Kannada Movie Database

See other templatesSee other templates

ad1

ad4

ad2

ad5

’ಥಗ್ಸ್ ಆಫ್ ಮಾಲ್ಗುಡಿ ಡೇಸ್’ ಗೆ ಬ್ರೇಕ್.. !!

'ಕಿಚ್ಚ ಸುದೀಪ್ ಮತ್ತು ರಕ್ಷಿತ್ ಶೆಟ್ಟಿ ಕಾಂಬಿನೇಷನ್ ನಲ್ಲಿ ಬರಬೇಕಿದ್ದ ಚಿತ್ರ ’ಥಗ್ಸ್ ಆಫ್ ಮಾಲ್ಗುಡಿ ಡೇಸ್’ಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಈ ವಿಷಯವನ್ನು ಸ್ವತ: ಸುದೀಪ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.

ಸಿನಿಮಾ ಸೆಟ್ಟೇರುವುದಕ್ಕೂ ಮುಂಚೆನೇ ಚಿತ್ರಪ್ರೇಮಿಗಳಲ್ಲಿ ಬಹುನಿರೀಕ್ಷೆಯನ್ನ ಹುಟ್ಟುಹಾಕಿದ್ದ ’ಥಗ್ಸ್ ಆಫ್ ಮಾಲ್ಗುಡಿ ಡೇಸ್’ ಇದ್ದಕ್ಕಿದ್ದ ಹಾಗೆ ಪೋಸ್ಟ್ ಪೋನ್ ಆಗಿದ್ದು ಯಾಕೆ ಎಂಬ ಕುತೂಹಲ ಎಲ್ಲರನ್ನ ಕಾಡಿತ್ತು. ಈ ಕುತೂಹಲಕ್ಕೆ ರಕ್ಷಿತ್ ಶೆಟ್ಟಿ ತೆರೆ ಎಳೆದಿದ್ದಾರೆ.

ಸದ್ಯ ’ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಬ್ಯುಸಿಯಾಗಿದ್ದಾರೆ. ಇದರಿಂದಾಗಿ ’ಥಗ್ಸ್ ಆಫ್ ಮಾಲ್ಗುಡಿ ಡೇಸ್’ ಚಿತ್ರದ ಸ್ಕ್ರಿಪ್ಟ್ ವರ್ಕ್ ಇನ್ನೂ ಕೈಗೆತ್ತಿಕೊಂಡಿಲ್ಲ. 'ಥಗ್ಸ್ ಆಫ್ ಮಾಲ್ಗುಡಿ ಡೇಸ್‌’ ಚಿತ್ರವನ್ನ ಶುರುಮಾಡಲು ತಡವಾದರೂ ಪರವಾಗಿಲ್ಲ. ಅದು 5 ವರ್ಷ ಆದ್ರೂ ಈ ಸಿನಿಮಾ ಮಾಡೋಣ, ನಾನು ಕಾಯುತ್ತೇನೆ ಎಂದು ಸುದೀಪ್, ರಕ್ಷಿತ್ ಶೆಟ್ಟಿ ಅವರಿಗೆ ಭರವಸೆ ನೀಡಿದ್ದಾರೆ.

ಕಿಚ್ಚನ ಈ ಮಾತಿಗೆ ಪ್ರತಿಕ್ರೀಯಿಸಿದ ರಕ್ಷಿತ್ ಶೆಟ್ಟಿ ಆದಷ್ಟು ಬೇಗ ’ಮಾಲ್ಗುಡಿ ಡೇಸ್‌’ ವರ್ಕ್‌ ಸ್ಟಾರ್ಟ್‌ ಮಾಡೋದಾಗಿ ಟ್ವೀಟ್ ಮಾಡಿದರು. ’

Rate this item
(0 votes)
Login to post comments

ad3

ad6

Web GIF pran

K.G.F ಚಿತ್ರದ ಫಸ್ಟ್ ಲುಕ್ ಹೇಗಿದೆ?
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top