Kannada Movie Database

See other templatesSee other templates

ad1

ad4

ad2

ad5

ಗಾಳಿಪಟ -2 ಗಾಗಿ ಮತ್ತೆ ಒಂದಾದ ಭಟ್-ಗಣಿ ಜೊಡಿ

ಮುಂಗಾರು ಮಳೆ ಚಿತ್ರದ ನಂತರ ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಷನ್ ನಲ್ಲಿ ಬಂದ ಚಿತ್ರವೇ ’ಗಾಳಿಪಟ’. ಈ ಚಿತ್ರವೂ ಶತದಿನ ಪ್ರದರ್ಶನವನ್ನು ಕಂಡಿತ್ತು. ಇದೀಗ ಇದೇ ಜೋಡಿ ಮತ್ತೆ ಒಂದಾಗುತ್ತಿದ್ದಾರೆ. ಗಾಳಿಪಟ ಚಿತ್ರದ ಸೀಕ್ವಲ್ ನಲ್ಲಿ ಭಟ್-ಗಣಿ ಜೋಡಿ ಒಂದಾಗುತ್ತಿದ್ದು ಮತ್ತೊಂದು ಸೂಪರ್ ಹಿಟ್ ಚಿತ್ರದ ನಿರೀಕ್ಷೆಯಲ್ಲಿದೆ ಗಾಂಧಿನಗರ.

ಈ ಹಿಂದಿನ ಗಾಳಿಪಟ ಚಿತ್ರದಲ್ಲಿ ದೂದ್ ಪೇಡ ದಿಗಂತ್ ಹಾಗೂ ರಾಜೇಶ್ ಕೃಷ್ಣನ್ ಕಾಣಿಸಿಕೊಂಡಿದ್ದರು. ಗಾಳಿಪಟ 2 ಚಿತ್ರದಲ್ಲೂ ದಿಗಂತ್ ಕಾಣಿಸಿಕೊಳ್ಳಲಿದ್ದು ಜೊತೆಗೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕೂಡ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮುಗುಳು ನಗೆ ಚಿತ್ರವನ್ನು ನಿರ್ಮಿಸುತ್ತಿರುವ ಸೈಯದ್ ಸಲಾಮ್ ಈ ಚಿತ್ರವನ್ನೂ ನಿರ್ಮಿಸಲಿದ್ದಾರೆ. ಚಿತ್ರವು ಈ ವರ್ಷದ ಅಂತ್ಯದಲ್ಲಿ ಸೆಟ್ಟೇರಲಿದೆ.

Rate this item
(1 Vote)
Login to post comments

ad3

ad6

Web GIF pran

K.G.F ಚಿತ್ರದ ಫಸ್ಟ್ ಲುಕ್ ಹೇಗಿದೆ?
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top