Kannada Movie Database

See other templatesSee other templates

ad1

ad4

ad2

ad5

ಬಾಹುಬಲಿಗೆ ಸಂಕಷ್ಟ : ಎಪ್ರಿಲ್ 28ರಂದು ಕರ್ನಾಟಕ ಬಂದ್

ಬಿಡುಗಡೆಗೆ ಸಿದ್ಧವಾಗಿರುವ ಬಾಹುಬಲಿ ಚಿತ್ರಕ್ಕೆ ಬಹುದೊಡ್ಡ ವಿಘ್ನ ಎದುರಾಗಿದೆ. ಬಾಹುಬಲಿ ಚಿತ್ರದ ಕಟ್ಟಪ್ಪ ಪಾತ್ರಧಾರಿ ನಟ ಸತ್ಯರಾಜ್ ಕನ್ನಡಿಗರ ಭಾವನೆಗೆ ಧಕ್ಕೆ ತಂದಿದ್ದಾರೆ. ಸತ್ಯರಾಜ್ ಕ್ಷಮೆ ಕೇಳುವವರೆಗೂ ರಾಜ್ಯದಲ್ಲಿ ಬಾಹುಬಲಿ 2 ಬಿಡುಗಡೆಗೆ ಅವಕಾಶ ಕೊಡಲ್ಲ ಎಂದು ಪಟ್ಟು ಹಿಡಿದಿರುವ ಕನ್ನಡ ಪರ ಸಂಘಟನೆಗಳು ಏಪ್ರಿಲ್ 28ರಂದು ಕರ್ನಾಟಕ ಬಂದ್ ಮಾಡುವುದಾಗಿ ಗುಡುಗಿವೆ.

 

ಬುಧವಾರ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ವಾಟಾಳ್ ನಾಗರಾಜ್, ನಟ ಸತ್ಯರಾಜ್ ಹುಚ್ಚನ ರೀತಿ ಮಾತನಾಡಿದ್ದು ಕರ್ನಾಟಕ ಹಾಗೂ ಡಾ| ರಾಜ್ ಕುಮಾರ್ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಸತ್ಯರಾಜ್ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು. ಏಪ್ರಿಲ್ 28ರಂದು ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ರ್‍ಯಾಲಿ ನಡೆಸಲಾಗುವುದು ಎಂದು ವಾಟಾಳ್ ಎಚ್ಚರಿಸಿದರು.

ಬಾಹುಬಲಿ ಚಿತ್ರದ ನಿರ್ಮಾಪಕರೇ ವಿತರಣೆ ಮಾಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ವಿತರಣೆ ಹಕ್ಕು ಇದುವರೆಗೂ ಯಾರೂ ತೆಗೆದುಕೊಂಡಿಲ್ಲ. ಅದಕ್ಕಾಗಿ ವಿತರಕರಿಗೆ ಧನ್ಯವಾದ ತಿಳಿಸುವುದಾಗಿ ಸಾರಾ ಗೋವಿಂದು ಹೇಳಿದರು.
ಒಟ್ಟಿನಲ್ಲಿ ಬಾಹುಬಲಿ 2 ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗಲು ಬಹುದೊಡ್ಡ ಸವಾಲು ಎದುರಾಗಿದೆ. ಈ ಸಂಬಂಧ ಪ್ರದರ್ಶಕರು ಬಾಹುಬಲಿ ಚಿತ್ರ ಪ್ರದರ್ಶಿಸಲು ಹಿಂದೇಟು ಹಾಕುತ್ತಿರುವುದು ಸುಳ್ಳಲ್ಲ. ಒಂದು ವೇಳೆ ಕರ್ನಾಟಕದಲ್ಲಿ ಬಾಹುಬಲಿ-2 ಬಿಡುಗಡೆಯಾಗದೇ ಹೋದಲ್ಲಿ ನಿರ್ಮಾಪಕರಿಗೆ ಲಾಭದಲ್ಲೂ ನಷ್ಟವಾಗುವುದಂತೂ ನಿಜ.

Rate this item
(0 votes)
Login to post comments

ad3

ad6

Web GIF pran

K.G.F ಚಿತ್ರದ ಫಸ್ಟ್ ಲುಕ್ ಹೇಗಿದೆ?
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top