅನೌನ್ಸ್ ಮಾಡುವ ಮೂಲಕ ಚಿತ್ರ ಮಾಡುವ ವಿಷಯವನ್ನು ಅಧಿಕೃತ ಮಾಡಿದ್ದಾರೆ. ಚಿತ್ರಕ್ಕೆ "ಮರೆಯುವ ಮುನ್ನ" ಎಂದು ಹೆಸರಿಡಲಾಗಿದೆ.

.

ಹೆಸರೇ ಸೂಚಿಸುವಂತೆ ಈ ಸಿನಿಮಾ ಫುಲ್‌ ರೊಮ್ಯಾಂಟಿಕ್‌ ಕಥೆಯನ್ನು ಹೊಂದಿದ್ದು, ಇದಕ್ಕಾಗಿ ಬಹಳ ದಿನಗಳಿಂದ ಪ್ರೀತಂ ಕೆಲಸ ಮಾಡುತ್ತಿದ್ದಾರಂತೆ.  ಗಣೇಶ್‌ ಅವರ ಆರೇಂಜ್‌, ಗಿಮಿಕ್‌, ಗೀತಾ ಚಿತ್ರಗಳ ನಂತರ ಮರೆಯುವ ಮುನ್ನ ಆರಂಭವಾಗುತ್ತದಂತೆ.

.

ಗಣೇಶ್‌ ಮತ್ತು ಪ್ರೀತಂ ಜೋಡಿ ಈ ಮೊದಲು 'ಮಳೆಯಲಿ ಜೊತೆಯಲಿ', 'ದಿಲ್‌ ರಂಗೀಲಾ' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿತ್ತು. ಇವರಿಬ್ಬರು ಮಾಡಿದ ಸಿನಿಮಾಗಳು ಹಿಟ್‌ ಆಗಿದ್ದವು, ಹಾಗಾಗಿ ಈ ಬಾರಿಯೂ ಈ ಜೋಡಿ ಮೇಲೆ ಸಹಜವಾಗಿಯೇ ನೀರಿಕ್ಷೆಗಳಿರುತ್ತವೆ.

 

ಚಿತ್ರ : ಕಾರ್ನಿ

ನಿರ್ಮಾಪಕ : ಗೋವಿಂದರಾಜು

ನಿರ್ದೇಶನ : ವಿನಿ

ಕ್ಯಾಮೆರಾ : ಸುರ್ಯೋದಯ

ಸಂಗೀತ : ಅರಿಂದಂ ಗೋಸ್ವಾಮಿ

ತಾರಾಗಣ : ದುನಿಯಾ ರಶ್ಮಿ, ನಿರಂತ್, ರಾಜೇಶ್ ರಾಮಕೃಷ್ಣ,

.

ಸಸ್ಪೆನ್ಸ್ ಥ್ರಿಲ್ಲರ್‌ ಸಿನಿಮಾಗಳು ಎಂದರೆ ಹೆದರಿಸುವ ಹಿನ್ನೆಲ ಸಂಗೀತ, ನೈಟ್‌ ಶೂಟಿಂಗ್‌ ಒಂದಷ್ಟು ಕೊಲೆಗಳು ಇರುತ್ತವೆ. ಈ ವಾರ ಬಿಡುಗಡೆಯಾಗಿರುವ ಕಾರ್ನಿ ಸಿನಿಮಾ ಕೂಡಾ ಇದೇ ಫಾರ್ಮ್ಯಾಟ್‌ನ ಕಥೆಯಾಗಿದೆ.

ದುರ್ಗಾ ದೇವಿಯ ಕೈಯಲ್ಲಿರುವ ಆಯುಧಕ್ಕೆ ಕಾರ್ನಿ ಎನ್ನುತ್ತಾರೆ. ದೇವಿ ಅದನ್ನು ದುಷ್ಟರ ಸಂಹಾರಕ್ಕಾಗಿ ಬಳಸುತ್ತಾಳೆ. ಈ ಸಿನಿಮಾಗೂ ಕಾರ್ನಿಗೂ ಏನು ಸಂಬಂಧ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು. ನಾಲ್ವರು ಹುಡುಗಿಯ ಕಾಣೆಯಾಗಿರುತ್ತಾರೆ ಪೊಲೀಸ್‌ ಠಾಣೆಯಲ್ಲಿದೂರು ದಾಖಲಾಗಿರುತ್ತದೆ. ಈ ದೂರಿನ ಬೆನ್ನತ್ತಿ ಹೋಗುವ ಅಧಿಕಾರಿಗೆ ಆ ಹುಡುಗಿಯರು ಒಂದೇ ಶಾಲೆಯಲ್ಲಿ ಓದಿದ್ದು, ಅವರಿಗೆ ಒಬ್ಬ ಹುಡುಗನ ಮೇಲೆ ದ್ವೇಷ ಇತ್ತು ಎಂಬುದು ಗೊತ್ತಾಗುತ್ತದೆ.

.

ಈ ಹುಡುಗಿಯರು ಕಾಣೆಯಾಗಿರುವುದಕ್ಕೂ, ಈ ಹುಡುಗನ ವೈರತ್ವಕ್ಕೂ ಏನಾದ್ರೂ ಸಂಬಂಧ ಇದೆಯ ಎನ್ನುವ ಹೊತ್ತಿನಲ್ಲಿ ಕಾದಂಬರಿಗಾರ್ತಿ [ ರಶ್ಮಿ] ಎಂಟ್ರಿಯಾಗುತ್ತದೆ. ಈಕೆಗೂ ಒಂದು ಸಮಸ್ಯೆ ಆ ಸಮಸ್ಯೆ ಅದನ್ನು ಆಕೆ ಪರಿಹರಿಸಿಕೊಳ್ಳುವ ರೀತಿ ಎಲ್ಲವನ್ನು ಚಿತ್ರಮಂದಿರದಲ್ಲೇ ನೋಡಿದರೆ ಥ್ರಿಲ್ ಸಿಗುತ್ತದೆ.

ಸಿನಿಮಾದ ಫಸ್ಟ್‌ ಆಫ್‌ನಲ್ಲಿ ಸ್ವಲ್ಪ ಬೋರಿಂಗ್‌ ಅನಿಸಿದ್ರೂ, ಹಿನ್ನೆಲೆ ಸಂಗೀತದಿಂದ ಸಿನಿಮಾ ಗಮನ ಸೆಳೆಯುತ್ತದೆ. ಸಿನಿಮಾದ ಕೆಲವೇ ಕೆಲವು ಪಾತ್ರಗಳಲ್ಲಿ ದುನಿಯಾ ರಶ್ಮಿ ನಟನೆ ಗಮನ ಸೆಳೆಯುತ್ತದೆ.

.

ಮೂಕಿಯಾಗಿ ಭಾವನೆಗಳಲ್ಲೆ ಅವರು ಆಟವಾಡಿದ್ದಾರೆ. ಪೊಲೀಸ್ ಅಕಾರಿಯಾಗಿ ರಾಜೇಶ್ ರಾಮಕೃಷ್ಣ ನಟನೆ ಪಾತ್ರಕ್ಕೆ ತಕ್ಕಂತೆ ಇದೆ. ಸೈಕೋವಾಗಿ ನಟಿಸಿರುವ ನಿರಂತ್‌ ತಮ್ಮ ನಟನೆಯಿಂದ ಬೆಚ್ಚಿ ಬೀಳಿಸುತ್ತಾರೆ.

ಚಿತ್ರಕಥೆಯಲ್ಲಿ ಒಂದಷ್ಟು ಬದಲಾವಣೆಗಳನ್ನು ಮತ್ತು ವೇಗವಾಗಿ ಮಾಡಿಕೊಂಡಿದ್ರೆ ಸಿನಿಮಾ ಇನ್ನೂ ರೋಚಕವಾಗುತ್ತಿತ್ತು. ಸಿನಿಮಾದ ಸಾಕಷ್ಟು ಭಾಗಗಳಲ್ಲಿ ಸಿನಿಮಾಟೋಗ್ರಫರ್‌ ಸುರ್ಯೋದಯ ಗಮನ ಸೆಳೆಯುತ್ತಾರೆ. ರಾತ್ರಿಗಳು ಅವರ ಕ್ಯಾಮೆರಾ ಕಣ್ಣಲ್ಲಿ ಬಹಳ ಚೆನ್ನಾಗಿ ಕಂಡಿದೆ..

.

ಬಹುತೇಕ ಸಿನಿಮಾ ರಾತ್ರಿ ಹೊತ್ತೇ ಶೂಟ್ ಆಗಿದೆ. ಹಾಗಾಗಿ ಸಿನಿಮಾಟೋಗ್ರಾರ್ ಸುರ್ಯೋದಯ ಅವರ ಕೆಲಸವೂ ಮೆಚ್ಚುವಂತಿದೆ. ಅರಿಂದಂ ಗೋಸ್ವಾಮಿಯವರ ಹಿನ್ನೆಲೆ ಸಂಗೀತ ಸಿನಿಮಾದ ಪ್ಲಸ್‌ ಪಾಯಿಂಟ್‌ಗಳಲ್ಲಿ ಒಂದು. ಹಾರರ್‌ ಮಾದರಿಯ ಸಿನಿಮಾಗಳನ್ನು ಇಷ್ಟಪಡುವವರು ಒಮ್ಮೆ ಕಾರ್ನಿಯನ್ನು ನೋಡಬಹುದು.

 

ರೇಟಿಂಗ್ - 3/5

ಕನ್ನಡ ರಜತ ಪರದೆಯ ಮೇಲೆ ಮತ್ತೊಂದು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ "ಕಾರ್ನಿ". ದುನಿಯಾ ರಶ್ಮಿ ಪ್ರಧಾನ ಭೂಮಿಕೆಯಲ್ಲಿ ಇರುವ ಈ ಚಿತ್ರ ಗೋಕುಲ ಎಂಟರ್ಟೈನರ್ಸ್ ಹಾಗೂ ವಿನಿ ಸ್ಟುಡಿಯೋ ಅಡಿಯಲ್ಲಿ ತಯಾರಾಗಿದ್ದು ಇದೇ ಶುಕ್ರವಾರ(ಸೆ.14) ಬಿಡುಗಡೆ ಆಗುತ್ತಿದೆ.

.

`ಕಾರ್ನಿ' ಎಂಬುದು ದುರ್ಗ ದೇವಿಯ ಅಸ್ತ್ರ. ಈ ಆಸ್ತ್ರ ಯಾರ ಸಂಹಾರಕ್ಕಾಗಿ ಎಂಬುದು ಕುತೂಹಲ ಹುಟ್ಟಿಸುವ ವಿಷಯ. ಬಹುತೇಕ ರಾತ್ರಿಯ ಹೊತ್ತಿನಲ್ಲೇ ಚಿತ್ರೀಕರಣ ಮಾಡಿರುವ ಈ ಚಿತ್ರದಲ್ಲಿ ನಾಯಕಿ ರಶ್ಮಿ ಅವರಿಗೆ ಮಾತು ಬಹಳ ಕಡಿಮೆ. ಇದು ಶಕ್ತಿ ಹಾಗೂ ಯುಕ್ತಿಯ ನಡುವಿನ ಹೋರಾಟ.


.
ಈ ಚಿತ್ರವನ್ನು ಗೋವಿಂದರಾಜು ನಿರ್ಮಾಣ ಮಾಡಿದ್ದಾರೆ. ಆಲೋಕ್ ಗೋವಿಂದಪ್ಪ ಸಹ ನಿರ್ಮಾಪಕ. ವಿನೀ ಅವರ ಕಥೆ, ಚಿತ್ರಕಥೆ, ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ನಾಯಕ ಹಾಗೂ ಖಳ ನಾಯಕ ನಿರಂತ್. ಕನ್ನಡದಲ್ಲಿ ಬಿಡುಗಡೆ ಆದ ದಿನೇಷ್ ಬಾಬು ನಿರ್ದೇಶನದ ?ಇದು ಸಾಧ್ಯ? ಚಿತ್ರದ ಪ್ರೇರಣೆ ಇಂದ ವಿನೀ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ಲೈಫು ಸೂಪರ್ರು ಚಿತ್ರ ನಿರ್ದೇಶನ ಮಾಡಿದವರು.
.
ನಾಯಕಿ ರಶ್ಮಿ ಅವರು ಈ ಚಿತ್ರದಲ್ಲಿ ಕೆಲವು ಸಾಹಸ ಮಾಡಿದ್ದಾರೆ. ಬಹುತೇಕ ಮೂಕಿ ಆಗಿಯೇ ಅವರ ಪಾತ್ರ ಸಾಗುತ್ತದೆ. ರಾಜೇಶ್ ರಾಮಕೃಷ್ಣ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ.
ಸೂರ್ಯೋದಯ ಛಾಯಾಗ್ರಹಣ, ಅರಿಂದಂ ಗೋಸ್ವಾಮಿ ಸಂಗೀತ, ವಿನಯ್ ಆಲೂರ್ ಸಂಕಲನ ಹಾಗೂ ಕಲರಿಂಗ್ ಮಾಡಿದ್ದಾರೆ.

ತಮ್ಮ ಕಾಮಿಡಿ ಪಂಚಿಂಗ್‌ ಡೈಲಾಗ್‌ಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದಿದ್ದ ಡೈಲಾಗ್ ರೈಟರ್ ಪ್ರಶಾಂತ್‌ ರಾಜಪ್ಪ ನಿರ್ದೇಶನಕ್ಕಿಳಿದಿದ್ದಾರೆ, ಅವರ ಮೊದಲ ಚಿತ್ರದಲ್ಲಿ ನಟ ಅನಿಶ್‌ ಹಳ್ಳಿ ಹುಡುಗನಾಗಿ ನಟಿಸುತ್ತಿದ್ದಾರಂತೆ. ಚಿತ್ರತಂಡ ಚಿತ್ರಕ್ಕೆ "ಕೇಡಿ ನಂ.1" ಎಂದು ಹೆಸರಿಟ್ಟಿದ್ದಾರೆ.

.
ಅಕಿರಾ ಸಿನಿಮಾದಲ್ಲಿ ಮಾಡ್‌ ಹುಡುಗನಾಗಿ ಕಾಣಿಸಿಕೊಂಡು, ವಾಸು ನಾನ್‌ ಪಕ್ಕಾ ಕಮರ್ಶಿಯಲ್‌ ಸಿನಿಮಾದಲ್ಲಿ ಪಕ್ಕಾ ಲೋಕಲ್‌ ಆಗಿ ನಟಿಸಿದ್ರು ಅನಿಶ್‌. ಈಗ ಪ್ರಶಾಂತ್‌ ರಾಜಪ್ಪ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ಮೊದಲ ಬಾರಿಗೆ ಹಳ್ಳಿ ಹೈದನಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ.
.
ವಾಸು ಚಿತ್ರದಂತೆ ಈ ಸಿನಿಮಾವನ್ನು ಸಹ ಅನಿಶ್‌ ಅವರೇ ನಿರ್ಮಾಣ ಮಾಡುತ್ತಿದ್ದಾರೆ.
.

 

ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ವಿಶಿಷ್ಟ ಮತ್ತು ವಿಚಿತ್ರ ಶೀರ್ಷಿಕೆಗಳು ಸಿನಿಮಾಗಳಾಗುತ್ತಿವೆ. ಆ ಸಾಲಿಗೆ ಹೊಸ ಸೇರ್ಪಡೆ "ಅಟ್ಟಯ್ಯ v/s ಹಂದಿ ಕಾಯೋಳು".
.
ಮಳವಳ್ಳಿಯಲ್ಲಿ ನಡೆದ ಕ್ರೆಂ ಸ್ಟೊರಿಗೆ ದೃಶ್ಯದ ಟಚ್‌ ನೀಡಿದ್ದಾರಂತೆ ನಿರ್ದೇಶಕ ನಿರ್ದೇಶಕ ಲೋಕೇಂದ್ರ ಸೂರ್ಯ.
ಒಂದು ಗದ್ದೆಗೆ ಬೇರೆಯವರ ಹಂದಿಗಳು ನುಗ್ಗಿದಾಗ ಜಗಳ ಆರಂಭವಾಗುತ್ತದೆ. ಈ ಜಗಳ ಕಡೆಗೆ ಕೊಲೆಯ ವರೆಗೂ ಹೋಗುವ ಕಥೆ ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು ಸಿನಿಮಾದಲ್ಲಿದೆ. ನಗರದಿಂದ ಬಂದ ಇಂಜಿನಿಯರ್‌ ಹುಡುಗ ಈ ಗೊಂದಲದಲ್ಲಿ ಸಿಕ್ಕಿಕೊಳ್ಳುತ್ತಾನೆ. ಚಿತ್ರದಲ್ಲಿ ಕತೆಯೇ ಹೀರೊ. ಲವ್, ಹಳ್ಳಿಯ ಚಿತ್ರಣ ಎಲ್ಲವೂ ಇದೆ’ ಎಂದಿದ್ದಾರೆ ಲೋಕೇಂದ್ರ ಸೂರ್ಯ.
.
ಈ ಸಿನಿಮದಲ್ಲಿ ನಾಯಕಿಯಾಗಿ ಚೈತ್ರಾ ನಟಿಸಿದ್ದಾರೆ. ಈ ಚಿತ್ರದಲ್ಲಿ ಹಳ್ಳಿಯ ಗೌಡನ ಮಗಳಾಗಿ ನಟಿಸಿರುವ ಇವರು, ಡಿಗ್ಲಾಮ್‌ ಪಾತ್ರದಲ್ಲಿದ್ದಾರಂತೆ. ಚಿತ್ರದಲ್ಲಿ ಅಟ್ಟಯ್ಯನಾಗಿ ಪ್ರೊಫೆಸರ್ ಎ. ಮಾದೇವಯ್ಯ, ಲೋಕೇಂದ್ರ, ಕೆಂಪೇಗೌಡ, ಎಡಿಟರ್‌ ವಿನಯ್‌ ಕೂರ್ಗ್‌, ಅರ್ಜುನ್‌ ಮತ್ತಿತರರು ನಟಿಸಿದ್ದಾರೆ. ವಿಜಯ್‌ ಪ್ರಕಾಶ್‌ ಒಂದು ಹಾಡನ್ನು ಹಾಡಿದ್ದಾರೆ. ಯಶವಂತ್‌ ಭೂಪತಿ ಸಂಗೀತ ನೀಡಿದ್ದಾರೆ.

 

ಸಾಮಾನ್ಯವಾಗಿ ಖಾಕಿ, ಕಾವಿ ಮತ್ತು ಖಾದಿ ಧರಿಸುವವರನ್ನು ವೇಷಧಾರಿಗಳು ಎಂದು ಹೇಳುತ್ತೇವೆ ಆದರೆ ಹೊಸಬರ ಚಿತ್ರವೊಂದು ನಾವೆಲ್ಲರೂ ಹಾಕಿರುವುದು ವೇಷ ಎಂದು ಹೇಳುತ್ತಿದೆ.
.

ಹೌದು ಆರ್ಯನ್‌ ನಾಯಕನಾಗಿ ನಟಿಸಿರುವ ‘ವೇಷಧಾರಿ’ ಸಿನಿಮಾದಲ್ಲಿ ಬದುಕಿನ ನಾನಾ ವಿಷಯಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆಯಂತೆ.
.

ನಿರ್ದೇಶಕ ವಿಕ್ರಮಾದಿತ್ಯ ಹೇಳುವ ಪ್ರಕಾರ ‘ಇದೊಂದು ಸಾಮಾಜಿಕ ವಿಡಂಭನೆಯ ಸಿನಿಮಾ. ತನ್ನ ಬಯಕೆಯನ್ನು ಈಡೇರಿಸಿಕೊಳ್ಳಲು ನಾಯಕ ನಾನಾ ವೇಷ ಧರಿಸುತ್ತಾನೆ. ಅವುಗಳಲ್ಲಿ ಅವನನ್ನು ಕೈ ಹಿಡಿಯುವ ವೇಷ ಯಾವುದು ಎಂಬುದು ಸಿನಿಮಾದ ತಿರುಳಂತೆ. ಈ ಸಿನಿಮಗೆ ಶ್ರುತಿ ರಾಜೇಂದ್ರ, ಸೋನಂ ರೈ ಎಂಬ ಇಬ್ಬರು ನಾಯಕಿಯರಿದ್ದಾರೆ.

 

ಇರುವುದೆಲ್ಲವ ಬಿಟ್ಟು ಸಿನಿಮಾದ ಬಿಡುಗಡೆಗಾಗಿ ಕಾದಿರುವ ಮೇಘನಾ ತಮ್ಮ ಸಿನಿಮಾ ಟೀಮ್‌ ಜತೆ ಎಕೋ ಫ್ರೆಂಡ್ಲಿ ಗಣಪನನ್ನು ಪೂಜಿಸಿದ್ದಾರೆ.
.
ಕಾಂತ ಕನ್ನಲಿ ನಿರ್ದೇಶನ ಮಾಡಿರುವ ಇರುವುದೆಲ್ಲವ ಬಿಟ್ಟು ಸಿನಿಮಾ ತನ್ನ ಹಾಡು ಮತ್ತು ಟ್ರೇಲರ್‌ನಿಂದಾಗಿ ಗಮನ ಸೆಳೆದಿದೆ, ಇದೇ 21ಕ್ಕೆ ಸಿನಿಮಾ ಬಿಡುಗಡೆಯಾಗಲಿದ್ದು, ಗಣೇಶ ಹಬ್ಬದ ಸಮಯದಲ್ಲಿ ನಟಿ ಮೇಘನ ರಾಜ್‌ ಚಿತ್ರತಂಡದೊಡನೆ ಸೇರಿಕೊಂಡು ಎಕೋ ಫ್ರೆಂಡ್ಲಿ ಗಣೇಶನನ್ನು ಪೂಜೆ ಮಾಡಿದ್ದಾರೆ.
.

ಹೌದು, ಮಂಗಳವಾರ ಇರುವುದೆಲ್ಲವ ಬಿಟ್ಟು ಚಿತ್ರದ ನಾಯಕರಾದ ಶ್ರೀ,ತಿಲಕ್‌ ನಿರ್ದೇಶಕ ಕಾಂತಕನ್ನಲಿ ನಿರ್ಮಾಪಕ ದೇವರಾಜ್‌ ಮತ್ತು ಇಡೀ ಚಿತ್ರತಂಡ ಎಕೋ ಫ್ರೆಂಡ್ಲಿ ಗಣಪತಿಯನ್ನು ಪೂಜೆ ಮಾಡಿದ್ದಾರೆ.
.

ಕಾರ್ಪೋರೇಟ್‌ ಜಗತ್ತಿನ ಕಥೆ ಹೇಳುವ ಈ ಚಿತ್ರಕ್ಕೆ ತಮಿಳು ನಟ ಸಿಂಬು ಹಾಡಿದ್ದಾರೆ, ನಟ ಶ್ರೀಮುರುಳಿ ಹಿನ್ನೆಲೆ ಧ್ವನಿ ನೀಡಿದ್ದಾರೆ. ಈ ಸಿನಿಮಾಗೆ ಶ್ರೀಧರ್‌ ಸಂಭ್ರಮ್‌ ಸಂಗೀತ ನೀಡಿದ್ದು, ದೇವರಾಜ್‌ ದಾವಣಗೆರೆ ಬಂಡವಾಳ ಹೂಡಿದ್ದಾರೆ.
.

ಇದೇ ಮೊದಲ ಬಾರಿಗೆ ತಿಲಕ್‌ ಹಾಗೂ ಶ್ರೀ ಜತೆ ಮೇಘನಾ ರಾಜ್‌ ತೆರೆ ಹಂಚಿಕೊಂಡಿದ್ದಾರೆ. ಚಿತ್ರದ ಟೈಟಲ್‌ ಬಹಳ ವಿಭಿನ್ನವಾಗಿದ್ದು, ಸಿನಿಮಾದಲ್ಲಿ ಏನಿರಬಹುದು ಎಂಬ ಕುತೂಹಲ ಸೃಷ್ಟಿಯಾಗಿದೆ.

Page 1 of 32

LJOS nigif

May 1st

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top