nata

ttm

adweb

udgharsha

ಬಾಹುಬಲಿಯ ಬಲ್ಲಾಳ ದೇವ ಈಗ 'ಕುರುಕ್ಷೇತ್ರ' ದ ಭೀಮ

ಇತ್ತೀಚೆಗಷ್ಟೆ 1000 ಕೋಟಿ ಗಳಿಸಿ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಭಾಷ್ಯ ಬರೆದಂತ ಬಾಹುಬಲಿ ಚಿತ್ರದಲ್ಲಿ ಖಳನಟ ನಾಗಿ ಬಲ್ಲಾಳ ದೇವನ ಪಾತ್ರದಲ್ಲಿ ಮಿಂಚಿದ್ದ ರಾಣಾ ದಗ್ಗುಬಾಟಿ ಈಗ ಸ್ಯಾಂಡಲ್‌ವುಡ್ ನ ಬಹುನಿರೀಕ್ಷಿತ ಚಿತ್ರವಾದ 'ಕುರುಕ್ಷೇತ್ರ' ದಲ್ಲಿ ಭೀಮ ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನ ನ ಪಾತ್ರದಲ್ಲಿ ಅಭಿನಯಿಸುತ್ತಿದ್ದು , ಭೀಮ ನ ಪಾತ್ರಕ್ಕಾಗಿ ದರ್ಶನ್ ಗೆ ಸರಿಸಾಟಿಯಾಗಬಲ್ಲಂತಹ ನಟನ ಹುಡುಕಾಟದಲ್ಲಿತ್ತು ಚಿತ್ರತಂಡ. ಕಡೆಗೂ ಈ ಆಸೆ 'ರಾಣಾ' ಮೂಲಕ ಈಡೇರಿದೆ. ಕ್ಲೈಮಾಕ್ಸ್ ನಲ್ಲಿ ಮೈನವಿರೇಳಿಸುವ ಯುದ್ಧ ಸನ್ನಿವೇಶ ದುರ್ಯೋಧನ ಹಾಗೂ ಭೀಮ ನ ನಡುವೆ ಇದೆ ಎನ್ನುತ್ತಿದೆ ಚಿತ್ರತಂಡ.

ಇನ್ನುಳಿದಂತೆ ಕ್ರೇಜಿ ಸ್ಟಾರ್ ರವಿಚಂದ್ರ ನ್ ಒಂದು ಮಹತ್ವದ ಪಾತ್ರದಲ್ಲಿ ಅಭಿನಯಿಸಲ್ಲಿದ್ದಾರೆ. ಪ್ರಮುಖ ಪಾತ್ರಗಳಾದ ಕೃಷ್ಣ, ಅರ್ಜುನ, ಕರ್ಣ , ಶಕುನಿ ಪಾತ್ರಗಳ ಬಗ್ಗೆ ಮಾಹಿತಿ ಇನ್ನು ಬಹಿರಂಗವಾಗಿಲ್ಲ. ಒಟ್ಟಿನಲ್ಲಿ ಬಹುತಾರಾಗಣದ ಬಹು ಬಜೆಟ್ ನ ಚಿತ್ರವಾಗಲಿದೆ 'ಕುರುಕ್ಷೇತ್ರ'.

Rate this item
(4 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top