johny running

Running succ

adweb

anigif seizer

KICCHA SUDEEP'S 'HEBBULI' LOOTING BOX OFFICE

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ “ಹೆಬ್ಬುಲಿ” :

ಅದ್ದೂರಿ ಚಿತ್ರ ‘ಹೆಬ್ಬುಲಿ’ ಕಳೆದ ವಾರವಷ್ಟೇ ಭರ್ಜರಿಯಾಗಿ ದೇಶಾದ್ಯಂತ ರಿಲೀಸ್ ಆಗಿದ್ದು, ಗೊತ್ತೆ ಇದೆ. ಈ ಸಿನಿಮಾವಿಗ ಬಾಕ್ಸ್ ಆಫಿಸ್ ಕೊಳ್ಳೆ ಹೊಡೆಯುತ್ತಿದ್ದು ಇದರನ್ವಯ ತಂಡವು ಮಾಧ್ಯಮ ಮಿತ್ರರಿಗೆ ಸಂತೋಷಕೂಟವನ್ನು ಏರ್ಪಡಿಸಿತ್ತು.

 

"ಬಿಡುಗಡೆಯಾದ ನಾಲ್ಕು ದಿನಗಳಲ್ಲೇ 23 ರಿಂದ 25 ಕೋಟಿ ಗಳಿಕೆ ಮಾಡಿದೆ. ಮೊದಲ ವಾರದ ಕಲೇಕ್ಷನ್ 30 ರಿಂದ 32 ಕೋಟಿ ಆಗಬಹುದು. ಇಷ್ಟು ದೊಡ್ಡ ಮಟ್ಟದ ಓಪನಿಂಗ್ ನಾವು ನಿರೀಕ್ಷೆ ಮಾಡಿರಲಿಲ್ಲ, ಕನ್ನಡ ಚಿತ್ರರಂಗದಲ್ಲಿ ‘ಹೆಬ್ಬುಲಿ’ ಹೊಸ ದಾಖಲೆ ಬರೆದಿದೆ, ಅದರಲ್ಲಿ ಎರಡು ಮಾತಿಲ್ಲ" ಎಂದು ವಿತರಕ ಜಾಕ್ ಮಂಜು ತಿಳಿಸಿದರು.

‘ಇದು ಕೇವಲ ಕೃತಜ್ಞತಾ ಪೂರ್ವ ಗೋಷ್ಟಿ ಅಂತ ಹೇಳಬಹುದು. ಕರ್ನಾಟಕ ಜನತೆ, ಮಾಧ್ಯಮದವರು ನೀಡಿದ ಪ್ರೋತ್ಸಾಹ ಚಿತ್ರವು ಈ ಪಾಠಿ ಎಲ್ಲರಿಗೂ ತಲುಪಿದೆ. ಕನ್ನಡ ಚಿತ್ರಗಳು ಗೆಲ್ಲಬೇಕು. ಮತ್ತೋಮ್ಮೆ ಥ್ಯಾಂಕ್ಸ್’ ಎಂದರು ನಿರ್ಮಾಪಕ ರಘುನಾಥ್.

ಇದೊಂದು ಔಪಚಾರಿಕ ಭೇಟಿ ಎನ್ನಬಹುದು. ಸಕ್ಸಸ್ ಮೀಟ್ ಮಾಡಲು ಇನ್ನು ಕಾಲವಕಾಶ ಇದೆ. ನಿಮಗೆಲ್ಲಾ ಧನ್ಯವಾದಗಳು ಎನ್ನುತ್ತಾರೆ ಮತ್ತೋಬ್ಬ ನಿರ್ಮಾಪಕರಾದ ಉಮಾಪತಿ. ಟೈಟಲ್ ಲಾಂಚ್ ಆದಾಗಿ ನಿಂದಲೂ ಇಲ್ಲಿಯವರೆಗೂ ಸುದ್ದಿಯನ್ನು ಎಲ್ಲರಿಗೂ ತಲುಪಿಸಿದ್ದೀರಾ. ಛಾಯಗ್ರಾಹಕನಾಗಿ ನಂತರ ಮೊದಲಬಾರಿ ಗಜಕೇಸರಿ ನಿರ್ದೇಶನ ಮಾಡಿದಾಗ ಬೆಂಬಲ ನೀಡಿದಂತೆ, ಹೆಬ್ಬುಲಿ ಗೆಲುವುನಿಂದ ಹುರುಪು ಬಂದಿದೆ. ಇದೇ ರೀತಿ ಮುಂದೆಯೂ ಬೆಂಬಲ ಕೊಡಿ ಅಂತ ಅವಲತ್ತು ಮಾಡಿಕೊಂಡರು ನಿರ್ದೇಶಕ ಕೃಷ್ಣ.

ಎಲ್ಲರ ನಂತರ ಮಾತು ಶುರು ಮಾಡಿದ ಕಿಚ್ಚ ಸುದೀಪ್ ‘ಬುಧವಾರ ಮಧ್ಯರಾತ್ರಿ, ಗುರುವಾರ ಬೆಳಗಿನ ಜಾವ ಜನರು ಚಿತ್ರ ನೋಡಲು ಬಂದಿದ್ದು ಖುಷಿ ತಂದಿದೆ. ಈ ರೀತಿ ಚಿತ್ರಕ್ಕೆ ಪ್ರತಿಫಲ ಸಿಗುತ್ತದೆಂದು ಅಂದುಕೊಂಡಿರಲಿಲ್ಲ. ಒಳ್ಳೆ ವಿಮರ್ಶೆ ಬಂದಿರುವುದು ಪ್ಲಸ್ ಪಾಯಿಂಟ್ ಆಗಿದೆ. ಇದಕ್ಕೆ ಮಾಧ್ಯಮದವರಿಗೆ ಥ್ಯಾಂಕ್ಸ್ ಹೇಳಲೇ ಬೇಕು. ಅದರ ಪ್ರತಿಗಳನ್ನು ದಾಖಲು ಮಾಡಿಕೊಳ್ಳುತ್ತಿದ್ದೇನೆ. ನಿರ್ಮಾಪಕರು ಖುಷಿಯಾಗಿದ್ದಾರೆ. ಇನ್ನೇನು ಬೇಕು. ಚಿತ್ರದಿಂದ ಕಲಿತದ್ದು ಸಾಕಷ್ಟು ಇದೆ. ನಿರ್ದೇಶಕ, ನಿರ್ಮಾಪಕರು ಸಂತಸದಿಂದ ಇರುವುದರಿಂದ ನನಗೂ ಅದೇ ಆಗಿದೆ. ಗಳಿಕೆಯನ್ನು ದೊಡ್ಡದಾಗಿ ತೋರಿಸಿ, ನಂಬಿಕೆ ಉಳಿಸಿಕೊಳ್ಳುವುದು ಎರಡು ಬೇಡ. ದೊಡ್ಡವರು ಬಂದರು, ಹೋದರು. ನಿರ್ಮಾಪಕರು ವಿದೇಶಿ ಪ್ರೇಕ್ಷಕರನ್ನು ಭೇಟಿ ಮಾಡಿಸುವ ಸಲುವಾಗಿ ದುಬೈ, ಲಂಡನ್ ದೇಶಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಪ್ರಚಾರದ ಸಲುವಾಗಿ ರಾಜ್ಯಾದಂತ ರೋಡ್‍ಶೋ ಹೋಗುವ ಇರಾದೆ ಇದೆ’ ಎಂದು ಮಾತಿಗೆ ವಿರಾಮ ಹಾಕಿದರು.

#Hebbuli#Cineloka

Rate this item
(0 votes)
Login to post comments

hucch runnin

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top