Print this page

ಇದೇ ವಾರದಿಂದ ಬದಲಾದ ಕ್ಲೈಮಾಕ್ಸ್ ನೊಂದಿಗೆ ಮಾಸ್ತಿಗುಡಿ

ದುನಿಯಾ ವಿಜಯ್ ನಟನೆಯ ’ಮಾಸ್ತಿ ಗುಡಿ’ ಬಹುನಿರೀಕ್ಷಿತ ಕಳೆದ ಶುಕ್ರವಾರ ರಾಜ್ಯದಾದ್ಯಂತ ಬಿಡುಗಡೆ ಆಗಿತ್ತು. ಅನೇಕ ಕಾರಣಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರಕ್ಕೆ ಉತ್ತಮ ಓಪನ್ನಿಂಗ್ ಕೂಡ ಲಭಿಸಿತ್ತು. ಆದ್ರೆ, ಚಿತ್ರದ ಸೆಕೆಂಡ್ ಹಾಫ್ ಗೆ ಮಿಶ್ರ ಪ್ರತಿಕ್ರೀಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ’ಮಾಸ್ತಿ ಗುಡಿ’ ಚಿತ್ರದ ಕೆಲ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಲು ಚಿತ್ರತಂಡ ಮುಂದಾಗಿದೆ. 

’ಮಾಸ್ತಿ ಗುಡಿ’ ಸಿನಿಮಾ ಬಿಡುಗಡೆಯಾಗಿ ನಾಲ್ಕೈದು ದಿನ ಕಳೆದಿದೆ ಅಷ್ಟೆ. ಹೀಗಿರುವಾಗಲೇ, ’ಮಾಸ್ತಿ ಗುಡಿ’ ಸಿನಿಮಾದಲ್ಲಿ 12 ನಿಮಿಷಗಳ ಕೆಲ ದೃಶ್ಯಗಳನ್ನ ಕಟ್ ಮಾಡಿ, ಬದಲಾದ ಕ್ಲೈಮ್ಯಾಕ್ ಇರುವ ಹೊಸ ವರ್ಷನ್ ಚಿತ್ರವನ್ನ ರಿಲೀಸ್ ಮಾಡುವ ತಯಾರಿ ನಡೆಸಿದೆ.

ಈಗಾಗಲೇ ’ಮಾಸ್ತಿ ಗುಡಿ’ ಸಿನಿಮಾದ ಟ್ರಿಮಿಂಗ್ ಕೆಲಸ ಶುರುವಾಗಿದೆಯಂತೆ. ಅದಕ್ಕಾಗಿ ನಿರ್ದೇಶಕ ನಾಗಶೇಖರ್ ಮತ್ತು ನಿರ್ಮಾಪಕ ಸುಂದರ್ ಪಿ.ಗೌಡ ಚೆನ್ನೈಗೆ ತೆರಳಿದ್ದಾರೆ. ಸುಮಾರು 12 ನಿಮಿಷಗಳ ದೃಶ್ಯಗಳನ್ನ ತೆಗೆದು ಹಾಕುವುದಕ್ಕೆ ಚಿತ್ರತಂಡ ನಿರ್ಧಾರ ಮಾಡಿದೆ. ಜೊತೆಗೆ ಬೇಕಾದ ಕಡೆಗಳಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ಮಾಡಿ, ಚಿತ್ರದಲ್ಲಿ ಬದಲಾದ ಕ್ಲೈಮ್ಯಾಕ್ಸ್ ಅನ್ನು ಪ್ರೇಕ್ಷಕರ ಮುಂದಿಡುವ ಯೋಜನೆ ಹಾಕಿದ್ದಾರಂತೆ.

ಸಿನಿಮಾದ ಕೆಲ ದೃಶ್ಯಗಳನ್ನು ಕಟ್ ಮಾಡಿ ಒಂದು ಹೊಸ ವರ್ಷನ್ ರೆಡಿ ಮಾಡುವ ಕಾರ್ಯಗಳು ನಡೆದಿದೆಯಂತೆ. ಆದಷ್ಟು ಬೇಗ ಸೆನ್ಸಾರ್ ಮುಗಿಸಿ ಇದೇ ವಾರದಿಂದ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಹೊಸ ವರ್ಷನ್ ರಿಲೀಸ್ ಆಗಲಿದೆ ಎಂದಿದ್ದಾರೆ.

Rate this item
(1 Vote)
Login to post comments