Kannada Movie Database

See other templatesSee other templates

ad1

ad4

ad2

ad5

 

23 ವರ್ಷಗಳಿಂದ ಕನ್ನಡಿಗರ ಮನೆಮಾತಾಗಿರುವ ಉದಯ ವಾಹಿನಿ ವೀಕ್ಷಕರಿಗೆ ಮನರಂಜನೆಯನ್ನು ನೀಡುತ್ತಾ ಬಂದಿದೆ.ಹಾಗೆ ಈಗ ಮತ್ತೊಂದು ಹೊಸ ಧಾರಾವಾಹಿಯನ್ನು ಕನ್ನಡಿಗರ ಮಡಿಲಿಗೆ ಹಾಕಲು ಸಿದ್ಧವಾಗಿದೆ. ಇದೇ ಜೂನ್ 26ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8ಕ್ಕೆ ತ್ಯಾಗಮಯಿ, ಸ್ನೇಹಮಯಿ ಹುಡುಗಿಯ ಕಥೆ “ಕಾವೇರಿ” ಪ್ರಸಾರವಾಗಲಿದೆ.

“ಕಾವೇರಿ” ಬೆಂಕಿಯಲ್ಲಿ ಅರಳಿದ ಹೂ, ತಾನು ನೊಂದರೂಮನೆಯವರಿಗೆ ನೆರಳನ್ನು ನೀಡುವಾಕೆ. ಇನ್ನೂ ನಾಯಕ ಸಂತೋಷ, ಜನ್ಮತ: ಆಗರ್ಭ ಶ್ರೀಮಂತನಾದರೂ ತನ್ನತಂದೆಯದುರ್ಬುದ್ಧಿ, ಲೋಭತನದಿಂದಕುಪಿತನಾಗಿ ಮನೆಯಿಂದ ಹೊರಬಂದಿರುತ್ತಾನೆ. ಕಾವೇರಿಯ ಮಾನವೀಯ ಮೌಲ್ಯಗಳನ್ನು ಕಂಡು ಅವಳೆಡೆಗೆ ಆಕರ್ಷಿತನಾಗಿರುತ್ತಾನೆ. ಆದರೆ ಅವಳಿಗೆ ತನ್ನ ಮನಸ್ಸಿನ ಪಿಸುಮಾತನ್ನು ಹೇಳಬೇಕು ಎಂದು ಅವಳ ಮನೆಗೆ ಬಂದಾಗಅಲ್ಲಿ ಅವಳ ನಿಶ್ಚಿತಾರ್ಥ ನಡೆಯಿತ್ತಿರುತ್ತದೆ. ಆದರೆ ವಿಧಿಯಾಟದಿಂದಕಾವೇರಿಯ ಮದುವೆ ಮುರಿದುಬೀಳುತ್ತದೆ. ಭವಿಷ್ಯದಲ್ಲಿಕಾವೇರಿ ಮದುವೆಯಾಗದಿದ್ದರೂ ಹೆಂಡತಿಯಾಗಿ ಮತ್ತುಜನ್ಮ ನೀಡದಿದ್ದರೂ ತಾಯಿಯಾಗಿ ಬದುಕುವ ಅನಿವಾರ್ಯತೆಯಲ್ಲಿ ಬೀಳುತ್ತಾಳೆ. ಆದರೆ ಸಂತೋಷನ ನಿಷ್ಕಲ್ಮಷ ಪ್ರೀತಿಗೆ ಕಾವೇರಿ ಒಲಿಯುತ್ತಾಳಾ ಎಂಬುದುಕಾದು ನೋಡಬೇಕಾಗಿದೆ.
ಕಾವೇರಿಯ ಪಾತ್ರದಲ್ಲಿ ನಟಿ ಪ್ರಿನ್ಸಿಕೃಷ್ಣನ್ ನಟಿಸಿದರೆ ನಾಯಕನಾಗಿ ಶ್ರೀಧರ ನಟಿಸುತ್ತಿದ್ದಾರೆ. ಪ್ರಧಾನ ಪಾತ್ರದಲ್ಲಿಜನಪ್ರೀಯ ನಟರಾದ ಅಶ್ವಿನಿ ಗೌಡ,ಸುರೇಶ್‍ರೈ,ಶ್ರೀಕಾಂತ ಹೆಬ್ಳಿಕರ್ ಮತ್ತು ನಟಿಸುತ್ತಿದ್ದಾರೆ.“ಕಾವೇರಿ” ನ್ಯೂ ಡಿ-ಟು ಮಿಡಿಯಾ ನಿರ್ಮಾಣದಲ್ಲಿಮೂಡಿಬರುತ್ತಿದೆ. ನಿರ್ದೇಶನದ ಜವಾಬ್ದಾರಿಯನ್ನು ವಿನೋದ ಫೀಲ್ಸ್ ವಹಿಸಿಕೊಂಡಿದ್ದಾರೆ.
“ಕಾವೇರಿ” ಕೇವಲ ಪಾತ್ರವಲ್ಲದೇ ಅದು ಸಮಸ್ತ ಹೆಣ್ತನದ ರಾಯಭಾರಿ ಎನ್ನುವುದು ನಿರ್ದೇಶಕ ವಿನೋದ ಮಾತು.
ಇದೇ ಸಂದರ್ಭದಲ್ಲಿ “ಕಾವೇರಿ” ಧರಾವಾಹಿಯನ್ನು ನೋಡಿಚಿನ್ನಗೆಲ್ಲಿಎಂಬುದರ ಮೂಲಕ ಉದಯ ವೀಕ್ಷಕರಿಗೆ ಚಿನ್ನದ ಸುರಿಮಳೆ ಹರಿಸಲಿದೆ. ಜೂನ್ 26ರಿಂದ ಜೂಲೈ07ರವರೆಗೆ ಧಾರಾವಾಹಿಯಲ್ಲಿ ಕೇಳುವ ಪ್ರಶ್ನೆಗೆ ಉತ್ತರಿಸಿದ ವಿನ್ನರ್‍ಗಳಿಗೆ 100ಗ್ರಾಮದವರಗೆ ಬಂಗಾರವನ್ನು ಗೆಲ್ಲುವ ಅವಕಾಶವಿದೆ.
“ಕಾವೇರಿ” ಇದೇ ಜೂನ್ 26ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗಲಿದೆ.

 
ಜನಪ್ರಿಯ ನಿರ್ದೇಶಕ ಎಸ್ ನಾರಾಯಣ್ ಅವರ ನಿರ್ದೇಶನದಲ್ಲಿ ತಯಾರಾಗಿರುವ ಚಿತ್ರ `ನಾ ಪಂಟ ಕಣೋ'. ಲಕ್ಷ್ಮಣ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿರುವ ನೂಪ್ ರೇವಣ್ಣ ಹಾಗೂ ರಿತೀಕ್ಷ (ಮೋನಿಕಾ) ಅಭಿನಯದ ಈ ಚಿತ್ರ ನಿರ್ಮಾಪಕ ಸುಬ್ರಮಣ್ಯಂ ಕೆ ಅವರ ಪ್ರಥಮ ಕಾಣಿಕೆ. ಈ ವಾರ `ಪಂಟ' ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
 
ಈ `ಪಂಟ' ಮೈಂಡ್ ಗೇಮ್ ಮಾಡುವುರದಲ್ಲಿ ನಿಸ್ಸೀಮ. ತನ್ನ ಬುದ್ದಿ ಶಕ್ತಿಯಿಂದ ಹೇಗೆ ಎಲ್ಲವನ್ನೂ ಸರಿಯಾಗಿ ನಿಭಾಯಿಸುತ್ತಾನೆ ಎಂಬುದೇ ಕಥಾ ವಸ್ತು.
#PANTA #Cineloka

ಕೆಲ ದಿನಗಳ ಹಿಂದೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾದ ಕಿರು ಚಿತ್ರವೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಯಾವುದೇ ಚಿತ್ರಕ್ಕೆ ಕಮ್ಮಿ ಇಲ್ಲವೆಂಬಂತೆ ಮೂಡಿಬಂದಿರುವ ಈ ಕಿರು ಚಿತ್ರದ ಹೆಸರು 'ಮೈ ಡೆತ್ ನೋಟ್'. ಹೌದು ಎಂ. ಸುಭಾಷ್ ಚಂದ್ರ ನಿರ್ದೇಶನದ ಈ ಕಿರು ಚಿತ್ರವು ತನ್ನ ಟೈಟಲ್‌ನಂತೆಯೇ ವಿಭಿನ್ನವಾಗಿ ಮೂಡಿಬಂದಿದ್ದು, ಸದ್ಯ ಯೂಟ್ಯುಬ್ ನಲ್ಲಿ ಟ್ರೆಂಡಿಂಗ್ ಲಿಸ್ಟ್ ನಲ್ಲಿರುವುದೇ ಚಿತ್ರಕ್ಕೆ ಸಿಕ್ಕಿರುವ ಯಶಸ್ಸಿಗೆ ಹಿಡಿದಿರುವ ಕನ್ನಡಿಯಾಗಿದೆ.

 

ದತ್ತ ಫಿಲಂಸ್ ಲಾಂಛನದಲ್ಲಿ ದತ್ತಾತ್ತ್ರೇಯ ಬಚ್ಚೇಗೌಡ ಹಾಗೂ ಬಾನು ದತ್ತ ಅವರು ನಿರ್ಮಿಸಿರುವ `ಜಿಂದಾ’ ಚಿತ್ರ ಈ ವಾರ (June 9) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಮುಸ್ಸಂಜೆ ಮಹೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ. ಒಂದು ಗ್ಯಾಂಗಿನ ಸುತ್ತಾ ನಡೆಯುವ ಕಥಾ ಹಂದರ ಹೊಂದಿರುವ `ಜಿಂದಾ’ ಚಿತ್ರಕ್ಕೆ ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣವಿದೆ. ಸಿ.ರವಿಚಂದ್ರನ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಯುವರಾಜ್, ಮೇಘನಾರಾಜ್, ದೇವರಾಜ್, ಕೃಷ್ಣ, ಲೋಕಿ, ಅರುಣ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

 

ಇದು ನೂತನ `ಯುಗ ಪುರುಷ' ತೆರೆಯಮೇಲೆ. ಅಂದು 28 ವರ್ಷಗಳ ಹಿಂದೆ `ಯುಗ ಪುರುಷ' ಹಿಂದಿ ಸಿನಿಮಾ `ಕರ್ಜ್' ರೀಮೇಕ್ ಆಗಿ ಜನಪ್ರಿಯ ಆಗಿತ್ತು. ಆ ಸಿನಿಮಾದ ನಾಯಕ ಕ್ರೇಜಿ ಸ್ಟಾರ್ ವಿ ರವಿಚಂದ್ರನ್, ಖುಷ್ಬೂ ನಾಯಕಿ, ಡಿ ರಾಜೇಂದ್ರ ಬಾಬು ಅವರು ನಿರ್ದೇಶನ ಮಾಡಿದ್ದರು. ಇಂದಿನ `ಯುಗ ಪುರುಷ' ಸಿನಿಮಾದಲ್ಲಿ ವಿ ರವಿಚಂದ್ರನ್ ಅವರ ಅಭಿಮಾನಿಯಾಗಿ ಅರ್ಜುನ್ ದೇವ್ ನಾಯಕರಾಗಿ ಪಾದ ಬೆಳಸಿದ್ದಾರೆ. ಈ ನಾಯಕ ಪೌರುಷದಲ್ಲಿ ಹಾಗೂ ನಿಯತ್ತಿನಲ್ಲಿ ಸಕ್ಕತ್ತು.
ಕನ್ನಡದಲ್ಲಿ ಮನಸುಗಳ ಮಾತು ಮಧುರ, ಗೌರಿ ಪುತ್ರ ಅಂತಹ ಸದಭಿರುಚಿಯ ಸಿನಿಮಾಗಳ ನಿರ್ದೇಶನ ಮಾಡಿದ ಮಂಜು ಮಸ್ಕಲ್ಮಟ್ಟಿ ಅವರು ನಿರ್ದೇಶನ ಮಾಡಿರುವ ಚಿತ್ರ ಇದು. ತೆಲುಗು ಭಾಷೆಯಲ್ಲಿ ಮೂರು ಸಿನಿಮಾದಲ್ಲಿ ಅಭಿನಯಿಸಿರುವ ಪೂಜಾ ಝವೇರಿ ಕಥಾನಾಯಕಿ.

ಬೆಂಗಳೂರು, ಮಂಗಳೂರು, ಚಿತ್ರದುರ್ಗ, ಮುರುಡೇಶ್ವರ, ಭಟ್ಕಳ್, ಸಕಲೆಶಪುರ, ಕೆ ಜಿ ಎಫ್, ಬಿಡದಿ ಸ್ಥಳಗಳಲ್ಲಿ 40 ದಿವಸ ಚಿತ್ರೀಕರಣ ಮಾಡಲಾಗಿದೆ. ಐದು ಹಾಡುಗಳು ಹಾಗೂ ಆರು ಸಾಹಸ ಸನ್ನಿವೇಶ ಇರುವ ಈ ಚಿತ್ರದಲ್ಲಿ ನಾಯಕನ ಹೆಸರೆ ಚಿತ್ರದಲ್ಲಿ ?ಟಗರು? ಎಂದು. ಅನಾಥಾಶ್ರಮದಲ್ಲಿ ಬೆಳದ ಹುಡುಗ ನಿಷ್ಠೆ ಹಾಗೂ ನಿಯತ್ತಿಗೆ ಮತ್ತೊಂದು ಹೆಸರು. ತನ್ನ ಗುರು ದೇವರಾಜ್ ಅಂದರೆ ಬಹಳ ಪ್ರಿಯ. ಇಂತಹ ವ್ಯಕ್ತಿಯ ಜೀವನದಲ್ಲಿ ಪ್ರೀತಿ ನುಸುಳಿದರೆ? ಮುಂದೇನು ಎಂಬುದು ಕಥಾ ವಿಸ್ತರಣೆ.

ಡಾಕ್ಟರ್ ಮಂಜುನಾಥ್ ಬಾಬು, ಚಳ್ಳಕೆರೆ ಮೂಲತಃ ಮಕ್ಕಳ ತಜ್ಞ. ಅವರು ಬೆಟ್ಟ ಸ್ವಾಮಿ ಗೌಡ, ಶಿವರಾಜ್ ಟಿ ಸಿ ಅವರ ಜೊತೆ ಸೇರಿ ?ಯುಗ ಪುರುಷ? ಚಿತ್ರವನ್ನು ನಿರ್ಮಾಣ ಮಾದಿದ್ದಾರೆ.

ಇದೊಂದು ಪಕ್ಕ ಕಮರ್ಷಿಯಲ್ ಚಿತ್ರದ ಜೊತೆಗೆ ಒಂದು ಪ್ರೇಮಕಥೆ ಸಹ ಇದೆ. ಮಂಜು ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು, ನಟ ಬರಹಗಾರ ನವೀನ್ ಕೃಷ್ಣ ಸಂಭಾಷಣೆ ಬರೆದಿದ್ದಾರೆ. ಧನಪಾಲ್ ಸಿಂಗ್ ರಜಪುಟ್ ಅವರ ಸಂಗೀತ ಇದೆ. ಶರತ್ ಕುಮಾರ್ ಜಿ ಅವರು ಛಾಯಗ್ರಾಹಕರಾಗಿ ಪರಿಚಯ ಆಗುತ್ತಿದ್ದಾರೆ.
ವಿನೋದ್ ಮನೋಹರ್ ಅವರು ಸಂಕಲನಕಾರರು, ಡೈನಮಿಕ್ ಸ್ಟಾರ್ ದೇವರಾಜ್ ಅವರಿಗೆ ಈ ಚಿತ್ರದಲ್ಲಿ ಪ್ರಮುಖ ಪಾತ್ರ. ಶೋಬರಾಜ್, ಪವನ್, ಮೋಹನ್ ಜುನೇಜ, ಪಲ್ಲಕ್ಕಿ ರಾಧಾಕೃಷ್ಣ ಹಾಗೂ ಇತರರು ಪಾತ್ರವರ್ಗದಲ್ಲಿ ಇದ್ದಾರೆ.

ಕಮರ್ಷಿಯಲ್ ಅಂಶಗಳನ್ನು ಮಂಜು ಮಸ್ಕಲ್ ಮಟ್ಟಿ ಚನ್ನಾಗಿ ಪ್ಯಾಕ್ ಮಾಡಿದ್ದಾರೆ ಸಹ. ಕುತೂಹಲವನ್ನು ಕೆಲವು ಟ್ವಿಸ್ಟ್ ಇಂದ ಕಟ್ಟಿದ್ದಾರೆ. ಒಂದು ಹಂತಕ್ಕೆ ಬೆಳಸಿದ ಗುರುನಾ ಅಥವಾ ಪ್ರೀತಿನಾ ಎಂಬ ಧ್ವಂದ್ವ ನಾಯಕನಲ್ಲಿ ಮೂಡಿ ಬರುತ್ತದೆ.

ಅಜ್ಜ ಹಾಗೂ ಅಜ್ಜಿ ಜೊತೆ ಬೆಳೆಯುವ ನಾಯಕಿಗು ಒಂದು ರೀತಿಯ ಇಕ್ಕಟಿನ ಪರಿಸ್ಥಿತಿ. ಇವರ ತಂದೆ ಪಾತ್ರ ಮಾಡಿರುವ ರಾಧಾಕೃಷ್ಣ ಪಲ್ಲಕಿ ಖಳರ ಗುಂಪಿನವರು. ನಾಯಕಿ ಪ್ರೀತಿಸುವ ಹುಡುಗ ವಿರೋದ ತಂಡದವನು.
`ಯುಗ ಪುರುಷ' ಹೃದಯಗಳ ಲೋಕದಲ್ಲಿ ಎಂದು ಅಡಿ ಬರಹ ಇಟ್ಟುಕೊಂಡಿದೆ. ಇದೆ ಶುಕ್ರವಾರ ತೆರೆಯ ಮೇಲೆ ರಾರಾಜಿಸಲಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ಮಾಪಕರ ಪಾಲಿಗೆ ಮಿನಿಮಮ್ ಗ್ಯಾರಂಟಿ ನಟ ಅನ್ನುವ ಮಾತಿದೆ. ಯಾಕೆಂದರೆ ಅವರ ಸಿನಿಮಾಗಳು, ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಬ್ಯುಸಿನೆಸ್ ಮಾಡುತ್ತೆ ಅನ್ನೋದು ಗಾಂಧಿನಗರದ ನಿರ್ಮಾಪಕರ ಲೆಕ್ಕಾಚಾರ. ಆದ್ದರಿಂದಲೇ ದರ್ಶನ್ ತಮ್ಮ ಒಂದು ಚಿತ್ರಕ್ಕೆ ೫ ರಿಂದ ೬ ಕೋಟಿಯಷ್ಟು ಸಂಭಾವನೆ ಪಡೆದುಕೊಳ್ಳುತ್ತಾರೆ.

ಸ್ಯಾಂಡಲ್ ವುಡ್ ಸೂಪರ್ ಹಿಟ್ ಜೋಡಿ ರಕ್ಶಿತ್ ಶೆಟ್ಟಿ-ರಶ್ಮಿಕಾ ಈಗ ನಿಜ ಜೀವನದಲ್ಲೂ ಜೊಡಿಯಾಗಲು ಹೊರಟಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಎಲ್ಲರ ಗಮನಸೆಳೆದಿದ್ದ ಈ ಜೋಡಿ ಮದುವೆಯಾಗಲಿದ್ದಾರೆ ಅನ್ನುವ ಗುಲ್ಲು ಈ ಮುಂಚೆಯೇ ಎಲ್ಲೆಡೆ ಹಬ್ಬಿತ್ತು.

ವಿಧಾನಸೌಧದ ಮುಂದೆ `ಧೈರ್ಯಂ’ ಆಡಿಯೋ ರಿಲೀಸ್ :


     ರಾಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಾ||ಕೆ.ರಾಜು ಅವರು ನಿರ್ಮಿಸುತ್ತಿರುವ `ಧೈರ್ಯಂ` ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಸಮಾರಂಭ ವಿಧಾನಸೌಧದ ಮುಂದೆ ವಿಭಿನ್ನವಾಗಿ ನೆರವೇರಿತು. ದೇಶದ ಆಧಾರ ಸ್ಥಂಭಗಳಂತಿರುವ ಯೋಧ ಗುರುಪ್ರಸಾದ್,ರೈತ ಗೋಪಾಲ ಗೌಡ ಹಾಗೂ ವಿದ್ಯಾರ್ಥಿ ಲಿಖಿತ್‍ರಾಜ್ `ಧೈರ್ಯಂ` ಚಿತ್ರದ ಹಾಡುಗಳ ಸೀಡಿಯನ್ನು ಲೋಕಾರ್ಪಣೆ ಮಾಡಿದ್ದರು. ನಿರ್ಮಾಪಕ ಕೆ.ರಾಜು, ನಿರ್ದೇಶಕ ಶಿವತೇಜಸ್, ನಾಯಕ ಅಜಯ್ ರಾವ್, ನಾಯಕಿ ಅದಿತಿ ಪ್ರಭುದೇವ, ಸಂಗೀತ ನಿರ್ದೇಶಕ ಎಮಿಲ್ ಮುಂತಾದವರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
     ಅಜಯ್ ರಾವ್ ಹಾಗೂ ಅದಿತಿ ಪ್ರಭುದೇವ ನಾಯಕ - ನಾಯಕಿಯರಾಗಿ ಅಭಿನಯಿಸುತ್ತಿರುವ ಈ ಚಿತ್ರವನ್ನು ಶಿವ ತೇಜಸ್ ನಿರ್ದೇಶಿಸುತ್ತಿದ್ದಾರೆ. ಹಿಂದೆ `ಮಳೆ` ಚಿತ್ರವನ್ನು ನಿರ್ದೇಶಿಸಿದ್ದ ಅನುಭವ ಶಿವತೇಜಸ್ ಅವರಿಗಿದೆ. ಎಮಿಲ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಶೇಖರ್ ಚಂದ್ರ ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಹರ್ಷ, ಕಲೈ, ಮುರಳಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸಾಧುಕೋಕಿಲ, ಹೊನ್ನವಳ್ಳಿ ಕೃಷ್ಣ, ಸಂಗೀತ, ಶ್ರೀನಿವಾಸಪ್ರಭು, ಎಸ್ಖಾರ್ಟ್ ಶ್ರೀನಿವಾಸ್, ಸಿದ್ದಾರಾಜ್ ಕಲ್ಯಾಣ್‍ಕರ್, ವಿಜಯಲಕ್ಷ್ಮೀ ಉಪಾಧ್ಯಾಯ, ಚಿತ್ಕಲಾ, ಸಿಂಗರ್ ಶ್ರೀನಿವಾಸ್, ಸೋನು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಎಂ.ಎಂ.ಜಿ. ಫಿಲಂಸ್ ಲಾಂಛನದಲ್ಲಿ ಎಂ.ಮಹಾದೇವೇಗೌಡ ನಿರ್ಮಿಸಿರುವ, ಗ್ರಾಮೀಣ ಸೊಗಡಿನ ನೈಜ ಕಥೆ ಹೊಂದಿರುವ ಹಾಸ್ಯದೊಂದಿಗೆ, ಪ್ರೀತಿ-ಪ್ರೇಮದ ಎಳೆಯ `ಈ ಕಲರವ' ಚಿತ್ರ ಈ ವಾರ ರಾಜ್ಯದ್ಯಂತ ಬಿಡುಗಡೆಯಾಗುತ್ತಿದೆ. ಸಂದೀಪ್ ದಕ್ಷ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಪೀಟರ್ ಎಂ ಜೋಸೆಫ್ ಸಂಗೀತ, ಕುಮಾರ್ ಜಿ ಛಾಯಾಗ್ರಹಣ, ಧನುಕುಮಾರ್ ನೃತ್ಯ ನಿರ್ದೇಶನ, ಪ್ರಕಾಶ್ ಬಾಬು ಸಾಹಿತ್ಯ, ರವಿಚಂದ್ರನ್ ಸಂಕಲನ, ಸುಬ್ಬು, ಅಶೋಕ್ ಸಾಹಸವಿದೆ. ನವೀನ್ ಕೃಷ್ಣ, ರೋಹಿಣಿ ಭಾರದ್ವಾಜ್, ಲಕ್ಕಿ, ರಶ್ಮಿ, ನಿಹಾರಿಕಾ, ಮೈಸೂರು ಶೋಭಾ, ಪದ್ದು, ಸಂತೋಷ್, ಪ್ರಿಯಾ, ಮಹದೇವೆಗೌಡ ಮುಂತಾದವರ ತಾರಾಬಳಗವಿದೆ.

ದತ್ತ ಫಿಲಂಸ್ ಲಾಂಛನದಲ್ಲಿ ದತ್ತಾತ್ರೇಯ ಬಚ್ಚೇಗೌಡ ಮತ್ತು ಶ್ರೀಮತಿ ಬಾನುದತ್ತ ನಿರ್ಮಾಣದಲ್ಲಿ, ಮುಸ್ಸಂಜೆ ಮಾತು ಖ್ಯಾತಿಯ ಮಹೇಶ್ ನಿರ್ದೇಶನದ "ಜಿಂದಾ" ಚಿತ್ರವು ಜೂನ್ 9ನೇ ತಾರೀಖು ರಾಜ್ಯಾದ್ಯಂತ ಬಿಡುಗಡೆಯಾಗುವುದು ಖಚಿತವಾಗಿದೆ.

ನೈಜ ಘಟನೆ ಆಧಾರಿತ ಚಿತ್ರವಾಗಿರುವ "ಜಿಂದಾ" ಚಿತ್ರದ ಟ್ರೇಲರ್ ಮತ್ತು ವಿ. ಶ್ರೀಧರ್ ಸಂಗೀತವಿರುವ  ಹಾಡುಗಳು ಜನರಿಗೆ ಮೆಚ್ಚುಗೆಯಾಗಿದ್ದು, ಚಿತ್ರದ ಮೇಲೆ ಬಹಳ ನಿರೀಕ್ಷೆಗಳಿವೆ.

ಮೇಘನ ರಾಜ್, ದೇವರಾಜ್,ಅಸ್ತಿತ್ವ ಯುವರಾಜ್, ಲೋಕೀ, ಅರುಣ್, ಅನಿರುದ್ದ, ದೇವ್ ತಾಳಿಕೋಟೆ, ಕೃಷ್ಣ ಚಂದ್ರ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಒಂದು ಸುಂದರ ಲವ್ ಸ್ಟೋರೀ ಕೂಡ ಇದೆ ಎಂದು ತಿಳಿದು ಬಂದಿದೆ.

ಮಹೇಶ್ ಅವರು ಬಹಳ ದಿನಗಳ ನಂತರ ಒಂದೊಳ್ಳೆ ಕಥೆಯೊಂದಿಗೆ ಚಿತ್ರ ನಿರ್ದೇಶನಕ್ಕೆ ಇಳಿದಿದ್ದಾರೆ ಎಂಬುದು ಚಿತ್ರತಂಡದ ಹೇಳಿಕೆ.

ಇತ್ತೀಚೆಗಷ್ಟೆ 1000 ಕೋಟಿ ಗಳಿಸಿ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಭಾಷ್ಯ ಬರೆದಂತ ಬಾಹುಬಲಿ ಚಿತ್ರದಲ್ಲಿ ಖಳನಟ ನಾಗಿ ಬಲ್ಲಾಳ ದೇವನ ಪಾತ್ರದಲ್ಲಿ ಮಿಂಚಿದ್ದ ರಾಣಾ ದಗ್ಗುಬಾಟಿ ಈಗ ಸ್ಯಾಂಡಲ್‌ವುಡ್ ನ ಬಹುನಿರೀಕ್ಷಿತ ಚಿತ್ರವಾದ 'ಕುರುಕ್ಷೇತ್ರ' ದಲ್ಲಿ ಭೀಮ ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದುನಿಯಾ ವಿಜಯ್ ನಟನೆಯ ’ಮಾಸ್ತಿ ಗುಡಿ’ ಬಹುನಿರೀಕ್ಷಿತ ಕಳೆದ ಶುಕ್ರವಾರ ರಾಜ್ಯದಾದ್ಯಂತ ಬಿಡುಗಡೆ ಆಗಿತ್ತು. ಅನೇಕ ಕಾರಣಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರಕ್ಕೆ ಉತ್ತಮ ಓಪನ್ನಿಂಗ್ ಕೂಡ ಲಭಿಸಿತ್ತು. ಆದ್ರೆ, ಚಿತ್ರದ ಸೆಕೆಂಡ್ ಹಾಫ್ ಗೆ ಮಿಶ್ರ ಪ್ರತಿಕ್ರೀಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ’ಮಾಸ್ತಿ ಗುಡಿ’ ಚಿತ್ರದ ಕೆಲ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಲು ಚಿತ್ರತಂಡ ಮುಂದಾಗಿದೆ. 

ಇತ್ತೀಚೆಗಷ್ಟೆ ವಿಶ್ವದಾದ್ಯಂತ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ಬಾಹುಬಲಿ ೨ ಚಿತ್ರದ ನಿರ್ದೇಶಕ ಎಸ್ ಎಸ್ ರಾಜಮೌಳಿ ಕನ್ನಡದಲ್ಲೂ ಡಬ್ಬಿಂಗ್ ಬೇಕೆಂದು ಡಬ್ಬಿಂಗ್ ಪರವಾಗಿ ಮಾತನಾಡಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ’ರಾಜಕುಮಾರ’ ಚಿತ್ರ 50 ದಿನಗಳನ್ನು ಪೂರೈಸಿದೆ. ಸುಮಾರು 30ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ೫೦ ದಿನವನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ವಿಜಯ ಯಾತ್ರೆಯನ್ನು ನಡೆಸಲು ಸಿದ್ಧತೆ ನಡೆಸಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ವೃತ್ತಿ ಜೀವನದ ಬಹುನಿರೀಕ್ಷಿತ ಹಾಗೂ ತಮ್ಮ 50 ನೇ ಚಿತ್ರವಾಗಿರುವ ಕುರುಕ್ಶೇತ್ರ ಸೆಟ್ಟೇರಲು ಸಜ್ಜಾಗುತ್ತಿದೆ.

ಹೌದು ಕಳೆದ ವಾರ ಬಿಡುಗಡೆಯಾಗಿರುವ ಬಹುತಾರಾಗಣದ ಹ್ಯಾಪಿ ನ್ಯೂ ಇಯರ್ ಚಿತ್ರ ಉತ್ತಮ ಪ್ರಶಂಸೆ ಪಡೆಯುತ್ತಿದೆ. ಚಿತ್ರ ನೋಡಿರುವ ಪ್ರೇಕ್ಷಕರು ಚಿತ್ರದ ಬಗ್ಗೆ ಉತ್ತಮ ವಿಮರ್ಶೆ ನೀಡುತ್ತಿದ್ದಾರೆ.

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಮುನ್ನಡೆಸಿ ಸೈ ಎನಿಸಿಕೊಂಡಿದ್ದ ಕಿಚ್ಚ ಸುದೀಪ್ ಗೆ ಈಗ ಕ್ರಿಕೆಟ್ ಕಾಶಿ ಎಂದೇ ಖ್ಯಾತಿ ಪಡೆದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಭಾಗಿಯಾಗುವಂತೆ ಆಹ್ವಾನ ಬಂದಿದೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ’ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದ ಬಗ್ಗೆ ಬಹು ದೊಡ್ಡ ಅಪವಾದವಿತ್ತು, ಏನೆಂದರೆ ಕನ್ನಡ ಚಿತ್ರರಂಗದ ಸ್ಟಾರ್ ಗಳು ಮಾತ್ರ ’ಸಾಧಕರು’. ’ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದ ಸಾಧಕರ ಸೀಟು ಕೇವಲ ’ಬಣ್ಣ ಹಚ್ಚುವವರಿಗೆ’ ಮಾತ್ರ ಸೀಮಿತ ಎನ್ನುವುದು.

ತಮಿಳುನಾಡಿನ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ರೂಪದರ್ಶಿ ಹಾಗೂ ಕನ್ನಡದ ಕಿರುತೆರೆ ನಟಿಯಾಗಿರುವ ರೇಖಾ ಸಿಂಧು ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

'ಕಿಚ್ಚ ಸುದೀಪ್ ಮತ್ತು ರಕ್ಷಿತ್ ಶೆಟ್ಟಿ ಕಾಂಬಿನೇಷನ್ ನಲ್ಲಿ ಬರಬೇಕಿದ್ದ ಚಿತ್ರ ’ಥಗ್ಸ್ ಆಫ್ ಮಾಲ್ಗುಡಿ ಡೇಸ್’ಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಈ ವಿಷಯವನ್ನು ಸ್ವತ: ಸುದೀಪ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.

ಮುಂಗಾರು ಮಳೆ ಚಿತ್ರದ ನಂತರ ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಷನ್ ನಲ್ಲಿ ಬಂದ ಚಿತ್ರವೇ ’ಗಾಳಿಪಟ’. ಈ ಚಿತ್ರವೂ ಶತದಿನ ಪ್ರದರ್ಶನವನ್ನು ಕಂಡಿತ್ತು. ಇದೀಗ ಇದೇ ಜೋಡಿ ಮತ್ತೆ ಒಂದಾಗುತ್ತಿದ್ದಾರೆ. ಗಾಳಿಪಟ ಚಿತ್ರದ ಸೀಕ್ವಲ್ ನಲ್ಲಿ ಭಟ್-ಗಣಿ ಜೋಡಿ ಒಂದಾಗುತ್ತಿದ್ದು ಮತ್ತೊಂದು ಸೂಪರ್ ಹಿಟ್ ಚಿತ್ರದ ನಿರೀಕ್ಷೆಯಲ್ಲಿದೆ ಗಾಂಧಿನಗರ.

ದುನಿಯಾ ವಿಜಯ್ ಮುಖ್ಯಬೂಮಿಕೆಯಲ್ಲಿರುವ ಬಹುನಿರೀಕ್ಷಿತ ಚಿತ್ರ ’ಮಾಸ್ತಿ ಗುಡಿ’ ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಚಿತ್ರ ಇದೇ ತಿಂಗಳ 12 ರಂದು ಬಿಡುಗಡೆಯಾಗಲಿದೆ.

ಕಳೆದ ಬಜೆಟ್ ನಲ್ಲಿ ಸಿದ್ದರಾಮಯ್ಯ ಅವರು ಮಲ್ಟಿಫ್ಲೆಕ್ಸ್ ಗಳಲ್ಲಿ ದುಬಾರಿ ಬೆಲೆಯನ್ನು ನಿಗದಿಪಡಿಸಲಾಗುತ್ತಿದ್ದು ಇನ್ನುಂದೆ ಎಲ್ಲಾ ಮಲ್ಟಿಫ್ಲೆಕ್ಸ್ ಗಳ ಟಿಕೆಟ್ ದರ 200 ರೂಪಾಯಿಗೆ ಮಿತಿಗೊಳಿಸುವುದಾಗಿ ಹೇಳಿದ್ದರು. ಈ ಬಗ್ಗೆ ಹೊದ ಆದೇಶ ಪ್ರತಿ ಹೊರಡಿಸಿರುವ ಕರ್ನಾಟಕ ಸರಕಾರ ಆ ಪತ್ರದಲ್ಲೇನಿದೆ ಎಂದು ನೋಡೋಣ ಬನ್ನಿ.

"ಹೇಳುವುದು ಒಂದು ಮಾಡುವುದು ಇನ್ನೊಂದು" ಎಂದು ಅಣ್ಣಾವ್ರ ಕಂಠಸಿರಿಯಲ್ಲಿ ಮೂಡಿಬಂದ ಹಾಡಿನ ಸಾಲು ಈ ಸಂಧರ್ಬಕ್ಕೆ ಸೂಕ್ತವಾಗಿದೆಂದನಿಸುತ್ತಿದೆ. ಕೆಳ ದಿನಗಳ ಹಿಂದೆ ಬಾಹುಬಲಿ ವಿರುದ್ಧ ತಿರುಗಿಬಿದ್ದು , ’ಬಾಹುಬಲಿ ಚಿತ್ರ ಕರ್ನಾಟಕದಲ್ಲಿ ಬ್ಯಾನ್ ಆಗಬೇಕು’ , ’ನಾವು ಕನ್ನಡಪರ, ಕನ್ನಡವೇ ಉಸಿರು, ಕನ್ನಡ ಸಿನಿಮಾಕ್ಕೆ ಪ್ರಥಮ ಪ್ರಾಶಸ್ತ್ಯ’ ಎಂಬ ಕೆಲ ಬುದ್ಧಿ ಜೀವಿಗಳ ವಿಚಾರಗಳು ಕೇವಲ ತೋರ್ಪಡಿಕೆಗಾಗಿ ತಮ್ಮ ಫೇಸ್ ಬುಕ್ ಪೋಸ್ಟ್ ಹಾಗೂ ವಾಟ್ಸ್ಯಪ್ ಸ್ಟೇಟಸ್ ಗೆ ಮಾತ್ರ ಸೀಮಿತವಾಯಿತೇ..? ಈ ಪ್ರಶ್ನೆ ಮೂಡಲು ಕಾರಣ ಸಿಂಗಲ್ ಸ್ಕ್ರ್‍ಈನ್ ನಲ್ಲಿ ಬಾಹುಬಲಿ ಬುಕಿಂಗ್ಸ್ ಮತ್ತು ಬಾಹುಬಲಿ ಚಿತ್ರ ಬಿಡುಗಡೆಗಾಗಿ ಪ್ರದರ್ಶಕರು ತೋರಿಸುತ್ತಿರುವ ಆಸಕ್ತಿ.

ಕನ್ನಡ ಚಿತ್ರಂಗದ ಮೇರು ನಟ ಕನ್ನಡದ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ 89ನೇ ಹುಟ್ಟುಹಬ್ಬಕ್ಕೆ ಖ್ಯಾತ ಸರ್ಚ್ ಎಂಜಿನ್ ಗೂಗಲ್ ವಿಶೇಷ ಡೂಡಲ್ ಅನ್ನು ತನ್ನ ಮುಖಪುಟದಲ್ಲಿ ಹಾಕುವ ಮೂಲಕ ಗೌರವ ಸೂಚಿಸಿದೆ.

ಪಿ.ಸಿ ಶೇಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ರಾಗ ಚಿತ್ರ ಇಂದು ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಟ್ರೈಲರ್ ಮೂಲಕ ಬಹಳಷ್ಟು ಸದ್ದು ಮಾಡಿರುವ ’ರಾಗ’ ಚಿತ್ರದಲ್ಲಿ ನಟ ಮಿತ್ರ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಕಾವೇರಿ ವಿಷಯದಲ್ಲಿ 9 ವರ್ಷಗಳ ಹಿಂದೆ ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಕನ್ನಡಿಗರ ವಿರೋಧಕ್ಕೆ ಗುರಿಯಾಗಿದ್ದ ತಮಿಳು ನಟ ಸತ್ಯರಾಜ್ ಕೊನೆಗೂ ಕನ್ನಡಿಗರ ಹೋರಾಟಕ್ಕೆ ತಲೆಬಾಗಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ “ಹೆಬ್ಬುಲಿ” :

ಅದ್ದೂರಿ ಚಿತ್ರ ‘ಹೆಬ್ಬುಲಿ’ ಕಳೆದ ವಾರವಷ್ಟೇ ಭರ್ಜರಿಯಾಗಿ ದೇಶಾದ್ಯಂತ ರಿಲೀಸ್ ಆಗಿದ್ದು, ಗೊತ್ತೆ ಇದೆ. ಈ ಸಿನಿಮಾವಿಗ ಬಾಕ್ಸ್ ಆಫಿಸ್ ಕೊಳ್ಳೆ ಹೊಡೆಯುತ್ತಿದ್ದು ಇದರನ್ವಯ ತಂಡವು ಮಾಧ್ಯಮ ಮಿತ್ರರಿಗೆ ಸಂತೋಷಕೂಟವನ್ನು ಏರ್ಪಡಿಸಿತ್ತು.

2017 has witnessed a great beginning for Sandalwood with many content based flicks and Commercial entertainers making its mark at Box Office winning Audience hearts. A pure example of this resounding success is the fact that #Dwarakish Chitra banner’s 50th flick ‘CHOWKA’ is all set to complete Super-hit 50 Days run this week allover Karnataka.

ಬಿಡುಗಡೆಗೆ ಸಿದ್ಧವಾಗಿರುವ ಬಾಹುಬಲಿ ಚಿತ್ರಕ್ಕೆ ಬಹುದೊಡ್ಡ ವಿಘ್ನ ಎದುರಾಗಿದೆ. ಬಾಹುಬಲಿ ಚಿತ್ರದ ಕಟ್ಟಪ್ಪ ಪಾತ್ರಧಾರಿ ನಟ ಸತ್ಯರಾಜ್ ಕನ್ನಡಿಗರ ಭಾವನೆಗೆ ಧಕ್ಕೆ ತಂದಿದ್ದಾರೆ. ಸತ್ಯರಾಜ್ ಕ್ಷಮೆ ಕೇಳುವವರೆಗೂ ರಾಜ್ಯದಲ್ಲಿ ಬಾಹುಬಲಿ 2 ಬಿಡುಗಡೆಗೆ ಅವಕಾಶ ಕೊಡಲ್ಲ ಎಂದು ಪಟ್ಟು ಹಿಡಿದಿರುವ ಕನ್ನಡ ಪರ ಸಂಘಟನೆಗಳು ಏಪ್ರಿಲ್ 28ರಂದು ಕರ್ನಾಟಕ ಬಂದ್ ಮಾಡುವುದಾಗಿ ಗುಡುಗಿವೆ.

  •  Start 
  •  Prev 
  •  1  2 
  •  Next 
  •  End 
Page 1 of 2

ad3

ad6

Web GIF pran

K.G.F ಚಿತ್ರದ ಫಸ್ಟ್ ಲುಕ್ ಹೇಗಿದೆ?
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top