Kannada Movie Database

See other templatesSee other templates

ad1

ad4

ad2

ad5

ಯೂಟ್ಯೂಬ್ ನಲ್ಲಿ ಟ್ರೆಂಡ್ ಆಗುತ್ತಿರುವ 'ಮೈ ಡೆತ್ ನೋಟ್' ಕಿರುಚಿತ್ರ.

ಕೆಲ ದಿನಗಳ ಹಿಂದೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾದ ಕಿರು ಚಿತ್ರವೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಯಾವುದೇ ಚಿತ್ರಕ್ಕೆ ಕಮ್ಮಿ ಇಲ್ಲವೆಂಬಂತೆ ಮೂಡಿಬಂದಿರುವ ಈ ಕಿರು ಚಿತ್ರದ ಹೆಸರು 'ಮೈ ಡೆತ್ ನೋಟ್'. ಹೌದು ಎಂ. ಸುಭಾಷ್ ಚಂದ್ರ ನಿರ್ದೇಶನದ ಈ ಕಿರು ಚಿತ್ರವು ತನ್ನ ಟೈಟಲ್‌ನಂತೆಯೇ ವಿಭಿನ್ನವಾಗಿ ಮೂಡಿಬಂದಿದ್ದು, ಸದ್ಯ ಯೂಟ್ಯುಬ್ ನಲ್ಲಿ ಟ್ರೆಂಡಿಂಗ್ ಲಿಸ್ಟ್ ನಲ್ಲಿರುವುದೇ ಚಿತ್ರಕ್ಕೆ ಸಿಕ್ಕಿರುವ ಯಶಸ್ಸಿಗೆ ಹಿಡಿದಿರುವ ಕನ್ನಡಿಯಾಗಿದೆ.

ಕೆಲವೇ ಕೆಲ ನಿಮಿಷಗಳಲ್ಲಿ ಹೇಳಬೇಕಾದ್ದನ್ನ ಹೇಳ ಬೇಕಿರೋದು ಕಿರು ಚಿತ್ರಗಳ ಮಿತಿ ಮತ್ತು ಸವಾಲು. ಆದರೇ ಈ ಸವಾಲನ್ನು ಅಷ್ಟೇ ಲೀಲಾಜಾಲವಾಗಿ ವಿಭಿನ್ನ ನಿರೂಪಣೆಯ ಮೂಲಕ ನಿಭಾಯಿಸಿರುವ ಎಂ ಸುಭಾಶ್ ಚಂದ್ರ 20 ನಿಮಿಷಗಳ ಕಾಲ ನೋಡುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಂಪೂರ್ಣ ಸಫಲ ರಾಗಿದ್ದಾರೆ.

 

ಒಬ್ಬ ಅನಾಥ ಹುಡುಗನ ಸುತ್ತಾ ಸುತ್ತೋ ಈ ಕಥೆ, ಪ್ರೀತಿ, ವಿರಹ, ದ್ವೇಷ ಅಂತೆಲ್ಲ ಗಿರಕಿ ಹೊಡೆದು ನಾಯಕನ ಆತ್ಮಹತ್ಯೆ ಟ್ವಿಸ್ಟಿನೊಂದಿಗೆ ಕೌತುಕ ಹುಟ್ಟಿಸುತ್ತದೆ. ಚಿತ್ರದ ಕ್ಲೈಮಾಕ್ಸ್ ವರೆಗೆ ಮುಂದೇನಾಗಬಹುದು ಎಂಬ ಯಾವುದೇ ಸುಳಿವನ್ನು ನೀಡದೆ, ವಿಭಿನ್ನ ಮತ್ತು ನಿರೀಕ್ಷೆಗು ಮೀರಿದ ಕ್ಲೈಮಾಕ್ಸ್ ಮೂಲಕ ಚಿತ್ರ ಮನಸಲ್ಲಿ ಉಳಿಯುವಂತೆ ಮಾಡುತ್ತದೆ. ಅಂದಹಾಗೆ ಈ ತಂಡ ಇದನ್ನೊಂದು ಚಿತ್ರ ಮಾಡೋ ಐಡಿಯಾದೊಂದಿಗೇ ಈ ಕಿರು ಚಿತ್ರವನ್ನೂ ತಯಾರಿಸಿರುವಂತಿದೆ.

ಅಭಯ್ ಸುರ್ಯ, ಶ್ರುತಿ ರಾಯ್ಕರ್, ಪ್ರಭು, ಶಿವ ತಾಂಡವ, ಮೋಹನ್ ಗೌಡ, ಅಮಿತ್, ಪ್ರೇಮ್ ಕುಮಾರ್ ಮುಂತಾದವರು ನಟಿಸಿರೋ ಈ ಕಿರುಚಿತ್ರಕ್ಕೆ ಸುನೀಲ್ ಎಲ್ ಎಸ್ಸಾರ್ ಸಂಕಲನ, ಸುರೇಶ್ ರಾಜ್ ಸಂಗೀತ, ಸಿವ ಸೀನ ಛಾಯಾಗ್ರಹಣವಿದೆ.

Rate this item
(1 Vote)
Login to post comments

Media

ad3

ad6

Web GIF pran

K.G.F ಚಿತ್ರದ ಫಸ್ಟ್ ಲುಕ್ ಹೇಗಿದೆ?
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top