chamak running success

anigif

adweb

raju

ಸರಕಾರದ ಟಿಕೆಟ್ ನೀತಿ ’200’ ರ ಮೇಲೆ ಟ್ಯಾಕ್ಸ್ ಬರೆ. ಯಾರ್‍ಯಾರಿಗೆ ಲಾಭ..?

ಕಳೆದ ಬಜೆಟ್ ನಲ್ಲಿ ಸಿದ್ದರಾಮಯ್ಯ ಅವರು ಮಲ್ಟಿಫ್ಲೆಕ್ಸ್ ಗಳಲ್ಲಿ ದುಬಾರಿ ಬೆಲೆಯನ್ನು ನಿಗದಿಪಡಿಸಲಾಗುತ್ತಿದ್ದು ಇನ್ನುಂದೆ ಎಲ್ಲಾ ಮಲ್ಟಿಫ್ಲೆಕ್ಸ್ ಗಳ ಟಿಕೆಟ್ ದರ 200 ರೂಪಾಯಿಗೆ ಮಿತಿಗೊಳಿಸುವುದಾಗಿ ಹೇಳಿದ್ದರು. ಈ ಬಗ್ಗೆ ಹೊದ ಆದೇಶ ಪ್ರತಿ ಹೊರಡಿಸಿರುವ ಕರ್ನಾಟಕ ಸರಕಾರ ಆ ಪತ್ರದಲ್ಲೇನಿದೆ ಎಂದು ನೋಡೋಣ ಬನ್ನಿ.

ರಾಜ್ಯದಲ್ಲಿನ್ನ ಮಲ್ಟಿಪ್ಲೆಕ್ಸ್ ಗಳೂ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಈ ಏಕರೀತಿಯ ಪ್ರವೇಶದರ ನೀತಿ ಜಾರಿಗೊಳಿಸುವಂತೆ ಸರ್ಕಾರ ಆದೆಶಿಸಿರುವ ಈ ನೀತಿಯಲ್ಲಿ ಗೋಲ್ಡ್ ಕ್ಲಾಸ್ ಸ್ಕ್ರೀನ್ ಹಾಗೂ ಗೋಲ್ಡ್ ಕ್ಲಾಸ್ ಸೀಟ್ ಗಳಿಗೆ ಈ ನೀತಿಯು ಅನ್ವಯಿಸುವುದಿಲ್ಲ. ಬಹುತೇಕ ಎಲ್ಲಾ ಮಲ್ಟಿಪ್ಲೆಕ್ಸ್ ಗಳ 2-3 ಸ್ಕ್ರೀನ್ ಗಳು ಗೋಲ್ಡ್ ಕ್ಲಾಸ್ ಸೀಟ್ (ಒಟ್ಟು ಸೀಟುಗಳ 10% ರಷ್ಟು) ಗಳನ್ನು ಹೊಂದಿದ್ದು ಈ ಸೀಟುಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.

ಸರಕಾರ ಹೊರಡಿಸಿರುವ ಈ ನೀತಿಯು ಐಮ್ಯಾಕ್ಸ್ ಮತ್ತು 4DX ಚಿತ್ರಮಂದಿರಗಳಿಗೆ ಅನ್ವಯಿಸುವುದಿಲ್ಲ.

ರೂ 200 ಕ್ಕೆ ಇನ್ನೂ ಮಲಿಪ್ಲೆಕ್ಸ್ ಗಳಲ್ಲಿ ಟಿಕೆಟ್ ಲಭಿಸಲಿದೆ ಎನ್ನುವುದಾದರೆ ನಿಮ್ಮ ಊಹೆ ತಪ್ಪು. ಏಕೆಂದರೆ ಈ ಟಿಕೆಟ್ ಬೆಲೆ ಮೇಲೆ ಸುಮಾರು ರೂ 60 ರಷ್ಟು ಎಂಟ್ರಟೈನ್ಮೆಂಟ್ ಟ್ಯಾಕ್ಸ್ ಬೀಳಲಿದೆ. ಅಷ್ಟೇ ಅಲ್ಲದೆ ಸರ್ವಿಕ್ಸ್ ಟ್ಯಾಕ್ಸ್ ಸೇರಿದಂತೆ ಇನ್ನಷ್ಟು ಸಣ್ಣ ಪುಟ್ಟ ಟ್ಯಾಕ್ಸ್ ಗಳು ಇದಕ್ಕೆ ಸೇರಲಿದೆ. ಒಟ್ಟಿನಲ್ಲಿ ಟಿಕೆಟ್ ಬೆಲೆ 300 ರೂ ಆದರು ಅಚ್ಚರಿ ಪಡಬೇಕಿಲ್ಲ. ಈ ನೀತಿಯಿಂದ ಸಿನಿರಸಿಕರಿಗೆ ಯಾವ ರೀತಿಯ ಪ್ರಯೋಜನವಾಗಲಿದೆ ಎಂದು ಕಾದು ನೋಡಬೇಕಷ್ಟೆ.

Rate this item
(1 Vote)
Login to post comments

anjani running

anigif tagaru

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top