Raambo 2 gIF

rlr gIF rELEASE

adweb

anigif seizer

‘ಗಾಯತ್ರಿ’ ಹಾಡುಗಳ ಅನಾವರಣ :

ಹಾರರ್ ‘ಗಾಯತ್ರಿ’ ಹಾಡುಗಳ ಅನಾವರಣ :

ಇತ್ತೀಚಿನ ದಿನಗಳಲ್ಲಿ ಹಾರರ್ ಚಿತ್ರಗಳೇ ಸಿನಿ ಪ್ರೇಕ್ಷಕರನ್ನು ಹೆಚ್ಚಾಗಿ ಆಕರ್ಷಿಸುತ್ತಿವೆ. ಕರ್ವ, 6-5=2, ಲಾಸ್ಟ್‍ಬಸ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಹಾರರ್ ಕಂಟೆಂಟ್ ಇರೋದೇ ಗೆಲುವಿನ ಮೂಲ ಸೂತ್ರವಾಗಿತ್ತು. ಈಗ ಮತ್ತೊಂದು ಅಂಥದೇ ಎಳೆ ಹೊಂದಿರುವ ಚಿತ್ರ ಸ್ಯಾಂಡಲ್‍ವುಡ್‍ನಲ್ಲಿ ಸದ್ದು ಮಾಡುತ್ತಿದೆ. ಅ ಚಿತ್ರದ ಹೆಸರು ಗಾಯಿತ್ರಿ. ಸತ್ಯ ಸಾಮ್ರಾಟ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ಮೊನ್ನೆ ನೆರವೇರಿತು. ಒಂದು ಮನೆ ಹಾಗೂ ಅಲ್ಲಿ ವಾಸವಿರುವ ಕುಟುಂಬದ ಹಿನ್ನಲೆಯಲ್ಲಿ ನಡೆಯುವಂಥ ಹಾರರ್ ಕಥೆಯಿದು. ಈಗಾಗಲೇ ಚಿತ್ರೀಕರಣ ಪೂರೈಸಿರುವ ಚಿತ್ರ ತಂಡ ಸಧ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಸತ್ಯ ಸಾಮ್ರಾಟ್ ಒಂದು ಮನೆಗೆ 3 ಜನ ಹುಡುಗರು ಅತಿಥಿಗಳಾಗಿ ಹೋಗುತ್ತಾರೆ. ಅಲ್ಲಿ ವಾಸವಿದ್ದ ಕುಟುಂಬದಲ್ಲಿ ಮೂವರು ಹೆಣ್ಣು ಮಕ್ಕಳಿರುತ್ತಾರೆ. ಈ ಹುಡುಗರು ಅಲ್ಲಿಗೆ ಹೋದಾಗ ಅಲ್ಲಿ ಅನೇಕ ವಿಚಿತ್ರ ಘಟನೆಗಳು ನಡೆಯುತ್ತವೆ. ಅದಕ್ಕೆಲ್ಲಾ ಕಾರಣವೇನು. ನಿಜಕ್ಕೂ ಆ ಮನೆಯಲ್ಲಿ ದೆವ್ವ ಇದೆಯೇ, ಇಲ್ಲವೇ ಅಂತ ಹೇಳುವುದೇ ನಮ್ಮ ಚಿತ್ರದ ಕಥೆ. ಸಕಲೇಶಪುರ, ಮಂಗಳೂರು, ಬೆಂಗಳೂರು ಹಾಗೂ ಚೆನ್ನೈ ಸುತ್ತ ಮುತ್ತ ಈ ಚಿತ್ರಕ್ಕೆ ಶೂಟಿಂಗ್ ನಡೆಸಿದ್ದೇವೆ. ರೋಹಿತ್ ಶೆಟ್ಟಿ, ಸ್ಮೈಲ್ ಶಿವು ಹಾಗೂ ಚೇತನ್ ನಾಯಕರಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದಿನ ಯುವ ಜನಾಂಗಕ್ಕೆ ಒಂದು ಉತ್ತಮ ಸಂದೇಶ ಈ ಚಿತ್ರದಲ್ಲಿದೆ. ದುಶ್ಚಟಗಳಿಗೆ ಬಲಿಯಾಗುವಂಥ ಯುವ ಜನಾಂಗ ಯಾವ ರೀತಿಯಲ್ಲಿ ಹಾಳಾಗುತ್ತಿದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ ಎಂದು ಹೇಳಿದರು. 2 ಕನ್ನಡ ಹಾಗೂ 2 ತಮಿಳು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಸತ್ಯ ಸಾಮ್ರಾಟ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶನಕ್ಕಿಳಿದಿದ್ದಾರೆ. ಈ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನೂ ಕೂಡ ಅವರೇ ಬರೆದಿದ್ದಾರೆ.

ನಯನಕೃಷ್ಣ ಅವರು ಈ ಚಿತ್ರದ ಐಟಂ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಶ್ಯಾಮ್ ಸಿಂಧನೂರು ಈ ಚಿತ್ರದ ಛಾಯಾಗ್ರಾಹಕರು. ಭಾರತಿಗೌಡ ಹಾಗೂ ವಿ.ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದಾರೆ. ಸಿ.ರವಿ ಅವರ ಸಂಗೀತ ಸಂಯೋಜನೆಯಲ್ಲಿ ಈ ಚಿತ್ರದ ನಾಲ್ಕು ಹಾಡುಗಳು ಮೂಡಿ ಬಂದಿವೆ, ಎರಡು ರೋಮ್ಯಾಂಟಿಕ್, ಒಂದು ಐಟಂ ಹಾಗೂ ಒಂದು ಪ್ಯಾಥೋ ಸಾಂಗ್ ಈ ಚಿತ್ರದಲ್ಲಿದೆ. ಲಹರಿ ವೇಲು ಹಾಗೂ ನಿರ್ಮಾಪಕ ಕೃಷ್ಣೇಗೌಡ ಸೇರಿ ಈ ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದರು. ಚೇತನ್, ಶೋಭರಾಣಿ ಸ್ಮೈಲ್ ಶಿವು, ಪೂಜಾ, ರಂಜಿತಾ ಮೊಹನ್ ಜುನೇಜಾ, ದಯಾನಂದ್, ಬ್ಯಾಂಕ್ ಜನಾರ್ಧನ್ ಹಾಗೂ ಇತರರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Rate this item
(0 votes)
Login to post comments

Amma Gif Release

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top