IB anigif

Ayugya Gif

adweb

udgharsha

ಹಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಸ್ಯಾಂಡಲ್ ವುಡ್ ಮಾತ್ರವಲ್ಲದೆ, ಬೇರೆ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಪ್ರತಿಭೆ. ಈಗ ಇನ್ನೂ ಒಂದು ಹೆಜ್ಜೆ ಮುಂದು ಹೋಗಿರುವ ಕಿಚ್ಚ ಸುದೀಪ್ ಅವರೀಗ ಅಭಿಮಾನಿಗಳು ಬೆರಗಾಗುವಂತಹ ಸುದ್ದಿ ಕೊಟ್ಟಿದ್ದಾರೆ.

ಹೌದು. ತಮಿಳು, ತೆಲುಗು, ತೆಲುಗು ಸಿನಿಮಾಗಳಲ್ಲಿ ನಟಿಸಿ ಸುದ್ದಿ ಮಾಡಿದ್ದ ಸುದೀಪ್ ಇದೀಗ ಹಾಲಿವುಡ್ ನತ್ತ ಹಾರಲಿದ್ದಾರೆ! ಸದ್ಯಕ್ಕೆ ಲಂಡನ್ ನಲ್ಲಿ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಸುದೀಪ್ ಹಾಲಿವುಡ್ ನಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಬಂದಿದೆ.

ಆಸ್ಟ್ರೇಲಿಯಾ ಮೂಲದ ನಿರ್ದೇಶಕ ಎಡ್ಡಿ ಆರ್ಯ ಅವರ ‘ರೈಸನ್’ ಚಿತ್ರದಲ್ಲಿ ಸುದೀಪ್ ನಟಿಸಲಿದ್ದಾರಂತೆ. ಇದೊಂದು ಥ್ರಿಲ್ಲರ್ ಸಿನಿಮಾವಾಗಿದ್ದು, ನೈಜ ಘಟನೆಯಾಧಾರಿತ ಸಿನಿಮಾ ಎನ್ನಲಾಗಿದೆ. ದಿ ವಿಲನ್ ಚಿತ್ರೀಕರಣ ಮುಗಿದ ಮೇಲೆ ಈ ಚಿತ್ರದ ಚಿತ್ರೀಕರಣದಲ್ಲಿ ಸುದೀಪ್ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.ಚಿತ್ರದ ಪಾತ್ರದ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಾಗಿದ್ದು, ಒಂದು ಉತ್ತಮ ಪಾತ್ರ ಎಂದಷ್ಟೇ ಹೇಳಿದ್ದಾರೆ ಸುದೀಪ್

Rate this item
(0 votes)
Login to post comments

na anigif

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top