muf running

anigif

adweb

tora tora runing

ಬಾಹುಬಲಿಗಾಗಿ ಕರ್ನಾಟಕದಲ್ಲಿ 'ರಾಗಾ' ಬಲಿ..? ಇಂದು ಕೊನೆಯ 4 ದೇಖಾವೆ ಗಳು ಮಾತ್ರ..!!

"ಹೇಳುವುದು ಒಂದು ಮಾಡುವುದು ಇನ್ನೊಂದು" ಎಂದು ಅಣ್ಣಾವ್ರ ಕಂಠಸಿರಿಯಲ್ಲಿ ಮೂಡಿಬಂದ ಹಾಡಿನ ಸಾಲು ಈ ಸಂಧರ್ಬಕ್ಕೆ ಸೂಕ್ತವಾಗಿದೆಂದನಿಸುತ್ತಿದೆ. ಕೆಳ ದಿನಗಳ ಹಿಂದೆ ಬಾಹುಬಲಿ ವಿರುದ್ಧ ತಿರುಗಿಬಿದ್ದು , ’ಬಾಹುಬಲಿ ಚಿತ್ರ ಕರ್ನಾಟಕದಲ್ಲಿ ಬ್ಯಾನ್ ಆಗಬೇಕು’ , ’ನಾವು ಕನ್ನಡಪರ, ಕನ್ನಡವೇ ಉಸಿರು, ಕನ್ನಡ ಸಿನಿಮಾಕ್ಕೆ ಪ್ರಥಮ ಪ್ರಾಶಸ್ತ್ಯ’ ಎಂಬ ಕೆಲ ಬುದ್ಧಿ ಜೀವಿಗಳ ವಿಚಾರಗಳು ಕೇವಲ ತೋರ್ಪಡಿಕೆಗಾಗಿ ತಮ್ಮ ಫೇಸ್ ಬುಕ್ ಪೋಸ್ಟ್ ಹಾಗೂ ವಾಟ್ಸ್ಯಪ್ ಸ್ಟೇಟಸ್ ಗೆ ಮಾತ್ರ ಸೀಮಿತವಾಯಿತೇ..? ಈ ಪ್ರಶ್ನೆ ಮೂಡಲು ಕಾರಣ ಸಿಂಗಲ್ ಸ್ಕ್ರ್‍ಈನ್ ನಲ್ಲಿ ಬಾಹುಬಲಿ ಬುಕಿಂಗ್ಸ್ ಮತ್ತು ಬಾಹುಬಲಿ ಚಿತ್ರ ಬಿಡುಗಡೆಗಾಗಿ ಪ್ರದರ್ಶಕರು ತೋರಿಸುತ್ತಿರುವ ಆಸಕ್ತಿ.

 

’ಬಾಹುಬಲಿ’ಗಾಗಿ ಕನ್ನಡಿಗರೇ ಬಲಿ ಕೊಟ್ಟರ ಕನ್ನಡದ ’ರಾಗಾ’..?

ಕಳೆದ ವಾರ ವಷ್ಟೆ ಮಿತ್ರ ನಿರ್ಮಾಣ ಮತ್ತು ಅಭಿನಯದ ’ರಾಗಾ’ ಚಿತ್ರ ರಾಜ್ಯಾದಾದ್ಯಂತ 65 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ದುರದೃಷ್ಟವಶಾತ್ ಚಿತ್ರ ಇಂದು ರಾಜ್ಯದಾದ್ಯಂತ ಕೊನೆಯ ದಿನದ ಪ್ರದರ್ಶನವನ್ನು ಕಾಣುತ್ತಿದೆ. ವೀಕ್ಷಕರು ಹಾಗೂ ವಿಮರ್ಶಕರಿಂದ ಉತ್ತಮ ವಿಮರ್ಶೆ ಪಡೆದ ಹೊರತಾಗಿಯು 2ನೇ ವಾರಕ್ಕೆ ಚಿತ್ರವು ಎಲ್ಲಾ ಚಿತ್ರಮಂದಿರಗಳಿಂದ ಹೊರ ಬೀಳುವ ಸಂಭವವಿದೆ. ಕಾರಣ ಪ್ರದರ್ಶಕರು ಬಾಹುಬಲಿಗೆ ಮಣೆ ಹಾಕುತ್ತಿರುವುದು.

 

ಮಿತ್ರಾ ಆಸ್ಪತ್ರೆಗೆ ದಾಖಲು..!!

ಚಿತ್ರ ಬಹುತೇಕ ಚಿತ್ರಮಂದಿರಗಳಿಂದ ಎತ್ತಂಗಡಿಯಾಗುತ್ತಿದೆ ಅನ್ನುವ ಸುದ್ದಿ ತಿಳಿದ ನಟ , ನಿರ್ಮಾಪಕ ಮಿತ್ರಾ ತೀವ್ರ ಅಸ್ವಸ್ಥರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸಿಕೊಳ್ಳುತಿದ್ದಾರೆ. ಈ ಬಗ್ಗೆ ನಿರ್ದೇಶಕ ಪಿ.ಸಿ ಶೇಖರ್ ಕೂಡ ಫೇಸ್ ಬುಕ್ನಲ್ಲಿ ಚಿತ್ರ ಎತ್ತಂಗಡಿಯಾಗುತ್ತಿರುವದರ ಬಗ್ಗೆ ವೀಡಿಯೋ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

ಬಾಹುಬಲಿಗಾಗಿ ಎದ್ದುಬಿದ್ದು ಟಿಕೆಟ್ ಬುಕ್ ಮಾಡುತ್ತಿರುವ ಸಿನಿ ಅಭಿಮಾನಿಗಳು ರಾಗಾ ಚಿತ್ರದ ಕೊನೆಯ ದಿನ ಪ್ರದರ್ಶನ ನೋಡಿ ಚಿತ್ರವನ್ನು ಬೀಳ್ಕೊಂಡುವಂತೆ ನಿರ್ದೇಶಕರು ಇದೇ ಸಂಧರ್ಭದಲ್ಲಿ ತಿಳಿಸಿದರು.

ಕನ್ನಡ ಪರ, ಕನ್ನಡ ಚಿತ್ರದ ಪರ ಪೋಸ್ಟ್ ಗಳನ್ನು ಹಾಕುತ್ತಿದ್ದ ಕೆಲ ಬುದ್ಧಿ ಜೀವಿಗಳ ಫೇಸ್ ಬುಕ್ ವಾಲ್ ನಲ್ಲಿ ಬಾಹುಬಲಿ ಚಿತ್ರ ವೀಕ್ಷಿಸಿ ಅದರ ಬಗೆಗಿನ ಪೋಸ್ಟ್ ಕಂಡು ಬಂದರು ಅಚ್ಚರಿ ಪಡಬೇಕಾಗಿಲ್ಲ. ಈ ಎಲ್ಲಾ ಬೇಳವಣಿಗೆಗಳನ್ನು ನೋಡುತ್ತಿರುವ ಕನ್ನಡ ಸಿನಿರಸಿಕರು ಬಾಹುಬಲಿಗೆ ಮುಂದೆಯೂ ಬೆಂಬಲ ನೀಡುತ್ತಾರೋ..? ಅಥವಾ ರಾಗಾ ಚಿತ್ರ ಪ್ರದರ್ಶನಕ್ಕಾಗಿ ಪಟ್ಟು ಹಿಡಿಯುತ್ತಾರೋ.. ಎಂದು ಕಾದು ನೋಡಬೇಕು..

Rate this item
(0 votes)
Login to post comments

anjani running

Tagaru Release

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top