mugulu

zeee n

adweb

raj vishnu

ಅಪಘಾತದಲ್ಲಿ ಕಿರುತೆರೆ ನಟಿ ರೇಖಾ ಸಿಂಧು ಸಾವು

ತಮಿಳುನಾಡಿನ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ರೂಪದರ್ಶಿ ಹಾಗೂ ಕನ್ನಡದ ಕಿರುತೆರೆ ನಟಿಯಾಗಿರುವ ರೇಖಾ ಸಿಂಧು ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ತಮಿಳುನಾಡಿನ ಪೆರ್ನಾಂಬತ್’ನ ಸುನ್ನಾಂಪುಕುಟ್ಟೈ ಪ್ರದೇಶದಲ್ಲಿ ನಟಿ ರೇಖಾ ಸಿಂಧು ಇದ್ದ ಕಾರು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ರೇಖಾ ಸೇರಿದಂತೆ ಇನ್ನಿತರೆ ಮೂವರು ಮೃತಪಟ್ಟಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ನಟಿ ರೇಖಾ ಜೊತೆಗೆ ಅಭಿಷೇಕ್ ಕುಮಾರನ್ (22), ಜಯಚಂದ್ರನ್ (23) ಮತ್ತು ರಕ್ಷಣ್ (20) ಇದ್ದರೆನ್ನಲಾಗಿದೆ.

ಅಪಘಾತ ಸಂಭವಿಸಿದಾಗ ರೇಖಾ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿಸಿತ್ತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದರೆಂದು ವೈದ್ಯರು ತಿಳಿಸಿದ್ದಾರೆ.

ರೇಖಾ ಸಿಂಧು ಅವರು ಕನ್ನಡದ ಹಾಗೂ ತಮಿಳು ಕಿರುತರೆ ನಟಿಯಾಗಿದ್ದು, ತಮ್ಮ ಉತ್ತಮ ನಟನೆ ಮೂಲಕ ಹೆಸರು ಮಾಡಿದ್ದಾರೆ.

Rate this item
(1 Vote)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top