mugulu

ad dkd

adweb

raj vishnu

ಚಂದನವನದ ಭಾರಿ ಬಜೆಟ್ ಚಿತ್ರವಾಗಲಿದೆ ದರ್ಶನ್ ’ಕುರುಕ್ಷೇತ್ರ’

ಪರಭಾಷಾ ಚಿತ್ರರಂಗಗಳು ಪೌರಾಣಿಕ ಚಿತ್ರಗಳ ಬೆನ್ನು ಬಿದ್ದಿರುವ ಜೊತೆಯಲ್ಲೇ ಸ್ಯಾಂಡಲ್ ವುಡ್ ನಲ್ಲು ಪೌರಾಣಿಕ ಚಿತ್ರವೊಂದು ಸೆಟ್ಟೇರಲು ಸಿದ್ಧವಾಗುತ್ತಿದೆ.

 

ಭಾಷಾ ಬರೆದಿರುವ ’ಮಹಾಭಾರತ’ ದ ಕಥೆಯನ್ನು ಮೂಲವಾಗಿರಿಸಿಕೊಂಡು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದಲ್ಲಿ ಮೂಡಿಬರುತ್ತಿರುವ ಚಿತ್ರವೇ ’ಕುರುಕ್ಷೇತ್ರ’. ಇದು ದರ್ಶನ್ ಅವರ ೫೦ನೇ ಚಿತ್ರವಾಗಿ ಮೂಡಿ ಬರಲಿದೆ.

ಮುನಿರತ್ನ ನಿರ್ಮಿಸುತ್ತಿರುವ ಈ ಸಿನೆಮಾವನ್ನು ನಾಗಣ್ಣ ನಿರ್ದೇಶಿಸಲಿದ್ದಾರೆ. ಅವರು ಈ ಹಿಂದೆ ದರ್ಶನ್ ನಟಿಸಿದ್ದ ’ಕ್ರಾಂತಿವೀರ ಸಂಗೊಳ್ಳಿರಾಯಣ್ಣ’ ಕೂಡ ನಿರ್ದೇಶಿಸಿದ್ದರು ಮತ್ತು ಇದು ಬ್ಲಾಕ್ ಬಸ್ಟರ್ ಚಿತ್ರವಾಗಿ ಹೊರಹೊಮ್ಮಿತ್ತು. ಈಗ ದರ್ಶನ್ ಇದಕ್ಕೆ ಒಪ್ಪಿಗೆ ಸೂಚಿಸಿದ್ದು, ಎಲ್ಲಾ ಅಂದುಕೊಂಡಂತೆ ಆದರೆ ಮುನಿರತ್ನ ಅವರ ಹುಟ್ಟುಹಬ್ಬದ ದಿನವಾದ ಜುಲೈ 23 ಕ್ಕೆ ಚಿತ್ರ ಸೆಟ್ಟೇರಲಿದೆ.


ಚಿತ್ರದ ಮುಖ್ಯ ಪಾತ್ರವಾಗಿರುವ ದುರ್ಯೋದನನ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ಮಿಂಚು ಹರಿಸಲಿದ್ದಾರೆ. ಈ ಚಿತ್ರದ ಕಥೆಯು ದುರ್ಯೋಧನನ ಪಾತ್ರದ ಮೇಲೆ ಬೆಳಕು ಚೆಲ್ಲುವುದರಿಂದ ಚಿತ್ರಕ್ಕೆ ದುರ್ಯೋಧನನೇ ನಾಯಕನಾಗಿರುತ್ತಾನೆ ಎನ್ನುತ್ತಾರೆ ಮುನಿರತ್ನ. ಯಾವುದೇ ಬಜೆಟ್ ಮಿತಿಯಿಲ್ಲದೆ ಚಿತ್ರ ಮೂಡಿಬರಲಿದೆ. ಸ್ಯಾಂಡಲ್ವುಡ್ ನ ಪಾಲಿಗೆ ಅತೀ ದುಬಾರಿ ಬಜೆಟ್ ನ ಚಿತ್ರವಾಗಲಿದ್ದು, ಸ್ಯಾಂಡಲ್ವುಡ್ ನ ದೊಡ್ಡ ತಾರಾಬಳಗವೇ ಚಿತ್ರದಲ್ಲಿರಲ್ಲಿದೆ ಎಂದರು.

Rate this item
(0 votes)
Login to post comments

bharjari

ad free

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top