Raambo 2 gIF

rlr gIF rELEASE

adweb

anigif seizer

ಮುಗುಳು ನಗೆ ಆಡಿಯೋ ಹಕ್ಕು ಭಾರಿ ಬೆಲೆಗೆ ಮಾರಾಟ

ಮೊನ್ನೆಯಷ್ಟೇ ಅನುಷ್ಟಾನಕ್ಕೆ ಬಂದ ಜಿ ಎಸ್ ಟಿ ಹಲವು ಉದ್ಯಮಿಗಳಿಗೆ ತುಸು ತಲೆಬಿಸಿಯುಂಟು ಮಾಡಿದ್ದರೂ, ಜಿ ಎಸ್ ಟಿ ಹಾಡಿನ ಮೂಲಕ ಪ್ರಚಾರ ಗಿಟ್ಟಿಸಿಕೊಂಡ ’ಮುಗುಳು ನಗೆ’ ಚಿತ್ರತಂಡ ಸಂತಸದಲ್ಲಿದೆ. ಬ್ಲಾಕ್ಬಸ್ಟರ್ ಜೋಡಿ ಎಂದೇ ಪ್ರಖ್ಯಾತವಾದ ನಟ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ ಜೋಡಿಯ ’ಮುಗುಳು ನಗೆ’ ಆಡಿಯೋ ಹಕ್ಕುಗಳನ್ನು ಭಾರಿ ಬೆಲೆಗೆ ಮಾರಾಟ ಮಾಡಿ ಮುಗುಳುನಗೆ ಬೀರಿದ್ದಾರೆ.

 ’ಹೊಡಿ ಒಂಬತ್ತು’ ಜಿ ಎಸ್ ಟಿ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ಸಂಗೀತ ನಿರ್ದೇಶಕ ವಿ ಹರಿಕೃಷ್ಣ, ಗಣೇಶ್ ಮತ್ತು ದುನಿಯಾ ವಿಜಯ್ ಕಂಠದಾನ ಮಾಡಿದ್ದರು. ಈ ಹಾಡು ವೈರಲ್ ಆದ ಹಿನ್ನಲೆಯಲ್ಲಿತೆ ಡಿ ಬೀಟ್ಸ್ ಸಂಸ್ಥೆ ಸಿನೆಮಾದ ಆಡಿಯೋ ಹಕ್ಕುಗಳನ್ನು ಭಾರಿ ಬೆಲೆಗೆ ಖರೀದಿಸಿವೆಯಂತೆ. ಆಡಿಯೋ ಬಿಡುಗಡೆ ಜುಲೈ 12 ಕ್ಕೆ ನೆರವೇರಲಿದೆ.

ಸದ್ಯ ಡಬ್ಬಿಂಗ್ ಹಂತದಲ್ಲಿರುವ ಚಿತ್ರ ಇದೇ ಆಗಸ್ಟ್ ಮೊದಲ ವಾರದಲ್ಲಿ ಅಂದರೆ ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಗೆ ಬರಲಿದೆ.

Rate this item
(1 Vote)
Login to post comments

Amma Gif Release

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top