chamak running success

anigif

adweb

raju

“ಫಸ್ಟ್ ಲವ್” ನೋಡುವವರಿಗೆ ವಿಶೇಷ ಬಹುಮಾನ

 

ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಅನೇಕ ಪ್ರಥಮಗಳು ನಡೆದಿರುತ್ತವೆ. ಮೊದಲ ತೊದಲು ಮಾತು, ಮೊದಲ ಪ್ರೀತಿ, ಮೊದಲ ಮುತ್ತು ಹೀಗೆ ಹಲವಾರು ಪ್ರಥಮಗಳನ್ನು ನಾವು ಕಂಡಿರುತ್ತೇವೆ, ಅನುಭವಿಸುತ್ತೇವೆ. ಅದೇ ರೀತಿ ಇಲ್ಲೊಬ್ಬ ನಿರ್ದೇಶಕ ಗಂಡು ಹೆಣ್ಣಿನ ನಡುವೆ ಮೊದಲು ಹುಟ್ಟುವ ಪ್ರೀತಿಯ ಕಥೆಯೊಂದನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಆರ್.ಜೆ.ರಾಜೇಶ್, ಕವಿತಾಗೌಡ ಮೊದಲ ಬಾರಿಗೆ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡುತ್ತಿರುವ ಈ ಚಿತ್ರದ ಹೆಸರು “ಫಸ್ಟ್ ಲವ್” ಯಲ್ಲಿ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಟೇಸರ ಅನಾವರಣ ಸಮಾರಂಭ ಮೊನ್ನೆ ಚಾಮುಂಡೇಶ್ವರ ಸ್ಟುಡಿಯೋದಲ್ಲಿ ನೆರವೇರಿತು. ಅಶೋಕ. ವಿ.ಲಮಾಣಿ ಅವರ ನಿರ್ಮಾಣ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಶ್ರೀಧರ.ವಿ.ಸಂಭ್ರಮ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿರಿಯ ನಟಿ ಶ್ರೀಮತಿ ಪ್ರೇಮ ಈ ಹೊಸ ಟೇಸರನ್ನು ಬಿಡುಗಡೆಗೊಳಿಸಿದರು. ಸ್ನೇಹ ನಾಯರ್ ದ್ವಿತೀಯ ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರದ ಉಳಿದ ಪಾತ್ರ ವರ್ಗಗಳಲ್ಲಿ ರಾಜು ತಾಳಿ ಕೋಟೆ ನಟಿಸಿದ್ದಾರೆ. ಶ್ರೀನಿವಾಸ ಪತ್ತಾರ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಮಲ್ಲೆ ನಾನು ಈ ಕಥೆಯನ್ನು ರೆಡಿ ಮಾಡಿಕೊಂಡು ಸಿನಿಮಾ ಮಾಡಲು ಹೊರಟಾಗ ನಿರ್ಮಾಪಕರು ತುಂಬಾ ಸಪೋರ್ಟ್ ಮಾಡಿದರು. ಬಿಜಾಪುರ ಸುತ್ತಮುತ್ತಲ ಪ್ರಮುಖ ಪ್ರವಾಸಿ ತಾಣಗಳಲ್ಲಿ ಹಾಗೂ ಚಿಕ್ಕಮಗಳೂರಿನಲ್ಲಿ ಹಾಡುಗಳನ್ನು ಚಿತ್ರೀಕರಣ ಮಾಡಿದ್ದೇವೆ. ಪ್ರತಿಯೊಬ್ಬರ ಲೈಫ್‍ನಲ್ಲಿ ಎಲ್ಲೋ ಒಂದು ಕಡೆ ನಡೆದಿರಬಹುದಾದಂಥ ಕಥೆಯಿದು. ಶ್ರೀನಿವಾಸ ಪತ್ತಾರ ಅವರ ಬಳಿ ನಾನು ಮಾಡಿಕೊಂಡ ಕಥೆ ತೆಗೆದುಕೊಂಡು ಹೋದಾಗ ಅವರು ತಮ್ಮ ಸ್ನೇಹಿತನ ಜೀವನದಲ್ಲಿ ನಡೆದಂಥ ಒಂದು ಘಟನೆಯನ್ನು ಹೇಳಿದರು. ಅದನ್ನೇ ಇಟ್ಟುಕೊಂಡು ಸ್ಕ್ರಿಪ್ಟ್ ಮಾಡಿದ್ದೇನೆ. ಈ ಸಿನಿಮಾ ನೋಡಿದ ನಂತರ ಎಲ್ಲೋ ಒಂದು ಕಡೆ ತಮ್ಮ ಹಿಂದಿನ ಪ್ರೇಮ ಕಥೆ ನೆನಪಾಗುತ್ತದೆ ಎಂದು ಹೇಳಿದರು.


ನಿರ್ಮಾಪಕ ಶ್ರೀನಿವಾಸ ಪತ್ತಾರ ಮಾತನಾಡಿ ಜೀವನದಲ್ಲಿ ಎಲ್ಲರೂ ಸಿನಿಮಾಗಳನ್ನು ಮಾಡುತ್ತಾರೆ. ಆದರೆ ನಮ್ಮ ಚಿತ್ರದಲ್ಲಿ ಲವ್‍ಸ್ಟೋರಿ ಜೊತೆಗೆ ಒಳ್ಳೆಯ ಸಂದೇಶವನ್ನು ಹೇಳಿದ್ದೇನೆ. ಸಿನಿಮಾ ನೋಡಿದಾಗ ಅದೇನೆಂದು ಅರ್ಥವಾಗುತ್ತದೆ. ರೀಯಲ್ ಆಗಿ ನಡೆದಂಥ ಘಟನೆಯನ್ನು ಇಟ್ಟುಕೊಂಡು ಮಾಡಿದ ಚಿತ್ರವಿದು. ಶ್ರೀಧರ್ ಸಂಭ್ರಮ ಅವರು ಮಾಡಿಕೊಟ್ಟಿರುವ ಐದು ಹಾಡುಗಳೂ ಒಂದಕ್ಕಿಂತ ಒಂದು ವೆರೈಟಿಯಾಗಿ ಮೂಡಿಬಂದಿದೆ ಎಂದು ಹೇಳಿದರು.
ಸಂಗೀತ ನಿರ್ದೇಶಕ ಶ್ರೀಧರ್.ವಿ. ಸಂಭ್ರಮ ಮಾತನಾಡುತ್ತ ಎಲ್ಲಿ ಅವರು ತುಂಬಾ ಸೊಗಸಾಗಿ ಈ ಚಿತ್ರವನ್ನು ತೆರೆಯ ಮೇಲೆ ತಂದಿದ್ದಾರೆ. ಅದಕ್ಕೆ ಪೂರಕವಾಗಿ ಹಾಡುಗಳು ಮೂಡಿಬಂದಿದೆ. ಅಶೋಕ್ ಲಮಾಣಿ ಹಾಗೂ ಶ್ರೀನಿವಾಸ್ ಪತ್ತಾರ ಸೇರಿ 4 ಜನ ನಿರ್ಮಾಪಕರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಾನು ಕೂಡ ಒಂದು ಹಾಡನ್ನು ಬರೆದಿದ್ದೇನೆ. ಪ್ರೇಮ ಅವರಂಥ ಹಿರಿಯ ಕಲಾವಿದೆಯ ಜೊತೆ ಉಪೇಂದ್ರ “ಮತ್ತೆ ಬಾ” ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದೇನೆ. ಅವರ ಸಿನಿಮಾಗಳನ್ನು ನೋಡಿದಾಗ ಇಂಥವರ ಜೊತೆ ಕೆಲಸ ಮಾಡುವ ಅವಕಾಶ ಬರುತ್ತಾ ಅಂತ ಯೋಚಿಸುತ್ತಿದ್ದವು ಎಂದು ಹೇಳಿದರು.

ನಾಯಕ ರಾಜೇಶ್ ಮಾತನಾಡುತ್ತ ನನ್ನಂಥ ಹೊಸಬನ ಮೇಲೆ ನಿರ್ಮಾಪಕರು ಇಷ್ಟೊಂದು ಬಂಡವಾಳ ಹಾಕಿದ್ದಾರೆ. ಕಥೆ ಅದ್ಭುತವಾಗಿದೆ. ಚಿತ್ರವನ್ನು ಪ್ರಮೋಷನ್ ಮಾಡಲು ಲಕ್ಕಿ ಡ್ರಾ ಕೂಪನ್ ಮಾಡಿದ್ದೇವೆ. ಈಗ 100 ರೂ ಕೊಟ್ಟು ಟಿಕೇಟ್ ಖರೀದಿಸಿದರೆ ಚಿತ್ರ ರಿಲೀಸಾದ ನಂತರ ಯಾವುದಾದರೂ ಥಿಯೇಟರಿನಲ್ಲಿ ಸಿನಿಮಾ ನೋಡಬಹುದು. ಅಲ್ಲದೆ 1 ಲಕ್ಷ ಟಿಕೇಟುಗಳಿ ಲಕ್ಕಿ ಡ್ರಾ ಮಾಡುತ್ತೇವೆ. ಕಾರು, ಬುಲೆಟೆ ಸೇರಿದಂತೆ ಹಲವಾರು ಬಹುಮಾನಗಳನ್ನು ಡ್ರಾದಲ್ಲಿ ವಿಜೇತರಾದವರಿಗೆ ಕೊಡುತ್ತೇವೆ ಎಂದು ಹೇಳಿದರು.

Rate this item
(0 votes)
Login to post comments

anjani running

anigif tagaru

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top