mugulu

ad free

ad free

raj vishnu

ಮತ್ತೆ ಒಂದಾದ ರವಿಚಂದ್ರನ್ - ರಾಧಿಕಾ ಜೋಡಿ

ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿರುವ ರಾಧಿಕಾ ಕುಮಾರಸ್ವಾಮಿ, ಕ್ರೇಜಿ ಸ್ಟಾರ್ ರವಿಚಂದ್ರನ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಈಶ್ವರಿ ಪ್ರೊಡಕ್ಷನ್ ನಡಿಯಲ್ಲಿ ರವಿಚಂದ್ರನ್ ಕಥೆ ಬರೆದು ನಿರ್ದೇಶಿಸುತ್ತಿರುವ ರಾಜೇಂದ್ರ ಪೊನ್ನಪ್ಪ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ರವಿಚಂದ್ರನ್ ನಟಿಸುತ್ತಿದ್ದಾರೆ. ದಶಕದ ನಂತರ ರವಿಚಂದ್ರನ್ ಜೊತೆ ರಾಧಿಕಾ ಅಭಿನಯಿಸುತ್ತಿದ್ದಾರೆ. 2006 ರಲ್ಲಿ ತೆರೆಕಂಡ ಹಠವಾದಿ ಸಿನಿಮಾದಲ್ಲಿ ರವಿಚಂದ್ರನ್ ಜೋಡಿಯಾಗಿದ್ದರು.

ಸಿನಿಮಾದಲ್ಲಿ ರವಿಚಂದ್ರನ್ ವಕೀಲರ ಪಾತ್ರ ನಿರ್ವಹಿಸಲಿದ್ದಾರೆ. ದೃಶ್ಯ ಸಿನಿಮಾದ ರಾಜೇಂದ್ರ ಪೊನ್ನಪ್ಪ ಪಾತ್ರವನ್ನೇ ಸಿನಿಮಾ ಟೈಟಲ್ ಆಗಿಸಿದ್ದಾರೆ.

ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ಪಾತ್ರದ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ. ಸದ್ಯ ರಾಧಿಕಾ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ವೊಂದರ ಜಡ್ಜ್ ಆಗಿದ್ದು, ರಾಧಿಕಾ ಅಭಿಮಾನಿಗಳು ಈ ಚಿತ್ರಕೆ ಎದುರು ನೋಡುತ್ತಿರುವುದಂತು ಸುಳ್ಳಲ್ಲ

Rate this item
(0 votes)
Login to post comments

bharjari

ad free

ad free

ಈ ಬಾರಿಯ 'ವೀಕೆಂಡ್ ವಿದ್ ರಮೇಶ್' ಶೋ ನ ನಿಮಗೆ ಅತೀ ಇಷ್ಟವಾದ ಸಂಚಿಕೆ ಯಾರದ್ದು?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top