mugulu

ad dkd

adweb

raj vishnu

ಡಾ|| ರಾಜ್ 89ನೇ ಹುಟ್ಟುಹಬ್ಬ ಕ್ಕೆ ಗೂಗಲ್ ತನ್ನ ಡೂಡಲ್ ಮೂಲಕ ಗೌರವ

ಕನ್ನಡ ಚಿತ್ರಂಗದ ಮೇರು ನಟ ಕನ್ನಡದ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ 89ನೇ ಹುಟ್ಟುಹಬ್ಬಕ್ಕೆ ಖ್ಯಾತ ಸರ್ಚ್ ಎಂಜಿನ್ ಗೂಗಲ್ ವಿಶೇಷ ಡೂಡಲ್ ಅನ್ನು ತನ್ನ ಮುಖಪುಟದಲ್ಲಿ ಹಾಕುವ ಮೂಲಕ ಗೌರವ ಸೂಚಿಸಿದೆ.

 

ಏಪ್ರಿಲ್ 24 1929ರಲ್ಲಿ ಜನಿಸಿದ್ದ ಡಾ.ರಾಜ್ ಕುಮಾರ್ ಅವರು ತಮ್ಮ ಅಮೋಘ ಅಭಿನಯದ ಹಾಗೂ ತಮ್ಮ ಕಂಠಸಿರಿಯ ಮೂಲಕ ಇಡೀ ಭಾರತೀಯ ಚಿತ್ರರಂಗವನ್ನು ಆಳಿದ್ದರು. ಇಂತಹ ಮೇರು ನಟನಿಗೆ ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಕೆ ಮಾಡಿದ್ದು, ತೈಲವರ್ಣದಲ್ಲಿ ರಚಿಸಿರುವಂತೆ ಕಾಣುವ ಡಾ. ರಾಜ್ ಕುಮಾರ್ ಅವರ ಭಾವಚಿತ್ರವನ್ನು ಡೂಡಲ್ ನಲ್ಲಿ ಉಪಯೋಗಿಸಲಾಗಿದೆ. ಚಿತ್ರ ಮಂದಿರದ ತೆರೆಯ ಮೇಲೆ ಡಾ. ರಾಜ್ ಕುಮಾರ್ ಅವರ ನಗುಮೊಗ ಕಂಗೊಳಿಸುತ್ತಿರುವಂತೆ ಡೂಡಲ್ ರಚಿಸಲಾಗಿದ್ದು, ಅದನ್ನು ನೂರಾರು ಪ್ರೇಕ್ಷಕರು ನೋಡುತ್ತಿರುವಂತೆ ಬಿಂಬಿಸಲಾಗಿದೆ. ಡೂಡಲ್ ಹಿಂಭಾಗದಲ್ಲಿ ಕಂಡೂ ಕಾಣಿಸದಂತೆ ಗೂಗಲ್ ರಚನೆ ಮಾಡಲಾಗಿದೆ.
ಏಪ್ರಿಲ್ 24ರಂದು ವರನಟ ಡಾ. ರಾಜ್ ಕುಮಾರ್ ಅವರ 88ನೇ ಹುಟ್ಟುಹಬ್ಬವನ್ನು ನಾಡಿನಾದ್ಯಂತ ಹಾಗೂ ವಿಶ್ವದೆಲ್ಲೆಡೆ ಇರುವ ಡಾ. ರಾಜ್ ಅಭಿಮಾನಿಗಳು ಆಚರಿಸುವುದರಿಂದ ಈ ದಿನವನ್ನು ವಿಶೇಷ ದಿನವೆಂದು ಗೂಗಲ್ ಪರಿಗಣಿಸಿದೆ.

Rate this item
(0 votes)
Login to post comments

bharjari

ad free

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top