mugulu

ad free

ad free

raj vishnu

ನಟರೆಲ್ಲ ಒಂದಾಗಿ.. ಸ್ಯಾಂಡಲ್ ವುಡ್‍ಗೆ ಜಗ್ಗೇಶ್ ಕರೆ..!

ಪರಭಾಷಾ ಚಿತ್ರೋದ್ಯಮದಂತೆ ಕನ್ನಡದಲ್ಲೂ ಸ್ಟಾರ್‌ವಾರ್ ಗಳೇನು ಕಡಿಮೆಯಿಲ್ಲ, ಒಂದೆಡೆ ಸ್ಟಾರ್ ಅಭಿಮಾನಿಗಳ ಹಗೆತನ ಗೊಂದಲಮಯ ವಾತಾವರಣ ಸ್ರಷ್ಟಿ ಮಾಡಿದರೆ, ಮತ್ತೊಂದೆಡೆ ಸ್ಟಾರ್ ಗಳೆಲ್ಲ ಸೇರಿ ನಮ್ಮೊಳಗೆ ಹಗೆತನ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ.

ರಾಜ್ ಕುಮಾರ್ ಚಿತ್ರದ ನೂರು ದಿನಗಳ ಶತಕ ಸಂಭ್ರಮ ದಲ್ಲಿ ಕಿಚ್ಚ ಸುದೀಪ್ ಪುನೀತ್ ಮತ್ತು ಯಶ್ ರವರು ಪಾಲ್ಗೊಂಡಿದ್ದು, ಇದು ಚಿತ್ರ ರಸಿಕರಿಗೆ ತುಂಬ ಖುಷಿ ನೀಡಿತ್ತು.

ಈ ವೇಳೆ ಮಾತನಾಡಿದ ಜಗ್ಗೇಶ್ ರವರು ಅಣ್ಣಾವ್ರು ಯಾರೊಂದಿಗೂ ಭೇದಬಾವ ಮಾಡಿರಲಿಲ್ಲ. ತಮ್ಮೊಂದಿಗೆ ಇರುವ ಸಹನಟ ರಾಗಲಿ ಅಥವಾ ಸಣ್ಣ ನಟರೇ ಆಗಲಿ ಒಂದೇ ತೆರನಾಗಿ ಕಾಣುತಿದ್ದರು. ಅವರ ಆದರ್ಶ ವನ್ನು ಎಲ್ಲ ನಟರು ಮುಂದುವರಿಸಿಕೊಂಡು ಹೋದರೆ ಚಿತ್ರರಂಗ ನೆಮ್ಮದಿಯಿಂದ ಇರುತ್ತದೆ ಎಂದು ಹೇಳಿದರು.


ಒಗ್ಗಟ್ಟಿನ ಈ ಕರೆಗೆ ಸಭಿಕರು ಚಪ್ಪಾಳೆ ಶಿಳ್ಳೆಗಳ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಇದೇ ವೇದಿಕೆಯಲ್ಲಿ ಸುದೀಪ್ ಹಾಗು ಪುನಿತ್ ಒಂದೇ ಹಾಡಿಗೆ ಜೊತೆಯಾಗಿ ಸ್ಟೆಪ್ಪ್ ಹಾಕಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದಿತ್ತು.

Rate this item
(0 votes)
Login to post comments

bharjari

ad free

ad free

ಈ ಬಾರಿಯ 'ವೀಕೆಂಡ್ ವಿದ್ ರಮೇಶ್' ಶೋ ನ ನಿಮಗೆ ಅತೀ ಇಷ್ಟವಾದ ಸಂಚಿಕೆ ಯಾರದ್ದು?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top