chamak running success

anigif

adweb

raju

'ರಾಗಾ' ರಾಜ್ಯಾದಾದ್ಯಂತ ಇಂದು ತೆರೆಗೆ.

ಪಿ.ಸಿ ಶೇಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ರಾಗ ಚಿತ್ರ ಇಂದು ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಟ್ರೈಲರ್ ಮೂಲಕ ಬಹಳಷ್ಟು ಸದ್ದು ಮಾಡಿರುವ ’ರಾಗ’ ಚಿತ್ರದಲ್ಲಿ ನಟ ಮಿತ್ರ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

 

ಎರಡು ಅಂಧ ಪ್ರೇಮಿಗಳ ಕಥಾಹಂದರವಿರುವ ರಾಗ ಚಿತ್ರದಲ್ಲಿ ಮಿತ್ರಗೆ ನಾಯಕಿಯಾಗಿ ಮಲ್ಲು ಬೆಡಗಿ ಭಾಮಾ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ಇಂತಹ ಚಾಲೆಂಜಿಂಗ್ ಪಾತ್ರವನ್ನು ನಿರ್ವಹಿಸಿರುವ ಬಗ್ಗೆ ಖುಷಿ ವ್ಯಕ್ತಪಡಿಸುವ ಮಿತ್ರ ಚಿತ್ರದ ಮೇಲೆ ಬಹಳಷ್ಟು ನಿರೀಕ್ಷೆ ಇದ್ದು ಈ ನಿರೀಕ್ಷೆಯನ್ನು ಹುಸಿ ಮಾಡುವುದಿಲ್ಲ ಎಂದರು.
ಸ್ವತ: ಮಿತ್ರ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ. ಮುಖ್ಯ ಚಿತ್ರ ಮಂದಿರ ಕಾಪಾಲಿ ಸೇರಿದಂತೆ 50ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಚಿತ್ರ ತೆರೆಕಾಣುತ್ತಿದೆ.

Rate this item
(0 votes)
Login to post comments

anjani running

anigif tagaru

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top