johny running

Running succ

adweb

anigif seizer

ದಾಖಲೆಗಳ ಮೇಲೆ ದಾಖಲೆ ಬರೆದ ಚಕ್ರವರ್ತಿ , ಕಲೆಕ್ಷನ್ ನಲ್ಲೂ ದಾಖಲೆ ಬರೆತಾನಾ..??

ಸ್ಯಾಂಡಲ್‌ವುಡ್ ನಲ್ಲಿ ಸಧ್ಯ ಬಹಳಷ್ಟು ಸುದ್ದಿ ಮಾಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ ’ಚಕ್ರವರ್ತಿ’ ನಾಳೆ ರಾಜ್ಯಾದಾದ್ಯಂತ ಬಿಡುಗಡೆಯಾಗುತ್ತಿದೆ.


ಟ್ರೈಲರ್, ಹಾಡು, ಸ್ಯಾಟಲೈಟ್ ರೈಟ್ಸ್, ಪ್ರದರ್ಶನ ಹೀಗೆ ಬಹುತೇಕ ಎಲ್ಲಾ ವಿಭಾಗಳಲ್ಲೂ ದಾಖಲೆ ಬರೆಯುತ್ತಾ ಬಂದಿರುವ ಚಕ್ರವರ್ತಿ ಈಗ 450 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಕಿಚ್ಚ ಸುದೀಪ್ ಅಭಿನಯದ ಈ ಹಿಂದಿನ ’ಹೆಬ್ಬುಲಿ’ ಚಿತ್ರ 350ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿ ದಾಖಲೆ ಬರೆದಿತ್ತು.
ಸಾಕಷ್ಟು ಕುತೂಹಲ ಮೂಡಿಸಿರುವ ಚಕ್ರವರ್ತಿ ಗಲ್ಲಾಪೆಟ್ಟಿಗೆಯಲ್ಲೂ ದಾಖಲೆ ಬರೆಯಲು ಸಜ್ಜಾಗಿದ್ದಾನೆ. ಚಿತ್ರವು ಕರ್ನಾಟಕದಲ್ಲಷ್ಟೇ ಅಲ್ಲದೆ ಮಹಾರಾಷ್ಟ್ರ, ಗುಜರಾತ್ , ಉತ್ತರ ಪ್ರದೇಶ , ದೆಹಲಿ, ಚೆನ್ನೈ, ಆಂದ್ರ ಪ್ರದೇಶ, ಕೇರಳ ಸೇರಿದಂತೆ ದೇಶದಾದ್ಯಂತ ಬಿಡುಗಡೆಯಾಗಲಿದೆ. ವಿಶೇಷವೆಂದರೆ ಹಲವಾರು ಚಿತ್ರಂದಿರಗಳಲ್ಲಿ ಇಂದು ಮಧ್ಯ ರಾತ್ರಿ ೧೨ ಗಂಟೆಯಿಂದಲೇ ಚಿತ್ರ ಪ್ರದರ್ಶನ ಪ್ರಾರಂಭವಾಗಲಿರುವುದು. ಇದು ಕೂಡ ಸ್ಯಾಂಡಲ್‌ವುಡ್ ನಲ್ಲಿ ಹೊಸ ದಾಖಲೆಯೇ ಸರಿ.


ಮಲ್ಟಿಪ್ಲೆಕ್ಸ್ ಗಳಲ್ಲೂ ಚಿತ್ರದ ಬುಕಿಂಗ್ ಗೆ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿರುವುದಷ್ಟೆ ಅಲ್ಲದೆ ಈಗಾಗಲೆ ಬುಕ್ ಮೈ ಶೋ ನಲ್ಲಿ ಬಿಡುಗಡೆಗೂ ಮುನ್ನ 35000 ಟಿಕೆಟ್ ಬುಕ್ ಆಗುವ ಮೂಲಕ ಹೊಸ ದಾಖಲೆಯೊಂದನ್ನು ಬರೆದಿದೆ. ಈ ಹಿಂದೆ ಬಂದಿರುವ ಕಿರಿಕ್ ಪಾರ್ಟಿ ಚಿತ್ರದ 27000 ಟಿಕೆಟ್ ಬಿಕರಿಯಾಗಿದ್ದು ಈ ಹಿಂದಿನ ದಾಖಲೆಯಾಗಿದ್ದು.
ಹೀಗೆ ಹಲವಾರು ದಾಖಲೆಗಳನ್ನು ಬರೆಯುತ್ತಾ ಹೊಸ ಭಾಷ್ಯ ಬರೆಯುತ್ತಿರುವ ಚಕ್ರವರ್ತಿಯ ಓಟ ನಾಳೆ ಪ್ರಾರಂಭವಾಗಲಿದೆ. ಬಾಕ್ಸ್ ಆಫೀಸ್ ನಲ್ಲಿ ಚಿತ್ರ ಯಾವ ರೀತಿ ಸದ್ದು ಮಾಡಲಿದೆ ಎಂದು ಕಾದು ನೋಡಬೇಕಾಗಿದೆ.

Rate this item
(0 votes)
Login to post comments

hucch runnin

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top